ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ? ಹಾಗಾದರೆ ಏನೆಲ್ಲಾ ನಿಯಮಗಳಿವೆ ಇಲ್ಲಿ ತಿಳಿಯಿರಿ..

ಕೇಂದ್ರ ಸರ್ಕಾರವು ತನ್ನ ಮಹತ್ವಾಕಾಂಕ್ಷಿ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯನ್ನು ಹಂತ-ಹಂತವಾಗಿ ಜಾರಿಗೆ ತರುತ್ತಿದ್ದು, ಸ್ವಯಂಪ್ರೇರಿತ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯಡಿಯಲ್ಲಿ ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳನ್ನು ಗುಜುರಿಗೆ ಹಾಕುವ ಮೂಲಕ ಹೊಸ ವಾಹನ ಖರೀದಿಗೆ ಹಲವು ವಿನಾಯ್ತಿಗಳನ್ನು ಪಡೆದುಕೊಳ್ಳುವ ಅವಕಾಶ ನೀಡಲಾಗಿದೆ.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ಹೊಸ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯ ಪ್ರಕಾರ ಪ್ರತಿಯೊಂದು ಖಾಸಗಿ ಮತ್ತು ವಾಣಿಜ್ಯ ವಾಹನಗಳು ನಿಗದಿತ ನೊಂದಣಿ ಅವಧಿ ನಂತರ ಫಿಟ್ನೆಸ್ ಪರೀಕ್ಷೆಗೆ ಒಳಗಾಗುತ್ತವೆ. ಅದರಲ್ಲೂ ವಾಹನ ದಟ್ಟಣೆಯಿಂದ ಹೆಚ್ಚಿರುವ ವಾಯು ಮಾಲಿನ್ಯದ ದುಷ್ಪರಿಣಾಮಗಳ ಎದುರಿಸುತ್ತಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 15 ವರ್ಷ ಹಳೆಯ ಪೆಟ್ರೋಲ್ ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ಹಳೆಯ ವಾಹನಗಳು ಹೆಚ್ಚು ಮಾಲಿನ್ಯ ಹೊರಸೂಸುತ್ತಿದ್ದರೆ ಕೂಡಲೇ ಸ್ಕ್ರ್ಯಾಪ್ ಮಾಡಬೇಕು ಎಂದು ದೆಹಲಿ ಸರ್ಕಾರ ನಿರ್ದೇಶನ ನೀಡಿದ್ದು, ಹೊಸ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯಡಿಯಲ್ಲಿ ದೇಶದ ವಿವಿಧ ರಾಜ್ಯ ಸರ್ಕಾರಗಳು ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದನ್ನು ಪ್ರೋತ್ಸಾಹಿಸಲು ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ವಿಶೇಷ ಕೊಡುಗೆಗಳನ್ನು ಘೋಷಿಸುತ್ತಿದ್ದು, ಹೊಸ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯನ್ನು ಇತರೆ ರಾಜ್ಯಗಳಿಂತಲೂ ದೆಹಲಿಯಲ್ಲಿ ಹೊಸ ನಿಯಮವನ್ನು ತ್ವರಿತವಾಗಿ ಜಾರಿಗೆ ತರಲಾಗುತ್ತಿದೆ.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ದೆಹಲಿ ಸಾರಿಗೆ ಇಲಾಖೆಯು ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಫೆಸಿಲಿಟಿ (RVSF) ನಲ್ಲಿಯೇ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವಂತೆ ವಾಹನ ಮಾಲೀಕರಿಗೆ ಮನವಿ ಮಾಡಿದ್ದು, ನಿಯಮ ಉಲ್ಲಂಘನೆ ಮಾಡುವ ವಾಹನಗಳನ್ನು ಜೀವನಪರ್ಯಂತ ಮುಟ್ಟುಗೋಲು ಹಾಕಿಕೊಳ್ಳುವ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲೇಖಿಸಲಾಗಿದೆ.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ಹೀಗಾಗಿ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡಲು ಯಾವೆಲ್ಲಾ ಮಾನದಂಡಗಳನ್ನು ಅನುಸರಿಸಬೇಕು? ಹೊಸ ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಅಳವಡಿಕೆಯಿಂದ ಏನೆಲ್ಲಾ ಪ್ರಯೋಜನಗಳಿಗೆ ಎನ್ನುವುದನ್ನು ಮುಂದಿನ ಸ್ಲೈಡ್‌ಗಳಲ್ಲಿ ತಿಳಿಯೋಣ.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ಯಾವ ಹಂತದಲ್ಲಿ ಕಾರನ್ನು ಸ್ಕ್ರ್ಯಾಪ್ ಮಾಡಲು ಪರಿಗಣಿಸಬೇಕು?

