India
YouTube

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ವಿಶ್ವದಾದ್ಯಂತ ಕಾಡುತ್ತಿರುವ ಸೆಮಿಕಂಡಕ್ಟರ್ ಕೊರತೆ, ಉಕ್ರೇನ್-ರಷ್ಯಾ ಯುದ್ಧ, ಸಾಂಕ್ರಾಮಿಕ ಸಂಬಂಧಿತ ಮಾರಾಟ ನಿರ್ಬಂಧಗಳ ಹೊರತಾಗಿಯೂ ಭಾರತದಲ್ಲಿ ಹೆಚ್ಚಿನ ಕಾರು ಮಾದರಿಗಳು ತುಂಬಾ ಸಕಾರಾತ್ಮಕ ಬೆಳವಣಿಗೆಯನ್ನು ಸಾಧಿಸಿವೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

2022ರ ಆರ್ಥಿಕ ವರ್ಷದಲ್ಲಿ ನಾಲ್ಕು ಚಕ್ರ ವಾಹನಗಳ ಮಾರಾಟದ ವರದಿಯು, ಮಾರುತಿ ಸುಜುಕಿ ವ್ಯಾಗನ್ಆರ್ ಅನ್ನು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರು ಎಂದು ಬಹಿರಂಗಪಡಿಸಿದ್ದು, ಟಾಟಾ ನೆಕ್ಸಾನ್ ಭಾರತದ ನೆಚ್ಚಿನ ಎಸ್‌ಯುವಿಯಾಗಿ ಹೊರಹೊಮ್ಮಿದೆ. 2022ರ ಆರ್ಥಿಕ ವರ್ಷದಲ್ಲಿ ಅತ್ಯುತ್ತಮವಾಗಿ ಮಾರಾಟವಾಗಿರುವ ಟಾಪ್ 10 ಕಾರುಗಳನ್ನು ಇಲ್ಲಿ ನೋಡಬಹುದು.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ವ್ಯಾಗನ್ಆರ್ (1,88,838 ಯುನಿಟ್‌ಗಳು)

ಮಾರುತಿ ಸುಜುಕಿ ವ್ಯಾಗನ್‌ಆರ್ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ತನ್ನ ಮಾದರಿಗಳನ್ನು ಮಾರಾಟ ಮಾಡುವ ಮೂಲಕ ಇಂಡೋ-ಜಪಾನ್ ವಾಹನ ತಯಾರಕರಿಗೆ ಸ್ಥಿರವಾದ ಮಾರಾಟ ಲಾಭಾಂಶಗಳನ್ನು ಒದಗಿಸುತ್ತಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಇದೀಗ 2022ರ ಆರ್ಥಿಕ ವರ್ಷದ ಮಾರಾಟವನ್ನು ವಿಶ್ಲೇಷಿಸುವುದಾದರೆ, ತನ್ನ ಟಾಲ್‌ ಬಾಯ್ ಹ್ಯಾಚ್‌ಬ್ಯಾಕ್ 1,88,838 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಮಾರಾಟ ವಿಭಾಗದಲ್ಲಿ ವೇದಿಕೆಯ ಉನ್ನತ ಹಂತವನ್ನು ಪಡೆದುಕೊಂಡಿದೆ. 2021ರ ಆರ್ಥಿಕ ವರ್ಷದಲ್ಲಿ ಕಂಪನಿಯು ಕೇವಲ 1,60,330 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದರಿಂದ ಈ ಮಾದರಿಯು ಸುಮಾರು ಶೇ18ರಷ್ಟು ಮಾರಾಟದ ಬೆಳವಣಿಗೆಯನ್ನು ಕಂಡಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಸ್ವಿಫ್ಟ್ (1,67,827 ಯುನಿಟ್‌ಗಳು)

ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಅನೇಕ ಜನರಿಗೆ ಡೀಫಾಲ್ಟ್ ಆಯ್ಕೆಯಾಗಿದೆ. 2022ರ ಆರ್ಥಿಕ ವರ್ಷದಲ್ಲಿ ಮಾರುತಿ ಸುಜುಕಿ ಈ ಹ್ಯಾಚ್‌ಬ್ಯಾಕ್‌ನ 1,67,827 ಯುನಿಟ್‌ಗಳನ್ನು ಮಾರಾಟ ಮಾಡಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಮಾರ್ಚ್ 2021 ರಲ್ಲಿ ಇಂಡೋ-ಜಪಾನ್ ವಾಹನ ತಯಾರಕರು 1,72,671 ಯುನಿಟ್‌ಗಳನ್ನು ಮಾರಾಟ ಮಾಡಲು ಸಾಧ್ಯವಾದ ಕಾರಣ ಕಳೆದ ವರ್ಷಕ್ಕೆ ಹೋಲಿಸಿದರೆ ಮಾರುತಿ ಸುಜುಕಿ ಸ್ವಿಫ್ಟ್‌ ಮಾರಾಟದಲ್ಲಿ ಶೇಕಡಾ 2ರಷ್ಟು ಕುಸಿದಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಬಲೆನೊ (1,46,183 ಯುನಿಟ್‌ಗಳು)

ಮಾರುತಿ ಸುಜುಕಿ ಬಲೆನೊ, ನೆಕ್ಸಾ ಮಾಡೆಲ್ ಲೈನ್‌ಅಪ್‌ಗೆ ಅಡಿಪಾಯ ಹಾಕಿತ್ತು. ಈ ಮೂಲಕ ಈ ಮಾದರಿಯು ಇಂಡೋ-ಜಪಾನೀಸ್ ಕಂಪನಿಗೆ ಸ್ಥಿರವಾದ ಮಾರಾಟ ಉತ್ಪನ್ನವಾಗಿದೆ. ಆದರೂ ವರ್ಷದಿಂದ ವರ್ಷಕ್ಕೆ ಮಾರಾಟವಾದ ಅಂಕಿಅಂಶಗಳಿಂದ ತಿಳಿದುಬಂದಿರುವುದೇನೆಂದರೆ ಕಂಪನಿಯು ಮಾರಾಟದ ಕಾರ್ಯಕ್ಷಮತೆಯಲ್ಲಿ ಶೇ10ರಷ್ಟು ಕುಸಿತವನ್ನು ಕಂಡಿದ್ದರಿಂದ ಮಾಡೆಲ್‌ಗೆ ಇತ್ತೀಚಿನ ನವೀಕರಣ ಅತ್ಯಗತ್ಯ ನವೀಕರಣಕ್ಕಿಂತ ಹೆಚ್ಚಾಗಿದೆ ಎಂದು ಬಹಿರಂಗಪಡಿಸಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಮಾರಾಟವಾದ ಸಂಖ್ಯೆಗಳ ಪ್ರಕಾರ, ಮಾರುತಿ ಸುಜುಕಿ 2021 ಆರ್ಥಿಕ ವರ್ಷದಲ್ಲಿ 1,63,445 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, 2022 ರಲ್ಲಿ 1,46,183 ಯುನಿಟ್‌ಗಳನ್ನು ಮಾರಾಟ ಮಾಡಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಆಲ್ಟೊ (1,45,167 ಯುನಿಟ್‌ಗಳು)

