ಹೆಚ್ಚುವರಿ ವೈಶಿಷ್ಟ್ಯಗಳನ್ನೊಳಗೊಂಡ ನೆಕ್ಸಾನ್ ಇವಿ ಪ್ರೈಮ್ ಪರಿಚಯಿಸಿದ ಟಾಟಾ ಮೋಟಾರ್ಸ್

ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ತನ್ನ ಇವಿ ಮಾದರಿಗಳಾದ ಟಾಟಾ ಟಿಗೋರ್ ಇವಿ, ನೆಕ್ಸಾನ್ ಇವಿ, ನೆಕ್ಸಾನ್ ಇವಿ ಮ್ಯಾಕ್ಸ್, ಎಕ್ಸ್‌ಪ್ರೆಸ್‌ ಟಿ ಕಾರುಗಳನ್ನು ಸದ್ಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು, ಇದೀಗ ಟಾಟಾ ಮೋಟಾರ್ಸ್ ಹೊಸ ನೆಕ್ಸಾನ್ EV ಪ್ರೈಮ್ ಅನ್ನು ಪರಿಚಯಿಸಿದೆ.

ಹೆಚ್ಚುವರಿ ವೈಶಿಷ್ಟ್ಯಗಳನ್ನೊಳಗೊಂಡ ನೆಕ್ಸಾನ್ ಇವಿ ಪ್ರೈಮ್ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ನೆಕ್ಸಾನ್ EV ಪ್ರೈಮ್ ಮೂಲಭೂತವಾಗಿ ಎಲೆಕ್ಟ್ರಿಕ್ ವಾಹನದ ಪ್ರಮಾಣಿತ ಆವೃತ್ತಿಯ ನವೀಕರಣವಾಗಿದೆ. ನೆಕ್ಸಾನ್ ಇವಿ ಶ್ರೇಣಿಯಲ್ಲಿರುವ ಪ್ರೈಮ್ ಮಾನಿಕರ್ ನೆಕ್ಸಾನ್ ಇವಿ ಮ್ಯಾಕ್ಸ್‌ ಮಾದರಿಗಿಂತ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತದೆ.

ಹೆಚ್ಚುವರಿ ವೈಶಿಷ್ಟ್ಯಗಳನ್ನೊಳಗೊಂಡ ನೆಕ್ಸಾನ್ ಇವಿ ಪ್ರೈಮ್ ಪರಿಚಯಿಸಿದ ಟಾಟಾ ಮೋಟಾರ್ಸ್

ವೈಶಿಷ್ಟ್ಯದ ಸೇರ್ಪಡೆಗಳ ಕುರಿತು ಹೇಳುವುದಾದರೆ, ಟಾಟಾ ನೆಕ್ಸಾನ್ EV ಪ್ರೈಮ್ ಬಹು ರೀಜೆನ್ ಮೋಡ್‌ಗಳು, ಕ್ರೂಸ್ ಕಂಟ್ರೋಲ್, ಸ್ಮಾರ್ಟ್‌ವಾಚ್ ಸಂಪರ್ಕ ಮತ್ತು i-TPMS ಅನ್ನು ಪಡೆದುಕೊಂಡಿದೆ. ಈ ಹೊಸ ವೈಶಿಷ್ಟ್ಯಗಳನ್ನು ಪ್ರಸ್ತುತ Nexon EV ಮಾಲೀಕರಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಹೊರತರಲಾಗುತ್ತದೆ. ಈ ನವೀಕರಣವು ಬ್ರ್ಯಾಂಡ್‌ನ ಸೇವಾ ಕೇಂದ್ರಗಳಲ್ಲಿ ಜುಲೈ 25 ರಿಂದ ಜಾರಿಗೆ ಬರಲಿದೆ.