ನಿಗದಿತ ಅವಧಿಯ ನೋಂದಣಿ ಮುಗಿದ ನಂತರ ಇಲ್ಲವೇ ರಿಪೇರಿ ಮಾಡಲಾಗದಷ್ಟು ಹಾನಿಗೊಳಗಾದರೆ ಕಾರನ್ನು ಸ್ಕ್ರ್ಯಾಪ್ ಮಾಡಬಹುದು. ಹಳೆಯ ಕಾರನ್ನು ದೀರ್ಘಕಾಲದವರೆಗೆ ಬಳಸದೆ ಬಿಟ್ಟರೆ ಮತ್ತು ಇನ್ನು ಮುಂದೆ ಅದು ಕಾರ್ಯಾಚರಣೆ ಮಾಡುವ ಸ್ಥಿತಿಯಲ್ಲಿಲ್ಲದಿದ್ದರೆ ಅದನ್ನು ರದ್ದುಗೊಳಿಸಬಹುದಾಗಿದೆ.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ಇದಲ್ಲದೆ ಆರ್‌ಟಿಒ ಆರ್‌ಸಿ ಅಥವಾ ಫಿಟ್‌ನೆಸ್ ಪ್ರಮಾಣಪತ್ರವನ್ನು ನವೀಕರಿಸ ವಿಫಲವಾದರೂ ಸಹ ಅದನ್ನು ರದ್ದುಗೊಳಿಸಬಹುದು. ಅಲ್ಲದೆ ದೆಹಲಿಯ ರಸ್ತೆಗಳಲ್ಲಿ ಅಕ್ರಮವಾಗಿ ಸಂಚರಿಸುವ 10 ವರ್ಷಗಳ ಹಳೆಯ ಡೀಸೆಲ್ ಅಥವಾ 15 ವರ್ಷಗಳ ಹಳೆಯ ಪೆಟ್ರೋಲ್ ಕಾರುಗಳನ್ನು ರದ್ದುಗೊಳಿಸಬಹುದಾಗಿದ್ದು, ಸಾರಿಗೆ ಇಲಾಖೆಯೇ ಮುಟ್ಟುಹಾಕಿಕೊಳ್ಳುವ ಮುನ್ನ ನಾವೇ ಸ್ಕ್ರ್ಯಾಪ್ ಮಾಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ಕಾರನ್ನು ಸ್ಕ್ರ್ಯಾಪ್ ಮಾಡುವಾಗ ಸಲ್ಲಿಸಬೇಕಾದ ದಾಖಲೆಗಳು ಯಾವುವು?

ಕೇಂದ್ರ ಸಾರಿಗೆ ಇಲಾಖೆಯಿಂದಲೇ ನೋಂದಾಯಿತ ಸ್ಕ್ರ್ಯಾಪ್‌ ಯಾರ್ಡ್‌ನಲ್ಲಿ ವಾಹನವನ್ನು ಸ್ಕ್ರ್ಯಾಪ್ ಮಾಡುವುದು ತುಂಬಾ ಮುಖ್ಯವಾದ ವಿಚಾರ. ಈ ವೇಳೆ ಹಳೆಯ ವಾಹನದ ಮಾಲೀಕರು ಕೆಲವು ದಾಖಲೆಗಳನ್ನು ಸಲ್ಲಿಸಬೇಕು.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ಹಳೆಯ ವಾಹನದ ಈ ಹಿಂದಿನ ನೋಂದಣಿ ಪ್ರಮಾಣಪತ್ರ, ರಸ್ತೆಯಲ್ಲಿ ಓಡಲು ಕಾರು ಅನರ್ಹವೆಂದು ಘೋಷಿಸುವ ಫಿಟ್‌ನೆಸ್ ಪ್ರಮಾಣಪತ್ರ, ಪ್ಯಾನ್ ಕಾರ್ಡ್, ಕಾರನ್ನು ಸ್ಕ್ರ್ಯಾಪ್ ಮಾಡಲು ಮಾಲೀಕರ ಒಪ್ಪಿಗೆ ಪತ್ರ, ವಾಹನದ ಮೂಲ ಮಾಲೀಕ ಮರಣದ ಸಂದರ್ಭದಲ್ಲಿ ಮರಣ ಪ್ರಮಾಣಪತ್ರ ಅಥವಾ ಪ್ರಸ್ತುತ ಮಾಲೀಕರ ಉತ್ತರಾಧಿಕಾರಯ ಪ್ರಮಾಣಪತ್ರ ಸಲ್ಲಿಸಬೇಕು.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ವಾಹನವನ್ನು ಸ್ಕ್ರ್ಯಾಪ್ ಮಾಡುವುದರಿಂದ ಏನು ಪ್ರಯೋಜನ?

