ಹೊಸ ವರ್ಷದಿಂದ ಟಾಟಾ ಟಿಯಾಗೊ ಇವಿ ಬೆಲೆ ಏರಿಕೆ: ಎಷ್ಟಿರಬಹುದು?

ಭಾರತದ ಪ್ರಮುಖ ವಾಹನ ತಯಾರಿಕ ಕಂಪನಿ ಟಾಟಾ ಮೋಟಾರ್ಸ್ ತನ್ನ ಅಗ್ಗದ ಎಲೆಕ್ಟ್ರಿಕ್ ಕಾರ್ ಟಿಯಾಗೊ ಇವಿ ಬೆಲೆಯನ್ನು ಶೇಕಡ 3-4% ಹೆಚ್ಚಿಸುವುದಾಗಿ ಘೋಷಿಸಿದೆ. ಆದರೆ, ನಿಖರವಾದ ಮೊತ್ತವನ್ನು ಜನವರಿಯಲ್ಲಿ ಪ್ರಕಟಿಸಲಾಗುವುದು ಎಂದು ಕಂಪನಿ ಹೇಳಿದೆ. ಟಿಯಾಗೊ ಇವಿ ಬೆಲೆಯನ್ನು ರೂ.30,000 ದಿಂದ ರೂ.35,000ವರೆಗೆ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.

ಟಿಯಾಗೊ ಇವಿ ಪ್ರಾರಂಭಿಕ ಬೆಲೆಗಳು ಮೊದಲ 10,000 ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಟಾಟಾ ಮೋಟಾರ್ಸ್ ಹೇಳಿದ್ದರಿಂದ ಈ ಬೆಲೆ ಏರಿಕೆಯನ್ನು ನಿರೀಕ್ಷಿಸಲಾಗಿತ್ತು. ಆದರೆ, ಈ ಕಾರಿಗೆ ಗ್ರಾಹಕರಿರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅದಕ್ಕಾಗಿ ಯೋಜನೆಯನ್ನು ಮೊದಲ 20,000 ಗ್ರಾಹಕರಿಗೆ ವಿಸ್ತರಿಸಲಾಗಿದೆ. ಆದರೆ, ಕೆಲವು ಆರಂಭಿಕ ಗ್ರಾಹಕರಿಗೆ ತಮ್ಮ ಆನ್‌ಲೈನ್ ಬುಕಿಂಗ್ ಅನ್ನು ಈವರೆಗೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅಲ್ಲದೆ, 50,000ಕ್ಕೂ ಹೆಚ್ಚು ಗ್ರಾಹಕರು ಟಿಯಾಗೊ ಇವಿ ಖರೀದಿಗೆ ಆಸಕ್ತಿ ತೋರಿದ್ದಾರೆ.

ಹೊಸ ವರ್ಷದಿಂದ ಟಾಟಾ ಟಿಯಾಗೊ ಇವಿ ಬೆಲೆ ಏರಿಕೆ: ಎಷ್ಟಿರಬಹುದು?

ಬೆಲೆ ಏರಿಕೆಯ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಮತ್ತು ಟಾಟಾ ಪ್ಯಾಸೆಂಜರ್ಸ್ ಎಲೆಕ್ಟ್ರಿಕ್ ಮೊಬಿಲಿಟಿಯ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಅವರು, ಏರಿಕೆಗೆ ಹಲವು ಕಾರಣಗಳಿವೆ. ಕಳೆದ ಕೆಲವು ತಿಂಗಳಿಂದ ಬ್ಯಾಟರಿ ಬೆಲೆಗಳು ಶೇಕಡ 30-35 ರಷ್ಟು ಹೆಚ್ಚಾಗಿದೆ. ಅದು ಈಗ ಸ್ಥಿರವಾಗಿದೆ. ಆದರೆ, ಅದನ್ನು ಸಂಪೂರ್ಣವಾಗಿ ಖರೀದಿದಾರರಿಗೆ ವರ್ಗಾಯಿಸಲಾಗಿಲ್ಲ ಎಂದಿದ್ದಾರೆ. ಇದನ್ನು ಗಮನಿಸಿದರೆ ಬಹುತೇಕ ಇವಿ ವಾಹನ ತಯಾರಕರು ಬ್ಯಾಟರಿ ಬೆಲೆ ಹೆಚ್ಚಾದಂತೆ ತಮ್ಮ ವಾಹನಗಳ ಬೆಲೆಯನ್ನು ಏರಿಸುತ್ತಾರೆ.

