ಚೇತರಿಸಿಕೊಳ್ಳುತ್ತಿರುವ ಆಟೋಮೊಬೈಲ್ ಉದ್ಯಮ: ಮೇ ತಿಂಗಳಲ್ಲಿ 2.51 ಲಕ್ಷ ವಾಹನಗಳ ಮಾರಾಟ

ವಿಶದಾದ್ಯಂತ ಕಳೆದ ಮೂರು ವರ್ಷಗಳಿಂದ ಆಟೋ ಉದ್ಯಮವು ಭಾರೀ ನಷ್ಟವನ್ನು ಅನುಭವಿಸಿತ್ತು. ಕೊರೊನಾ ಲಾಕ್‌ಡೌನ್, ಉಕ್ರೈನ್-ರಷ್ಯಾದ ಯುದ್ಧದಿಂದ ಸೆಮಿ ಕಂಡಕ್ಟರ್ ಕೊರತೆ, ಕಚ್ಚಾ ವಸ್ತುಗಳ ಬೆಲೆ ಏರಿಕೆಯಂತಹ ಹಲವು ಸವಾಲುಗಳಿಂದಾಗಿ ವಾಹನ ಮಾರಾಟ ಸಂಪೂರ್ಣ ಕುಸಿದಿತ್ತು. ಇದೀಗ ಭಾರತದಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು ಮತ್ತೊಮ್ಮೆ ಕೋವಿಡ್ ಪೂರ್ವದ ಮಟ್ಟವನ್ನು ತಲುಪಿದೆ.

 ಚೇತರಿಸಿಕೊಳ್ಳುತ್ತಿರುವ ಆಟೋಮೊಬೈಲ್ ಉದ್ಯಮ: ಮೇ ತಿಂಗಳಲ್ಲಿ 2.51 ಲಕ್ಷ ವಾಹನಗಳ ಮಾರಾಟ

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ವರದಿಯ ಪ್ರಕಾರ ಒಟ್ಟು ಪ್ರಯಾಣಿಕ ವಾಹನಗಳ ಮಾರಾಟವು ಮೇ 2021 ರಲ್ಲಿ 88,045 ಯುನಿಟ್‌ಗಳಿಂದ ಮೇ 2022 ರಲ್ಲಿ 2,51,052 ಯುನಿಟ್‌ಗಳಿಗೆ ಏರಿಕೆಯಾಗಿದೆ. ಮೇ 2022 ರಲ್ಲಿ ಮಾರಾಟವಾದ ಒಟ್ಟು ಪ್ರಯಾಣಿಕ ವಾಹನಗಳ ಸಂಖ್ಯೆಯು 2019 ರ ಮೇ ತಿಂಗಳಲ್ಲಿ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ಮಾರಾಟವಾಗಿದ್ದ 2,26,975 ಯುನಿಟ್‌ಗಳನ್ನು ದಾಟಿದೆ.

 ಚೇತರಿಸಿಕೊಳ್ಳುತ್ತಿರುವ ಆಟೋಮೊಬೈಲ್ ಉದ್ಯಮ: ಮೇ ತಿಂಗಳಲ್ಲಿ 2.51 ಲಕ್ಷ ವಾಹನಗಳ ಮಾರಾಟ

ಮತ್ತೊಂದೆಡೆ, ಮೇ 2022 ರಲ್ಲಿ ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳ ಒಟ್ಟು ಮಾರಾಟವು ಕ್ರಮವಾಗಿ 28,542 ಯುನಿಟ್ ಮತ್ತು 12,53,187 ಯುನಿಟ್‌ಗಳಲ್ಲಿ ದಾಖಲಾಗಿದೆ. ಆದರೆ ಈ ಎರಡೂ ವಿಭಾಗಗಳು ಕೋವಿಡ್ ಪೂರ್ವದಲ್ಲಿ ಮಾರಾಟವಾಗಿದ್ದ ಸಂಖ್ಯೆಗಳ ಬಳಿ ಎಲ್ಲಿಯೂ ಇಲ್ಲ. ಮೇ 2019 ರಲ್ಲಿ, 51,650 ಯುನಿಟ್ ತ್ರಿಚಕ್ರ ವಾಹನಗಳು ಮತ್ತು 17,25 204 ಯುನಿಟ್ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು.

