ಮುಂದಿನ ವಾರ ಬಹುನಿರೀಕ್ಷಿತ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕಾರಿನ ಬೆಲೆ ಬಹಿರಂಗ!
ಟೊಯೊಟಾ ತನ್ನ ಬಹುನಿರೀಕ್ಷಿತ ಅರ್ಬನ್ ಕ್ರೂಸರ್ ಹೈರೈಡರ್ ಕಾಂಪ್ಯಾಕ್ಟ್ ಎಸ್‌ಯುವಿಯ ಬೆಲೆಯನ್ನು ಮುಂದಿನ ವಾರ ಬಹಿರಂಗಪಡಿಸಲು ಸಜ್ಜಾಗಿದೆ. ಈಗಾಗಲೇ ಭಾರೀ ಸಂಖ್ಯೆಯಲ್ಲಿ ಬುಕಿಂಗ್‌ಗಳು ದಾಖಲಾಗುತ್ತಿದ್ದು, ಸ್ಟ್ರಾಂಗ್-ಹೈಬ್ರಿಡ್ ವೇರಿಯೆಂಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.
Recommended Video
ಟೊಯೊಟಾ ಹೈರೈಡರ್‌ನ ಹುಡ್ ಅಡಿಯಲ್ಲಿ 1.5-ಲೀಟರ್ ಪೆಟ್ರೋಲ್ ಪವರ್‌ಟ್ರೇನ್ ಇದ್ದು ಇದನ್ನು ಮೈಲ್ಡ್ ಮತ್ತು ಆಟೋ ಚಾರ್ಜಿಂಗ್ ಸ್ಟ್ರಾಂಗ್-ಹೈಬ್ರಿಡ್ ತಂತ್ರಜ್ಞಾನಗಳೊಂದಿಗೆ ನೀಡಲಾಗುತ್ತದೆ. ಮೈಲ್ಡ್-ಹೈಬ್ರಿಡ್ ಪವರ್‌ಟ್ರೇನ್ ಮಾರುತಿ ಸುಜುಕಿ ಬ್ರೆಝಾದಲ್ಲಿ ಕಂಡುಬರುವಂತೆಯೇ ಇದೆ.

ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ನಲ್ಲಿ ಇ, ಎಸ್, ಜಿ, ವಿ ಟ್ರಿಮ್‌ಗಳು ಮಾತ್ರ ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿದದ್ದರೇ, ಎಸ್, ಜಿ ಮತ್ತು ವಿ ಟ್ರಿಮ್‌ಗಳಲ್ಲಿ ಮಾತ್ರ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ. ಸ್ಟ್ರಾಂಗ್-ಹೈಬ್ರಿಡ್ 116PS ಉತ್ಪಾದನೆಯೊಂದಿಗೆ 27.97kmpl ನಷ್ಟು ಇಂಧನ ದಕ್ಷತೆಯನ್ನು ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಮೈಲ್ಡ್-ಹೈಬ್ರಿಡ್ ವೇರಿಯೆಂಟ್‌ಗಳಿಗಾಗಿ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಆದರೆ ಸ್ರಾಂಗ್-ಹೈಬ್ರಿಡ್ ಇ-ಸಿವಿಟಿ (ಸಿಂಗಲ್-ಸ್ಪೀಡ್ ಟ್ರಾನ್ಸ್ಮಿಷನ್) ಅನ್ನು ಪಡೆಯುತ್ತದೆ. ಹೈರೈಡರ್‌ನ ಮೈಲ್ಡ್-ಹೈಬ್ರಿಡ್ ಮ್ಯಾನುವಲ್ ರೂಪಾಂತರಗಳು ಆಲ್-ವೀಲ್ ಡ್ರೈವ್‌ಟ್ರೇನ್ ಆಯ್ಕೆಯನ್ನು ಸಹ ಪಡೆಯುತ್ತವೆ.

