ಇವಿ ವಾಹನ ಮಾರಾಟದಲ್ಲಿ ವಿಶ್ವದ ಟಾಪ್ ಎಲೆಕ್ಟ್ರಿಕ್ ಕಂಪನಿ ಟೆಸ್ಲಾವನ್ನು ಹಿಂದಿಕ್ಕಿದ ಚೀನಾ ಬ್ರಾಂಡ್

ಚೀನಾ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ BYD (ಬಿಲ್ಡ್ ಯುವರ್ ಡ್ರೀಮ್ಸ್) 2022ರ ಮೊದಲಾರ್ಧದ ಮಾರಾಟದಲ್ಲಿ ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾವನ್ನು ಹಿಂದಿಕ್ಕಿದೆ. ಷೆಂಗೆನ್-ಆಧಾರಿತ ವಾಹನ ತಯಾರಕ BYD 2022ರ ಮೊದಲ ಆರು ತಿಂಗಳಲ್ಲಿ 6.41 ಮಿಲಿಯನ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿ ಅಗ್ರಸ್ಥಾನಕ್ಕೇರಿದೆ.

ಇವಿ ವಾಹನ ಮಾರಾಟದಲ್ಲಿ ವಿಶ್ವದ ಟಾಪ್ ಎಲೆಕ್ಟ್ರಿಕ್ ಕಂಪನಿ ಟೆಸ್ಲಾವನ್ನು ಹಿಂದಿಕ್ಕಿದ ಚೀನಾ ಬ್ರಾಂಡ್

ಟೆಸ್ಲಾವು ವಿಶ್ವಾದ್ಯಂತ ಮಾರಾಟ ಮಾಡಿದ 5.64 ಮಿಲಿಯನ್ ಕಾರುಗಳಿಗೆ ಹೋಲಿಸಿದರೆ ಚೀನಾ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ BYD ಶೇ 13.65 ರಷ್ಟು ಬೆಳವಣಿಗೆ ಸಾಧಿಸಿದೆ. ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಎದುರಾಳಿಯಿಲ್ಲದೇ ಮುನ್ನುಗ್ಗುತ್ತಿದ್ದ ಟೆಸ್ಲಾಗೆ ಇದೀಗ ಬ್ರೇಕ್ ಬಿದ್ದಂತಾಗಿದೆ.

ಇವಿ ವಾಹನ ಮಾರಾಟದಲ್ಲಿ ವಿಶ್ವದ ಟಾಪ್ ಎಲೆಕ್ಟ್ರಿಕ್ ಕಂಪನಿ ಟೆಸ್ಲಾವನ್ನು ಹಿಂದಿಕ್ಕಿದ ಚೀನಾ ಬ್ರಾಂಡ್

ವಿಶ್ವದ ಅತಿದೊಡ್ಡ ಉದ್ಯಮಿಗಳಲ್ಲಿ ಒಬ್ಬರಾದ ವಾರೆನ್ ಬಫೆಟ್ ಅವರ ಬರ್ಕ್‌ಷೈರ್ ಹ್ಯಾಥ್‌ವೇ-ಬೆಂಬಲಿತ BYD, ವಿಶ್ವದ ಎರಡನೇ ಅತಿದೊಡ್ಡ EV ಬ್ಯಾಟರಿ ತಯಾರಕರಾದ ದಕ್ಷಿಣ ಕೊರಿಯಾದ LG ಅನ್ನು ಸಹ ಹಿಂದಿಕ್ಕಿದೆ. ಕುತೂಹಲಕಾರಿ ವಿಷಯವೆಂದರೆ ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಲಾಕ್‌ಡೌನ್ BYDಯ ಉತ್ಪಾದನೆ ಮತ್ತು ಮಾರಾಟದ ಮೇಲೆ ಕಡಿಮೆ ಪರಿಣಾಮ ಬೀರಿತ್ತು.