ಮಾರುತಿ ಸುಜುಕಿ ವ್ಯಾಗನ್‌ಆರ್‌ನಂತೆ, ಮಾರುತಿ ಸುಜುಕಿ ಆಲ್ಟೊ ಎರಡು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿದೆ. ವ್ಯಾಗನ್ಆರ್ ಹ್ಯಾಚ್‌ಬ್ಯಾಕ್‌ಗಿಂತ ಭಿನ್ನವಾಗಿ, ಆಲ್ಟೊ ಮಾರಾಟದಲ್ಲಿ ಶೇಕಡಾ 8.7 ರಷ್ಟು ಕುಸಿತವನ್ನು ಕಂಡಿದೆ, ಏಕೆಂದರೆ ಕಂಪನಿಯು 2022 ರಲ್ಲಿ 1,45,167 ಯೂನಿಟ್ ಆಲ್ಟೊ ಮಾದರಿಗಳನ್ನು ಮಾರಾಟ ಮಾಡಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ 2021 ರಲ್ಲಿ 1,58,992 ಯುನಿಟ್‌ಗಳನ್ನು ಮಾರಾಟ ಮಾಡಿತ್ತು ಇದನ್ನು ಕಳೆದ ವರ್ಷಕ್ಕೆ ಹೋಲಿಸಿದರೆ, ವರ್ಷದ ಮಾರಾಟದ ವಿಷಯದಲ್ಲಿ 13,825 ಯುನಿಟ್‌ಗಳ ವ್ಯತ್ಯಾಸ ಕಂಡುಬಂದಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಡಿಜೈರ್ (1,26,790 ಯುನಿಟ್‌ಗಳು)

ಮಾರುತಿ ಸುಜುಕಿ ಡಿಜೈರ್ ಭಾರತದಲ್ಲಿ ಇಂಡೋ-ಜಪಾನೀಸ್ ವಾಹನ ತಯಾರಕರಿಗೆ ಅತ್ಯಂತ ಯಶಸ್ವಿ ಮಾದರಿಯಾಗಿದೆ, 2022ರ ಆರ್ಥಿಕ ವರ್ಷದಲ್ಲಿ ಸಬ್-4m ಸೆಡಾನ್ ಒಂದೇ ಮಾದರಿ ಮಾರುತಿ ಸುಜುಕಿಗೆ 1,26,790 ಹೊಸ ಗ್ರಾಹಕರನ್ನು ನೀಡಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಆದರೂ ಹಿಂದಿನ ಹಣಕಾಸು ವರ್ಷದಲ್ಲಿ ಮಾರುತಿ ಸುಜುಕಿ ಈ ಸೆಡಾನ್‌ನ 1,461 ಯುನಿಟ್‌ಗಳನ್ನು ಹೆಚ್ಚು ಮಾರಾಟ ಮಾಡಿತ್ತು, ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಸುಮಾರು ಶೇ1.1 ರಷ್ಟು ಇಳಿಕೆ ಕಂಡುಬಂದಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಟಾಟಾ ನೆಕ್ಸಾನ್ (1,24,130 ಯುನಿಟ್‌ಗಳು)

ಟಾಟಾ ನೆಕ್ಸಾನ್ ಮಾರುಕಟ್ಟೆಯಲ್ಲಿ ಸುರಕ್ಷಿತ ಎಸ್‌ಯುವಿಗಳಲ್ಲಿ ಒಂದಾಗಿದೆ. ಗ್ಲೋಬಲ್-ಎನ್‌ಸಿಎಪಿಯಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದ ಮೊದಲ ಭಾರತೀಯ ಎಸ್‌ಯುವಿಯಾಗಿದೆ. ಟಾಟಾ ಮೋಟಾರ್ಸ್‌ನಿಂದ ಆಟೋಮೊಬೈಲ್ ಸುರಕ್ಷತೆಯ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿಯನ್ನು ಹೆಚ್ಚಿಸುವ ಬಲವಾದ ಅಭಿಯಾನದ ಮೂಲಕ ಎಲ್ಲರ ಗಮನ ಸೆಳೆದಿತ್ತು. ಈ ಮಾದರಿಯನ್ನು ಪ್ರಾರಂಭಿಸಿದಾಗ ಸೆಗ್ಮೆಂಟ್ ಲೀಡರ್ ಅಲ್ಲದಿದ್ದರೂ, ಟಾಟಾ ನೆಕ್ಸಾನ್ ಮಾರಾಟವು ಕ್ರಮೇಣ ಹೆಚ್ಚಾಯಿತು.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