ಟಾಟಾ ಮೋಟಾರ್ಸ್ ಜನವರಿ ಮಧ್ಯದ ವೇಳೆಗೆ ಎಲೆಕ್ಟ್ರಿಕ್ ಟಿಯಾಗೊ ಹ್ಯಾಚ್‌ಬ್ಯಾಕ್‌ನ ವಿತರಣೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಘೋಷಿಸಿತ್ತು. ನಾಲ್ಕರಿಂದ ಐದು ತಿಂಗಳೊಳಗೆ ಮೊದಲ ಬ್ಯಾಚ್‌ನ ವಿತರಣೆಯನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಪ್ರಸ್ತುತ, ಟಿಯಾಗೊ ಇವಿ ಬೆಲೆ ರೂ.8.49 ಲಕ್ಷ-11.49 ಲಕ್ಷ (ಎಕ್ಸ್ ಶೋ ರೂಂ, ಭಾರತ). ರೂ. ಇದೆ. ಆರಂಭಿಕ ಬೆಲೆ ಒಂಬತ್ತು ಲಕ್ಷವರೆಗೂ ಮುಟ್ಟಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಇದು ತಿಳಿಯುವುದು ಮುಂದಿನ ತಿಂಗಳೇ.

ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರು ಎರಡು ಬ್ಯಾಟರಿ ಪ್ಯಾಕ್‌ ಹೊಂದಿದೆ. ಚಿಕ್ಕದಾದ 19.2kWh ಬ್ಯಾಟರಿ ಒಂದು ಚಾರ್ಜಿಗೆ 250 ಕಿ.ಮೀ ಮೈಲೇಜ್ ನೀಡುತ್ತದೆ. ಈ ಆವೃತ್ತಿಯು 60.3 ಬಿಹೆಚ್‍ಪಿ ಪವರ್ ಮತ್ತು 110 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಕಾರು ಒಂದೇ ಎಲೆಕ್ಟ್ರಿಕ್ ಮೋಟರ್ ಅನ್ನು ಪಡೆದುಕೊಂಡಿದ್ದು, ದೊಡ್ಡ 24kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುವ ಟಿಯಾಗೊ ಇವಿಯ ಟಾಪ್-ಸ್ಪೆಕ್ 73.75 ಬಿಹೆಚ್‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್‌ ಅನ್ನು ಉತ್ಪಾದಿಸಲಿದ್ದು, ಒಂದೇ ಚಾರ್ಜ್ ನಲ್ಲಿ 315 ಕಿ.ಮೀ ಮೈಲೇಜ್ ನೀಡುತ್ತದೆ.

ಹೊಸ ಟಿಯಾಗೊ ಎಲೆಕ್ಟ್ರಿಕ್ ಕಾರು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ABS, ರಿವರ್ಸಿಂಗ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಕಾಂಟ್ರಾಸ್ಟ್ ಬ್ಲ್ಯಾಕ್ ರೂಫ್ ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಅಲ್ಲದೆ, ಹೊಸ 14-ಇಂಚಿನ ಹೈಪರ್‌ಸ್ಟೈಲ್ ವೀಲ್ಸ್, ಒಳಭಾಗದಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಏರ್-ಕಾನ್ ವೆಂಟ್‌ಗಳಿಗಾಗಿ ಹೊಸ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದ್ದು, ಇದು ಗ್ರಾಹಕರಿಗೆ ಇಷ್ಟವಾಗಲಿದ್ದು, ಟಿಯಾಗೊ ಖರೀದಿಯತ್ತ ಆಸಕ್ತಿವಹಿಸಲು ಕಾರಣವಾಗಿದೆ.