 ಚೇತರಿಸಿಕೊಳ್ಳುತ್ತಿರುವ ಆಟೋಮೊಬೈಲ್ ಉದ್ಯಮ: ಮೇ ತಿಂಗಳಲ್ಲಿ 2.51 ಲಕ್ಷ ವಾಹನಗಳ ಮಾರಾಟ

ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಹೆಚ್ಚಳದ ಹೊರತಾಗಿ, ಮೇ 2022 ರ ಒಟ್ಟಾರೆ ವಾಹನ ಮಾರಾಟವು ಇನ್ನೂ ಪೂರ್ವ ಕೋವಿಟ್ ಮಾರಾಟ ಮಟ್ಟಕ್ಕಿಂತ ಕಡಿಮೆಯಿದೆ. ಮೇ 2019 ರಲ್ಲಿ, ಒಟ್ಟು 20,04,137 ವಾಹನಗಳು ಮಾರಾಟವಾಗಿವೆ. ಮೇ 2022 ರಲ್ಲಿ ಒಟ್ಟು ಮಾರಾಟವು 15,32,809 ರಷ್ಟಿದೆ.

 ಚೇತರಿಸಿಕೊಳ್ಳುತ್ತಿರುವ ಆಟೋಮೊಬೈಲ್ ಉದ್ಯಮ: ಮೇ ತಿಂಗಳಲ್ಲಿ 2.51 ಲಕ್ಷ ವಾಹನಗಳ ಮಾರಾಟ

ಈ ನಡುವೆ ಮೇ 2021 ರಲ್ಲಿ ಮಾರಾಟವಾದ 4,44,131 ವಾಹನಗಳಿಗೆ ಹೋಲಿಸಿದರೆ ಉದ್ಯಮವು ವರ್ಷದಿಂದ ವರ್ಷಕ್ಕೆ 245% ರಷ್ಟು ಬೆಳವಣಿಗೆಯನ್ನು ಕಂಡಿದೆ. 2022 ರ ಮೇ ತಿಂಗಳಿನಲ್ಲಿ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ಮಾರಾಟವು ಕ್ರಮವಾಗಿ 9 ವರ್ಷಗಳು ಮತ್ತು 14 ವರ್ಷಗಳಿಗಿಂತ ಕಡಿಮೆಯಿರುವುದರಿಂದ ಮಂದಗತಿಯಲ್ಲಿದೆ ಎಂದು SIAM ನ ಮಹಾನಿರ್ದೇಶಕ ರಾಜೇಶ್ ಮೆನನ್ ಹೇಳಿದ್ದಾರೆ.

 ಚೇತರಿಸಿಕೊಳ್ಳುತ್ತಿರುವ ಆಟೋಮೊಬೈಲ್ ಉದ್ಯಮ: ಮೇ ತಿಂಗಳಲ್ಲಿ 2.51 ಲಕ್ಷ ವಾಹನಗಳ ಮಾರಾಟ

ಇತ್ತೀಚಿನ ಸರ್ಕಾರದ ಮಧ್ಯಸ್ಥಿಕೆಗಳು ಪೂರೈಕೆ ಬದಿಯ ಸವಾಲುಗಳನ್ನು ತಗ್ಗಿಸಲು ಸಹಾಯ ಮಾಡಿದೆ. ಆದರೆ ಆರ್‌ಬಿಐನಿಂದ ರೆಪೊ ದರಗಳಲ್ಲಿ ಎರಡನೇ ಹೆಚ್ಚಳ ಮತ್ತು ಥರ್ಡ್ ಪಾರ್ಟಿ ವಿಮಾ ದರಗಳಲ್ಲಿನ ಹೆಚ್ಚಳವು ಗ್ರಾಹಕರಿಗೆ ಹೆಚ್ಚು ಸವಾಲಾಗಬಹುದು, ಮುಂದಿನದಿಗಳಲ್ಲಿ ಇದು ವಾಹನ ಮೇಲಿನ ಬೇಡಿಕೆಯನ್ನು ತಗ್ಗಿಸಬಹುದು.

