ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!

ಕಳೆದ ಎರಡು ವರ್ಷಗಳಿಂದ ವಿಶ್ವದಾದ್ಯಂತ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಕಳೆದ ಎಪ್ರಿಲ್ ತಿಂಗಳ ಇವಿ ವಾಹನ ಮಾರಟವಾಗಿದೆ. ಕಾರು ಉದ್ಯಮ ಸಂಪೂರ್ಣ ವಿದ್ಯುದೀಕರಣವಾಗಲು ಇನ್ನೂ ಕೆಲವು ವರ್ಷಗಳ ಸಮಯವಿದ್ದರೂ, ಈ ನಡುವೆ ಹೈಬ್ರಿಡ್‌ಗಳಂತಹ ತಂತ್ರಜ್ಞಾನಗಳು ಜನಪ್ರಿಯವಾಗುತ್ತಿವೆ.

ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!

ಕಡಿಮೆ ಮಾಲಿನ್ಯದ ಎಲೆಕ್ಟ್ರಿಕ್ ವಾಹನಗಳು ಪರಿಸರ ಪ್ರಜ್ಞೆಯ ಖರೀದಿದಾರರಿಗೆ ಉತ್ತಮ ಆಯ್ಕೆಯಾಗಿದೆ. ಹೋಂಡಾ ಸಿಟಿ ಹೈಬ್ರಿಡ್ ಕಾರಿನ ಆಗಮನದೊಂದಿಗೆ, ಹೆಚ್ಚಿನ ಜನರು ಈ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಲು ಪ್ರಾರಂಭಿಸುತ್ತಿದ್ದಾರೆ. ಭಾರತೀಯ ಕಾರು ಮಾರುಕಟ್ಟೆಯಲ್ಲಿ ಪ್ರಸ್ತುತ ಮಾರಾಟದಲ್ಲಿರುವ ಅಗ್ರ ಐದು ಹೈಬ್ರಿಡ್ ಮತ್ತು ಪ್ಲಗ್-ಇನ್ ಹೈಬ್ರಿಡ್ ಮಾದರಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!

1. ಹೋಂಡಾ ಸಿಟಿ ಇ: HEV

ಹೋಂಡಾ ಸಿಟಿ ಭಾರತದಲ್ಲಿ ಸಾಮೂಹಿಕ ಮಾರುಕಟ್ಟೆಗೆ ಪ್ರವೇಶಿಸಿದ ಮೊದಲ ಪ್ರಬಲ ಹೈಬ್ರಿಡ್ ಕಾರು. ಇದು ಸ್ಟ್ಯಾಂಡರ್ಡ್ ಸಿಟಿಯಂತೆಯೇ ಅದೇ ವಿನ್ಯಾಸವನ್ನು ಹೊಂದಿದೆ. ಆದರೆ ಹೆಚ್ಚುವರಿ ವೈಶಿಷ್ಟ್ಯಗಳು ಮತ್ತು ಉತ್ತಮ ಹೋಂಡಾ ಸೆನ್ಸಿಂಗ್‌ನಂತಹ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಅತ್ಯಾಕರ್ಷಕ ಲುಕ್‌ನೊಂದಿಗೆ ಅತ್ಯಾಧುನಿಕ ಫೀಚರ್ಸ್‌ಗಳನ್ನೊಳಗೊಂಡು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದು ಹೋಂಡಾ ಲವರ್ಸ್‌ಗೆ ಫೇವರೆಟ್ ಮಾದರಿಯಾಗುವ ನಿರೀಕ್ಷೆಯಿದೆ.

ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!

ಇದು 1.5 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಕಂಪನಿಯು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಜೋಡಿಯಾಗಿರುವ ಘಟಕದಲ್ಲಿ ಮುಂಭಾಗದ ಆಕ್ಸಲ್‌ನಲ್ಲಿ ಸ್ಟಾರ್ಟರ್-ಜನರೇಟರ್ ಮತ್ತು ಪ್ರೊಪಲ್ಷನ್ ಮೋಟರ್ ಅನ್ನು ಸ್ಥಾಪಿಸಿದೆ. ಇವುಗಳನ್ನು ಓಡಿಸುವ ಮೂಲಕ ಹೋಂಡಾ ಸಿಟಿ ಹೈಬ್ರಿಡ್ ಗರಿಷ್ಠ 126 ಬಿಎಚ್‌ಪಿ ಮತ್ತು 253 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!

