ಗ್ರಾಹಕರನ್ನು ನಿರಾಸೆಗೊಳಿಸಿದ ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್...ಇದನ್ನು ಯಾರೂ ಗಮನಿಸಿರಲಿಕ್ಕಿಲ್ಲ!

ಟೊಯೊಟಾ ಇನ್ನೋವಾ ಹೈಕ್ರಾಸ್ ಭಾರತದಲ್ಲಿ ಬಹುನಿರೀಕ್ಷಿತ ಕಾರಾಗಿದ್ದು, ಇತ್ತೀಚೆಗೆ ಅನಾವರಣಗೊಳಿಸಲಾಗಿತ್ತು. ಇನ್ನೋವಾ ಹೈಕ್ರಾಸ್ ಕ್ರಿಸ್ಟಾದ ಮುಂದಿನ ತಲೆಮಾರಿನ ಕಾರಾಗಿರುವುದರಿಂದ ಇದರ ಮೇಲೆ ಸಾಕಷ್ಟು ನಿರೀಕ್ಷೆಗಳು ಸಾಮಾನ್ಯವಾಗಿ ಇದ್ದೇ ಇವೆ. ಮುಖ್ಯವಾಗಿ ಇದರ ವೈಶಿಷ್ಟ್ಯಗಳ ವಿಷಯದಲ್ಲಿ ಭಾರೀ ನಿರೀಕ್ಷೆಗಳಿದ್ದವು. ಆದರೆ ಮಹೀಂದ್ರಾ XUV700 ನಲ್ಲಿನ ಕೆಲವು ಫೀಚರ್‌ಗಳು ಇದರಲ್ಲಿ ಇಲ್ಲದಿರುವುದು ಬೇಸರ ತರಿಸಿದೆ.

ಇದು ಹೀಗಿದ್ದರೇ Toyota Innova Hycross ನ ಬೆಲೆಗಳನ್ನು ಇನ್ನು ಘೋಷಿಸಲಾಗಿಲ್ಲ. ಇದು ಜನವರಿಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಘೋಷಣೆಯಾಗಲಿರುವ ಬೆಲೆಗಳು ಕಾರಿನ ಮೇಲೆ ಹೆಚ್ಚು ಪರಿಣಾಮ ಬೀರಲಿವೆ. ಏಕೆಂದರೆ ಹೊಸ ಇನ್ನೋವಾ ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ XUV700 SUV ಗೆ ಕಠಿಣ ಸ್ಪರ್ಧೆಯನ್ನು ನೀಡುವ ನಿರೀಕ್ಷೆಯಿದೆ. ಜೊತೆಗೆ ಇನ್ನೋವಾ ಹೈಕ್ರಾಸ್ ಬೆಲೆಗಳು ಸ್ಪರ್ಧಾತ್ಮಕವಾಗಿದ್ದರೆ ಚಿಂತೆಯಿಲ್ಲ. ಆದರೆ ಒಂದು ವೇಳೆ ಇನ್ನೋವಾ ಹೈಕ್ರಾಸ್ ಬೆಲೆಯು ದುಪ್ಪಟ್ಟು ಇದ್ದಲ್ಲಿ ತೀವ್ರ ಪೈಪೋಟಿ ಎದುರಿಸಲಿದೆ.

ಗ್ರಾಹಕರನ್ನು ನಿರಾಸೆಗೊಳಿಸಿದ ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್...ಇದನ್ನು ಯಾರೂ ಗಮನಿಸಿರಲಿಕ್ಕಿಲ್ಲ!

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಮಹೀಂದ್ರಾ XUV 700 ಕಾರು ತುಂಬಾ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುವ ಕಾರಾಗಿ ಗುರ್ತಿಸಿಕೊಂಡಿದೆ. ಇದು ಭಾರತದಲ್ಲಿ ಹೆಚ್ಚು ಬೇಡಿಕೆಯೊಂದಿಗೆ ಬುಕಿಂಗ್ ಮಾಡಿದ ನಂತರ ಅತೀ ಹೆಚ್ಚು ಕಾಯುವ ಅವಧಿಯನ್ನು ಹೊಂದಿರುವ ಕಾರಾಗಿದೆ. ತನ್ನ ವಿಭಾಗದಲ್ಲಿ ಪ್ರತಿ ತಿಂಗಳು ಉತ್ತಮ ಮಾರಾಟವನ್ನು ದಾಖಲಿಸುತ್ತಿದೆ. ಇದೀಗ ಇನ್ನೋವಾ ಹೈಕ್ರಾಸ್ ಕಾರಿನ ವೈಶಿಷ್ಟ್ಯಗಳು ಕೂಡ ಬಹಿರಂಗವಾಗಿದ್ದು ಎರಡು ಕಾರುಗಳ ನಡುವಿನ ವ್ಯತ್ಯಾಸವನ್ನು ಇಲ್ಲಿ ನೋಡೋಣ.

ಆಟೋಮ್ಯಾಟಿಕ್ ರೈನ್ ವೈಪರ್‌ಗಳು
ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ ಎಲ್ಲಾ ಕಾರುಗಳಲ್ಲಿ ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಮತ್ತು ಆಟೋಮ್ಯಾಟಿಕ್ ಮಳೆ ವೈಪರ್‌ಗಳು ಪ್ರಮುಖ ವೈಶಿಷ್ಟ್ಯಗಳಾಗಿ ಕಂಡುಬರುತ್ತವೆ. ಈ ಎರಡೂ ವೈಶಿಷ್ಟ್ಯಗಳನ್ನು ಮಹೀಂದ್ರಾ XUV 700 ನ ಉನ್ನತ ರೂಪಾಂತರಗಳಲ್ಲಿ ಮಹೀಂದ್ರಾ ಕಂಪನಿ ಮೊದಲಿನಿಂದಲೂ ನೀಡುತ್ತಿದೆ. ಆದರೆ ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರಿನಲ್ಲಿ ಈ ಸೌಲಭ್ಯಗಳನ್ನು ಒದಗಿಸಿಲ್ಲ. ಇದು ಗ್ರಾಹಕರನ್ನು ನಿರಾಶೆಗೊಳಿಸುವ ಒಂದು ಪ್ರಮುಖ ವಿಷಯವಾಗಿದೆ.