 ಚೇತರಿಸಿಕೊಳ್ಳುತ್ತಿರುವ ಆಟೋಮೊಬೈಲ್ ಉದ್ಯಮ: ಮೇ ತಿಂಗಳಲ್ಲಿ 2.51 ಲಕ್ಷ ವಾಹನಗಳ ಮಾರಾಟ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮೇ 8 ರಿಂದ ಅನ್ವಯವಾಗುವಂತೆ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ, ರೆಪೊ ದರವನ್ನು ಶೇಕಡಾ 4.9ಕ್ಕೆ ತೆಗೆದುಕೊಂಡಿದೆ. ಈ ಹಿಂದೆ ಮೇ 4 ರಂದು ಆರ್‌ಬಿಐ ರೆಪೋ ದರವನ್ನು ಶೇಕಡಾ 0.4 ರಷ್ಟು ಹೆಚ್ಚಿಸಿತ್ತು. ಒಂದು ತಿಂಗಳ ಅವಧಿಯಲ್ಲಿ ಬೇಸಿಸ್ ಪಾಯಿಂಟ್‌ನಲ್ಲಿ ಇದು ಎರಡನೇ ಬಾರಿ ಏರಿಕೆಯಾಗಿದ್ದು, ಶೇ.4.4ರಿಂದ ಶೇ.4.9ಕ್ಕೆ ಏರಿಸಲಾಗಿದೆ.

 ಚೇತರಿಸಿಕೊಳ್ಳುತ್ತಿರುವ ಆಟೋಮೊಬೈಲ್ ಉದ್ಯಮ: ಮೇ ತಿಂಗಳಲ್ಲಿ 2.51 ಲಕ್ಷ ವಾಹನಗಳ ಮಾರಾಟ

ಇದು ಸಾಲದ ಮೇಲಿನ EMI ಅಥವಾ ಬಡ್ಡಿ ದರವನ್ನು ಹೆಚ್ಚಿಸುತ್ತದೆ. ಈಗಾಗಲೇ EMI ಗಳನ್ನು ಪಾವತಿಸುತ್ತಿರುವವರಿಗೆ, ಹಳೆಯ ಬಡ್ಡಿ ದರವೇ ಅನ್ವಯಿಸುತ್ತದೆ. ರೆಪೊ ದರದ ಹೆಚ್ಚಳವು ಕಾರಿನ EMI ಮೇಲೆ ನೇರ ಪರಿಣಾಮ ಬೀರುತ್ತದೆ.

 ಚೇತರಿಸಿಕೊಳ್ಳುತ್ತಿರುವ ಆಟೋಮೊಬೈಲ್ ಉದ್ಯಮ: ಮೇ ತಿಂಗಳಲ್ಲಿ 2.51 ಲಕ್ಷ ವಾಹನಗಳ ಮಾರಾಟ

ಕಾರನ್ನು ಖರೀದಿಸುವ ಮೊದಲು ನೀವು ಲೋನ್ ಮೊತ್ತ, ಅವಧಿ ಮತ್ತು ಒಟ್ಟು ಮರುಪಾವತಿ ಮೊತ್ತವನ್ನು ಮುಂಚಿತವಾಗಿ ತಿಳಿದಿದ್ದರೆ, ನಂತರ ನೀವು ಸಾಲವನ್ನು ಪಡೆಯಲು ಮತ್ತು ನಿಮ್ಮ ವೆಚ್ಚಗಳನ್ನು ಉತ್ತಮ ರೀತಿಯಲ್ಲಿ ಯೋಜಿಸಲು ಸಾಧ್ಯವಾಗುತ್ತದೆ. ನೀವು ಕಾರಿನ ಅರ್ಧದಷ್ಟು ವೆಚ್ಚವನ್ನು ಡೌನ್ ಪೇಮೆಂಟ್ ಮಾಡಬಹುದು ಅಥವಾ ಪೂರ್ವ-ಪಾವತಿಯನ್ನು ಯೋಜಿಸಬಹುದು.

 ಚೇತರಿಸಿಕೊಳ್ಳುತ್ತಿರುವ ಆಟೋಮೊಬೈಲ್ ಉದ್ಯಮ: ಮೇ ತಿಂಗಳಲ್ಲಿ 2.51 ಲಕ್ಷ ವಾಹನಗಳ ಮಾರಾಟ

ರೆಪೊ ದರ ಹೊರತಾಗಿ, ಜೂನ್ 1, 2022 ರಿಂದ, ಥರ್ಡ್ ಪಾರ್ಟಿ ವೆಹಿಕಲ್ ಇನ್ಶುರೆನ್ಸ್ ಪ್ರೀಮಿಯಂ ಕೂಡ ದುಬಾರಿಯಾಗಿದೆ. ಜೂನ್ 1, 2022 ರಿಂದ ಜಾರಿಗೆ ಬರುವಂತೆ, 150cc ಗಿಂತ ಹೆಚ್ಚಿನ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಮೂರನೇ ವ್ಯಕ್ತಿಯ ವಿಮಾ ಪ್ರೀಮಿಯಂ ಶೇ15ರಷ್ಟು ಹೆಚ್ಚು ದುಬಾರಿಯಾಗಿದೆ.

