ಭಾರತದಲ್ಲಿ ಮಾರಾಟವಾಗುವ 2-ಸೀಟರ್ ಸ್ಪೋರ್ಟ್ಸ್ ಕಾರುಗಳಿವು...

2-ಸೀಟರ್ ಸ್ಪೋರ್ಟ್ಸ್ ಕಾರುಗಳು ಅಪರೂಪದ ಮಾದರಿಗಳಾಗಿವೆ. ಇಂತಹ ಕಾರುಗಳು ಗರಿಷ್ಠ ಕಾರ್ಯಕ್ಷಮತೆಯನ್ನು ನೀಡುತ್ತದೆ, ಇದರೊಂದಿಗೆ ಈ ಉತ್ತಮ ಏರೋಡೈನಾಮಿಕ್ ವಿನ್ಯಾಸದ ಜೊತೆ ಹೆಚ್ಚಿನ ಪವರ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಮಾರಾಟವಾಗುವ 2-ಸೀಟರ್ ಸ್ಪೋರ್ಟ್ಸ್ ಕಾರುಗಳಿವು...

2-ಸೀಟರ್ ಸ್ಪೋರ್ಟ್ಸ್ ಕಾರು ಅನೇಕರ ಕನಸಿನ ಕಾರ್ ಆಗಿದೆ. ಇಂತಹ 2-ಸೀಟರ್ ಸ್ಪೋರ್ಟ್ಸ್ ಕಾರುಗಳು ಅತ್ಯುತ್ತಮ ಪಾರ್ಫಾಮೆನ್ಸ್ ಅನ್ನು ನೀಡುತ್ತದೆ. ಆದರೆ ಈ ಕಾರು ದುಬಾರಿ ಬೆಲೆಯನ್ನು ಹೊಂದಿರುತ್ತದೆ. ಪ್ರೀಮಿಯಂ ಸ್ಪೋರ್ಟ್ಸ್ ಕಾರುಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಗಿದೆ. ಭಾರತದಲ್ಲಿ ಮಾರಾಟವಾಗುವ ಅತ್ಯುತ್ತಮ ಟಾಪ್-5 2-ಸೀಟರ್ ಸ್ಪೋರ್ಟ್ಸ್ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಮಾರಾಟವಾಗುವ 2-ಸೀಟರ್ ಸ್ಪೋರ್ಟ್ಸ್ ಕಾರುಗಳಿವು...

ಫೆರಾರಿ 812

ಇಟಾಲಿಯನ್ ಕಾರು ತಯಾರಕರಾದ ಫೆರೆರಿ ತನ್ನ 2-ಸೀಟರ್ ಫೆರೆರಿ 812 ಸ್ಪೋರ್ಟ್ಸ್ ಕಾರ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ವೇಗವಾಗಿ ಸಂಚರಿಸಲು ಹಲವಾರು ಸುಧಾರಿತ ಏರೋಡೈನಾಮಿಕ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಾಡಿವರ್ಕ್ ಗಾಳಿಯ ಹರಿವನ್ನು ನಿರ್ವಹಿಸಲು ಚಾನಲ್‌ಗಳನ್ನು ಹೊಂದಿದೆ 812 ಕೂಪ್, ಹಾರ್ಡ್ ಟಾಪ್ ಕನ್ವರ್ಟಿಬಲ್ (GTS), ಮತ್ತು ಹೆಚ್ಚು ಟ್ರ್ಯಾಕ್-ಫೋಕಸ್ ಆಗಿರುವ ಕಾಂಪಿಟೈಝೋನ್ ಟ್ರಿಮ್‌ನಲ್ಲಿ ಲಭ್ಯವಿದೆ.

ಭಾರತದಲ್ಲಿ ಮಾರಾಟವಾಗುವ 2-ಸೀಟರ್ ಸ್ಪೋರ್ಟ್ಸ್ ಕಾರುಗಳಿವು...

ಫೆರಾರಿ 812 ಸ್ಪೋರ್ಟ್ಸ್ ಕಾರಿನಲ್ಲಿ 6,496 ಸಿಸಿ ನ್ಯಾಚುರಲ್ ಆಸ್ಪಿರೇಟೆಡ್ ವಿ12 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 789 ಬಿಹೆಚ್‍ಫಿ ಪವರ್ ಮತ್ತು 712 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಫೆರಾರಿ 812 ಸ್ಪೋರ್ಟ್ಸ್ ಕಾರು 2.9 ಸೆಕೆಂಡುಗಳಲ್ಲಿ ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಸ್ಪೋರ್ಟ್ಸ್ ಕಾರಿನ ಟಾಪ್ ಸ್ಪೀಡ್ 340 ಕಿಮೀ ಆಗಿದೆ.

ಭಾರತದಲ್ಲಿ ಮಾರಾಟವಾಗುವ 2-ಸೀಟರ್ ಸ್ಪೋರ್ಟ್ಸ್ ಕಾರುಗಳಿವು...