2. ಟೊಯೋಟಾ ಕ್ಯಾಮ್ರಿ

ಸಿಟಿಯಿಂದ ಎರವಲು ಪಡೆದ ಕೆಲವು ವಿಭಾಗಗಳನ್ನು ಹೈಬ್ರಿಡ್ ಕಾರುಗಳ ಸಾಲಿನಲ್ಲಿ ಟೊಯೋಟಾ ಕ್ಯಾಮ್ರಿಯನ್ನು ನೋಡಬಹುದು. ಇದು ಅತ್ಯುತ್ತಮ ಸೌಕರ್ಯವನ್ನು ಒದಗಿಸಲು ಹೆಸರುವಾಸಿಯಾದ ಮಾದರಿಯಾಗಿದೆ. ವಿಶೇಷವಾಗಿ ಹಿಂದಿನ ಸೀಟುಗಳಲ್ಲಿನ ಪ್ರಯಾಣಿಕರಿಗೆ ಆರಾಮದಾಯಕವಾಗಿಸಲು ಹೆಚ್ಚು ಸ್ಪೇಸ್ ನೀಡಲಾಗಿದೆ. ವಾಹನದಲ್ಲಿ ಯಾವುದೇ ಇಕ್ಕಾಟವಿರದಂತೆ ವಿನ್ಯಾಸಗೊಳಿಸಲಾಗಿದೆ.

ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!

ಕಾರಿನ ಹೈಬ್ರಿಡ್ ಎಂಜಿನ್ 2.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು CVT ಯೊಂದಿಗೆ ಜೋಡಿಸಲಾಗಿದೆ. ಮುಂಭಾಗದ ಆಕ್ಸಲ್ ನಿಕಲ್-ಮೆಟಲ್ ಹೈಡ್ರೈಡ್ ಬ್ಯಾಟರಿಯಿಂದ ಚಾಲಿತವಾಗಿದ್ದು, ಇದು ಎಲೆಕ್ಟ್ರಿಕ್ ಮೋಟರ್‌ಗೆ ಶಕ್ತಿಯನ್ನು ನೀಡುತ್ತದೆ. ಇದು ಗರಿಷ್ಠ 218 ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಟಾಪ್ ಸ್ಪೀಡ್‌ನಲ್ಲೂ ಚಾಲಕನಿಗೆ ಉತ್ತಮ ನಿಯಂತ್ರಣ ಅನುಭವವನ್ನು ನೀಡುತ್ತದೆ.

ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!

3. BMW 745 Le

BMW 7 ಸರಣಿಯು ಭಾರತೀಯ ಮಾರುಕಟ್ಟೆಯಲ್ಲಿ '745 Le' ರೂಪಾಂತರದಲ್ಲಿ ಪ್ಲಗ್-ಇನ್ ಹೈಬ್ರಿಡ್ ಆಯ್ಕೆಯೊಂದಿಗೆ ಬರುತ್ತದೆ. ಈ ಐಷಾರಾಮಿ ಕಾರು 3.0-ಲೀಟರ್ ಪೆಟ್ರೋಲ್ ಎಂಜಿನ್, ಹೈಬ್ರಿಡ್ ಎಂಜಿನ್ ಮತ್ತು 8-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿರುವ ಐಡ್ರೈವ್ ಮೋಟಾರ್‌ನಿಂದ ಚಾಲಿತವಾಗಿದೆ. ಇದು ಗರಿಷ್ಠ 394 bhp ಶಕ್ತಿಯಲ್ಲಿ 600 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!