 ಚೇತರಿಸಿಕೊಳ್ಳುತ್ತಿರುವ ಆಟೋಮೊಬೈಲ್ ಉದ್ಯಮ: ಮೇ ತಿಂಗಳಲ್ಲಿ 2.51 ಲಕ್ಷ ವಾಹನಗಳ ಮಾರಾಟ

ಅದೇ ರೀತಿ, 1000 ಸಿಸಿಯಿಂದ 1500 ಸಿಸಿವರೆಗಿನ ಕಾರುಗಳು ಅಥವಾ ಎಸ್‌ಯುವಿಗಳಂತಹ ಖಾಸಗಿ ನಾಲ್ಕು ಚಕ್ರಗಳ ಪ್ರೀಮಿಯಂ ಶೇಕಡಾ 6 ರಷ್ಟು ಹೆಚ್ಚಾಗಿದೆ. ಈ ತಿಂಗಳಿನಿಂದ ಹೈಬ್ರಿಡ್-ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಜನರಿಗೆ ವಿಮಾ ಪ್ರೀಮಿಯಂನಿಂದ ಸ್ವಲ್ಪ ಪರಿಹಾರವನ್ನು ನೀಡಲಾಗುತ್ತಿದೆ.

 ಚೇತರಿಸಿಕೊಳ್ಳುತ್ತಿರುವ ಆಟೋಮೊಬೈಲ್ ಉದ್ಯಮ: ಮೇ ತಿಂಗಳಲ್ಲಿ 2.51 ಲಕ್ಷ ವಾಹನಗಳ ಮಾರಾಟ

ಹೊಸ ದರಗಳ ಪ್ರಕಾರ, ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ ವಿಮಾ ಪ್ರೀಮಿಯಂನಲ್ಲಿ ಶೇಕಡಾ 7.5 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. 30kW ವರೆಗಿನ ಬ್ಯಾಟರಿ ಸಾಮರ್ಥ್ಯದ ಖಾಸಗಿ ಎಲೆಕ್ಟ್ರಿಕ್ ಕಾರುಗಳು 1,780 ರೂ. ಪ್ರೀಮಿಯಂ ಅನ್ನು ಆಕರ್ಷಿಸುತ್ತವೆ. ಅದೇ ಸಮಯದಲ್ಲಿ, 30kW ನಿಂದ 60kW ಬ್ಯಾಟರಿ ಸಾಮರ್ಥ್ಯದ ಖಾಸಗಿ ಎಲೆಕ್ಟ್ರಿಕ್ ಕಾರುಗಳು 2,904 ರೂ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

 ಚೇತರಿಸಿಕೊಳ್ಳುತ್ತಿರುವ ಆಟೋಮೊಬೈಲ್ ಉದ್ಯಮ: ಮೇ ತಿಂಗಳಲ್ಲಿ 2.51 ಲಕ್ಷ ವಾಹನಗಳ ಮಾರಾಟ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಆಟೋ ಉದ್ಯಮವು ವಿಶ್ವ ಮಾರುಕಟ್ಟೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮುಂಬರುವ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೇರುವ ಅವಕಾಶಗಳು ಇವೆ. ಆದರೆ ಈ ನಡುವೆ ರೆಪೂ ದರ, ಥರ್ಡ್ ಪಾರ್ಟಿ ಇನ್ಸೂರನ್ಸ್ ನಂತಹ ಸವಾಲುಗಳಿಂದ ಗ್ರಾಹಕರು ವಾಹನ ಖರೀದಿಗೆ ಯಾವ ಮಟ್ಟಿಗೆ ಉತ್ಸಾಹ ತೋರುತ್ತಾರೆ ಎಂಬುದು ಕಾದುನೋಡಬೇಕಿದೆ.

Most Read Articles

Kannada
English summary
The recovering automobile industry sales of 251 lakh vehicles in May
Story first published: Saturday, June 11, 2022, 10:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X