Just In
- 3 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 5 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 6 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 7 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Lifestyle ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- Movies Shrirasthu Shubhamasthu: ಮಹೇಶನ ಎದುರು ಬಯಲಾಯಿತು ಶಾರ್ವರಿ ಎರಡನೇ ಮುಖ; ಮುಂದೇನು?
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೆಕ್ಸಾನ್ ಇವಿ ಮ್ಯಾಕ್ಸ್ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಕಂಪನಿಯು ಇದೇ ತಿಂಗಳು 11ರಂದು ತನ್ನ ಬಹುನೀರಿಕ್ಷಿತ ನೆಕ್ಸಾನ್ ಫೇಸ್ಲಿಫ್ಟ್ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗಿದೆ.
2022ರ ನೆಕ್ಸಾನ್ ಇವಿ ಮಾದರಿಯು ನೆಕ್ಸಾನ್ ಇವಿ ಮ್ಯಾಕ್ಸ್ ಹೆಸರಿನೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಂತೆ ಕಂಪನಿಯು ಇದೀಗ ಹೊಸ ಟೀಸರ್ ಪ್ರಕಟಿಸಿದೆ. ಹೊಸ ಟೀಸರ್ ವಿಡಿಯೋದಲ್ಲಿ ಹೊಸ ಕಾರಿನ ಮುಂಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗೊಳಿಸಿದ್ದು, ಕಾರಿನ ಒಳಭಾಗದಲ್ಲೂ ಹಲವಾರು ಹೊಸ ತಾಂತ್ರಿಕ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದೆ.
ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚಿನ ಮೈಲೇಜ್ನೊಂದಿಗೆ ಹೆಚ್ಚುವರಿ ಫೀಚರ್ಸ್ ಪಡೆದುಕೊಳ್ಳಲಿದೆ. ಹಾಗೆಯೇ ಹೊಸ ಕಾರು ನೆಕ್ಸಾನ್ ಮ್ಯಾಕ್ಸ್ ಹೆಸರಿನೊಂದಿಗೆ ಬಿಡುಗಡೆಯಾಗಲಿದ್ದು, ಅತ್ಯಧಿಕ ಮೈಲೇಜ್ ಬ್ಯಾಟರಿ ಪ್ಯಾಕ್ ಆಯ್ಕೆ ಹಿನ್ನಲೆಯಲ್ಲಿ ಮ್ಯಾಕ್ಸ್ ನೇಮ್ಪ್ಲೆಮ್ ಬಳಕೆ ಮಾಡಲಾಗುತ್ತಿದೆ.
ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚಿನ ಮೈಲೇಜ್ನೊಂದಿಗೆ ಹೆಚ್ಚುವರಿ ಫೀಚರ್ಸ್ ಹೊದಲಿರುವ ನೆಕ್ಸಾನ್ ಮ್ಯಾಕ್ಸ್ ಜೊತೆಗೆ ಕಂಪನಿಯು ಸ್ಟ್ಯಾಂಡರ್ಡ್ ನೆಕ್ಸಾನ್ ಇವಿ ಮಾದರಿಯನ್ನು ಕೂಡಾ ಮಾರಾಟಗೊಳಿಸಬಹುದಾಗಿದೆ.
ಸ್ಟ್ಯಾಂಡರ್ಡ್ ನೆಕ್ಸಾನ್ ಇವಿ ಮಾದರಿಗಿಂತ ನೆಕ್ಸಾನ್ ಮ್ಯಾಕ್ಸ್ ಮಾದರಿಯು ತುಸು ದುಬಾರಿಯಾಗಿರಲಿದ್ದು, ಬೆಲೆ ಆಧರಿಸಿ ಗ್ರಾಹಕರು ವಿವಿಧ ವೆರಿಯೆಂಟ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸದ್ಯ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಎಕ್ಸ್ಎಂ, ಎಕ್ಸ್ಜೆಡ್ ಪ್ಲಸ್, ಎಕ್ಸ್ಜೆಡ್ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರಿಯೆಂಟ್ಗಳಲ್ಲಿ ಖರೀದಿಗೆ ಲಭ್ಯವಿದ್ದು, ಮೂರು ವೆರಿಯೆಂಟ್ಗಳಲ್ಲೂ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್ಗಳಿವೆ.
