ಟಾಟಾ ನ್ಯಾನೋಗೆ ಮತ್ತೆ ಜೀವ.. ಅತಿ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರ್ ಆಗಿ ಮಾರುಕಟ್ಟೆಗೆ

ದೇಶದ ಮಧ್ಯಮ ವರ್ಗದ ಜನರ ಹಾಟ್ ಫೆವರೇಟ್ ಕಾರ್ 'ಟಾಟಾ ನ್ಯಾನೋ' ಮಾರುಕಟ್ಟೆಯಿಂದ ದೂರವಾಗಿ ಎರಡು ವರ್ಷಗಳು ಕಳೆದಿವೆ. ವರದಿಯ ಪ್ರಕಾರ, ಟಾಟಾ ತನ್ನ ಚಿಕ್ಕ ಕಾರನ್ನು EV ಆಗಿ ವಾಪಸ್ ತರಲು ಕೆಲಸ ಮಾಡುತ್ತಿದೆ. ನ್ಯಾನೋ ಆರಂಭದಲ್ಲಿ ಭಾರತದಲ್ಲಿ ಅತ್ಯಂತ ಕೈಗೆಟುಕುವ ಕಾರು ಎಂದು ಹೇಳಲಾಗಿತ್ತು.

ಆದರೆ, ರತನ್ ಟಾಟಾ ಅವರು ಊಹಿಸಿದ ರೀತಿಯಲ್ಲಿ ಮಾರುಕಟ್ಟೆಯಲ್ಲಿ ನ್ಯಾನೋ ಕಾರು ಗ್ರಾಹಕರನ್ನು ಸೆಳೆಯದೇ ಕಮಲ್ ಮಾಡಲು ವಿಫಲವಾಯಿತು. ನ್ಯಾನೋ ತನ್ನದೇ ಆದ ಮಾರ್ಕೆಟಿಂಗ್ ಸ್ಕೀಮ್‌ಗೆ ಬಲಿಯಾಯಿತು ಎಂದು ಹೇಳಬಹುದು. ಸದ್ಯ ಎಲೆಕ್ಟ್ರಿಕ್ ಕಾರ್ ಆಗಿ ಮಾರುಕಟ್ಟೆಗೆ ನ್ಯಾನೋವನ್ನು ಪರಿಚಯಿಸಲು ಟಾಟಾ ಕಂಪನಿ ಕೆಲಸ ಮಾಡುತ್ತಿದ್ದು, ಹೊಸ ನ್ಯಾನೋ EVಯಲ್ಲಿ ಯಾವೆಲ್ಲ ವೈಶಿಷ್ಟ್ಯಗಳನ್ನು ನೀಡಬೇಕೆಂದು ಟಾಟಾ ಗಮನಹರಿಸುತ್ತಿದೆ ಎಂಬುದರ ಬಗ್ಗೆ ಇಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಟಾಟಾ ನ್ಯಾನೋ ಮತ್ತೆ ಜೀವ.. ಅತಿ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರ್ ಆಗಿ ಮಾರುಕಟ್ಟೆಗೆ

ನ್ಯಾನೋ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹಳೆಯ ನ್ಯಾನೋದ ಸರಳವಾದ ಸಿಂಗಲ್-ಬಾಕ್ಸ್ ವಿನ್ಯಾಸವನ್ನು ಹೊಂದಿತ್ತು. ಆದರೆ, ಅದು ಮಾರುಕಟ್ಟೆಗೆ ಬರಲಿರುವ MG ಏರ್ EVಗೆ ಪೈಪೋಟಿ ನೀಡಲು ಸಾಧ್ಯವಿಲ್ಲ. ಹೀಗಾಗಿಯೇ ಹೊಸ ನ್ಯಾನೋ EVಯು ಬದಲಾವಣೆ ಮಾಡಿದ ಅಥವಾ ಹೊಸ ಪ್ಲಾಟ್‌ಫಾರ್ಮ್ ಅನ್ನು ಆಧರಿಸಲಿದೆ ಎಂದು ಹೇಳಲಾಗಿದೆ. ಹಾಗಿದ್ದರೂ, ನೂತನ ಎಲೆಕ್ಟ್ರಿಕ್ ಕಾರ್ ಅದರ ಹಿಂದಿನ ಮಾದರಿಯನ್ನು ಹೊಲಬಹುದು ಎಂದು ಅಂದಾಜಿಸಲಾಗಿದ್ದು, ನಗರ ಪ್ರದೇಶದಲ್ಲಿ ಸಂಚರಿಸಲು ಟಾಟಾ ನ್ಯಾನೋ EV ಉತ್ತಮ ವಾಹನವಾಗಬಹುದು.