ಹೆಚ್ಚುವರಿ ವೈಶಿಷ್ಟ್ಯಗಳನ್ನೊಳಗೊಂಡ ನೆಕ್ಸಾನ್ ಇವಿ ಪ್ರೈಮ್ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ನೆಕ್ಸಾನ್ EV ಪ್ರೈಮ್ 30.2kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು, ಇದು 127bhp 245Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮಾದರಿಯು ಕೇವಲ 9.9 ಸೆಕೆಂಡುಗಳಲ್ಲಿ 0-100kmph ವೇಗವನ್ನು ತಲುಪುತ್ತದೆ ಎಂದು ಹೇಳಲಾಗಿದೆ. ಡ್ರೈವ್ ಮತ್ತು ಸ್ಪೋರ್ಟ್ ಸೇರಿದಂತೆ ಎರಡು ಡ್ರೈವ್ ಮೋಡ್‌ಗಳು ಸಹ ಈ ಆಫರ್‌ನಲ್ಲಿವೆ.

ಹೆಚ್ಚುವರಿ ವೈಶಿಷ್ಟ್ಯಗಳನ್ನೊಳಗೊಂಡ ನೆಕ್ಸಾನ್ ಇವಿ ಪ್ರೈಮ್ ಪರಿಚಯಿಸಿದ ಟಾಟಾ ಮೋಟಾರ್ಸ್

ಬ್ಯಾಟರಿ ರಿಪ್ಲೇಸ್‌ಮೆಂಟ್ ಮಾಡಿದ ಮಾಲೀಕ

ಟಾಟಾ ನೆಕ್ಸಾನ್ ಖರೀದಿಸಲು ಬಯಸುವ ಜನರು ಯಾವಾಗಲೂ ತಮ್ಮ ತಲೆಯಲ್ಲಿ ಬ್ಯಾಟರಿ ಬದಲಾವಣೆಯ ವೆಚ್ಚದ ಬಗ್ಗೆ ಹೆಚ್ಚಾಗಿ ಯೋಚಿಸುತ್ತಾರೆ. ಏಕೆಂದರೆ ಇವಿ ಕಾರುಗಳು ಹಳೆಯದಾದಷ್ಟು ಬ್ಯಾಟರಿಗಳ ಸಾಮರ್ಥ್ಯ ಕೂಡ ಕುಂದುತ್ತದೆ. ಇದೇ ಸಮಸ್ಯೆಯನ್ನು ಎದುರಿಸುತ್ತಿರುವ ಟಾಟಾ ನೆಕ್ಸಾನ್ ಇವಿ ಮಾಲೀಕರೊಬ್ಬರು ಬ್ಯಾಟರಿ ರಿಪ್ಲೇಸ್‌ಮೆಂಟ್ ವೆಚ್ಚದ ಕುರಿತು ಬಹಿರಂಗಪಡಿಸಿದ್ದಾರೆ.

ಹೆಚ್ಚುವರಿ ವೈಶಿಷ್ಟ್ಯಗಳನ್ನೊಳಗೊಂಡ ನೆಕ್ಸಾನ್ ಇವಿ ಪ್ರೈಮ್ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ನೆಕ್ಸಾನ್ ಮಾಲೀಕ ದೊಡ್ಡಪ್ಪ ಎಂಬುವರು ಟಾಟಾ ನೆಕ್ಸನ್ ಇವಿ ಕರ್ನಾಟಕ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕಳೆದ 2 ವರ್ಷಗಳಿಂದ ವಾಹನವನ್ನು ಬಳಸುತ್ತಿದ್ದು, 68,000 ಕಿ.ಮೀ.ಗೂ ಹೆಚ್ಚು ಕ್ರಮಿಸಿದ್ದಾರೆ. ಬ್ಯಾಟರಿ ಚಾರ್ಜ್ ಶೇಕಡಾ15% ಕ್ಕೆ ಇಳಿದಾಗ ನೆಕ್ಸಾನ್ EV ಸ್ಥಗಿತಗೊಳ್ಳುವ ಸಮಸ್ಯೆಯನ್ನು ಮಾಲೀಕರು ಎದುರಿಸುತ್ತಿದ್ದಾರೆ.

