ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ ಬಹುನಿರೀಕ್ಷಿತ ಮಹೀಂದ್ರಾ ಸ್ಕಾರ್ಪಿಯೋ ಎನ್

ಹೊಸ ಕಾರು ಖರೀದಿಸುವವವರೂ ಸದ್ಯ ಸುರಕ್ಷತೆಗೆ ಹೆಚ್ಚು ಒತ್ತು ನೀಡುತ್ತಾರೆ. ಜೊತೆಗೆ ಅಂತಹ ವಾಹನಗಳನ್ನು ಕೊಳ್ಳಲು ಇಷ್ಟಪಡುತ್ತಾರೆ. ದೇಶೀಯ ಕಾರು ಕಂಪನಿ ಮಹೀಂದ್ರಾದ ಪ್ರಮುಖ ಎಸ್‌ಯುವಿಯಾಗಿರುವ ಹೊಸ ಸ್ಕಾರ್ಪಿಯೊ ಎನ್ ಕಠಿಣವಾದ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿ ಅಡಲ್ಟ್ ಒಕ್ಯುಪೆಂಟ್ ಪ್ರೊಟೆಕ್ಷನ್ ಟೆಸ್ಟ್‌ನಲ್ಲಿ 34 ಅಂಕಗಳಿಗೆ 29.25 ಅಂಕಗಳನ್ನು ಪಡೆದುಕೊಂಡಿದೆ. ಆದರೆ, ಚೈಲ್ಡ್ ಒಕ್ಯುಪೆಂಟ್ ಪ್ರೊಟೆಕ್ಷನ್ ಟೆಸ್ಟ್‌ನಲ್ಲಿ 48 ಅಂಕಗಳಿಗೆ 28.94 ಅಂಕಗಳನ್ನು ಗಳಿಸಿದೆ. ಮಹೀಂದ್ರಾ ಸ್ಕಾರ್ಪಿಯೊ ಎನ್ ಎಸ್‌ಯುವಿಯನ್ನು ವಿರೂಪಗೊಳಿಸಬಹುದಾದ ತಡೆಗೋಡೆಗೆ ಡಿಕ್ಕಿ ಹೊಡೆಸುವ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 17 ಅಂಕಗಳಿಗೆ 16 ಅಂಕಗಳನ್ನು ಪಡೆದುಕೊಂಡಿದೆ. ಆದಾಗ್ಯೂ, ಈ ಎಸ್‌ಯುವಿ ಸೈಡ್ ಪೋಲ್ ಇಂಪ್ಯಾಕ್ಟ್ ಟೆಸ್ಟ್‌ನಲ್ಲಿ 'ok' ರೇಟಿಂಗ್ ಅನ್ನು ಪಡೆದುಕೊಂಡಿದೆ.

ಈಗಾಗಲೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಹೊಸ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿಯ ಬಾಡಿಶೆಲ್ ಮತ್ತು ಫುಟ್‌ವೆಲ್ ಏರಿಯಾ ಕ್ರ್ಯಾಶ್ ಟೆಸ್ಟ್ ನಂತರ ಸ್ಥಿರವಾಗಿದೆ ಎಂದು ಹೇಳಬಹುದು. ಜೊತೆಗೆ ಹೆಚ್ಚಿನ ಲೋಡಿಂಗ್‌ಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಗ್ಲೋಬಲ್ ಎನ್‌ಸಿಎಪಿ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಆದರೂ, ಅಡಲ್ಟ್ ಒಕ್ಯುಪೆಂಟ್ ಎದೆಯ ಭಾಗದ ಪ್ರದೇಶವು ಗ್ಲೋಬಲ್ ಎನ್‌ಸಿಎಪಿನಿಂದ 'weak' ರೇಟಿಂಗ್‌ ಪಡೆದುಕೊಂಡಿದೆ ಎಂಬುದು ಇಲ್ಲಿ ಗಮನಾರ್ಹ ಅಂಶ ಎಂದು ಹೇಳಬಹುದು.

