ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ವರ್ಷನ್ ಟಿವಿ ಜಾಹೀರಾತು ಪ್ರಕಟಿಸಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಕಂಪನಿಯು ಇದೀಗ ಹೊಸ ಕಾರಿನ ಟಿವಿ ಜಾಹೀರಾತು ಪ್ರಕಟಗೊಳಿಸಿದೆ.

ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ವರ್ಷನ್ ಟಿವಿ ಜಾಹೀರಾತು ಪ್ರಕಟಿಸಿದ ಟಾಟಾ

ಆಲ್‌‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.09 ಲಕ್ಷ ಬೆಲೆ ಹೊಂದಿದ್ದು, ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಈಗಾಗಲೇ ರೂ.21 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೂ ಸಹ ಚಾಲನೆ ನೀಡಿದೆ.

ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ವರ್ಷನ್ ಟಿವಿ ಜಾಹೀರಾತು ಪ್ರಕಟಿಸಿದ ಟಾಟಾ

ಹೊಸ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ ಡಿಸಿಎ ಆಲ್‌ಟ್ರೊಜ್ ಮಾದರಿಯು ಪ್ರಮುಖ ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದ್ದು, ಆರಂಭಿಕವಾಗಿ ರೂ. 8.09 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.89 ಲಕ್ಷ ಬೆಲೆ ಹೊಂದಿದೆ.

ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ವರ್ಷನ್ ಟಿವಿ ಜಾಹೀರಾತು ಪ್ರಕಟಿಸಿದ ಟಾಟಾ

ಆಲ್‌ಟ್ರೊಜ್ ಹೊಸ ಆಟೋಮ್ಯಾಟಿಕ್ ಆವೃತ್ತಿಯು ಎಕ್ಸ್‌ಟಿಎ, ಎಕ್ಸ್‌ಜೆಡ್ಎ, ಎಕ್ಸ್‌ಜೆಡ್ಎ ಪ್ಲಸ್ ಮತ್ತು ಎಕ್ಸ್‌ಜೆಡ್ಎ ಪ್ಲಸ್ ಡಾರ್ಕ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಆಟೋಮ್ಯಾಟಿಕ್ ಆವೃತ್ತಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಸ್ಟ್ಯಾಂಡರ್ಡ್ ಮ್ಯಾನುವಲ್ ಮಾದರಿಗಿಂತಲೂ ರೂ. 60 ಸಾವಿರದಿಂದ ರೂ. 1.07 ಲಕ್ಷ ಹೆಚ್ಚುವರಿ ಬೆಲೆ ಹೊಂದಿದೆ.

ಟಾಟಾ ಕಂಪನಿಯು ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿ ಯಶಸ್ವಿ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಹೊಸ ಮಾದರಿಯನ್ನು ಪರಿಚಯಿಸಿದ್ದು, ಹೊಸ ಆಟೋಮ್ಯಾಟಿಕ್ ಆವೃತ್ತಿಯು 1.2 ಲೀಟರ್ ನ್ಯಾಚುರಲಿ ಆಸ್ಪೆರೆಟಡ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್‌ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ವರ್ಷನ್ ಟಿವಿ ಜಾಹೀರಾತು ಪ್ರಕಟಿಸಿದ ಟಾಟಾ

ಆಟೋಮ್ಯಾಟಿಕ್ ಆವೃತ್ತಿಯು 6-ಸ್ಪೀಡ್ ಡ್ಯುಯಚ್ ಕ್ಲಚ್ ಆಟೋಮ್ಯಾಟಿಕ್ ಗೇರ್‌‌ಬಾಕ್ಸ್ ಮೂಲಕ 86 ಬಿಎಚ್‌ಪಿ ಮತ್ತು 113 ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, ಆಲ್‌ಟ್ರೊಜ್ ಹೊಸ ಡಿಸಿಎ ಮಾದರಿಯು ಶಿಫ್ಟ್ ಬೈ ವೈರ್ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ವರ್ಷನ್ ಟಿವಿ ಜಾಹೀರಾತು ಪ್ರಕಟಿಸಿದ ಟಾಟಾ

ಹೊಸ ಮಾದರಿಯು ಬಂಪರ್ ಟು ಬಂಪರ್ ಟ್ರಾಫಿಕ್ ಹೊಂದಿರುವ ನಗರ ಪ್ರದೇಶಗಳಲ್ಲಿನ ಸಂಚಾರಕ್ಕೆ ಉತ್ತಮ ಮಾದರಿಯಾಗಿದ್ದು, ಇದರ ಹೊರತಾಗಿ ಹೊಸ ಆವೃತ್ತಿಗಳಲ್ಲಿ ಕಂಪನಿಯು ಮ್ಯಾನುವಲ್ ಮಾದರಿಗಳಲ್ಲಿ ಇರುವಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಮುಂದುವರಿಸಿದೆ.

ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ವರ್ಷನ್ ಟಿವಿ ಜಾಹೀರಾತು ಪ್ರಕಟಿಸಿದ ಟಾಟಾ

ಟಾಪ್ ಎಂಡ್ ಮಾದರಿಯಾದ ಎಕ್ಸ್‌ಜೆಡ್ಎ ಪ್ಲಸ್ ಡಾರ್ಕ್ ಎಡಿಷನ್‌ನಲ್ಲಿ ಹೆಚ್ಚಿನ ಮಟ್ಟದ ಫೀಚರ್ಸ್ ಜೋಡಣೆ ಮಾಡಲಾಗಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ವರ್ಷನ್ ಟಿವಿ ಜಾಹೀರಾತು ಪ್ರಕಟಿಸಿದ ಟಾಟಾ

ಆಲ್‌ಟ್ರೊಜ್ ಮಾದರಿಯಲ್ಲಿ 7.0 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಐರಾ(iRA) ಕಾರ್ ಕನೆಕ್ಟ್ ಟೆಕ್ನಾಲಜಿ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆಟೋಮ್ಯಾಟಿಕ್ ಹೆಡ್‌ಲೈಟ್ಸ್, ರೈನ್ ಸೆನ್ಸಿಂಗ್ ವೈಪರ್, ಲೆದರ್ ಆಸನಗಳು ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದೆ.

ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ವರ್ಷನ್ ಟಿವಿ ಜಾಹೀರಾತು ಪ್ರಕಟಿಸಿದ ಟಾಟಾ

ಹೊಸ ಕಾರಿನ ಡಾರ್ಕ್ ಎಡಿಷನ್ ಮಾದರಿಗಾಗಿ ಕಂಪನಿಯು ಸಂಪೂರ್ಣ ಕಪ್ಪು ಮಿಶ್ರಿತವಾದ ಅಲಾಯ್ ವ್ಹೀಲ್, ಡಾರ್ಕ್ ಕ್ರೊಮ್, ಆಲ್ ಬ್ಲ್ಯಾಕ್ ಇಂಟಿರಿಯರ್ ನೀಡಲಾಗಿದ್ದು, ಹೊಸ ಡಿಸಿಎ ಆಲ್‌ಟ್ರೊಜ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಹೊಸ ಮಾರುತಿ ಸುಜುಕಿ ಬಲೆನೊ ಎಎಂಟಿ, ಹ್ಯುಂಡೈ ಐ20 1.0 ಲೀಟರ್ ಡಿಸಿಟಿ, ಫೋಕ್ಸ್‌ವ್ಯಾಗನ್ ಪೊಲೊ ಟಿಎಸ್ಐ ಆಟೋಮ್ಯಾಟಿಕ್, ಹೋಂಡಾ ಜಾಝ್ ಆಟೋಮ್ಯಾಟಿಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ವರ್ಷನ್ ಟಿವಿ ಜಾಹೀರಾತು ಪ್ರಕಟಿಸಿದ ಟಾಟಾ

ಆಲ್‌ಟ್ರೊಜ್ ಮಾದರಿಯಲ್ಲಿ ಟಾಟಾ ಕಂಪನಿಯು ಕಳೆದ ಒಂದು ವರ್ಷದಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಹೊಸ ಕಾರು ಇದೀಗ ಹೊಸ ಆವೃತ್ತಿಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸದ್ಯ ಆರಂಭಿಕವಾಗಿ ರೂ. 6 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10 ಲಕ್ಷ ಬೆಲೆ ಹೊಂದಿದಂತಾಗಿದೆ.

Article Published On: Wednesday, March 23, 2022, 9:00 [IST]
English summary
Tata altroz dual clutch automatic official tvc released
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+