2022ರ ಆರ್ಥಿಕ ವರ್ಷದಲ್ಲಿ 1,24,130 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಟಾಟಾ ಮೋಟಾರ್ಸ್ Nexon SUV ಯ ಮಾರಾಟದಲ್ಲಿ ಶೇಕಡಾ 94 ಕ್ಕಿಂತ ಹೆಚ್ಚು ಹೆಚ್ಚಳವನ್ನು ಕಂಡಿದ್ದರಿಂದ ಈ ಪ್ರವೃತ್ತಿಯು ವರ್ಷದದಿಂದ ವರ್ಷದ ಮಾರಾಟದಲ್ಲಿ ಪ್ರತಿಫಲಿಸುತ್ತಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಹುಂಡೈ ಕ್ರೆಟಾ (1,18,092 ಯುನಿಟ್‌ಗಳು)

ಹ್ಯುಂಡೈ ಕ್ರೆಟಾ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಅಗಾಧವಾದ ಜನಪ್ರಿಯ SUV ಆಗಿದೆ. ಇತ್ತೀಚೆಗೆ ಹುಂಡೈ ಮಾದರಿಗಳು ಉತ್ತಮವಾಗಿ ಮಾರಾಟವಾಗಿದೆ. 2022ರ ಆರ್ಥಿಕ ವರ್ಷದಲ್ಲಿ ದಕ್ಷಿಣ ಕೊರಿಯಾದ ವಾಹನ ತಯಾರಕರು 1,18,092 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಆದರೂ ಕಂಪನಿಯು ಕಳೆದ ಆರ್ಥಿಕ ವರ್ಷದಲ್ಲಿ 1,20,035 ಯೂನಿಟ್‌ಗಳನ್ನು ಮಾರಾಟ ಮಾಡಿದ್ದರಿಂದ ಒಂದು ವರ್ಷದ ಹಿಂದೆ ಗಳಿಸಿದ ಮಾರಾಟಕ್ಕೆ ಹೋಲಿಸಿದರೆ ಇಳಿಕೆ ಕಂಡಿದೆ, ಇದರಿಂದಾಗಿ ಮಾರಾಟದಲ್ಲಿ ಶೇಕಡಾ 1.6 ರಷ್ಟು ಇಳಿಕೆಯಾಗಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಎರ್ಟಿಗಾ (1,17,150 ಯುನಿಟ್‌ಗಳು)

ಮಾರುತಿ ಸುಜುಕಿ ಎರ್ಟಿಗಾ ಭಾರತದಲ್ಲಿ ಅತ್ಯಂತ ಜನಪ್ರಿಯ 7-ಆಸನಗಳ MPV ಆಗಿದ್ದು, ಇದು ಹ್ಯಾಚ್‌ಬ್ಯಾಕ್-ಪ್ರತಿಸ್ಪರ್ಧಿ ಚಾಲನೆಯ ವೆಚ್ಚವನ್ನು ನೀಡುತ್ತದೆ. ಯೋಗ್ಯವಾದ ಸೌಕರ್ಯದಲ್ಲಿ 7 ವಯಸ್ಕರು ಕುಳಿತುಕೊಳ್ಳಬಹುದು. ಈ 7-ಆಸನಗಳ MPV 2022ರ ಆರ್ಥಿಕ ವರ್ಷದಲ್ಲಿ 1,17,150 ಯುನಿಟ್‌ಗಳನ್ನು ಮಾರಾಟ ಮಾಡಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಅಂದರೆ ಮಾರುತಿ ಸುಜುಕಿ ಎರ್ಟಿಗಾ ಹಿಂದಿನ ಹಣಕಾಸು ವರ್ಷದಲ್ಲಿ ಕೇವಲ 94,635 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದರಿಂದ ಹಿಂದಿನ ವರ್ಷಕ್ಕೆ ಹೋಲಿಸಿಕೊಂಡರೆ ಮಾರಾಟದಲ್ಲಿ ಶೇಕಡಾ 32ರಷ್ಟು ಹೆಚ್ಚಳವನ್ನು ಕಂಡಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಬ್ರೆಝಾ (1,13,711 ಯುನಿಟ್‌ಗಳು)