ಹೊಸ ಗ್ಲೋಬಲ್ ಎನ್‌ಸಿಎಪಿ ಸುರಕ್ಷತಾ ನಿಯಮಗಳ ಅಡಿಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಳ್ಳುವುದು ತುಂಬಾ ಕಷ್ಟಕರ ಎಂದು ಹೇಳಲಾಗುತ್ತದೆ. ಏಕೆಂದರೆ, ಪರೀಕ್ಷಾ ವಾಹನವು ಪಾದಚಾರಿ ರಕ್ಷಣೆ, ಪೋಲ್ ಸೈಡ್ ಇಂಪ್ಯಾಕ್ಟ್ ಅನ್ನು ಅನುಸರಿಸುವಾಗ ಅಗತ್ಯವಿರುವ ಅಂಕಗಳನ್ನು ಪಡೆದುಕೊಂಡರೆ ಮಾತ್ರವೇ 5-ಸ್ಟಾರ್ ರೇಟಿಂಗ್ ಪಡೆದುಕೊಳ್ಳಲು ಸಾಧ್ಯ .ಇದರಲ್ಲಿ ಸೀಟ್ ಬೆಲ್ಟ್ ರೇಮೆಂಡರ್ ಮತ್ತು ESC ಅವಶ್ಯಕತೆಗಳನ್ನು ಒಳಗೊಂಡಿರಬೇಕು. ಇದರಿಂದಾಗಿಯೇ ಸ್ಕಾರ್ಪಿಯೋ ಎನ್ ಎಸ್‌ಯುವಿಗೆ ಈ ರೇಟಿಂಗ್ ಪಡೆದುಕೊಳ್ಳಲು ಸಾಧ್ಯವಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿಯ ಸುರಕ್ಷತಾ ವೈಶಿಷ್ಟ್ಯಗಳ ಹೇಳುವುದಾದರೆ, ಕಂಪನಿಯು ತನ್ನ ವೆಚ್ಚದಲ್ಲಿ ಯಾವುದೇ ರೀತಿಯಾದ ರಾಜಿ ಮಾಡಿಕೊಳ್ಳದೇ ಸುರಕ್ಷತಾ ವೈಶಿಷ್ಟ್ಯಗಳನ್ನು ಈ ಎಸ್‌ಯುವಿಯಲ್ಲಿ ಒದಗಿಸಿದೆ. ವಾಸ್ತವವಾಗಿ, ಸ್ಕಾರ್ಪಿಯೊ ಎನ್, ಎಸ್‌ಯುವಿಯ ಮೂಲ ರೂಪಾಂತರಗಳಲ್ಲಿ ಒಂದಾದರೂ ABS, EBD, ಹಿಂಭಾಗದ ಪಾರ್ಕಿಂಗ್ ಸೆನ್ಸರ್ಸ್, ಮಲ್ಟಿ ಏರ್‌ಬ್ಯಾಗ್‌ಗಳು, ಮುಂಭಾಗ ಮತ್ತು ಹಿಂಭಾಗದಲ್ಲಿ ವೆಂಟಿಲೇಟೆಡ್ ಡಿಸ್ಕ್ ಬ್ರೇಕ್‌ಗಳು ಮತ್ತು ISOFIX ಆಂಕರ್ರಿಂಗ್ ಪಾಯಿಂಟ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ನೂತನ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿ, ಕಠಿಣ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಿಯಮಗಳ ಅಡಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿರುವ ಭಾರತದ ಮೂರನೇ ಎಸ್‌ಯುವಿ ಆಗಿದೆ ಎಂದು ಹೇಳಬಹುದು. ಹೊಸ ಗ್ಲೋಬಲ್ ಎಸ್‌ಯುವಿ ಕ್ರ್ಯಾಶ್ ಟೆಸ್ಟ್ ನಿಯಮಗಳ ಅಡಿಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದ ಮೊದಲ ಎರಡು ಎಸ್‌ಯುವಿಗಳೆಂದರೇ ವೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್ ಸದ್ಯ ಈ ಸಾಲಿಗೆ ಸ್ಕಾರ್ಪಿಯೋ ಎನ್ ಸೇರಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ ಪವರ್‌ಟ್ರೇನ್‌ ಬಗ್ಗೆ ಮಾತನಾಡುವುದಾದರೆ, ಈ ಎಸ್‌ಯುವಿಯ ಪೆಟ್ರೋಲ್ ಎಂಜಿನ್ 