ಟೊಯೊಟಾ ಹೈರೈಡರ್‌ನ ವೈಶಿಷ್ಟ್ಯಗಳ ವಿಪುಲವಾದ ಪಟ್ಟಿಯು ಒಂಬತ್ತು-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಂಪರ್ಕಿತ ಕಾರ್ ಟೆಕ್, ಹೆಡ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಇನ್ನು ಮುಂಭಾಗದಲ್ಲಿ, ಕಾಂಪ್ಯಾಕ್ಟ್ SUV ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಹೈರೈಡರ್ ಮುಂಭಾಗದ ಗ್ರಿಲ್ ಮತ್ತು ಹೆಡ್‌ಲೈಟ್‌ಗಳಲ್ಲಿ ತನ್ನದೇ ವಿಭಿನ್ನ ಸ್ಟೈಲ್ ಅನ್ನು ಪಡೆದುಕೊಂಡಿವೆ. ಹೈರೈಡರ್ ಹೊಸ ಟೊಯೋಟಾ ಗ್ರಿಲ್ ಅನ್ನು ಪಡೆದು ತೆಳುವಾದ ಓಪನಿಂಗ್ ಮತ್ತು ಮಧ್ಯದಲ್ಲಿ ದೊಡ್ಡ ಟೊಯೋಟಾ ಬ್ಯಾಡ್ಜ್ ಅನ್ನು ಪಡೆದುಕೊಂಡಿದೆ. ಇನ್ನು ಅರ್ಬನ್ ಕ್ರೂಸರ್ ಹೈರೈಡರ್ ನಾಲ್ಕು ಡ್ಯುಯಲ್-ಟೋನ್ ಆಯ್ಕೆಗಳೊಂದಿಗೆ ಏಳು ಬಣ್ಣಗಳನ್ನು ಪಡೆದುಕೊಂಡಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಹೊರ ವಿನ್ಯಾಸವು ಈ ವಿಭಾಗದಲ್ಲಿನ ಇತರ ಎಸ್‌ಯುವಿಗಳಿಗಿಂತ ಭಿನ್ನವಾಗಿದೆ. ವಿದೇಶದಲ್ಲಿ ಮಾರಾಟವಾಗುವ ಟೊಯೊಟಾ ಎಸ್‌ಯುವಿಗಳನ್ನು ನಿಮಗೆ ನೆನಪಿಸುವ ಕೆಲವು ವಿನ್ಯಾಸ ಅಂಶಗಳನ್ನು ಇದು ಪಡೆಯುತ್ತದೆ. ಇದು ಟ್ವಿನ್ ಎಲ್ಇಡಿ ಡಿಆರ್ಎಲ್ ಗಳು, ಪ್ರೊಜೆಕ್ಟರ್ ಎಲ್ಇಡಿ ಲ್ಯಾಂಪ್ ಗಳೊಂದಿಗೆ ಸ್ಪ್ಲಿಟ್ ಹೆಡ್ ಲ್ಯಾಂಪ್ ಗಳು, ಮಸ್ಕ್ಯುಲರ್ ಬಂಪರ್, ವಿಶಿಷ್ಟವಾದ ಕ್ರಿಸ್ಟಲ್ ಅಕ್ರಿಲಿಕ್ ಫ್ರಂಟ್ ಗ್ರಿಲ್ ಜೊತೆಗೆ ಕ್ರೋಮ್ ಅಲಂಕಾರದೊಂದಿಗೆ ಬರುತ್ತದೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಯ ಸೈಡ್ ಪ್ರೊಫೈಲ್‌ಗೆ ಬಗ್ಗೆ ಹೇಳುವುದಾದರೆ, ಎಸ್‍ಯುವಿ ಚೌಕಾಕಾರದ ವ್ಹೀಲ್ ಅರ್ಚಾರ್ ಅನ್ನು ಪಡೆಯುತ್ತದೆ ಮತ್ತು ಒಟ್ಟಾರೆ ವಿನ್ಯಾಸ ನೋಟವನ್ನು ಹೆಚ್ಚಿಸುತ್ತದೆ. ಹೈರೈಡರ್ 17 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳನ್ನು ಪಡೆದುಕೊಂಡು ಉತ್ತಮವಾಗಿ ಕಾಣುತ್ತದೆ.

