ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಇತ್ತೀಚಿನ ವರ್ಷಗಳಲ್ಲಿ, 6 ಮತ್ತು ಅದಕ್ಕಿಂತ ಹೆಚ್ಚಿನ ಸೀಟುಗಳ ಸಾಮರ್ಥ್ಯವಿರುವ ಫ್ಯಾಮಿಲಿ ಕಾರುಗಳ ಬೇಡಿಕೆಯು ಪ್ರಮುಖವಾಗಿ ಹೆಚ್ಚಳವನ್ನು ಕಂಡಿದೆ. ಭಾರತದಲ್ಲಿ ಜನರು ಸಂಚರಿಸಲು ಆರಾಮದಾಯಕ ಅನುಭವ ನೀಡುವ ಕಾರುಗಳನ್ನು ಬಯಸುತ್ತಿದ್ದಾರೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಭಾರತದಲ್ಲಿ ಹೆಚ್ಚಿನ ಸದಸ್ಯರನ್ನು ಒಳಗೊಂಡಿರುವ ದೊಡ್ಡ ಕುಟುಂಬಗಳು ಹೆಚ್ಚು ಇವೆ. ಎಲ್ಲರೂ ಒಟ್ಟಿಗೆ ಪ್ರಯಾಣ ಮಾಡಲು 6 ಮತ್ತು ಅದಕ್ಕಿಂತ ಹೆಚ್ಚಿನ ಸೀಟುಗಳ ಸಾಮರ್ಥ್ಯವಿರುವ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಸಾಕಷ್ಟು ಅದ್ಭುತ ಎಂಪಿವಿಗಳು ಮತ್ತು ಮೂರು-ಸಾಲಿನ ಎಸ್‍ಯುವಿಗಳು ಈಗ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ವಿಭಿನ್ನ ಬಜೆಟ್‌ಗಳಲ್ಲಿ ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಮಾರುತಿ ಎಕ್ಸ್‌ಎಲ್6

ಮಾರುತಿ ಎಕ್ಸ್‌ಎಲ್6 ಎಂಪಿವಿ ಮೂಲಭೂತವಾಗಿ ಎರ್ಟಿಗಾ ಎಂಪಿವಿಯ ಪ್ರೀಮಿಯಂ 6-ಸೀಟರ್ ಆವೃತ್ತಿಯಾಗಿದೆ. ಹೆಚ್ಚು ದುಬಾರಿ ಶೈಲಿಯನ್ನು ಒಳಗೊಂಡಿದೆ. ಇದು ಆಫರ್‌ನಲ್ಲಿ ಉತ್ತಮ ಸೌಕರ್ಯವನ್ನು ಹೊಂದಿದೆ, ಮೊದಲ ಸಾಲಿನ ಆಸನಗಳು ಮತ್ತು ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಆಸನಗಳನ್ನು ಹೊಂದಿದ್ದು, ಮೂರನೇ ಸಾಲಿನ ಆಸನಗಳು ಉತ್ತಮವಾದ ಸ್ಥಳಾವಕಾಶವನ್ನು ಸಹ ನೀಡುತ್ತವೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಕೈಗೆಟುಕವ ಬಜೆಟ್‌ನಲ್ಲಿ ನಿಮ್ಮ ಕುಟುಂಬಕ್ಕೆ ಉತ್ತಮ ಸೌಕರ್ಯವನ್ನು ನೀವು ಬಯಸಿದರೆ, ಇದು ಉತ್ತಮ ಆಯ್ಕೆಯಾಗಿದೆ. ಈ ಎಂಪಿವಿ 1462ಸಿಸಿ, ನಾಲ್ಕು ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 101.6 ಬಿಹೆಚ್‌ಪಿ ಪವರ್ ಮತ್ತು 136.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅಥವಾ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಈ ಎಂಪಿವಿಯ ಡ್ಯಾಶ್‌ಬೋರ್ಡ್‌ನಲ್ಲಿ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್ ಇದೆ. ಇದು Apple CarPlay ಮತ್ತು Android Auto ಅನ್ನು ಹೊಂದಿದೆ, ಆದರೆ ಇದು ವೈರ್ಡ್ ಆಗಿದೆ ಮತ್ತು ನ್ನೂ ವೈರ್‌ಲೆಸ್ Apple CarPlay ಮತ್ತು Android Auto