Just In
- 1 hr ago
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್ಜಿ
- 1 hr ago
ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...
- 1 hr ago
ಕಡಿಮೆ ಮೊತ್ತಕ್ಕೆ ಲೀಸ್ಗೆ ಸಿಗಲಿದೆ ಫೋಕ್ಸ್ವ್ಯಾಗನ್ ವರ್ಟಸ್ ಕಾರು
- 4 hrs ago
ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಿದ ಮಹೀಂದ್ರಾ ಥಾರ್ 5 ಡೋರ್ ವರ್ಷನ್
Don't Miss!
- News
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದದ್ದು ತಪ್ಪು: ಆದರೆ..
- Sports
Anil Kumble: ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನದಿಂದ ಕನ್ನಡಿಗ ಕುಂಬ್ಳೆ ಔಟ್; ಬೇರೆ ಕೋಚ್ ಆಯ್ಕೆ!
- Technology
ಲೆನೊವೊ ಲೀಜನ್ Y70 ಸ್ಮಾರ್ಟ್ಫೋನ್ ಬಿಡುಗಡೆ!..68W ವೇಗದ ಚಾರ್ಜಿಂಗ್!
- Education
Karnataka High Court Recruitment 2022 : 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ವಂಡರ್ಲಾ ಬೆಂಗಳೂರಿನಲ್ಲಿರುವ ವಿಶಿಷ್ಟ ಅಮ್ಯೂಸ್ಮೆಂಟ್ ಪಾರ್ಕ್ ಆಗಿದೆ.
- Finance
ಫೋನ್ ಪೇ, ಗೂಗಲ್ ಪೇ, ಭೀಮ್ App ಬಳಕೆಗೆ ಪೇಮೆಂಟ್ ಶುಲ್ಕ?
- Movies
ಅಪ್ಪು- ದರ್ಶನ್ ಸ್ನೇಹದ ಬಗ್ಗೆ ಹೇಳಿದ ರಾಘಣ್ಣ!
- Lifestyle
ಕಾಲಿನಲ್ಲಿ ಈ 10 ಲಕ್ಷಣಗಳು ಕಂಡು ಬಂದರೆ ಹುಷಾರು! ಮಧುಮೇಹ ತುಂಬಾ ಹೆಚ್ಚಿದೆ ಎಂದು ಸೂಚಿಸುವ ಲಕ್ಷಣಗಳಿವು
ವೇಗಗೊಳ್ಳುತ್ತಿದೆ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ: ಅಂಕಿಅಂಶಗಳನ್ನು ಬಹಿರಂಗಪಡಿಸಿದ ಕೇಂದ್ರ ಸರ್ಕಾರ
ಸರ್ಕಾರವು ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ 27.81 ಕೋಟಿ ನಾನ್-ಎಲೆಕ್ಟ್ರಿಕ್ ವಾಹನಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರಸ್ತುತ 13,34,385 ಎಲೆಕ್ಟ್ರಿಕ್ ವಾಹನಗಳು ಬಳಕೆಯಲ್ಲಿರುವುದು ಬಹಿರಂಗವಾಗಿದೆ.

ಅತಿ ಕಡಿಮೆ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಉತ್ತಮ ಬೆಳವಣಿಗೆ ಸಾಧಿಸಿದ್ದು, ಉತ್ತರ ಪ್ರದೇಶವು 3.37 ಲಕ್ಷ ಇವಿಗಳನ್ನು ಹೊಂದುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ನಂತರದ ಸ್ಥಾನದಲ್ಲಿ ದೆಹಲಿ ಇದ್ದು, 1.56 ಲಕ್ಷ ಎಲೆಕ್ಟ್ರಿಕ್ ವಾಹನಗಳು ರಾಜಧಾನಿಯಲ್ಲಿ ಸಂಚರಿಸುತ್ತಿರುವುದಾಗಿ ಬೃಹತ್ ಕೈಗಾರಿಕೆಗಳ ಸಚಿವಾಲಯ ತಿಳಿಸಿದೆ.