ಲ್ಯಾಂಬೂರ್ಗಿನಿ ಅವೆಂಟಡಾರ್ LP780-4 ಅಲ್ಟಿಮೇ

ಫೆರಾರಿ ನಂತರ ಲ್ಯಾಂಬೂರ್ಗಿನಿ ಕಾರು ಇದೆ. ಈ ಎರಡು ಕಂಪನಿಗಳು ಸುದೀರ್ಘ ಇತಿಹಾಸವನ್ನು ಹೊಂದಿವೆ ಮತ್ತು ನಿರಂತರವಾಗಿ ಪರಸ್ಪರ ಪೈಪೋಟಿಯನ್ನು ನೀಡುತ್ತಿದೆ ಲ್ಯಾಂಬೂರ್ಗಿನಿ ಅವೆಂಟಡಾರ್ LP780-4 ಆಲ್ಟಿಮೆ ವಿಡಬ್ಲ್ಯು ಮಾಲೀಕತ್ವದ ಇಟಾಲಿಯನ್ ಕಾರು ತಯಾರಕರಿಂದ ಇತ್ತೀಚಿನದು ಮತ್ತು ಪ್ರಪಂಚದಾದ್ಯಂತ 600 ಯುನಿಟ್ ಗಳಿಗೆ ಸೀಮಿತವಾಗಿದೆ.

ಭಾರತದಲ್ಲಿ ಮಾರಾಟವಾಗುವ 2-ಸೀಟರ್ ಸ್ಪೋರ್ಟ್ಸ್ ಕಾರುಗಳಿವು...

ಲ್ಯಾಂಬೂರ್ಗಿನಿ ಅವೆಂಟಡಾರ್ LP780-4 ಆಲ್ಟಿಮೆ 6,498 ಸಿಸಿ ವಿ12 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 770 ಬಿಹೆಚ್‌ಪಿ ಪವರ್ ಮತ್ತು 720 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಪಡೆಯುತ್ತದೆ. ಈ ಕಾರು 355 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ 2-ಸೀಟರ್ ಸ್ಪೋರ್ಟ್ಸ್ ಕಾರುಗಳಿವು...

ಪೋರ್ಷೆ 911 ಟರ್ಬೊ ಎಸ್

ಪೋರ್ಷೆ ಯಾವಾಗಲೂ ಫೆರಾರಿಗೆ ಪೈಪೋಟಿಯನ್ನು ನೀಡುತದೆ. ಈ ಕಾರಿನಲ್ಲಿ ಫೆರಾರಿ 812 ಮತ್ತು ಅವೆಂಟಡಾರ್‌ಗಿಂತ ಭಿನ್ನವಾಗಿ, ಪೋರ್ಷೆ 3745 ಸಿಸಿ ಆರು-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 641 ಬಿಹೆಚ್‍ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲು ಎರಡು ಟರ್ಬೋಚಾರ್ಜರ್‌ಗಳನ್ನು ಬಳಸುತ್ತದೆ.

ಭಾರತದಲ್ಲಿ ಮಾರಾಟವಾಗುವ 2-ಸೀಟರ್ ಸ್ಪೋರ್ಟ್ಸ್ ಕಾರುಗಳಿವು...

8-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್ ಹಿಂದಿನ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಈ ಕಾರು 2.8 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಸ್ಪೋರ್ಟ್ಸ್ ಕಾರ್ 330 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ,

ಭಾರತದಲ್ಲಿ ಮಾರಾಟವಾಗುವ 2-ಸೀಟರ್ ಸ್ಪೋರ್ಟ್ಸ್ ಕಾರುಗಳಿವು...

ಮೆಕ್‌ಲಾರೆನ್ 720ಎಸ್

ಇಟಾಲಿಯನ್ನರು ಮತ್ತು ಜರ್ಮನಿಯರ ನಡುವೆ, ಬ್ರಿಟಿಷರು ಕೆಲವು ಅತ್ಯಾಕರ್ಷಕ ಎರಡು-ಸೀರುಗಳನ್ನು ನೀಡುತ್ತಾರೆ, ಅವುಗಳಲ್ಲಿ ಮೆಕ್‌ಲಾರೆನ್ 720S ಒಂದಾಗಿದೆ. 720S ಎಲ್ಲವನ್ನೂ ಹೊಂದಿದೆ, ಆಧುನಿಕ ಏರೋಡೈನಾಮಿಕ್ ವಿನ್ಯಾಸ, ಬಟರ್ ಪ್ಲೈ ಡೊರುಗಳು, ಚಾಸಿಸ್ ಅನ್ನು ಹೊಂದಿದೆ. ಮಧ್ಯ-ಮೌಂಟೆಡ್ ಎಂಜಿನ್, ರೇಸಿಂಗ್ ನಿರ್ದಿಷ್ಟತೆ ಜೊತೆ ಇಂಟಿರಿಯರ್ ಮತ್ತು ಎರಡು ಸೀಟರ್ ಸ್ಪೋರ್ಟ್ಸ್ ಕಾರ್‌ನಲ್ಲಿ ಒಬ್ಬರು ನಿರೀಕ್ಷಿಸುವ ಎಲ್ಲವನ್ನೂ ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ 2-ಸೀಟರ್ ಸ್ಪೋರ್ಟ್ಸ್ ಕಾರುಗಳಿವು...