ಇದರ ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾಡ್‌ಗಳಲ್ಲಿ ಸಾಫ್ಟ್ ಟಚ್ ಮೆಟೀರಿಯಲ್ ಇದೆ. ಎಸ್‍ಯುವಿಯೊಂದಿಗೆ ನೀಡಲಾದ ಕೆಲವು ವೈಶಿಷ್ಟ್ಯಗಳನ್ನು ಟಿವಿಸಿಯಲ್ಲಿ ತೋರಿಸಲಾಗಿದೆ. ಈ ಕಾರು ಫ್ರೀಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೆಚ್‍ಯುಡಿ, ಡಿಗ್ರಿ ಕ್ಯಾಮೆರಾ, ಡ್ಯುಯಲ್-ಟೋನ್ ಲೆದರ್ ಸೀಟ್, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ಗಳು ಮತ್ತು ಪನೋರಮಿಕ್ ಸನ್‌ರೂಫ್ ಇತ್ಯಾದಿಗಳನ್ನು ಪಡೆಯುತ್ತದೆ.

ಒಟ್ಟಾರೆಯಾಗಿ, ಕಾರಿನ ಒಳಭಾಗದಲ್ಲಿ ಬಹಳ ಪ್ರೀಮಿಯಂ ಕಾಣುತ್ತದೆ. ಈ ಎಲ್ಲಾ ವೈಶಿಷ್ಟ್ಯಗಳೊಂದಿಗೆ, ಹೈರೈಡರ್ ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್‌ನಂತಹ ಕಾರುಗಳೊಂದಿಗೆ ಸೆಗ್ಮೆಂಟ್‌ನಲ್ಲಿ ಸ್ಪರ್ಧಿಸಲಿದೆ.

ಟೊಯೊಟಾ ಅರ್ಬನ್ ಕ್ರೂಸ್ ಹೈರೈಡರ್ ಅನ್ನು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತಿದೆ. ಪ್ರಬಲ ಹೈಬ್ರಿಡ್ ಆವೃತ್ತಿ ಮತ್ತು ಮೈಲ್ಡ್ ಹೈಬ್ರಿಡ್ ಎಂಜಿನ್ ಇದೆ. ಪ್ರಬಲ ಹೈಬ್ರಿಡ್ ಆವೃತ್ತಿಯು 1.5 ಲೀಟರ್ TNGA ಅಟ್ಕಿನ್ಸನ್ ಸೈಕಲ್ ಎಂಜಿನ್ 92 ಬಿಹೆಚ್‍ಪಿ ಪವರ್ ಮತ್ತು 122 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟಾರ್ 79 ಬಿಹೆಚ್‍ಪಿ ಪವರ್ ಮತ್ತು 141 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲೆಕ್ಟ್ರಿಕ್ ಮೋಟಾರ್ ಜೊತೆಗೆ ಎಂಜಿನ್ 115 ಬಿಹೆಚ್‍ಪಿ ಸಂಯೋಜಿತ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಈ ಹೊಸ ಟೊಯೊಟಾ ಅರ್ಬನ್ ಕ್ರೂಸ್ ಹೈರೈಡರ್ ಎಸ್‌ಯುವಿಯು ಬಿಡುಗಡೆಯ ಬಳಿಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವುದಲ್ಲದೆ, ಇದು ಬ್ರ್ಯಾಂಡ್ ಇಮೇಜ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ. ಈ ಹೊಸ ಎಸ್‌ಯುವಿ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದ್ದು, ತನ್ನ ಪ್ರತಿಸ್ಪರ್ಧಿಗಳಿಗೆ ಹೆಚ್ಚಿನ ಪೈಪೋಟಿಯನ್ನು ನೀಡಲಿದೆ.


Click it and Unblock the Notifications