ಕರ್ನಾಟಕವು 1.20 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರೊಂದಿಗೆ ಮೂರನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವ ರಾಜ್ಯವಾಗಿ ಗುರ್ತಿಸಿಕೊಂಡಿದೆ. ಇನ್ನು 1.16 ಲಕ್ಷ ಇವಿಗಳೊಂದಿಗೆ ಮಹಾರಾಷ್ಟ್ರ ನಾಲ್ಕನೇ ಸ್ಥಾನದಲ್ಲಿದೆ. 83,335 ಎಲೆಕ್ಟ್ರಿಕ್ ವಾಹನಗಳೊಂದಿಗೆ ಬಿಹಾರ ಐದನೇ ಸ್ಥಾನದಲ್ಲಿದೆ.

ಒಟ್ಟಾರೆ ಡೇಟಾವು ಆಂಧ್ರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಮತ್ತು ಲಕ್ಷದ್ವೀಪಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯನ್ನು ಒಳಗೊಂಡಿಲ್ಲ. ಇನ್ನು ಉತ್ತರ ಪ್ರದೇಶವೂ ದೇಶದಲ್ಲೇ ಅತಿ ಹೆಚ್ಚು 4 ಕೋಟಿ ಇಂಧನ ಚಾಲಿತ ವಾಹನಗಳನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರವು 3.10 ಕೋಟಿ ವಾಹನಗಳನ್ನು ಹೊಂದಿದೆ.

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ತ್ವರಿತ ಅಳವಡಿಕೆಯನ್ನು ಉತ್ತೇಜಿಸಲು, ಮೇ 2021 ರಲ್ಲಿ ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ (ಎಸಿಸಿ) ಉತ್ಪಾದನೆಗೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯನ್ನು ಸರ್ಕಾರ ಅನುಮೋದಿಸಿದೆ. ಈ ಕ್ರಮವು ದೇಶದಲ್ಲಿ ಬ್ಯಾಟರಿ ಬೆಲೆಗಳನ್ನು ತಗ್ಗಿಸುವ ಗುರಿಯನ್ನು ಹೊಂದಿದ್ದು, ಇದರಿಂದ ಎಲೆಕ್ಟ್ರಿಕ್ ವಾಹನಗಳ ವೆಚ್ಚವೂ ಕಡಿಮೆಯಾಗಲಿದೆ.

ಎಲೆಕ್ಟ್ರಿಕ್ ವಾಹನಗಳು ಆಟೋಮೊಬೈಲ್ ಮತ್ತು ಆಟೋ ಕಾಂಪೊನೆಂಟ್‌ಗಳಿಗಾಗಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯಡಿ ಒಳಗೊಂಡಿದೆ, ಇದನ್ನು ಸೆಪ್ಟೆಂಬರ್ 15, 2021 ರಂದು ಐದು ವರ್ಷಗಳ ಅವಧಿಗೆ ₹ 25,938 ಕೋಟಿ ಬಜೆಟ್‌ನಲ್ಲಿ ಅನುಮೋದಿಸಲಾಗಿದೆ.

ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ಕಾರ್ಬನ್ ಹೊರಸೂಸುವಿಕೆಯ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ 2015 ರಲ್ಲಿ ಭಾರತದಲ್ಲಿ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ವೆಹಿಕಲ್ಸ್ (ಫೇಮ್ ಇಂಡಿಯಾ) ಯೋಜನೆಯನ್ನು ವೇಗವಾಗಿ ಅಳವಡಿಸಿಕೊಳ್ಳುವುದು ಮತ್ತು ತಯಾರಿಸುವುದನ್ನು ಕೇಂದ್ರವು ಘೋಷಿಸಿತು.

FAME ಇಂಡಿಯಾ ಸ್ಕೀಮ್‌ನ ಹಂತ-Iರ ಅಡಿಯಲ್ಲಿ, ಜುಲೈ 1, 2022 ರಂತೆ 479 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ. ಪ್ರಸ್ತುತ, FAME ಇಂಡಿಯಾ ಯೋಜನೆಯ ಹಂತ-II ಅನ್ನು ಐದು ವರ್ಷಗಳ ಅವಧಿಗೆ ಒಟ್ಟು ₹10,000 ಕೋಟಿ ಬಜೆಟ್ ಹಂಚಿಕೆಯೊಂದಿಗೆ ಜಾರಿಗೊಳಿಸಲಾಗುತ್ತಿದೆ.