2.0-ಲೀಟರ್ ಟರ್ಬೋಚಾರ್ಜ್ಡ್ ಯುನಿಟ್ ಅನ್ನು ಹೊಂದಿದ್ದು, ಇದು 200 bhp ಗರಿಷ್ಠ ಪವರ್ ಮತ್ತು 370 Nm ಟಾರ್ಕ್ ಉತ್ಪಾದಿಸುತ್ತದೆ. ಈ ಎಸ್‌ಯುವಿಯು ಡೀಸೆಲ್ ಎಂಜಿನ್ ಮೂಲಕವು ಕಾರ್ಯನಿರ್ವಹಿಸಲಿದ್ದು, ಅಲ್ಲಿ ಮೂಲ ಮಾದರಿಯು 130 bhp ಪವರ್ ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೊತೆಗೆ ಹೈಯರ್ ಸ್ಪೆಸಿಫಿಕೇಟಿನ್ ವೆರಿಯಂಟ್ಸ್ 172.5 bhp ಪವರ್ ಮತ್ತು 40 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿ ಬೆಲೆ ವಿಚಾರವಾಗಿ ಹೇಳುವುದಾದರೆ, ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಸ್ಕಾರ್ಪಿಯೋ ಎನ್ ಎಸ್‌ಯುವಿ 'Z4' ರೂಪಾಂತರದ ವಿತರಣೆಯನ್ನು ಪ್ರಾರಂಭಿಸಿದ್ದು, ಬರೊಬ್ಬರಿ 11.99 ಲಕ್ಷದಿಂದ ಆರಂಭಿಕ ಬೆಲೆಯನ್ನು ಈ ಸ್ಕಾರ್ಪಿಯೋ ಎನ್ ಎಸ್‌ಯುವಿ ಹೊಂದಿದ್ದು (ಎಕ್ಸ್ ಶೋ ರೂಂ, ಭಾರತ), ಟಾಪ್ ಎಂಡ್ ಮಾದರಿ ಬೆಲೆ ರೂ.21.65 ಲಕ್ಷದವರೆಗೆ ಇದೆ. ಈ ಹೊಸ ಎಸ್‌ಯುವಿ Z2, Z4, Z6, Z8, ಮತ್ತು Z8L ಟ್ರಿಮ್ ಲೆವೆಲ್ ನಲ್ಲಿ ಖರೀದಿಗೆ ಲಭ್ಯವಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ ಖರೀದಿಸುವ ಬಗ್ಗೆ ಆಲೋಚನೆಗಳು
ನೂತನ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿ, ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಪ್ರೋಟೋಕಾಲ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಳ್ಳುವ ಮೂಲಕ ಪ್ರಸ್ತುತ ಭಾರತದಲ್ಲಿ ಖರೀದಿಸಬಹುದಾದ ಸುರಕ್ಷಿತ ಎಸ್‌ಯುವಿಗಳಲ್ಲಿ ಒಂದಾಗಿದೆ ಎಂದು ಸಾಬೀತುಪಡಿಸಿದೆ. ಅದರ ಜೊತೆಗೆ, ದೇಶೀಯ ವಾಹನ ತಯಾರಕ ಕಂಪನಿ ಮಹೀಂದ್ರಾ ತನ್ನ ಪ್ರಯಾಣಿಕ ವಾಹನಗಳ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿಯಾಗುತ್ತಿಲ್ಲ ಎಂದು ಇದರಿಂದ ಗೊತ್ತಾಗಲಿದೆ.

Most Read Articles

Kannada
English summary
The much awaited mahindra scorpio n gets 5 star rating in crash test
Story first published: Tuesday, December 13, 2022, 10:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X