ಇದರೊಂದಿಗೆ ಹೊಸ ನೆಕ್ಸಾನ್ ಇವಿ ಕಾರು ಮತ್ತಷ್ಟು ಹೊಸ ತಾಂತ್ರಿಕ ಅಂಶಗಳೊಂದಿಗೆ ವಿವಿಧ ವೆರಿಯೆಂಟ್ಗಳನ್ನು ಪಡೆದುಕೊಳ್ಳಲಿದ್ದು, ಗ್ರಾಹಕರು ತಮ್ಮ ಬಜೆಟ್ಗೆ ಅನುಗುಣವಾಗಿ ವಿವಿಧ ವೆರಿಯೆಂಟ್ಗಳನ್ನು ಆಯ್ಕೆ ಮಾಡಲು ಸಹಕಾರಿಯಾಗಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಇವಿ ಕಾರಿನಲ್ಲಿ 95kW ಎಲೆಕ್ಟ್ರಿಕ್ ಮೋಟಾರ್ ಮತ್ತು 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದ್ದು, 2022ರ ಆವೃತ್ತಿಯಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಯನ್ನು ಆಧರಿಸಿ 40kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಿದೆ ಎನ್ನಲಾಗಿದೆ.
ನೆಕ್ಸಾನ್ ಇವಿ ಎಆರ್ಎಐ ಸಂಸ್ಥೆಯು ಪ್ರಮಾಣಿಕರಿಸದಂತೆ ಸದ್ಯ 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ನೊಂದಿಗೆ ಇಕೋ ಡ್ರೈವ್ ಮೋಡ್ನಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದರೆ 2022ರ ಆವೃತ್ತಿಯಲ್ಲಿನ ಮೈಲೇಜ್ ರೇಂಜ್ ಪ್ರಮಾಣವು ಪ್ರತಿ ಚಾರ್ಜ್ 400 ಕಿ.ಮೀ ಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ.
ಹೊಸ ನೆಕ್ಸಾನ್ ಇವಿ ಮಾದರಿಯಲ್ಲಿ ಹೆಚ್ಚಿನ ಮೈಲೇಜ್ ರೇಂಜ್ ಹೊಂದಿರುವ ಮಾದರಿಗಾಗಿ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಅಭಿವೃದ್ದಿಗೊಳಿಸಿದೆ.
ಇದರೊಂದಿಗೆ ಜಿಪ್ಟ್ರಾನ್ ತಂತ್ರಜ್ಞಾನ ಹೊಂದಿರುವ ನೆಕ್ಸಾನ್ ಇವಿ ಮಾದರಿಯು 127 ಬಿಎಚ್ಪಿ ಉತ್ಪಾದನಾ ಗುಣಹೊಂದಿದ್ದು, ಸುಧಾರಿತ ತಂತ್ರಜ್ಞಾನದೊಂದಿಗೆ ಉನ್ನತೀಕರಿಸಲಾಗುತ್ತಿರುವ ಹೊಸ ಮಾದರಿಯು ಪ್ರಸ್ತುತ ಮಾದರಿಯಲ್ಲಿ ಬಳಕೆ ಮಾಡಲಾಗುತ್ತಿರುವ 95kW ಎಲೆಕ್ಟ್ರಿಕ್ ಮೋಟಾರ್ ಮೂಲಕವೇ 134 ಬಿಎಚ್ಪಿ ಉತ್ಪಾದನಾ ವೈಶಿಷ್ಟ್ಯತೆ ಹೊಂದಿರಲಿದೆ.
ಹೊಸ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಪ್ರಮುಖ ಸೇಫ್ಟಿ ಫೀಚರ್ಸ್ಗಳನ್ನು ಸಹ ಉನ್ನತೀಕರಿಸುತ್ತಿದ್ದು, ಹೊಸ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಗಿ ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ವೆಂಟಿಲೆಟೆಡ್ ಸೀಟುಗಳು ಸೇರಿದಂತೆ ಕೆಲವು ಹೊಸ ತಾಂತ್ರಿಕ ಅಂಶಗಳನ್ನು ಸೇರ್ಪಡೆಗೊಳಿಸಿದೆ.