ಬೃಹತ್ ಕೈಗಾರಿಕೆಗಳ ಸಚಿವಾಲಯವು 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 68 ನಗರಗಳಲ್ಲಿ 2,877 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳನ್ನು ಫೇಮ್ ಇಂಡಿಯಾದ ಹಂತ-IIರ ಅಡಿಯಲ್ಲಿ ಮಂಜೂರು ಮಾಡಿದೆ. ಫೇಮ್ ಇಂಡಿಯಾ ಸ್ಕೀಮ್‌ನ ಹಂತ II ರ ಅಡಿಯಲ್ಲಿ 9 ಎಕ್ಸ್‌ಪ್ರೆಸ್‌ವೇಗಳು ಮತ್ತು 16 ಹೆದ್ದಾರಿಗಳಲ್ಲಿ ಸುಮಾರು 1,576 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸಹ ಮಂಜೂರು ಮಾಡಲಾಗಿದೆ.

ಫೇಮ್ ಇಂಡಿಯಾ ಸ್ಕೀಮ್ II ನೇ ಹಂತದ ಬೇಡಿಕೆಯ ಪ್ರೋತ್ಸಾಹವನ್ನು ಪ್ರತಿ KWh ಗೆ ₹10,000 ರಿಂದ ₹15,000 ಕ್ಕೆ ಹೆಚ್ಚಿಸಲಾಗಿದೆ, ಜೊತೆಗೆ ವಾಹನದ ವೆಚ್ಚದ ಶೇ20 ರಿಂದ ಶೇ40 ವರೆಗೆ ಮಿತಿಯನ್ನು ಹೆಚ್ಚಿಸಲಾಗಿದೆ, ಹೀಗಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಯನ್ನು ಸಮಾನವಾಗಿ ಇರಿಸಲಾಗಿದೆ.

ದೆಹಲಿ-ಚಂಡೀಗಢ, ಮುಂಬೈ-ಪುಣೆ, ದೆಹಲಿ-ಜೈಪುರ-ಆಗ್ರಾ ಮತ್ತು ಜೈಪುರ-ದೆಹಲಿಯಂತಹ ನಾಲ್ಕು ಹೆದ್ದಾರಿಗಳಲ್ಲಿ ಸ್ಥಾಪಿಸಲಾಗಿದೆ. FAME-II ಅಡಿಯಲ್ಲಿ, ಸಚಿವಾಲಯವು 25 ರಾಜ್ಯಗಳು/UTಗಳಲ್ಲಿ 68 ನಗರಗಳಲ್ಲಿ 2,877 EV ಸ್ಟೇಷನ್‌ಗಳನ್ನು ಮಂಜೂರು ಮಾಡಿದೆ. ಅದರಲ್ಲಿ ಜುಲೈ 1 ರಿಂದ ಕೇವಲ 50 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಇ-ಸ್ಕೂಟರ್ ಬ್ಯಾಟರಿಗಳ ಸರಣಿ ಬೆಂಕಿ ಅವಘಡಗಳ ನಂತರ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಕಂಪನಿಗಳು ಎಲ್ಲಾ ದೋಷಯುಕ್ತ ಇವಿಗಳನ್ನು ಸ್ವಯಂಪ್ರೇರಣೆಯಿಂದ ಹಿಂಪಡೆಯುವಂತೆ ಸರ್ಕಾರವು ಎಲೆಕ್ಟ್ರಿಕ್ ವಾಹನ ತಯಾರಕರನ್ನು ಒತ್ತಾಯಿಸಿತ್ತು. ಇದೀಗ ಎಲೆಕ್ಟ್ರಿಕ್ ವಾಹನಗಳ ಬೆಂಕಿಯ ಪ್ರಕರಣಗಳು ಕಡಿಮೆಯಾಗಿದ್ದು, ಇವಿ ವಾಹನ ಮಾರಾಟ ಕೂಡ ಸುಧಾರಿಸಿದೆ.