ಕೆಎಸ್‌ಆರ್‌ಟಿಸಿಗೆ ಎಲೆಕ್ಟ್ರಿಕ್ ಬಸ್‌ಗಳು ಎಂಟ್ರಿ ಕೊಡುವ ಸಮಯ ಬಂದಿದೆ: ಸಿಎಂಗೆ ವರದಿ ಸಲ್ಲಿಕೆ
ಇಂಧನ ಬೆಲೆಗಳು ಗಗನಕ್ಕೇರುತ್ತಿದ್ದು, ಕರ್ನಾಟಕದ ವಿವಿಧ ರಸ್ತೆ ಸಾರಿಗೆ ಸಂಸ್ಥೆಗಳ (KSRTC, NWKRTC, KKRTC, BMTC) ಆರ್ಥಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಿರುವ ಸಾರಿಗೆ ಸಮಿತಿಯು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಂಡು ಡೀಸೆಲ್ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಶೇ50 ರಷ್ಟು ವೆಚ್ಚವನ್ನು ಉಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಂಗಳವಾರ ಸಲ್ಲಿಸಿದ ವರದಿಯಲ್ಲಿ, ಪ್ರಸ್ತುತ ತಂತ್ರಜ್ಞಾನದೊಂದಿಗೆ ಇಂಧನ ದಕ್ಷತೆಯನ್ನು ಸುಧಾರಿಸಲು ಅವಕಾಶಗಳು ಕಡಿಮೆಯಿವೆ. ಆರು ವರ್ಷಗಳ ಅವಧಿಯಲ್ಲಿ ಇಂಧನ ಬೆಲೆ ಭಾರೀ ಹೆಚ್ಚಳ ಕಂಡಿದೆ.

ಈ ಅವಧಿಯಲ್ಲಿ ಕೇವಲ ಇಂಧನಕ್ಕಾಗಿ ರೂ. 321 ಕೋಟಿಯನ್ನು ವೆಚ್ಚಿಸಲಾಗಿದೆ. ಇದು ಒಟ್ಟಾರೆ RTC ಬಸ್‌ಗಳ ವೆಚ್ಚದ ಶೇ13 ರಷ್ಟಿದೆ ಎಂದು ವರದಿಯಲ್ಲಿ ತಿಳಿಸಿದಲಾಗಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಈ ವರ್ಷದ ಮಾರ್ಚ್ ವರೆಗೆ RTCಯ ಬಾಕಿ ಇರುವ ಹೊಣೆಗಾರಿಕೆಗಳು ಸುಮಾರು 4,426 ಕೋಟಿ ರೂಪಾಯಿಗಳು ಇದ್ದು, ಬಾಕಿ ಉಳಿದಿರುವ ಇಂಧನ ಬಿಲ್‌ಗಳು 837 ಕೋಟಿ ರೂಪಾಯಿಗಳಾಗಿವೆ.

ರಾಜ್ಯವು ನಾಲ್ಕು RTC ಗಳನ್ನು ಒಳಗೊಂಡಿದೆ, ಅವುಗಳೆಂದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಇದ್ದು, ಈ ಎಲ್ಲವನ್ನು ಒಳಗೊಂಡು ಕರ್ನಾಟಕದಲ್ಲಿ ಸುಮಾರು 24,000 ಬಸ್‌ಗಳಿವೆ.

ಇದರಲ್ಲಿ 6,700 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳು ಬೆಂಗಳೂರಿನಲ್ಲಿ ಸಂಚರಿಸುತ್ತಿವೆ. ಪ್ರತಿ ಲಕ್ಷ ಜನಸಂಖ್ಯೆಗೆ 36 ಬಸ್‌ಗಳನ್ನು ಹೊಂದಿರುವ ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಸರ್ಕಾರಿ ಸ್ವಾಮ್ಯದ ಬಸ್‌ಗಳನ್ನು ಹೊಂದಿದೆ, ನಂತರ ಆಂಧ್ರಪ್ರದೇಶ (26.5), ತಮಿಳುನಾಡು (28.4), ಮಹಾರಾಷ್ಟ್ರ (22.8) ಮತ್ತು ಕೇರಳ (16.9) ಇವೆ.

ಆರ್‌ಟಿಸಿಗಳು ಕೋವಿಡ್-19 ರ ನಂತರದ ಶಿಫಾರಸಿನ ಹಂತದಲ್ಲಿವೆ ಎಂದು ಸಮಿತಿ ಹೇಳಿದೆ. ಪ್ರತಿ ಕಿ.ಮೀ.ಗೆ ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣಾ ವೆಚ್ಚವು ಡೀಸೆಲ್ ಬಸ್‌ಗಳ ಶೇಕಡಾ 50 ರಷ್ಟಿರುತ್ತದೆ. ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣಾ ವೆಚ್ಚವು ಪ್ರತಿ ಕಿಲೋಮೀಟರ್‌ಗೆ ರೂ. 43.49 ಆಗಿರುತ್ತದೆ, ಇದು ಬಿಎಸ್ IV ಡೀಸೆಲ್ ಬಸ್‌ಗಳ ನಿರ್ವಹಣಾ ವೆಚ್ಚಕ್ಕಿಂತ ಕಡಿಮೆಯಾಗಿದೆ ಎಂದು ಸಮಿತಿ ಹೇಳಿದೆ.

