ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-3 ಕಾಂಪ್ಯಾಕ್ಟ್ ಎಸ್‍ಯುವಿಗಳು: ಮಾರುತಿ ಬ್ರೆಝಾ ಅಗ್ರಸ್ಥಾನ

ಕಳೆದ ಕೆಲವು ವರ್ಷಗಳಿಂದ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಮಾರಾಟದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಕುತೂಹಲಕಾರಿಯಾಗಿ, ದೇಶದ ಒಟ್ಟಾರೆ ಕಾರು ಮಾರಾಟಕ್ಕೆ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗವು ಗಮನಾರ್ಹ ಕೊಡುಗೆಯಾಗಿದೆ. ಕಳೆದ ಆರು ತಿಂಗಳಲ್ಲಿ ಈ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-3 ಕಾಂಪ್ಯಾಕ್ಟ್ ಎಸ್‍ಯುವಿಗಳು: ಮಾರುತಿ ಬ್ರೆಝಾ ಅಗ್ರಸ್ಥಾನ

ಹೊಸ ಕಾರನ್ನು ಖರೀದಿಸಲು ಸೇರುವ ಗ್ರಾಹಕರು ಕಾಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಅತ್ಯುತ್ತಮ ಪೀಚರ್ಸ್, ಪ್ರಾಯೋಗಿಕತೆ, ಕಾರ್ಯಕ್ಷಮತೆ ಮತ್ತು ಹೆಚ್ಚಿನ ಸ್ಪೇಸ್ ನಿಂದ ಕೂಡಿರುತ್ತದೆ. ಈ ಕಾರಣದಿಂದ ಕಾಂಪ್ಯಾಕ್ಟ್ ಎಸ್‌ಯುವಿ ಮಾದರಿಗಳು ಹೆಚ್ಚು ಜನಪ್ರಿಯತೆಗಳಿಸುತ್ತಿದೆ, ಇನ್ನು ಸಣ್ಣ ಕಾರುಗಳಿಂದ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಸೀಟ್ ಎತ್ತರವಿರುವುದರಿಂದ ಲಾಂಗ್ ರೈಡ್ ತೆರಳಲು ಉತ್ತಮವಾಗಿದೆ. ಕಳೆದ ತಿಂಗಳಿನಲ್ಲಿ ಈ ಜನಪ್ರಿಯ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳ ಮಾಹಿತಿ ಇಲ್ಲಿದೆ.

ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-3 ಕಾಂಪ್ಯಾಕ್ಟ್ ಎಸ್‍ಯುವಿಗಳು: ಮಾರುತಿ ಬ್ರೆಝಾ ಅಗ್ರಸ್ಥಾನ

ಮಾರುತಿ ಸುಜುಕಿ ಬ್ರೆಝಾ

ಕಳೆದ ತಿಂಗಳ ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿಯು ಈ ವಿಭಾಗದಲ್ಲಿ ಸತತವಾಗಿ ಹೆಚ್ಚು ಮಾರಾಟವಾಗುತ್ತಿರುವ ಮಾದರಿಯಾದ ಟಾಟಾ ನೆಕ್ಸಾನ್ ಗಿಂತ ಬ್ರೆಝಾದ 108 ಯುನಿಟ್‌ಗಳಷ್ಟು ಹೆಚ್ಚು ಮಾರಾಟ ಮಾಡಿದೆ. ಜೂನ್‌ನಲ್ಲಿ, ಭಾರತೀಯ ವಾಹನ ತಯಾರಕರು ಹೊಸ ಬ್ರೆಝಾವನ್ನು ಹೊಸ ಕಾಸ್ಮೆಟಿಕ್ ಮತ್ತು ಫೀಚರ್ ಅಪ್‌ಗ್ರೇಡ್‌ಗಳೊಂದಿಗೆ ದೇಶದಲ್ಲಿ ಪರಿಚಯಿಸಿದರು.

ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-3 ಕಾಂಪ್ಯಾಕ್ಟ್ ಎಸ್‍ಯುವಿಗಳು: ಮಾರುತಿ ಬ್ರೆಝಾ ಅಗ್ರಸ್ಥಾನ

ಮಾರುತಿ ಸುಜುಕಿ ಕಳೆದ ತಿಂಗಳು ದೇಶದಲ್ಲಿ 15,193 ಯೂನಿಟ್ ಬ್ರೆಝಾವನ್ನು ಮಾರಾಟ ಮಾಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 12,906 ಯುನಿಟ್ ಮಾರಾಟವಾಗಿದೆ, ಈ ಮೂಲಕ ಶೇಕಡಾ.18 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-3 ಕಾಂಪ್ಯಾಕ್ಟ್ ಎಸ್‍ಯುವಿಗಳು: ಮಾರುತಿ ಬ್ರೆಝಾ ಅಗ್ರಸ್ಥಾನ

ಮಾರುತಿ ಸುಜುಕಿಯು 2022ರ ಮಾದರಿಯಲ್ಲಿ ಈ ಹಿಂದೆಂದಿಗಿಂತಲೂ ಹೆಚ್ಚಿನ ಬದಲಾವಣೆಗಳನ್ನು ಬಿಡುಗಡೆಗೊಳಿಸಿತ್ತು. ಈ ಹೊಸ ಎಸ್‍ಯುವಿ ಮಾದರಿಯ ಎಲ್ಎಕ್ಸ್‌ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ವೆಂಟ್‌ಗಳನ್ನು ಹೊಂದಿದೆ. ಹೊಸ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿ ಮಾದರಿಯು ಈ ಬಾರಿ ಸಾಕಷ್ಟು ನವೀಕೃತ ಸೌಲಭ್ಯಗಳನ್ನು ಹೊಂದಿದೆ. ಇದು ಒಂದೇ ಎಂಜಿನ್ ಆಯ್ಕೆ ಪಡೆದುಕೊಂಡಿದೆ.

ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-3 ಕಾಂಪ್ಯಾಕ್ಟ್ ಎಸ್‍ಯುವಿಗಳು: ಮಾರುತಿ ಬ್ರೆಝಾ ಅಗ್ರಸ್ಥಾನ

ಹೊಸ ಕಾರಿನಲ್ಲಿ ಕಂಪನಿಯು 2022ರ ಎರ್ಟಿಗಾ ಮತ್ತು ಎಕ್ಸ್‌ಎಲ್6 ಮಾದರಿಯಲ್ಲಿ ನೀಡಲಾಗಿರುವ 1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. 1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಕಂಪನಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಕೆ ಮಾಡಿದ್ದು, ಇದು ಕಾರು ಚಾಲನೆ ಆರಂಭಕ್ಕೂ ಮುನ್ನ ಎಂಜಿನ್ ಆರಂಭಕ್ಕೆ ಪವರ್ ಪೂರೈಕೆ ಮೂಲಕ ಇಂಧನ ವ್ಯರ್ಥವಾಗುವುದನ್ನು ತಡೆದು ಮೈಲೇಜ್ ಪ್ರಮಾಣದಲ್ಲಿ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ.

ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-3 ಕಾಂಪ್ಯಾಕ್ಟ್ ಎಸ್‍ಯುವಿಗಳು: ಮಾರುತಿ ಬ್ರೆಝಾ ಅಗ್ರಸ್ಥಾನ

ಮಾರುತಿ ಸುಜುಕಿಯು ತನ್ನ ಹೊಸ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಗಳನ್ನು ತೆಗೆದುಹಾಕಿದ ನಂತರ ಡೀಸೆಲ್ ಕಾರುಗಳಲ್ಲಿದ್ದ ಮೈಲೇಜ್ ಪ್ರಮಾಣವನ್ನು ಪೆಟ್ರೋಲ್ ಮಾದರಿಗಳಲ್ಲೂ ಕಾಯ್ದುಕೊಳ್ಳುವ ಉದ್ದೇಶದಿಂದ ಪೆಟ್ರೋಲ್ ಮಾದರಿಗಳಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಕೆ ಆರಂಭಿಸಿದೆ. ಈ ಹೊಸ ಬ್ರೆಝಾ ಕಾರಿನಲ್ಲಿ ಕಂಪನಿಯು ಈ ಹಿಂದಿನ ಟಾರ್ಕ್ ಕನ್ವರ್ಟಕ್ ಗೇರ್‌ಬಾಕ್ಸ್ ಬದಲಾಗಿ 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಿದೆ. ಈ ಹೊಸ ಎಂಜಿನ್ ಮೂಲಕ ಕಾರು 104.6 ಬಿಎಚ್‌ಪಿ ಮತ್ತು 137 ಎನ್ಎಂ ಉತ್ಪಾದನೆ ಮೂಲಕ ಉತ್ತಮ ಇಂಧನ ದಕ್ಷತೆ ಕಾಯ್ದುಕೊಂಡಿದೆ.

ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-3 ಕಾಂಪ್ಯಾಕ್ಟ್ ಎಸ್‍ಯುವಿಗಳು: ಮಾರುತಿ ಬ್ರೆಝಾ ಅಗ್ರಸ್ಥಾನ

ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಎರಡನೇ ಹೆಚ್ಚು ಮಾರಾಟವಾದ ಮಾದರಿಯಾಗಿ ಹೊರಹೊಮ್ಮಿದೆ. ಈ 2022ರ ಆಗಸ್ಟ್ ತಿಂಗಳಿನಲ್ಲಿ ನೆಕ್ಸಾನ್ ಮಾದರಿಯ 15,085 ಯುನಿಟ್ ಗಳನ್ನು ಮಾರಾಟಗೊಳಿಸಿತ್ತು. , ಕಳೆದ ವರ್ಷದ ಇದೇ ಅವಧಿಯಲ್ಲಿ 10,006 ಯುನಿಟ್ ಮಾರಾಟಕ್ಕೆ ಹೋಲಿಸಿದರೆ, ಆ ಮೂಲಕ 51 ಪ್ರತಿಶತದಷ್ಟು ಬೆಳವಣಿಗೆಯನ್ನು ಸಾಧಿಸಿದೆ,

ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-3 ಕಾಂಪ್ಯಾಕ್ಟ್ ಎಸ್‍ಯುವಿಗಳು: ಮಾರುತಿ ಬ್ರೆಝಾ ಅಗ್ರಸ್ಥಾನ

ಈ ಟಾಟಾ ನೆಕ್ಸಾನ್(Tata Nexon) ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಸ್ವದೇಶಿ ಕಾರು ತಯಾರಕರಾದ ಟಾಟಾ ಮೋಟಾರ್ಸ್ ಈ ಕಾರನ್ನು ಹೆಚ್ಚು ಪೈಪೋಟಿ ಇರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಬಿಡುಗಡೆಗೊಳಿಸಲಾಗಿದೆ.

ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-3 ಕಾಂಪ್ಯಾಕ್ಟ್ ಎಸ್‍ಯುವಿಗಳು: ಮಾರುತಿ ಬ್ರೆಝಾ ಅಗ್ರಸ್ಥಾನ

ಟಾಟಾ ಮೋಟಾರ್ಸ್ ಹಲವಾರು ಕಾರಣಗಳಿಂದಾಗಿ ನೆಕ್ಸಾನ್ ಅನ್ನು ದೀರ್ಘಕಾಲದಿಂದಲೂ ಹೆಚ್ಚು ಮಾರಾಟವಾಗುತ್ತಿರುವ ಮಾದರಿಗಳಲ್ಲಿ ಒಂದಾಗಿದೆ. ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿ ಐದು ಸ್ಟಾರ್ ರೇಟಿಂಗ್ ಅನ್ನು ಪಡೆದ ಮಾದರಿಯಾಗಿದೆ. 2017ರ ಕೊನೆಯಲ್ಲಿ ಬಿಡುಗಡೆಯಾದ ನಂತರ ಸಬ್-ಫೋರ್-ಮೀಟರ್ ಎಸ್‍ಯುವಿಯು ಗ್ರಾಹಕರ ಗಮನ ಸೆಳೆಯಿತು. ಈ ಟಾಟಾ ನೆಕ್ಸಾನ್ ಎಸ್‍ಯುವಿಯಲ್ಲಿ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-3 ಕಾಂಪ್ಯಾಕ್ಟ್ ಎಸ್‍ಯುವಿಗಳು: ಮಾರುತಿ ಬ್ರೆಝಾ ಅಗ್ರಸ್ಥಾನ

ಈ ಎಂಜಿನ್ 118 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೂಡ ನೀಡಲಾಗಿದೆ. ಈ ಎಂಜಿನ್ 108 ಬಿಹೆಚ್‍ಪಿ ಪವರ್ ಮತ್ತು 260 ಎನ್ಎಂ ಟಾರ್ಕ್ ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-3 ಕಾಂಪ್ಯಾಕ್ಟ್ ಎಸ್‍ಯುವಿಗಳು: ಮಾರುತಿ ಬ್ರೆಝಾ ಅಗ್ರಸ್ಥಾನ