ಹೆಚ್ಚುವರಿ ವೈಶಿಷ್ಟ್ಯಗಳನ್ನೊಳಗೊಂಡ ನೆಕ್ಸಾನ್ ಇವಿ ಪ್ರೈಮ್ ಪರಿಚಯಿಸಿದ ಟಾಟಾ ಮೋಟಾರ್ಸ್

ಹಾಗಾಗಿ ವಾಹನದ ಬ್ಯಾಟರಿಯ ಬದಲಿ ವೆಚ್ಚದ ಬಗ್ಗೆ ಮಾಲೀಕರು ತಿಳಿಸಿ, 7 ಲಕ್ಷ ರೂ. ವೆಚ್ಚವಾಗಬಹುದು ಎಂದು ಹೇಳಿದ್ದಾರೆ. ಇದನ್ನು ನಿಖರವಾಗಿ ಯಾರು ಹೇಳಿದರು ಎಂಬುದನ್ನು ಅವರು ತಿಳಿಸಿಲ್ಲ. ಹಾಗಾಗಿ ಈ ಮಾಹಿತಿಯ ಬಗ್ಗೆ ಖಚಿತವಾಗಿ ಒಪ್ಪಲಾಗುವುದಿಲ್ಲ.

ಹೆಚ್ಚುವರಿ ವೈಶಿಷ್ಟ್ಯಗಳನ್ನೊಳಗೊಂಡ ನೆಕ್ಸಾನ್ ಇವಿ ಪ್ರೈಮ್ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ನೆಕ್ಸಾನ್ EV ಬ್ಯಾಟರಿಯ ಮೇಲೆ 8 ವರ್ಷಗಳ ವಾರಂಟಿಯನ್ನು ನೀಡುವುದರಿಂದ, ಟಾಟಾ ಸೇವಾ ಕೇಂದ್ರವು ಅದನ್ನು ಉಚಿತವಾಗಿ ಬದಲಾಯಿಸಿದೆ. ಕಾರು ಈಗ ಹೊಸ ಕಾರಿನಂತೆ ಉತ್ತಮವಾಗಿದೆ ಎಂದು ಮಾಲೀಕರು ಕೂಡ ಹೇಳಿದ್ದಾರೆ. ಆದರೆ ಟಾಟಾ ಮೋಟಾರ್ಸ್ ಬ್ಯಾಟರಿ ಬದಲಾವಣೆಯ ಬೆಲೆಯನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ಹೆಚ್ಚುವರಿ ವೈಶಿಷ್ಟ್ಯಗಳನ್ನೊಳಗೊಂಡ ನೆಕ್ಸಾನ್ ಇವಿ ಪ್ರೈಮ್ ಪರಿಚಯಿಸಿದ ಟಾಟಾ ಮೋಟಾರ್ಸ್

ಇದುವರೆಗೆ ಗ್ರಾಹಕರಿಂದ ಹೆಚ್ಚು ಚಾಲಿತವಾದ ಟಾಟಾ ನೆಕ್ಸಾನ್ ಇವಿಗಳಲ್ಲಿ ದೊಡ್ಡಪ್ಪ ಅವರದ್ದೇ ಹೆಚ್ಚು ಓಡಿದ ವಾಹನವಾಗಿರಬಹುದು ಎನ್ನಲಾಗಿದೆ. ಏಕೆಂದರೆ ಎರಡು ವರ್ಷಗಳಲ್ಲಿ ಒಟ್ಟು 68,000 ಕಿ.ಮೀ ಸಂಚರಿಸಿದ್ದಾರೆ. ಅಂದರೇ ಮಾಲೀಕರು ತಿಂಗಳಿಗೆ ಸರಾಸರಿ 3,000 ಕಿ.ಮೀ ಓಡಿಸಿರಬಹುದು ಎಂದು ಅಂದಾಜಿಸಲಾಗಿದೆ.

