ಪ್ರತಿ ಚಾರ್ಜ್‌ಗೆ 500 ಕಿ.ಮೀ ಗೂ ಹೆಚ್ಚು ಮೈಲೇಜ್ ಪ್ರೇರಿತ ಟಾಟಾ ಅವಿನ್ಯಾ ಕಾನ್ಸೆಪ್ಟ್ ರಿವ್ಯೂ ವಿಡಿಯೋ

ಟಾಟಾ ಮೋಟಾರ್ಸ್ ಕಂಪನಿಯು ಕರ್ವ್ ಕಾನ್ಸೆಪ್ಟ್ ಇವಿ ಕೂಪೆ ಎಸ್‌ಯುವಿ ಅನಾವರಣದ ತನ್ನ ಮೂರನೇ ತಲೆಮಾರಿನ ಅವಿನ್ಯಾ ಕಾನ್ಸೆಪ್ಟ್ ಎಲೆಕ್ಟ್ರಿಕ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಕಂಪನಿಯ ಸುಧಾರಿತ ತಂತ್ರಜ್ಞಾನ ಪ್ರೇರಿತ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಮೇಲೆ ನಿರ್ಮಾಣಗೊಂಡಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಒಂದನೇ ತಲೆಮಾರಿನ ತಂತ್ರಜ್ಞಾನ ಪ್ರೇರಿತ ಇವಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, 2024ರ ವೇಳೆಗೆ ಎರಡನೇ ತಲೆಮಾರಿನ ಇವಿ ಮಾದರಿಗಳನ್ನು ಮತ್ತು 2026ರ ವೇಳೆಗೆ ಮೂರನೇ ತಲೆಮಾರಿನ ಇವಿ ಕಾರುಗಳ ಮಾರಾಟಕ್ಕೆ ಚಾಲನೆ ನೀಡಲಿದೆ. ಸದ್ಯ ಅನಾವರಣಗೊಂಡಿರುವ ಅವಿನ್ಯಾ ಕಾನ್ಸೆಪ್ಟ್ ಮಾದರಿಯು ಮೂರನೇ ತಲೆಮಾರಿನ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಹೊಸ ಕಾರು ಎರಡನೇ ತಲೆಮಾರಿನ ತಂತ್ರಜ್ಞಾನ ಹೊಂದಿರುವ ಕರ್ವ್ ಕಾನ್ಸೆಪ್ಟ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರಲಿದೆ.

2025ರ ವೇಳೆಗೆ ಅವಿನ್ಯಾ ಕಾನ್ಸೆಪ್ಟ್ ಮಾದರಿಯನ್ನು ಉತ್ಪಾದನೆ ಕೈಗೊಳ್ಳಲಿರುವ ಟಾಟಾ ಮೋಟಾರ್ಸ್ ಕಂಪನಿಯು ಉತ್ಪಾದನಾ ಮಾದರಿಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ತರಲಿದ್ದು, ಹೊಸ ಕಾರು ಅತ್ಯಾರ್ಷಕ ಕಟಿಂಗ್ ಎಡ್ಜ್ ವಿನ್ಯಾಸವನ್ನು ಹೊಂದಿದೆ.

ಅವಿನ್ಯಾ ಕಾನ್ಸೆಪ್ಟ್ ಕಾರು 4.3 ಮೀಟರ್ ಉದ್ದಳತೆ ಹೊಂದಿದ್ದು, ಹೊಸ ಕಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಜ್‌ಗೆ 500 ಕಿ.ಮೀ ಗೂ ಹೆಚ್ಚು ಮೈಲೇಜ್ ಹಿಂದಿರುಗಿಸಲಿದೆ. ಟಿ ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್, ಸ್ಲಿಕ್ ಆಕಾರದ ಎಲ್ಇಡಿ ಹೆಡ್‌ಲೈಟ್‌ಗಳು, ಬ್ಲ್ಯಾಕ್ ಪ್ಯಾನೆಲ್ ಹೊಂದಿರುವ ಫ್ರಂಟ್ ಬಂಪರ್, ಆಕರ್ಷಕವಾದ ಅಲಾಯ್ ವ್ಹೀಲ್‌ಗಳು ಹೊಸ ಕಾರಿಗೆ ಐಷಾರಾಮಿ ಲುಕ್ ನೀಡಿವೆ.

ಇದರಲ್ಲದೇ ಹೊಸ ಕಾನ್ಸೆಪ್ಟ್ ಕಾರಿನಲ್ಲಿ ಕಂಪನಿಯು ರೋಲ್ಸ್ ರಾಯ್ಸ್ ಕಾರುಗಳನ್ನು ಬಳಸಲಾಗುವ ಬಟರ್‌ಪ್ಲೈ ವಿನ್ಯಾಸದ ಡೋರ್‌ಗಳನ್ನು ನೀಡಲಾಗಿದ್ದು, ಟಿ ಆಕಾರದ ಲೈಟ್ ಬಾರ್ ಟೈಲ್‌ಗೆಟ್ ಮೊದಲ ನೋಟದಲ್ಲಿಯೇ ಸೆಳೆಯಲಿದೆ.

ಸದ್ಯ ಇವಿ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಒಟ್ಟು 5 ಹೊಸ ಇವಿ ಕಾರು ಮಾದರಿಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದ್ದು, ಹೊಸ ಯೋಜನೆಗಾಗಿ ಇವಿ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಕೂಡಾ ಆರಂಭಿಸಿದೆ.

Most Read Articles

Kannada
English summary
Tata avinya ev concept unveiled walkaround video
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X