ಇವಿ ವಾಹನ ಮಾರಾಟದಲ್ಲಿ ವಿಶ್ವದ ಟಾಪ್ ಎಲೆಕ್ಟ್ರಿಕ್ ಕಂಪನಿ ಟೆಸ್ಲಾವನ್ನು ಹಿಂದಿಕ್ಕಿದ ಚೀನಾ ಬ್ರಾಂಡ್

ಏಕೆಂದರೆ ಕಂಪನಿಯ ಹೆಚ್ಚಿನ ಕಾರ್ಖಾನೆಗಳು ಚೀನಾದ ಲಾಕ್‌ಡೌನ್ ಕ್ರಮಗಳು ಕಟ್ಟುನಿಟ್ಟಾಗಿರದ ಪ್ರದೇಶಗಳು ಮತ್ತು ನಗರಗಳ ಹೊರಗಿನ ಪ್ರದೇಶಗಳಲ್ಲಿದ್ದವು. ಮತ್ತೊಂದೆಡೆ ಲಾಕ್‌ಡೌನ್ NIO, Xpeng ಮತ್ತು Li Auto ಸೇರಿದಂತೆ ಇತರ ಚೀನೀ EV ತಯಾರಕರೊಂದಿಗೆ ಟೆಸ್ಲಾ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿದೆ.

ಇವಿ ವಾಹನ ಮಾರಾಟದಲ್ಲಿ ವಿಶ್ವದ ಟಾಪ್ ಎಲೆಕ್ಟ್ರಿಕ್ ಕಂಪನಿ ಟೆಸ್ಲಾವನ್ನು ಹಿಂದಿಕ್ಕಿದ ಚೀನಾ ಬ್ರಾಂಡ್

BYD ಈ ವರ್ಷ 1.5 ಮಿಲಿಯನ್ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಭಾರತದಲ್ಲಿ, ಕಂಪನಿಯು e6 ನೊಂದಿಗೆ ಎಲೆಕ್ಟ್ರಿಕ್ ನಾಲ್ಕು-ಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದೆ, ಇದು ಇತ್ತೀಚೆಗೆ EV ಯಿಂದ ಅತಿ ಹೆಚ್ಚು ದೂರವನ್ನು ಕ್ರಮಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅನ್ನು ಸಹ ಪ್ರವೇಶಿಸಿತು.

ಇವಿ ವಾಹನ ಮಾರಾಟದಲ್ಲಿ ವಿಶ್ವದ ಟಾಪ್ ಎಲೆಕ್ಟ್ರಿಕ್ ಕಂಪನಿ ಟೆಸ್ಲಾವನ್ನು ಹಿಂದಿಕ್ಕಿದ ಚೀನಾ ಬ್ರಾಂಡ್

ಕಳೆದ ತಿಂಗಳು, BYD $128.8 ಶತಕೋಟಿ (Rs 10,15,845 ಕೋಟಿ) ಮಾರುಕಟ್ಟೆ ಬಂಡವಾಳೀಕರಣದ ಮೂಲಕ ಫೋಕ್ಸ್‌ವ್ಯಾಗನ್ ಅನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಕಾರು ತಯಾರಕರಾಗಿ ಹೊರಹೊಮ್ಮಿದ್ದರು. ಈ ಹಿಂದೆ ಕಂಪನಿಯ ಮೌಲ್ಯ 117.5 ಶತಕೋಟಿ ಡಾಲರ್ (ರೂ. 9,26,722 ಕೋಟಿ) ಆಗಿತ್ತು.

ಇವಿ ವಾಹನ ಮಾರಾಟದಲ್ಲಿ ವಿಶ್ವದ ಟಾಪ್ ಎಲೆಕ್ಟ್ರಿಕ್ ಕಂಪನಿ ಟೆಸ್ಲಾವನ್ನು ಹಿಂದಿಕ್ಕಿದ ಚೀನಾ ಬ್ರಾಂಡ್

BYD ಎಲೆಕ್ಟ್ರಿಕ್ ಭಾರತದಲ್ಲಿ MPV E6 ಅನ್ನು ಮಾರಾಟ ಮಾಡುತ್ತಿದೆ. ಇದು ಭಾರತದಲ್ಲಿ ಕಂಪನಿಯ ಏಕೈಕ ಮಾದರಿಯಾಗಿದೆ. BYD e6 ಬ್ಲೇಡ್ ಬ್ಯಾಟರಿ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ ಭಾರತದಲ್ಲಿನ ಕಂಪನಿಯ ಮೊದಲ ಪ್ರೀಮಿಯಂ ಎಲೆಕ್ಟ್ರಿಕ್ MPV ಆಗಿದೆ. ಈ ಬ್ಯಾಟರಿ ತಂತ್ರಜ್ಞಾನವನ್ನು 2020 ರಲ್ಲಿ ಜಾಗತಿಕವಾಗಿ ಪರಿಚಯಿಸಲಾಯಿತು.