ಟಾಟಾ ಮತ್ತೆ ತನ್ನ ಗ್ರಾಹಕರನ್ನು ಹೊಸ ನ್ಯಾನೋ EVಯತ್ತ ಸೆಳೆಯಲು ರಿಫ್ರೆಶ್ ಮಾಡಿದ ಕ್ಯಾಬಿನ್ ವಿನ್ಯಾಸ ಸೇರಿದಂತೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ನೀಡಲು ಮುಂದಾಗಿದೆ. ಈ ಮೂಲಕ ನ್ಯಾನೋ EV ಹೆಚ್ಚು ಆಕರ್ಶಣೀಯವಾಗಿರಲಿದೆ. ಇವುಗಳು ಮಾತ್ರವಲ್ಲದೆ, ಇನ್ಫೋಟೈನ್‌ಮೆಂಟ್‌ಗಾಗಿ ಟಚ್‌ಸ್ಕ್ರೀನ್, ಡಿಜಿಟೈಸ್ಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲೆಕ್ಟ್ರಿಕಲ್ ಫೋಲ್ಡಿಂಗ್ ಮಿರರ್‌ಗಳು, ರಿಯರ್ ವೈಪರ್ ಮತ್ತು ಡಿಫಾಗರ್ ಮತ್ತು ಕ್ಲೈಮೇಟ್ ಕಂಟ್ರೋಲ್‌ನಂತಹ ಉತ್ತಮ ಸೌಕರ್ಯಗಳನ್ನು ನೀಡಲಿದೆ ಎಂದು ಹೇಳಲಾಗಿದೆ.

ICE ಆವೃತ್ತಿಯ ಥ್ರಮ್ಮಿ ಎರಡು-ಸಿಲಿಂಡರ್ ಎಂಜಿನ್‌ಗೆ ಹೆಸರುವಾಸಿಯಾಗಿದ್ದ ನ್ಯಾನೋದ ಸೌಂಡ್, ವೆಬ್ರೇಷನ್ ಮತ್ತು ಹರ್ಶ್ನೆಸ್ (NVH) ಅನ್ನು ನಿವಾರಿಸುವ ಮೂಲಕ ಈ EVಯು ಶಾಂತವಾಗಿರುತ್ತದೆ. ಇದಲ್ಲದೆ, ಪ್ರೀಮಿಯಂ ಕ್ಯಾಬಿನ್ ಅನುಭವವನ್ನು ನೀಡಲು ನ್ಯಾನೊ ಸುಧಾರಿತ ಧ್ವನಿ ನಿರೋಧಕ ವ್ಯವಸ್ಥೆಯನ್ನು ಹೊಂದಿರಬಹುದು. ನ್ಯಾನೋ EVಯಂತಹ ಕಾರುಗಳನ್ನು ಪ್ರಾಥಮಿಕವಾಗಿ ನಗರದಲ್ಲಿ ಬಳಸುವ ಸಾಧ್ಯತೆ ಇದ್ದು, ಇದಕ್ಕೆ ದುಬಾರಿ, ಹೆಚ್ಚಿನ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಡ್ರೈವ್‌ಟ್ರೇನ್ ಅಗತ್ಯವಿಲ್ಲ ಎಂದು ಹೇಳಲಾಗಿದೆ.