ಹಳೆಯ ವಾಹನವನ್ನು ಸ್ಕ್ರ್ಯಾಪ್ ಮಾಡುವುದರಿಂದ ಏನಾದರೂ ಪ್ರಯೋಜನವಿದೆಯೇ? ಎಂಬ ಪ್ರಶ್ನೆ ಅನೇಕರಲ್ಲಿ ಮೂಡದೆ ಇರಲಾರದು. ಆದರೆ ಹಳೆಯ ವಾಹನವನ್ನು ಸ್ಕ್ರ್ಯಾಪ್ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ಹೌದು, ಹಳೆಯ ವಾಹನವನ್ನು ಸ್ಕ್ರ್ಯಾಪ್ ಮಾಡುವುದರಿಂದ ಅದರ ಮಾಲೀಕರಿಗೆ ನಿರ್ದಿಷ್ಟ ಪ್ರಮಾಣದ ಹಣ ಸಿಗುತ್ತದೆ. ದಿನದ ಸ್ಕ್ರ್ಯಾಪ್ ಮೆಟಲ್ ಬೆಲೆಗೆ ಅನುಗುಣವಾಗಿ ಮೊತ್ತವನ್ನು ಪಾವತಿಸಲಾಗುತ್ತದೆ. ಕಾರಿನ ಮೆಟಲ್‌ ಅನ್ನು ಪ್ರತಿ ಕೆ.ಜಿ ಪ್ರಸ್ತುತ ಮಾರುಕಟ್ಟೆ ಬೆಲೆಯನ್ನು ಪ್ರತ್ಯೇಕವಾಗಿ ನೀಡಲಾಗುದು ಮತ್ತು ಕಾರಿನ ಕೆಲವು ಪ್ರಮುಖ ತಾಂತ್ರಿಕ ಅಂಶಗಳು ಕ್ರಿಯಾತ್ಮಕವಾಗಿದ್ದರೆ ಅದನ್ನು ಕೂಡಾ ಪ್ರತ್ಯೇಕವಾಗಿ ಮೌಲ್ಯೀಕರಿಸಲಾಗುತ್ತದೆ.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ಹೀಗಾಗಿ ಹಳೆಯ ಕಾರು ಓಡಿಸಲು ಸಾಧ್ಯವಿಲ್ಲವಾದರೂ ತಾಂತ್ರಿಕವಾಗಿ ತುಸು ಹೆಚ್ಚಿನ ಮೌಲ್ಯವನ್ನು ಒಳಗೊಂಡರೆ ಸ್ಕ್ರ್ಯಾಪ್ ಮಾಡುವಾಗ ಗಣನೀಯ ಆದಾಯವನ್ನು ಗಳಿಸಬಹುದು. ಒಂದು ವೇಳೆ ಸ್ಕ್ರ್ಯಾಪ್ ಮಾಡಿದ ನಂತರ ಹಣದ ಬದಲಾಗಿ ಹೊಸ ಕಾರಿನ ಖರೀದಿಗೆ ವಿನಾಯ್ತಿ ಪಡೆದುಕೊಳ್ಳಬಹುದು.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ಹಳೆಯ ವಾಹನವನ್ನು ಸ್ಕ್ರ್ಯಾಪ್ ಮಾಡಿದ ನಂತರ ಅಧಿಕೃತ ಸ್ಕ್ರ್ಯಾಪ್ ಯಾರ್ಡ್ ಕೇಂದ್ರವು ಪ್ರಮಾಣ ಪತ್ರವನ್ನು ನೀಡಲಿದ್ದು, ಹೊಸ ವಾಹನವನ್ನು ಖರೀದಿಸುವಾಗ ಆ ಪ್ರಮಾಣ ಪತ್ರ ತೋರಿಸಿ ಕೆಲವು ಆಫರ್‌ಗಳನ್ನು ಪಡೆಯಬಹುದು.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ಕಾರನ್ನು ಸ್ಕ್ರ್ಯಾಪ್ ಮಾಡಿದ ನಂತರ ಏನು ಮಾಡಬೇಕು?