ಇವಿ ವಾಹನ ಮಾರಾಟದಲ್ಲಿ ವಿಶ್ವದ ಟಾಪ್ ಎಲೆಕ್ಟ್ರಿಕ್ ಕಂಪನಿ ಟೆಸ್ಲಾವನ್ನು ಹಿಂದಿಕ್ಕಿದ ಚೀನಾ ಬ್ರಾಂಡ್

ಇದು ಹೆಚ್ಚಿನ ಶ್ರೇಣಿ, ಹೆಚ್ಚಿನ ಸುರಕ್ಷತೆ ಮತ್ತು ದೀರ್ಘಾವಧಿಯ ಲೈಫ್‌ಟೈಪ್ ಭರವಸೆ ನೀಡುತ್ತದೆ. ಕಂಪನಿಯು ಕಳೆದ ವರ್ಷ ನವೆಂಬರ್‌ನಲ್ಲಿ ಭಾರತದಲ್ಲಿ E6 MPV ಅನ್ನು ಬಿಡುಗಡೆ ಮಾಡಿತು. ಕಂಪನಿಯು ಪ್ರಸ್ತುತ ಈ MPV ಅನ್ನು ಗ್ರಾಹಕರಿಗೆ ಫ್ಲೀಟ್ ಬಳಕೆಗಾಗಿ ಮಾತ್ರ ಮಾರಾಟ ಮಾಡುತ್ತಿದೆ. BYD E6 ಭಾರತದಲ್ಲಿ ರೂ 29.15 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ.

ಇವಿ ವಾಹನ ಮಾರಾಟದಲ್ಲಿ ವಿಶ್ವದ ಟಾಪ್ ಎಲೆಕ್ಟ್ರಿಕ್ ಕಂಪನಿ ಟೆಸ್ಲಾವನ್ನು ಹಿಂದಿಕ್ಕಿದ ಚೀನಾ ಬ್ರಾಂಡ್

BYD ಯ ಹೊಸ e6 MPV (ಮಲ್ಟಿ-ಪರ್ಪಸ್ ವೆಹಿಕಲ್) 71.7 kWh ಬ್ಲೇಡ್ ಬ್ಯಾಟರಿಯನ್ನು ಬಳಸುತ್ತದೆ. WLTP ರೇಟಿಂಗ್ ಪ್ರಕಾರ ನಗರ ಪರಿಸ್ಥಿತಿಗಳಲ್ಲಿ ಒಂದೇ ಚಾರ್ಜ್‌ನಲ್ಲಿ 520 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಾರು ತಯಾರಕರು ಹೇಳಿಕೊಂಡಿದ್ದಾರೆ. MPV 70kWh ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದ್ದು ಅದು 180 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇವಿ ವಾಹನ ಮಾರಾಟದಲ್ಲಿ ವಿಶ್ವದ ಟಾಪ್ ಎಲೆಕ್ಟ್ರಿಕ್ ಕಂಪನಿ ಟೆಸ್ಲಾವನ್ನು ಹಿಂದಿಕ್ಕಿದ ಚೀನಾ ಬ್ರಾಂಡ್

ಈ ಎಲೆಕ್ಟ್ರಿಕ್ MPVಯ ಗರಿಷ್ಠ ವೇಗ ಗಂಟೆಗೆ 130 ಕಿ.ಮೀ ಆಗಿದೆ. ಎಲೆಕ್ಟ್ರಿಕ್ MPV e6 ಅನ್ನು AC ಮತ್ತು DC ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯಗಳ ಮೂಲಕ ರೀಚಾರ್ಜ್ ಮಾಡಬಹುದು ಎಂದು BYD ಹೇಳಿದೆ. ಕೇವಲ ಅರ್ಧ ಗಂಟೆಯಲ್ಲಿ MPV ಅನ್ನು ಶೇ30 ರಿಂದ ಶೇ80 ರವರೆಗೆ ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಇವಿ ವಾಹನ ಮಾರಾಟದಲ್ಲಿ ವಿಶ್ವದ ಟಾಪ್ ಎಲೆಕ್ಟ್ರಿಕ್ ಕಂಪನಿ ಟೆಸ್ಲಾವನ್ನು ಹಿಂದಿಕ್ಕಿದ ಚೀನಾ ಬ್ರಾಂಡ್