ಟಾಟಾ ಪಂಚ್

2022ರ ಆಗಸ್ಟ್ ತಿಂಗಳಿನಲ್ಲಿ ಈ ಟಾಟಾ ಪಂಚ್ ಸಬ್-ಕಾಂಪ್ಯಾಕ್ಟ್ ಎಸ್‍ಯುವಿ ಮಾದರಿಯ 12,006 ಯುನಿಟ್ ಗಳನ್ನು ಮಾರಾಟ ಮಾಡಿದೆ. 2021ರ ಅಕ್ಟೋಬರ್ ತಿಂಗಳಿನಿಂದ ಪ್ರಾರಂಭವಾದಾಗಿನಿಂದ ಟಾಟಾ ಪಂಚ್ ಅದನ್ನು ಬೆಸ್ಟ್ ಸೆಲ್ಲರ್ ಪಟ್ಟಿಗೆಯಲ್ಲಿ ಸ್ಥಾನ ಪಡೆಯುವಲ್ಲಿ ಸ್ಥಾನಗಳಿಸಿತು.

ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-3 ಕಾಂಪ್ಯಾಕ್ಟ್ ಎಸ್‍ಯುವಿಗಳು: ಮಾರುತಿ ಬ್ರೆಝಾ ಅಗ್ರಸ್ಥಾನ

ಈ ಟಾಟಾ ಪಂಚ್ ಮೈಕ್ರೋ ಎಸ್‌ಯುವಿಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಯಶಸ್ಸನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಟಾಟಾ ಪಂಚ್ ಎಸ್‌ಯುವಿ ನೂತನ ಫೀಚರ್ಸ್, ಬಜೆಟ್ ಬೆಲೆ ಮತ್ತು ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಮೈಕ್ರೊ ಎಸ್‌ಯುವಿಯಾಗಿದೆ. ಇನ್ನು ಈ ಹೊಸ ಮಾದರಿಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ಲಭ್ಯವಿದೆ.

ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-3 ಕಾಂಪ್ಯಾಕ್ಟ್ ಎಸ್‍ಯುವಿಗಳು: ಮಾರುತಿ ಬ್ರೆಝಾ ಅಗ್ರಸ್ಥಾನ

ಈ ಹೊಸ ಪಂಚ್ ಮೈಕ್ರೋ ಎಸ್‌ಯುವಿ ಮಾದರಿಗಳಿಗೆ ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳಿಗೂ ಪೈಪೋಟಿ ನೀಡುತ್ತದೆ. ಪಂಚ್ ಎಸ್‌ಯುವಿಯು ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಲಭ್ಯವಿದೆ. ಈ ಎಸ್‌ಯುವಿಯಲ್ಲಿ 1.2-ಲೀಟರ್ ರಿವೊಟ್ರಾನ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-3 ಕಾಂಪ್ಯಾಕ್ಟ್ ಎಸ್‍ಯುವಿಗಳು: ಮಾರುತಿ ಬ್ರೆಝಾ ಅಗ್ರಸ್ಥಾನ

ಈ ಎಂಜಿನ್ 83 ಬಿಎಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ, ಈ ಟಾಟಾ ಪಂಚ್ ಮೈಕ್ರೋ ಎಸ್‌ಯುವಿಯಲ್ಲಿ ಸಹ ಗರಿಷ್ಠ ಮಟ್ಟದ ಸುರಕ್ಷತಾ ರೇಟಿಂಗ್ಸ್ ಪಡೆದುಕೊಂಡಿದೆ. ಹೊಸ ಕಾರು ಮುಂಭಾಗದಲ್ಲಿ ಮಾತ್ರವಲ್ಲ ಹಿಂಭಾಗದಲ್ಲಿ ಮತ್ತು ಸೈಡ್ ಪ್ರೊಫೈಲ್‌‌ನಲ್ಲೂ ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ, ಪಂಚ್ ಮೈಕ್ರೋ ಎಸ್‌ಯುವಿಯ ಪ್ಯೂರ್ ವೆರಿಯೆಂಟ್ ಆರಂಭಿಕ ಮಾದರಿಯಾಗಿ ಮಾರಾಟಗೊಳ್ಳಲಿದ್ದರೆ ಕ್ರಿಯೆಟಿವ್ ಮಾದರಿಯು ಟಾಪ್ ಎಂಡ್ ಮಾದರಿಯಾಗಿ ಮಾರಾಟವಾಗುತ್ತಿದೆ.

Article Published On: Tuesday, September 6, 2022, 11:15 [IST]
English summary
Top 3 bestselling compact suvs in august 2022 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+