ಹೆಚ್ಚುವರಿ ವೈಶಿಷ್ಟ್ಯಗಳನ್ನೊಳಗೊಂಡ ನೆಕ್ಸಾನ್ ಇವಿ ಪ್ರೈಮ್ ಪರಿಚಯಿಸಿದ ಟಾಟಾ ಮೋಟಾರ್ಸ್

Nexon EV ಯ ಬ್ಯಾಟರಿ ಪ್ಯಾಕ್‌ನಲ್ಲಿ ಟಾಟಾ ಮೋಟಾರ್ಸ್ 8 ವರ್ಷಗಳು ಅಥವಾ 1.6 ಲಕ್ಷ ಕಿ.ಮೀ ವಾರಂಟಿಯನ್ನು ನೀಡುತ್ತದೆ, ವಾರಂಟಿ ಮುಗಿದ ನಂತರ ವಾಹನದ ಮಾಲೀಕತ್ವದ ವೆಚ್ಚವನ್ನು ನೋಡಲು ಹಲವರಲ್ಲಿ ಆಸಕ್ತಿಯಿದೆ. Tata Nexon EV ಪ್ರಸ್ತುತ XM, XZ Plus ಮತ್ತು XZ Plus Lux ಎಂಬ ಮೂರು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ.

ಹೆಚ್ಚುವರಿ ವೈಶಿಷ್ಟ್ಯಗಳನ್ನೊಳಗೊಂಡ ನೆಕ್ಸಾನ್ ಇವಿ ಪ್ರೈಮ್ ಪರಿಚಯಿಸಿದ ಟಾಟಾ ಮೋಟಾರ್ಸ್

ಈ ಎಲ್ಲಾ ಮೂರು ರೂಪಾಂತರಗಳು ಮುಂಭಾಗದಲ್ಲಿ ಎಲೆಕ್ಟ್ರಿಕ್ ಮೋಟರ್ನೊಂದಿಗೆ ಮುಂಭಾಗದ ವೀಲ್-ಡ್ರೈವ್ ಸಂರಚನೆಯೊಂದಿಗೆ ಬರುತ್ತವೆ. ಈ ಎಲೆಕ್ಟ್ರಿಕ್ ಮೋಟಾರ್ 129 ಪಿಎಸ್ ಗರಿಷ್ಠ ಶಕ್ತಿಯನ್ನು ಮತ್ತು 245 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದನೆಯನ್ನು ಉತ್ಪಾದಿಸುತ್ತದೆ.

ಹೆಚ್ಚುವರಿ ವೈಶಿಷ್ಟ್ಯಗಳನ್ನೊಳಗೊಂಡ ನೆಕ್ಸಾನ್ ಇವಿ ಪ್ರೈಮ್ ಪರಿಚಯಿಸಿದ ಟಾಟಾ ಮೋಟಾರ್ಸ್

ಪೂರ್ಣ ಚಾರ್ಜ್‌ಗೆ 8.5 ಗಂಟೆಗಳನ್ನು ತೆಗೆದುಕೊಳ್ಳುವ ಈ ಮೂರು ರೂಪಾಂತರಗಳು, 30.2 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿವೆ. ಇದು 312 ಕಿ.ಮೀಗಳ ಕ್ಲೈಮ್ ಡ್ರೈವಿಂಗ್ ಶ್ರೇಣಿಯನ್ನು ಹಿಂದಿರುಗಿಸುತ್ತದೆ. ಟಾಟಾ ನೆಕ್ಸಾನ್ ಇವಿ ಬೆಲೆಗಳು ರೂ 14.29 ಲಕ್ಷದಿಂದ ಪ್ರಾರಂಭವಾಗಿ ರೂ. 16.70 ಲಕ್ಷಕ್ಕೆ ಇದೆ. ಟಾಪ್-ಸ್ಪೆಕ್ ಎಕ್ಸ್‌ಝಡ್ ಪ್ಲಸ್ ಮತ್ತು ಎಕ್ಸ್‌ಝಡ್ ಪ್ಲಸ್ ಲಕ್ಸ್ ಅನ್ನು ಐಚ್ಛಿಕ 'ಬ್ಲ್ಯಾಕ್ ಎಡಿಷನ್' ನಲ್ಲಿ ಆಯಾ ರೂಪಾಂತರಗಳಿಗಿಂತ ಸುಮಾರು 20,000 ರೂ.ಗಳ ಪ್ರೀಮಿಯಂನಲ್ಲಿ ನೀಡಲಾಗುತ್ತದೆ.

Article Published On: Tuesday, July 12, 2022, 18:56 [IST]
English summary
Tata Motors introduced the Nexon EV Prime with additional features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+