ಮಾರುತಿ ಸುಜುಕಿ ಬ್ರೆಝಾ ತನ್ನ ವಿಭಾಗದಲ್ಲಿ ಅತ್ಯಂತ ಜನಪ್ರಿಯ SUV ಆಗಿದೆ. ಇಂಡೋ-ಜಪಾನೀಸ್ ವಾಹನ ತಯಾರಕ ಕಂಪನಿ 2022ರ ಆರ್ಥಿಕ ವರ್ಷದಲ್ಲಿ 1,13,711 ಘಟಕಗಳನ್ನು ಮಾರಾಟ ಮಾಡಿದೆ. ಇದು ಶೇಕಡಾ 20ಕ್ಕಿಂತ ಹೆಚ್ಚು ಧನಾತ್ಮಕ ಮಾರಾಟ ಬೆಳವಣಿಗೆಗೆ ಕಾರಣವಾಗಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಇಕೋ (1,08,345 ಯುನಿಟ್‌ಗಳು)

ಮಾರುತಿ ಸುಜುಕಿ ಇಕೋ ಹಲವು ಸಾಮರ್ಥ್ಯಗಳನ್ನು ಹೊಂದಿರುವ ಬಹುಮುಖಿ ವಾಹನವಾಗಿದೆ. ಇದಲ್ಲದೆ, ಮಾರುತಿ ಸುಜುಕಿ Eeco ತನ್ನ ಬಹುಮುಖಿ ಸಾಮರ್ಥ್ಯಕ್ಕಾಗಿ ಅನೇಕ ಸಣ್ಣ ವ್ಯಾಪಾರಸ್ಥರ ನೆಚ್ಚಿನ ವಾಹನವಾಗಿದೆ. ಮಾರುತಿ ಸುಜುಕಿ ಈ ವ್ಯಾನ್‌ನ 1,08,345 ಯೂನಿಟ್‌ಗಳನ್ನು 2022ರ ಆರ್ಥಿಕ ವರ್ಷದಲ್ಲಿ ಮಾರಾಟ ಮಾಡಿದ್ದು, ಇದು ಕಳದ ವರ್ಷ ಮಾರಾಟವಾದ 1,05,081 ಯುನಿಟ್‌ಗಳಿಗೆ ಹೋಲಿಸಿದರೆ ಮಾರಾಟದಲ್ಲಿ ಶೇಕಡಾ 3ರಷ್ಟು ಹೆಚ್ಚಳ ಕಂಡಿದೆ.

2022ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

2022ರಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಪ್ರಭಾವ ಕಡಿಮೆಯಾಗುತ್ತಾ ಬಂದಿದ್ದು, ಇದೀಗ ವಾಹನ ಉದ್ಯಮ ಚೇತರಿಸಿಕೊಳ್ಳುತ್ತಿದೆ. ಇದಲ್ಲದೆ, ಹೆಚ್ಚಿನ ಮಾಡೆಲ್‌ಗಳು ವರ್ಷದಿಂದ ವರ್ಷಕ್ಕೆ ಮಾರಾಟದಲ್ಲಿ ಅತ್ಯಂತ ಧನಾತ್ಮಕ ಬೆಳವಣಿಗೆಯನ್ನು ಕಂಡಿವೆ. ಒಟ್ಟಾರೆ ಟಾಪ್ 10 ಮಾದರಿಯ ಮಾರಾಟವು 8 ಪ್ರತಿಶತದಷ್ಟು ಹೆಚ್ಚಾಗಿದೆ.

Most Read Articles

Kannada
English summary
Top 10 best selling cars in fiscal year 2022
Story first published: Thursday, April 7, 2022, 10:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X