ದೀರ್ಘಕಾಲೀನ ಪರಿಹಾರಗಳ ಮೇಲೆ ಕೇಂದ್ರೀಕರಿಸಿದ ವರದಿಯು RTC ಯಿಂದ ಭವಿಷ್ಯದ ಖರೀದಿಗಳಲ್ಲಿ ಕನಿಷ್ಠ ಶೇ50 ರಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಬೇಕಿದೆ ಎಂದು ಹೇಳಿದೆ. "ಎಲೆಕ್ಟ್ರಿಕ್ ಬಸ್‌ಗಳಿಗೆ ಒಟ್ಟು ವೆಚ್ಚದ ಒಪ್ಪಂದದ (ಜಿಸಿಸಿ) ಮಾದರಿಯನ್ನು ಶಿಫಾರಸು ಮಾಡಲಾಗಿದೆ. BMTC ಸದ್ಯ 90 ಎಲೆಕ್ಟ್ರಿಕ್ ಬಸ್‌ಗಳನ್ನು ನಿರ್ವಹಿಸುತ್ತಿದ್ದು, ಇನ್ನೂ 300 ಬಸ್‌ಗಳನ್ನು ಒಪ್ಪಂದ ಮಾಡಿಕೊಂಡಿದೆ. FAME II ಅನ್ನು ಸ್ವೀಕರಿಸದ 579 ಬಸ್‌ಗಳಿಗೆ ಹೊಂದಾಣಿಕೆಯ ಸಬ್ಸಿಡಿಯೊಂದಿಗೆ BMTC ಅನ್ನು ಇದು ಬೆಂಬಲಿಸಬಹುದು.

ಇತ್ತೀಚಿನ ವರ್ಷಗಳಲ್ಲಿ ಬೆಲೆಗಳು ಏರಿಕೆಯಾಗಿರುವುದರಿಂದ ಇಂಧನ ವೆಚ್ಚದಲ್ಲಿ ವೆಚ್ಚ ಕಡಿತದ ಅಗತ್ಯವಿದೆ ಎಂದು ವರದಿ ಹೇಳಿದೆ. ಆರ್‌ಟಿಸಿಗಳು ಇಂಧನಕ್ಕಾಗಿ ಒಟ್ಟು 10,686 ಕೋಟಿ ರೂ.ಗಳಲ್ಲಿ 3,467 ಕೋಟಿ ರೂ. ಅಂದರೆ, ಕಾರ್ಯಾಚರಣೆಯ ಒಟ್ಟು ವೆಚ್ಚದಲ್ಲಿ ಶೇ32 ರಷ್ಟು ಇಂಧನಕ್ಕಾಗಿ ಖರ್ಚು ಮಾಡಲಾಗಿದೆ. BMTC ಶೇ27 ರಷ್ಟು ಮತ್ತು KSRTC ಶೇ35 ರಷ್ಟು ಖರ್ಚು ಮಾಡಿದೆ.

RTC ಗಳ ಒಟ್ಟು ಇಂಧನ ವೆಚ್ಚವು 2013-14 ರಲ್ಲಿ 3,146 ಕೋಟಿ ರೂಪಾಯಿಗಳಿಂದ 2015-16 ರಲ್ಲಿ 2,629 ಕೋಟಿ ರೂಪಾಯಿಗಳಿಗೆ ಮತ್ತು 2018-19 ರಲ್ಲಿ 3,620 ಕೋಟಿ ರೂಪಾಯಿಗಳಿಗೆ ಏರಿಳಿತವಾಗಿದೆ. ಕಳೆದ ಐದು ವರ್ಷಗಳಲ್ಲಿ ಇಂಧನ ಬೆಲೆಗಳು ಲೀಟರ್‌ಗೆ 46 ರೂ.ಗಳಿಂದ 89 ರೂ.ಗೆ (ಚಿಲ್ಲರೆ) ಮತ್ತು ಲೀಟರ್‌ಗೆ 120 ರೂವರೆಗೆ ಏರಿಳಿತವಾಗಿವೆ ಎಂದು ವರದಿ ಉಲ್ಲೇಖಿಸಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ
ಕರ್ನಾಟಕದಲ್ಲಿ 1.20 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಸಾರ್ವಜನಿಕರು ಬಳಸುತ್ತಿದ್ದು, ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವ ರಾಜ್ಯವಾಗಿ ಗುರ್ತಿಸಿಕೊಂಡಿದೆ. FAME ಇಂಡಿಯಾ ಸ್ಕೀಮ್‌ನ ಹಂತ-Iರ ಅಡಿಯಲ್ಲಿ, ಜುಲೈ 1, 2022 ರಂತೆ 479 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ. ಪ್ರಸ್ತುತ, FAME ಇಂಡಿಯಾ ಯೋಜನೆಯ ಹಂತ-II ಅನ್ನು ಐದು ವರ್ಷಗಳ ಅವಧಿಗೆ ಒಟ್ಟು ₹10,000 ಕೋಟಿ ಬಜೆಟ್ ಹಂಚಿಕೆಯೊಂದಿಗೆ ಜಾರಿಗೊಳಿಸಲಾಗುತ್ತಿದೆ.

ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 68 ನಗರಗಳಲ್ಲಿ 2,877 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳನ್ನು ಫೇಮ್ ಇಂಡಿಯಾದ ಹಂತ-IIರ ಅಡಿಯಲ್ಲಿ ಮಂಜೂರು ಮಾಡಿದೆ. ಫೇಮ್ ಇಂಡಿಯಾ ಸ್ಕೀಮ್‌ನ ಹಂತ II ರ ಅಡಿಯಲ್ಲಿ 9 ಎಕ್ಸ್‌ಪ್ರೆಸ್‌ವೇಗಳು ಮತ್ತು 16 ಹೆದ್ದಾರಿಗಳಲ್ಲಿ ಸುಮಾರು 1,576 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸಹ ಮಂಜೂರು ಮಾಡಲಾಗಿದೆ.


Click it and Unblock the Notifications