ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ಹೊಸ ಕಾರುಗಳ ಅಭಿವೃದ್ದಿ ಮತ್ತ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಬೃಹತ್ ಯೋಜನೆ ರೂಪಿಸಿದೆ.

ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರುಗಳ ಬಿಡುಗಡೆಗಾಗಿ ಕಳೆದ ಒಂದು ವರ್ಷದಲ್ಲಿ ಅತಿ ಹೆಚ್ಚು ಪೇಟೆಂಟ್‌ಗಳನ್ನು ಸಲ್ಲಿಕೆ ಮಾಡುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದ್ದು, ಕಂಪನಿಯು ಮಾರ್ಚ್ 31, 2022ಕ್ಕೆ ಕೊನೆಗೊಳ್ಳುವಂತೆ 2021-2022ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 125 ಪೇಟೆಂಟ್‌ಗಳನ್ನು ಸಲ್ಲಿಕೆ ಮಾಡಿದೆ.

ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ಸಾಂಪ್ರದಾಯಿಕ ಮತ್ತು ಹೊಸ ಶಕ್ತಿಯ ಪವರ್‌ಟ್ರೇನ್ ತಂತ್ರಜ್ಞಾನ, ಹೊಸ ಟ್ರಿಮ್‌ಗಳು ಮತ್ತು ಇತರೆ ವಾಹನ ತಂತ್ರಜ್ಞಾನದಲ್ಲಿನ ವಿವಿಧ ಶ್ರೇಣಿಯ ನಾವೀನ್ಯತೆಗಳು ಮತ್ತು ಬೆಳವಣಿಗೆಗಳಲ್ಲಿ ಕಂಪನಿಯು ಹಲವು ಪೇಟೆಂಟ್‌ಗಳನ್ನು ದಾಖಲಿಸಿದೆ.

ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ಕಂಪನಿಯ ಆಂತರಿಕ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿನ ಅನುಭವವು ವಾಣಿಜ್ಯ ಮತ್ತು ಪ್ರಯಾಣಿಕ ವಾಹನ ವಿಭಾಗದಲ್ಲಿ ಹಲವಾರು ಆವಿಷ್ಕಾರಗಳಿಗೆ ಕಾರಣವಾಗಿದ್ದು, ಹೊಸ ನಾವೀನ್ಯತೆಗಳೊಂದಿಗೆ ಗ್ರಾಹಕರಿಂದ ಮೆಚ್ಚುಗೆ ಪಡೆದಿವೆ.

ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಉತ್ಪನ್ನಗಳ ಮತ್ತು ಗ್ರಾಹಕ ಸೇವೆಯಲ್ಲಿನ ಸುಧಾರಣೆಯಿಂದಾಗಿ ವಾಹನ ಮಾರಾಟದಲ್ಲಿ ಪ್ರಬಲವಾದ ಬೆಳವಣಿಗೆ ಸಾಧಿಸುತ್ತಿದ್ದು, ಹೊಸ ಕಾರುಗಳಲ್ಲಿ ಸಾಮಾನ್ಯ ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಗಮನಸೆಳೆಯುತ್ತಿವೆ.

ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ಕಾರು ಮಾರಾಟದಲ್ಲಿ ಸದ್ಯ ಟಾಟಾ ಮೋಟಾರ್ಸ್ ಕಂಪನಿಯು ಮಾರುತಿ ಸುಜುಕಿ ಮತ್ತು ಹ್ಯುಂಡೈ ನಂತರ ಮೂರನೇ ಸ್ಥಾನದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ಹೊಸ ಕಾರು ಮಾದರಿಗಳೊಂದಿಗೆ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಹೊಸ ತಲೆಮಾರಿನ ಮತ್ತಷ್ಟು ವಿನೂತನ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಕಂಪನಿಯು ಇತ್ತೀಚೆಗೆ ಹಲವು ಹೊಸ ಕಾರು ಮಾದರಿಗಳಾಗಿ ಕೇಂದ್ರ ಸಾರಿಗೆ ಇಲಾಖೆಯಲ್ಲಿ ಟ್ರೇಡ್‌ಮಾರ್ಕ್ ಸಲ್ಲಿಸಿದೆ.

ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ವಿವಿಧ ಕಾರು ವಿಭಾಗದಲ್ಲಿ ಹೊಸ ತಲೆಮಾರಿನ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿರುವ ಟಾಟಾ ಮೋಟಾರ್ಸ್ ಕಂಪನಿಯು ಸಾಮಾನ್ಯ ಕಾರುಗಳ ಜೊತೆಗೆ ಇವಿ ಕಾರು ಮಾದರಿಗಳನ್ನು ಸಹ ಬಿಡುಗಡೆ ಮಾಡಲಿದ್ದು, ಹೊಸ ಕಾರುಗಳು ಆಕರ್ಷಕವಾದ ನೇಮ್‌ಪ್ಲೇಟ್ ಹೊಂದಿರಲಿವೆ.

ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಕರ್ವ್ ಇವಿ ಕಾನ್ಸೆಪ್ಟ್ ಮತ್ತು ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣಗೊಳಿಸಿದ ಬೆನ್ನಲ್ಲೇ ಹೊಸ ಟ್ರೇಡ್‌ಮಾರ್ಕ್ ಸಲ್ಲಿಸಿದ್ದು, 2030ರ ವೇಳೆಗೆ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಮತ್ತಷ್ಟು ಬೇಡಿಕೆಯ ನೀರಿಕ್ಷೆಯೊಂದಿಗೆ ಪ್ರಮುಖ ಮೂರು-ಪ್ಲಾಟ್‌ಫಾರ್ಮ್‌ಗಳಲ್ಲೂ ವಾಹನ ಉತ್ಪಾದನೆ ಕೈಗೊಳ್ಳುತ್ತಿದೆ.

ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ಹೊಸ ಟ್ರೇಡ್‌ಮಾರ್ಕ್ ಪಟ್ಟಿಯಲ್ಲಿ ಸ್ಟೈಜರ್, ಬೊವಿಟಾ, ಅರೋರ್ ಮತ್ತು ಕ್ಸಿಯೋಮಾರಾ ಸೇರಿದಂತೆ ಹಲವು ಹೊಸ ಕಾರು ಮಾದರಿಗಳ ಅಭಿವೃದ್ದಿಗೆ ಎದುರುನೋಡುತ್ತಿದ್ದು, ಶೀಘ್ರದಲ್ಲಿ ಹೊಸ ಕಾನ್ಸೆಪ್ಟ್ ಮಾದರಿಗಳ ಅಭಿವೃದ್ದಿ ಚಾಲನೆ ನೀಡಲಿದೆ.

ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ಸದ್ಯ ಒಂದೇ ತಲೆಮಾರಿನ ಇವಿ ಕಾರುಗಳನ್ನು ಮಾರಾಟ ಮಾಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು 2024ರಿಂದ ಎರಡನೇ ತಲೆಮಾರಿನ ಇವಿ ಕಾರುಗಳನ್ನು ಮತ್ತು 2026ರಿಂದ ಮೂರನೇ ತಲೆಮಾರಿನ ಇವಿ ಕಾರುಗಳನ್ನು ರಸ್ತೆಗಿಳಿಸಲಿದೆ.

ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ಸದ್ಯ ಇವಿ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಒಟ್ಟು 5 ಹೊಸ ಇವಿ ಕಾರು ಮಾದರಿಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದ್ದು, ಹೊಸ ಯೋಜನೆಗಾಗಿ ಇವಿ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಕೂಡಾ ಆರಂಭಿಸಿದೆ.

ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ಇವಿ ಕಾರುಗಳನ್ನು ಟಾಟಾ ಕಂಪನಿಯು ಸದ್ಯ ಸಾಮಾನ್ಯ ಕಾರುಗಳ ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಪಡಿಸುತ್ತಿದ್ದು, ಭವಿಷ್ಯದ ಬೃಹತ್ ಯೋಜನೆಗಳಿಗಾಗಿ ಪ್ರತ್ಯೇಕ ನಿಯಂತ್ರಣ ಹೊಂದಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಅಂಗಸಂಸ್ಥೆಯನ್ನು ಸಹ ಆರಂಭಿಸಿದೆ.

ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಅಂಗಸಂಸ್ಥೆಯನ್ನು ರೂ.1,500 ಕೋಟಿ ರೂಪಾಯಿ ಆರಂಭಿಕ ಹೂಡಿಕೆಯೊಂದಿಗೆ ಆರಂಭಗೊಳಿಸಿದ್ದು, ಪ್ರತ್ಯೇಕ ಪ್ಲ್ಯಾಟ್‌ಫಾರ್ಮ ಮೂಲಕ ಇವಿ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದೆ. ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಸದ್ಯ ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಬಳಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಇವಿ ಮಾದರಿಗಳಿಗಾಗಿ ಸಿಗ್ಮಾ ಆರ್ಕಿಟೆಕ್ಚರ್ ಮತ್ತು ಸ್ಕೇಟ್‌ಬೋರ್ಡ್ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ.

ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿಯೇ ಟಿಗೋರ್ ಇವಿ, ನೆಕ್ಸಾನ್ ಇವಿ ಮಾದರಿಗಳನ್ನು ಅಭಿವೃದ್ದಿಗೊಳಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಸಿಗ್ಮಾ ಪ್ಲಾಟ್‌ಫಾರ್ಮ್ ಮೂಲಕ ಸಂಪೂರ್ಣವಾಗಿ ಇವಿ ವಾಹನಗಳ ಉತ್ಪಾದನೆಗಾಗಿ ಮೀಸಲಿರಿಸಿದೆ.

ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ಸಿಗ್ಮಾ ಪ್ಲಾಟ್‌ಫಾರ್ಮ್ ಮೂಲಕ ಮೊದಲ ಇವಿ ಕಾರು ಮಾದರಿಯಾಗಿ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಸಿಯೆರಾ ಇವಿ ಸೇರಿದಂತೆ ಪ್ರಮುಖ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಸಿಗ್ಮಾ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣವಾಗುವ ಇವಿ ಕಾರುಗಳು ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಇವಿ ಕಾರುಗಳಿಂತಲೂ ಹೆಚ್ಚು ಹಗುರ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಪಡೆದುಕೊಂಡಿವೆ.

ಹೊಸ ಕಾರುಗಳಿಗಾಗಿ ದಾಖಲೆ ಮಟ್ಟದ ಟ್ರೇಡ್​ಮಾರ್ಕ್ ಸಲ್ಲಿಕೆ ಮಾಡಿದ ಟಾಟಾ ಮೋಟಾರ್ಸ್

ಹಾಗೆಯೇ ಕಂಪನಿಯ ಮತ್ತೊಂದು ಸ್ಕೇಟ್‌ಬೋರ್ಡ್ ಪ್ಲ್ಯಾಟ್‌ಫಾರ್ಮ್ ಅಡಿ ಅಭಿವೃದ್ದಿಗೊಳ್ಳಲಿರುವ ಇವಿ ಕಾರುಗಳು ಇನ್ನು ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆ ಹೊಂದಿರಲಿದ್ದು, ಸದ್ಯಕ್ಕೆ ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ನಿಂದ ಸಿಗ್ಮಾ ಪ್ಲಾಟ್‌ಫಾರ್ಮ್‌ಗೆ ಬದಲಾಗುತ್ತಿರುವ ಕಂಪನಿಯು ಸ್ಕೇಟ್‌ಬೋರ್ಡ್ ಪ್ಲ್ಯಾಟ್‌ಫಾರ್ಮ್ ಅನ್ನು ಇನ್ನು ಕೆಲವು ವರ್ಷಗಳ ನಂತರ ಬಳಕೆಗೆ ಯೋಜನೆ ರೂಪಿಸಿದೆ.

Most Read Articles

Kannada
English summary
Tata motors files recorded 125 patents in a year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X