ಅಲ್ಲದೆ, ಹೊಸ ನ್ಯಾನೋ EVಯಲ್ಲಿ ಒಂದೇ 40PS ಇ-ಮೋಟಾರ್ ಈ ಕೆಲಸವನ್ನು ಮಾಡಬೇಕು. ಆಗಲೇ ಮುಂಬರುವ MG ಏರ್ EVಯೊಂದಿಗೆ ನ್ಯಾನೋ EVಯು ಸಮಾನವಾಗಿ ಪೈಪೋಟಿ ನೀಡಲು ಸಾಧ್ಯವಾಗುತ್ತದೆ. ಜೊತೆಗೆ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೊಸ ನ್ಯಾನೊ EVಯು Tiago EVಯ ಬೇಸ್-ಸ್ಪೆಕ್ 19.2kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಮಾರುಕಟ್ಟೆಗೆ ಬರಬಹುದು. ಇದು ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನಲ್ಲಿ 250km ರೇಂಜ್ ನೀಡುತ್ತಿದೆ. ಜೊತೆಗೆ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರಲಿದೆ.

ಟಾಟಾ ಸುರಕ್ಷತೆಗೂ ಹೆಚ್ಚು ಒತ್ತು ಕೊಡುತ್ತದೆ. ಅದರ ಕಾಂಪ್ಯಾಕ್ಟ್ ಕಾರುಗಳಾದ ಟಿಯಾಗೊ ಮತ್ತು ಟಿಗೊರ್ ಸಹ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಳಲ್ಲಿ ನಾಲ್ಕು-ಸ್ಟಾರ್ ಸುರಕ್ಷತಾ ರೇಟಿಂಗ್‌ಗಳನ್ನು ಪಡೆದುಕೊಂಡಿವೆ. ಹಿಂದಿನ ನ್ಯಾನೋ ಮಾದರಿ ಅಷ್ಟು ಸುರಕ್ಷಿತವಾಗಿರಲಿಲ್ಲ. ಹೊಸ ನ್ಯಾನೋ EV ಸರ್ಕಾರ-ನಿರ್ದೇಶಿತ ಸುರಕ್ಷತಾ ವೈಶಿಷ್ಟ್ಯಗಳನ್ನು (ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಎಬಿಎಸ್) ನೀಡುವ ಸಾಧ್ಯತೆಯಿದೆ, ಆದರೆ, ಬಲವಾದ ಬಾಡಿಶೆಲ್, ಸ್ಟೆಬಿಲಿಟಿ ಕಂಟ್ರೋಲ್ (ESC), ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ಹೊಂದಿರಬಹುದು.

ಹೊಸ ನ್ಯಾನೋ EV ಮಾರುಕಟ್ಟೆಗೆ ಬಂದರೆ, ಅದರ ಹಿಂದಿನ ಮಾದರಿಗಿಂತ ಹೆಚ್ಚು ದುಬಾರಿಯಾಗಲಿದೆ. ಅದೇನೇ ಇದ್ದರೂ, ಇದು ಇನ್ನೂ ಟಿಯಾಗೊ EVಯತ್ತ ಗ್ರಾಹಕರು ಆಕರ್ಷಿತರಾಗುವುದನ್ನು ಕಡಿಮೆ ಮಾಡುತ್ತದೆ. ಸದ್ಯ ಹೊಸ ಟಿಯಾಗೊ EV ರೂ.8.49 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಇದು ನ್ಯಾನೋ EVಯನ್ನು ಭಾರತದಲ್ಲಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರನ್ನು ಮಾಡುತ್ತದೆ. ಟಾಟಾ ಭಾರತಕ್ಕೆ ಮುಂಬರುವ ಎಲೆಕ್ಟ್ರಿಕ್ ಕಾರನ್ನು ಯಾವಾಗ ಘೋಷಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Article Published On: Thursday, December 8, 2022, 11:24 [IST]
English summary
Tata nano back in the market as electric car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+