ಸದ್ಯ ಟೆಸ್ಲಾ ಮಾರುಕಟ್ಟೆ ವಿಸ್ತರಣೆಗೆ ಚೀನಾ ಪ್ರಮುಖ ಬಂಡವಾಳ ಮಾರುಕಟ್ಟೆಯಾಗಿದೆ. ಸದ್ಯ ಅಲ್ಲಿಂದಲೇ ಟೆಸ್ಲಾ ಕಾರುಗಳು ತಯಾರಾಗಿ (ಭಾರತ ಹೊತುಪಡಿಸಿ) ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಅಲ್ಲದೇ ಚೀಚಾನಲ್ಲಿ ಟೆಸ್ಲಾ ಕಾರುಗಳಿಗೆ ಉತ್ತಮ ಬೇಡಿಕೆಯಿದ್ದು, ಪ್ರತಿ ತಿಂಗಳು ಉತ್ತಮ ಮಾರಾಟ ಬೆಳವಿಗೆ ಸಾದಿಲಾಗುತ್ತಿದೆ.

ಇವಿ ವಾಹನ ಮಾರಾಟದಲ್ಲಿ ವಿಶ್ವದ ಟಾಪ್ ಎಲೆಕ್ಟ್ರಿಕ್ ಕಂಪನಿ ಟೆಸ್ಲಾವನ್ನು ಹಿಂದಿಕ್ಕಿದ ಚೀನಾ ಬ್ರಾಂಡ್

ಇನ್ನು ಭಾರತದ ವಿಷಯಕ್ಕೆ ಬಂದರೆ ತೆರಿಗೆ ವಿಷಯದಲ್ಲಿ ಭಾರತ ಸರ್ಕಾರ ಪಟ್ಟು ಬಿಡುತ್ತಿಲ್ಲ. ಎಲ್ಲಾ ಕಂಪನಿಗಳಿಗೆ ಹಾಕುವ ಅದೇ ತೆರಿಗೆ ಟೆಸ್ಲಾಗೂ ಅನ್ವಯಿಸುತ್ತದೆ ಎಂದು ಮೊದಲಿನಿಂದಲೂ ಹೇಳುತ್ತಾ ಬರುತ್ತಿದೆ. ಹಾಗಾಗಿಯೇ ಕೆವಲ ಇಂಪೋರ್ಟ್ ಮಾಡಲಾದ ಬೆರಳೆಣಿಕೆಯಷ್ಟು ಟೆಸ್ಲಾ ಕಾರಗಳು ಮಾತ್ರ ಭಾರತದಲ್ಲಿವೆ.

ಇವಿ ವಾಹನ ಮಾರಾಟದಲ್ಲಿ ವಿಶ್ವದ ಟಾಪ್ ಎಲೆಕ್ಟ್ರಿಕ್ ಕಂಪನಿ ಟೆಸ್ಲಾವನ್ನು ಹಿಂದಿಕ್ಕಿದ ಚೀನಾ ಬ್ರಾಂಡ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ತನ್ನ ಹೈ ಟೆಕ್ನಾಲಜಿಯಿಂದ ನಿರ್ಮಿತಗೊಂಡ ಟೆಸ್ಲಾ ಕಾರುಗಳು ಹೆಚ್ಚು ಮಾರಾಟ ದಾಖಲಿಸುವ ಮೂಲಕ ತನ್ನೊಂದಿಗೆ ಸ್ಪರ್ಧಿಸುವ ಯಾವುದೇ ಇತರ ಇವಿ ಕಂಪನಿಗಳು ಪೈಪೋಟಿ ನೀಡುವಲ್ಲಿ ವಿಫಲವಾಗಿದ್ದವು. ಇದೀಗ BYD ಎಲೆಕ್ಟ್ರಿಕ್ ರಂಗಕ್ಕೆ ಇಳಿದಿದ್ದು, ಮುಂದಿನ ದಿನಗಳಲ್ಲಿ ಈ ದೈತ್ಯ ಕಂಪನಿಗಳ ನಡುವೆ ಗಟ್ಟಿ ಪೈಪೋಟಿ ಇರಲಿದೆ.

Article Published On: Monday, July 11, 2022, 18:08 [IST]
English summary
The Chinese brand BYD has overtaken Tesla in EV sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+