ಈ ಹಿಂದೆ ವಾಹನವನ್ನು ಸ್ಕ್ರ್ಯಾಪ್ ಮಾಡಿದ ನಂತರ ಆ ವಾಹನದ ಮಾಲೀಕರಿಗೆ ಚಾಸಿಸ್ ಸಂಖ್ಯೆ ಮತ್ತು ಕಾರನ್ನು ಸ್ಕ್ರ್ಯಾಪ್ ಮಾಡುವಾಗ ತೆಗೆದ ಚಿತ್ರಗಳನ್ನು ಒದಗಿಸಬೇಕು ಎಂದು ಕೇಂದ್ರ ಸರ್ಕಾರವು ನಿಯಮ ರೂಪಿಸಿತ್ತು. ಈ ವೇಳೆ ಸ್ಕ್ರ್ಯಾಪ್ ಯಾರ್ಡ್ ದಾಖಲೆಗಳನ್ನು ಆರ್‌ಟಿಒಗೆ ಹಸ್ತಾಂತರಿಸಬೇಕಿತ್ತು.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ಆದರೆ ಇದೀಗ ಈ ಗೊಂದಲಮಯ ನಿಯಮಗಳನ್ನು ಸರ್ಕಾರ ಈಗ ಮತ್ತೆ ಮಾರ್ಪಡಿಸಿದೆ. ತಿದ್ದುಪಡಿ ಮಾಡಲಾದ ನಿಯಮ ಪ್ರಕಾರ ವೆಹಿಕಲ್ ಸ್ಕ್ರ್ಯಾಪ್ ಯಾರ್ಡ್‌ನಲ್ಲಿ ವಾಹನ ಮಾಲೀಕರಿಗೆ ಚಾಸಿಸ್ ಸಂಖ್ಯೆಯನ್ನು ಒದಗಿಸದೆ ಅದೇ ನೇರವಾಗಿ ವಾಹನ್ ಸೈಟ್‌ಗೆ ಸ್ಕ್ರ್ಯಾಪಿಂಗ್ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡುತ್ತದೆ.

ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡುವ ಯೋಜನೆ ಇದೆಯೇ?

ಅಲ್ಲದೆ ಆರ್‌ಟಿ ಡೇಟಾಬೇಸ್‌ನಲ್ಲಿ ಹಳೆಯ ವಾಹನದ ನೋಂದಣಿಯನ್ನು ಪೂರ್ತಿಯಾಗಿ ಅಳಿಸಿ ಹಾಕಲಿದ್ದು, ವಾಹನ ದಾಖಲೆಯ ಮರುಮಾರಾಟ ಮತ್ತು ದುರುಪಯೋಗವನ್ನು ತಪ್ಪಿಸುತ್ತದೆ. ವೆಹಿಕಲ್ ಸ್ಕ್ರ್ಯಾಪ್ ಯಾರ್ಡ್ ಕೇಂದ್ರಗಳು ಪ್ರಮಾಣಪತ್ರವನ್ನು ಅಪ್‌ಲೋಡ್ ನಂತರ ವಾಹನ ಮಾಲೀಕರು ವಾಹನ್ ಸೈಟ್‌ನಿಂದ ಸ್ಕ್ರ್ಯಾಪ್ ಪ್ರಮಾಣಪತ್ರ ಮತ್ತು ಅಳಿಸಿದ ಪ್ರಮಾಣಪತ್ರ ಎರಡರನ್ನು ಕೂಡಾ ಡೌನ್‌ಲೋಡ್ ಮಾಡಬಹುದಾಗಿದೆ.

Article Published On: Monday, January 31, 2022, 16:26 [IST]
English summary
Things to know about vehicle scrappage policy details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+