BMW 745 Le ಕಾರು ಮಾಲಿನ್ಯವನ್ನು ಮತ್ತಷ್ಟು ಕಡಿಮೆ ಮಾಡಲು ಆನ್‌ಬೋರ್ಡ್ ಬ್ಯಾಟರಿಯನ್ನು ಬಾಹ್ಯ ಚಾರ್ಜರ್ ಮೂಲಕ ಚಾರ್ಜ್ ಮಾಡಬಹುದಾದ ಆಯ್ಕೆಯನ್ನು ಕಂಪನಿ ನೀಡಿದೆ. ಇನ್ನು ಇದರ ವಿನ್ಯಾಸವು ತನ್ನ ಬ್ರಾಂಡ್‌ಗೆ ಯಾವುದೇ ಧಕ್ಕೆಯಾಗದಂತೆ ಆಕರ್ಷಕ ಸ್ಪೋರ್ಟಿ ಲುಕ್ ಅನ್ನು ನೀಡಲಾಗಿದೆ. ಜೊತೆಗೆ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಹೈಬ್ರಿಡ್ ವಾಹನವಾಗಿ ಹೊರಹೊಮ್ಮಿದೆ.

ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!

4. ಲೆಕ್ಸಸ್ NX 350h

ಲೆಕ್ಸಸ್ NX ಸರಣಿಯ SUV ಗಳು ಸಹ ಪರಿಸರ ಸ್ನೇಹಿ ವಾಹನಗಳಾಗಿವೆ ಎಂಬುದನ್ನು ಕಂಪನಿಯು NX 350h ನ ಬಿಡುಗಡೆ ಮೂಲಕ ತಿಳಿಸಿಕೊಟ್ಟಿದೆ. ಈ ಐಷಾರಾಮಿ ಕಾರು ಭಾರತ ಮೂಲದ 5-ಆಸನಗಳ ಐಷಾರಾಮಿ ಸ್ಪೋರ್ಟಿ ವಾಹನವಾಗಿದೆ. ಇದರಲ್ಲಿನ ಸೌಕರ್ಯಗಳು ಮತ್ತು ಆರಾಮದಾಯಕ ಆಸನಗಳಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.

ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!

ಟೊಯೊಟಾದ ಐಷಾರಾಮಿ ವಾಹನ ಬ್ರಾಂಡ್ ಆಗಿರುವ ಲೆಕ್ಸಸ್, CVT ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ ಜೋಡಣೆಯಾಗಿರುವ 2.5-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಸ್ಥಾಪಿಸಿದೆ. ಪ್ರತಿ ಆಕ್ಸಲ್ ಮೇಲೆ ನಿರ್ಮಿಸಲಾಗಿದ್ದು, ಅವು ಗರಿಷ್ಠ 243 bhp ವರೆಗೆ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.

ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!

5. ವೋಲ್ವೋ XC90 ರೀಚಾರ್ಜ್

ವೋಲ್ವೋ XC90 ರೀಚಾರ್ಜ್, ದೊಡ್ಡ (7-ಆಸನಗಳ) ಎಸ್‌ಯುವಿಯಾಗಿದ್ದು ಸಾಕಷ್ಟು ಐಷಾರಾಮಿ ಹೊಂದಿದ್ದು ಮಾಲಿನ್ಯವನ್ನು ಕಡಿಮೆ ಮಾಡಲು ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯ ಹೈಬ್ರಿಡ್ ಕಾರು ಎಂದೇ ಹೇಳಬಹುದು. ವಾಹನದ ಹೃದಯಭಾಗವು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಗಿದೆ. ಇದು ಎಲೆಕ್ಟ್ರಿಕ್ ಮೋಟಾರ್, ಸೂಪರ್‌ ಚಾರ್ಜ್ಡ್‌ ಮತ್ತು ಟರ್ಬೋಚಾರ್ಜ್‌ನೊಂದಿಗೆ ಬರುತ್ತದೆ.

ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!

ಜೊತೆಗೆ ಇದರ ವಿನ್ಯಾಸವು ತನ್ನ ಹಿಂದಿನ ಮಾದರಿಗಿಂತ ಹೆಚ್ಚಿನ ನಾವೀನ್ಯತೆಗಳನ್ನು ಪಡೆದುಕೊಂಡಿದ್ದು, ನೋಡಲು ಬೃಹತ್‌ ಆಕಾರದ ಐಷಾರಾಮಿ ದೈತ್ಯದಂತೆ ಕಾಣುತ್ತದೆ. ಇನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದ್ದು, ಭದ್ರಾತಾ ವಿಷಯದಲ್ಲಿ ಹೆಚ್ಚು ಆದ್ಯತೆ ನೀಡಲಾಗಿದೆ.

Most Read Articles

Kannada
English summary
The best hybrid cars in india right now
Story first published: Thursday, May 5, 2022, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X