ಸದ್ಯ ಮಾರುಕಟ್ಟೆಯಲ್ಲಿ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹ್ಯುಂಡೈ ಕೊನಾ ಕಾರುಗಳಿಗೆ ಪೈಪೋಟಿಯಾಗಿ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಸುಧಾರಿತ ಜಿಪ್ಟ್ರಾನ್ ತಂತ್ರಜ್ಞಾನ ಬಳಕೆ ಮಾಡುತ್ತಿರುವುದೇ ಟಾಟಾ ಹೊಸ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
ಜಿಪ್ಟ್ರಾನ್ ತಂತ್ರಜ್ಞಾನವು ಟಾಟಾ ಕಂಪನಿಯ ಜನಪ್ರಿಯತೆಯನನು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವಂತೆ ಮಾಡಿದ್ದು, ಎಲೆಕ್ಟ್ರಿಕ್ ಕಾರುಗಳ ಕಾರ್ಯಕ್ಷಮತೆ, ಬ್ಯಾಟರಿ ದಕ್ಷತೆ ಮತ್ತು ಗ್ರಾಹಕರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಯಲ್ಲಿ ಸಹಕಾರಿಯಾಗುತ್ತಿದೆ.
ನೆಕ್ಸಾನ್ ಇವಿ ಮಾದರಿಯಲ್ಲಿ ಬಳಕೆ ಮಾಡಲಾಗುತ್ತಿರುವ ಹೈ-ವೊಲ್ಟೆಜ್ ಆರ್ಕಿಟೆಕ್ಚರ್ ಪ್ರೇರಿತ ಜಿಪ್ಟ್ರಾನ್ ತಂತ್ರಜ್ಞಾನವು ಹಲವು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಹೈ ವೊಲ್ಟೆಜ್ ಸಿಸ್ಟಂ, ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿಕಡಿಮೆ ಅವಧಿಯಲ್ಲಿ ಹೆಚ್ಚು ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳಿಂದ ಕೂಡಿದೆ.
ಜಿಪ್ಟ್ರಾನ್ ತಂತ್ರಜ್ಞಾನವು ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅಳವಡಿಕೆ ಹಿನ್ನಲೆಯಲ್ಲಿ ಕಾರು ಚಾಲನೆ ವೇಳೆ ನೀರ್ದಿಷ್ಟ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜಿಂಗ್ ಪ್ರಕ್ರಿಯೆಯು ಮರಳಿ ಪಡೆಯಬಹುದಾಗಿದ್ದು, ಇದೇ ಕಾರಣಕ್ಕೆ ಹೊಸ ತಂತ್ರಜ್ಞಾನವು ಬ್ಯಾಟರಿ ದೀರ್ಘಕಾಲದ ಬಾಳಿಕೆಗೆ ಸಹಕರಿಸಲಿದೆ.
ಸದ್ಯ ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.40 ಲಕ್ಷ ಬೆಲೆ ಪಡೆದುಕೊಂಡಿದ್ದು, ನವೀಕೃತ ಮಾದರಿಯು ಪ್ರಸ್ತುತ ಮಾದರಿಯ ಬೆಲೆಗಿಂತಲೂ ರೂ 1.50 ಲಕ್ಷದಿಂದ ರೂ. 2 ಲಕ್ಷದ ತನಕ ಹೆಚ್ಚುವರಿ ಬೆಲೆ ಹೊಂದಬಹುದಾಗಿದೆ.
ಉನ್ನತೀಕರಿಸಿದ ಬ್ಯಾಟರಿ ಪ್ಯಾಕ್ ಮೂಲಕ ಮೈಲೇಜ್ ಪ್ರಮಾಣವನ್ನು ಹೆಚ್ಚಿಸಲಾಗುತ್ತಿರುವದರಿಂದ ಕಾರಿನ ದರದಲ್ಲೂ ಹೆಚ್ಚಳವಾಗುತ್ತಿದ್ದು, ಬೆಲೆ ಏರಿಕೆಯನ್ನು ಆಧರಿಸಿ ಬ್ಯಾಟರಿ ಪ್ಯಾಕ್ ಕಾರ್ಯಕ್ಷಮತೆಯಲ್ಲಿ ಬದಲಾವಣೆಗಳನ್ನು ತರಲಾಗುತ್ತಿದೆ.