ಮೆಕ್‌ಲಾರೆನ್ 720ಎಸ್ ಕಾರಿನಲ್ಲಿ 3,994 ಸಿಸಿ ಟ್ವಿನ್-ಟರ್ಬೊ ವಿ8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 710 ಬಿಹೆಚ್‍ಪಿ ಪವರ್ ಮತ್ತು 770 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ ಅನ್ನು ಜೋಡಿಸಲಾಗಿದೆ. ಇದು ಹಿಂದಿನ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಈ ಕಾರು 2.9 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಏಕೆಂದರೆ ಇದು ಪ್ರೊಆಕ್ಟಿವ್ ಚಾಸಿಸ್ ಕಂಟ್ರೋಲ್ II ಸಕ್ರಿಯ ಸಸ್ಪೆಂಕ್ಷನ್ ಸಿಸ್ಟಮ್ ಅನ್ನು ಬಳಸುತ್ತದೆ.

ಭಾರತದಲ್ಲಿ ಮಾರಾಟವಾಗುವ 2-ಸೀಟರ್ ಸ್ಪೋರ್ಟ್ಸ್ ಕಾರುಗಳಿವು...

ಆಸ್ಟನ್ ಮಾರ್ಟಿನ್ ಡಿಬಿಎಸ್

ಟಾಪ್ 5 ಕಾರ್ಯಕ್ಷಮತೆಯ ಎರಡು-ಸೀಟುಗಳ ಸ್ಪೋರ್ಟ್ಸ್ ಕಾರುಗಳ ಪಟ್ಟಿಯಲ್ಲಿ ಇನ್ನೊಂದು ಬ್ರಿಟಿಷ್ ಮಾರ್ಕ್, ಆಸ್ಟನ್ ಮಾರ್ಟಿ ಡಿಬಿಎಸ್ ಆಗಿದೆ. ಈ ಬ್ರಿಟೀಷ್ ಎರಡು-ಸೀಟುಗಳ ಕಾರು ವಿ12 ನೊಂದಿಗೆ ಲಭ್ಯವಿರುವ ಗ್ರ್ಯಾಂಡ್ ಟೂರರ್ ಆಗಿದ್ದು, ಮುಂಭಾಗದಲ್ಲಿ ಎಂಜಿನ್ ಮತ್ತು ಹಿಂಭಾಗದಲ್ಲಿ ಗೇರ್‌ಬಾಕ್ಸ್‌ನೊಂದಿಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಭಾರತದಲ್ಲಿ ಮಾರಾಟವಾಗುವ 2-ಸೀಟರ್ ಸ್ಪೋರ್ಟ್ಸ್ ಕಾರುಗಳಿವು...

ಈ ಆಸ್ಟನ್ ಮಾರ್ಟಿನ್ ಡಿಬಿಎಸ್ ಕಾರಿನಲ್ಲಿ 5.2-ಲೀಟರ್ ಟ್ವಿನ್-ಟರ್ಬೊ V12 8-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನ ಸಹಾಯದಿಂದ 715 ಬಿಹೆಚ್‌ಪಿ ಪವರ್ ಮತ್ತು 900 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು 3.4 ಸೆಕೆಂಡುಗಳಲ್ಲಿ 0 ದಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರು 340 ಕಿ,ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ 2-ಸೀಟರ್ ಸ್ಪೋರ್ಟ್ಸ್ ಕಾರುಗಳಿವು...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು 2-ಸೀಟರ್ ಸ್ಪೋರ್ಟ್ಸ್ ಕಾರು ಮಾರಾಟವಾಗುತ್ತಿದೆ. ಆದರೆ ಈ ಕಾರುಗಳು ದುಬಾರಿ ಬೆಲೆಗಳನ್ನು ಹೊಂದಿವೆ. 2-ಸೀಟರ್ ಸ್ಪೋರ್ಟ್ಸ್ ಕಾರು ಸ್ಪೋರ್ಟಿ ವಿನ್ಯಾಸ ಮತ್ತು ಹೆಚ್ಚಿನ ಪವರ್ ಅನ್ನು ಹೊಂದಿರುತ್ತದೆ. ಈ ಕಾರು ಉತ್ತಮ ಪರ್ಫಾಮೆನ್ಸ್ ಅನ್ನು ನೀಡುತ್ತದೆ

Most Read Articles

Kannada
English summary
The best two seater sports cars in india right now details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X