ಬಹತೇಕ ಹೊಸ ವರ್ಷದ ಆರಂಭದಲ್ಲಿ ಹಲವು ವಾಹನ ತಯಾರಿಕ ಕಂಪನಿಗಳು ಬೆಲೆ ಏರಿಕೆ ಮಾಡುವುದು ಸಾಮಾನ್ಯ. 2023 ಕೂಡ ಅದರಿಂದ ಹೊರತಲ್ಲ ಎಂದು ಹೇಳಬಹುದು. ಮಾರುತಿ ಸುಜುಕಿ, ಹ್ಯುಂಡೈ, ಟಾಟಾ, ಮಹೀಂದ್ರಾ, ಹೋಂಡಾ, ಕಿಯಾ, ರೆನಾಲ್ಟ್, ವೋಕ್ಸ್‌ವ್ಯಾಗನ್, ಎಂಜಿ ಮುಂತಾದ ಪ್ರಮುಖ ತಯಾರಕರು, ಈಗಾಗಲೇ ವಿವಿಧ ಮಾದರಿಗಳಿಗೆ ಅನುಗುಣವಾಗಿ ಬೆಲೆ ಏರಿಕೆಯನ್ನು ಘೋಷಣೆ ಮಾಡಿದ್ದಾರೆ. ಆಡಿ ಮತ್ತು ಮರ್ಸಿಡಿಸ್ ಬೆಂಜ್ ಸೇರಿದಂತೆ ದೊಡ್ಡ ಐಷಾರಾಮಿ ಬ್ರಾಂಡ್‌ಗಳು ಸಹ ಬೆಲೆಗಳನ್ನು ಹೆಚ್ಚಿಸುತ್ತಿರುವುದು ವರದಿಯಾಗಿದೆ.

ಭಾರತದ ಆಟೋಮೊಬೈಲ್ ಉದ್ಯಮವು ಚೇತರಿಕೆ ಹಾದಿಯಲ್ಲಿದೆ. ಆದರೆ, ವ್ಯವಸ್ಥಾಪನಾ ಅಡಚಣೆಗಳು, ಆರ್ಥಿಕ ಪರಿಸ್ಥಿತಿಗಳು, ಹೆಚ್ಚುತ್ತಿರುವ ಇನ್‌ಪುಟ್ ಮತ್ತು ಸರಕು ವೆಚ್ಚಗಳು ವಾಹನ ತಯಾರಕರು ತಮ್ಮ ಕಾರುಗಳ ಬೆಲೆಯನ್ನು ಏರಿಕೆ ಮಾಡುತ್ತಿವೆ. ಇದು ಐಷಾರಾಮಿ ಕಾರುಗಳನ್ನು ಖರೀದಿ ಮಾಡುವ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಭಾರತದಂತಹ ದೇಶದಲ್ಲಿ ಮಧ್ಯಮ ವರ್ಗದ ಜನರೇ ಅಧಿಕವಾಗಿದ್ದು, ಅಂತಹರಿಗೆ ಈ ಬೆಲೆ ಏರಿಕೆಯು ದೊಡ್ಡ ಮಟ್ಟದಲ್ಲಿ ತೊಂದರೆ ನೀಡಬಹುದು. ಅದೇನೇ ಇರಲಿ ಈ ತಿಂಗಳೊಳಗೆ ನಿಮ್ಮ ಕನಸಿನ ವಾಹನ ಖರೀದಿಸಲು ಆಲೋಚಿಸಿರಿ.

Article Published On: Thursday, December 22, 2022, 13:07 [IST]
English summary
Tata tiago ev price hike from new year how much
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+