ದೊಡ್ಡ ಸ್ಕ್ರೀನ್‌ಗಳು
ಮಹೀಂದ್ರಾ XUV700 ನ ಕ್ಯಾಬಿನ್ ಸುಸಜ್ಜಿತ ಮತ್ತು ಪ್ರೀಮಿಯಂ ಆಗಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯವೇ. ಈ ಕಾರು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಪಡೆಯುತ್ತದೆ. ಆದರೆ ಟೊಯೊಟಾ ಇನ್ನೋವಾ ಹಿಕ್ರಾಸ್ ಕೇವಲ 10.1 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 7 - ಇಂಚಿನ TFT ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಪಡೆಯುತ್ತದೆ.

ಡೀಸೆಲ್ ಎಂಜಿನ್ ಇಲ್ಲ...ಆಲ್ ವೀಲ್ ಡ್ರೈವ್ ಆಯ್ಕೆ ಇಲ್ಲ
ಮಹೀಂದ್ರಾ XUV700 ಅನ್ನು 2 ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ, ಅವುಗಳೆಂದರೆ 2.0 ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್. ಅಲ್ಲದೆ, ಈ ಕಾರಿನ ಕೆಲವು ರೂಪಾಂತರಗಳಲ್ಲಿ ಐಚ್ಛಿಕ ಆಲ್-ವೀಲ್ ಡ್ರೈವ್ ಆಯ್ಕೆಯನ್ನು ನೀಡಲಾಗುತ್ತದೆ. ಆದರೆ ಟೊಯೊಟಾ ಇನ್ನೋವಾ ಹೈಕ್ರಾಸ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಮಾತ್ರ ಬರುತ್ತದೆ. ಡೀಸೆಲ್ ಎಂಜಿನ್ ಆಯ್ಕೆ ಇಲ್ಲ. ಅಲ್ಲದೆ ಆಲ್ ವೀಲ್ ಡ್ರೈವ್ ಆಯ್ಕೆಯೂ ಇಲ್ಲ. ಟೊಯೊಟಾ ಇನ್ನೋವಾ ಹೈಕ್ರಾಸ್ ಒಂದು ಫ್ರಂಟ್ ಡ್ರೈವ್ ಚಾಲನೆಯ ಕಾರಾಗಿದೆ.

ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಇಲ್ಲ!
ಮಹೀಂದ್ರಾ XUV700 ಅನ್ನು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಎಂಬ 2 ರೀತಿಯ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಆದರೆ ಟೊಯೊಟಾ ಇನ್ನೋವಾ ಹೈಕ್ರಾಸ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿಲ್ಲ. ಈ ಕಾರಿನಲ್ಲಿ ಒಟ್ಟು 2 ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ. ಅವು 2.0 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ಗಳಾಗಿವೆ. ಈ 2 ಎಂಜಿನ್‌ಗಳೊಂದಿಗೆ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಗಳನ್ನು ಮಾತ್ರ ನೀಡಲಾಗುತ್ತದೆ.

ಮಹೀಂದ್ರಾ XUV700 ಕೆಲವು ವಿಷಯಗಳಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್‌ಗಿಂತ ಉತ್ತಮವಾಗಿದ್ದರೂ, ಕಾರಿನಲ್ಲಿ ಮತ್ತೊಂದು ಪ್ರಮುಖ ದೋಷವಿದೆ. ಅದು ಬಹಳ ದೀರ್ಘ ಕಾಯುವ ಅವಧಿ. ಹೌದು, ಮಹೀಂದ್ರಾ XUV700 ಗ್ರಾಹಕರಲ್ಲಿ ಅಗಾಧ ಪ್ರತಿಕ್ರಿಯೆಯಿಂದಾಗಿ ಭಾರೀ ಸಂಖ್ಯೆಯ ಬುಕಿಂಗ್‌ಗಳನ್ನು ಹೊಂದಿದೆ. ಈ ಕಾರಣದಿಂದಾಗಿ, ಈ ಕಾರು ದೀರ್ಘ ಕಾಯುವ ಅವಧಿಯನ್ನು ಹೊಂದಿದೆ. ಮಹೀಂದ್ರಾ XUV700 ಪ್ರಸ್ತುತ ರೂಪಾಂತರಗಳನ್ನು ಅವಲಂಬಿಸಿ ಸುಮಾರು 2 ವರ್ಷಗಳ ಕಾಯುವ ಅವಧಿಯನ್ನು ಹೊಂದಿದೆ. ಹೆಚ್ಚು ಸಮಯ ಕಾಯಲು ಬಯಸದ ಅನೇಕ ಗ್ರಾಹಕರು ಮಹೀಂದ್ರಾ XUV700 ಬದಲಿಗೆ ಟೊಯೊಟಾ ಇನ್ನೋವಾ ಹೈಕ್ರಾಸ್ ಅನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.

Most Read Articles

Kannada
English summary
The new toyota innova hicross that disappointed customers no one noticed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X