ಇಲ್ಲ. ಇನ್ಫೋಟೈನ್‌ಮೆಂಟ್ ಯುನಿಟ್ ಮಾರುತಿ ಸುಜುಕಿಯ ಸ್ಮಾರ್ಟ್‌ಪ್ಲೇ ಪ್ರೊ ಘಟಕವಾಗಿದೆ ಮತ್ತು ಆದ್ದರಿಂದ ಸಾಕಷ್ಟು ಸಂಪರ್ಕಿತ ಕಾರು ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಡ್ಯಾಶ್‌ಬೋರ್ಡ್‌ನಲ್ಲಿ ಡಿಸ್ ಪ್ಲೇ ಕೆಳಗೆ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಯುನಿಟ್ ಅನ್ನು ಇರಿಸಲಾಗಿದೆ. ಈ ಹೊಸ ಮಾರುತಿ ಸುಜುಕಿ ಎಕ್ಸ್‌ಎಲ್6 ಕಾರು ನೆಕ್ಸಾ ಬ್ಲೂ, ಒಪೊಲೆಂಡ್ ರೆಡ್, ಬ್ರೇವ್ ಖಾಕಿ, ಗ್ರ್ಯಾಂಡರ್ ಗ್ರೇ, ಸ್ಪೆಲೆಡೆಡ್ ಸಿಲ್ವರ್, ಆರ್ಕ್ಟಿಕ್ ವೈಟ್, ಒಪೊಲೆಂಡ್ ರೆಡ್ ಜೊತೆ ಬ್ಲ್ಯಾಕ್ ರೂಫ್, ಬ್ರೇವ್ ಖಾಕಿ ಜೊತೆ ಬ್ಲ್ಯಾಕ್ ರೂಫ್ ಮತ್ತು ಸ್ಪೆಲೆಡೆಡ್ ಸಿಲ್ವರ್ ತೆ ಬ್ಲ್ಯಾಕ್ ರೂಫ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಕಿಯಾ ಕಾರೆನ್ಸ್

ನಿಮ್ಮ ಬಜೆಟ್ ಹೆಚ್ಚು ವಿಸ್ತರಿಸದಿದ್ದರೆ ಕಿಯಾ ಕಾರೆನ್ಸ್ ಮತ್ತೊಂದು ಅದ್ಭುತ ಆಯ್ಕೆಯಾಗಿದೆ. ಇದು ಬಹಳಷ್ಟು ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ಉಪಕರಣಗಳನ್ನು ಕೊಡುಗೆಯಲ್ಲಿ ಹೊಂದಿದೆ ಮತ್ತು ಕ್ಯಾಬಿನ್ ಸ್ಥಳವು ಎಲ್ಲಾ ಮೂರು ಸಾಲುಗಳಲ್ಲಿ ಉತ್ತಮವಾಗಿದೆ. ಈ ಎಂಪಿವಿಯು 7- ಮತ್ತು 6-ಸೀಟ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ, ಎರಡನೆಯ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳ ಹೆಚ್ಚುವರಿ ಸೌಕರ್ಯಕ್ಕಾಗಿ ಪಡೆಯುತ್ತದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಕಿಯಾ ಕಾರೆನ್ಸ್ ಎಂಪಿವಿಯಲ್ಲಿ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಗಳನ್ನು ಹೊಂದಿವೆ. ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಹೆಚ್ಚು ಮೈಲೇಜ್ ಅನ್ನು ನೀಡುತ್ತದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಈ ಎಂಪಿವಿಯು 540 ಎಂಎಂ ಉದ್ದ, 1800 ಎಂಎಂ ಅಗಲ, 1700 ಎಂಎಂ ಎತ್ತರ, 2780 ಎಂಎಂ ವ್ಹೀಲ್ ಬೆಸ್ ಮತ್ತು 195 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಅನ್ನು ಹೊಂದಿದೆ. ಇದರೊಂದಿಗೆ ಆಕರ್ಷಕವಾದ ಡಿಸೈನ್ ಮತ್ತು ಗುಣಮಟ್ಟದ ಫೀಚರ್ಸ್ ಹೊಂದಿರುವುದು ಗ್ರಾಹಕರ ಆಯ್ಕೆಗೆ ಪ್ರಮುಖ ಆಕರ್ಷಣೆಯಾಗಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಟೊಯೊಟಾ ಇನೋವಾ ಕ್ರಿಸ್ಟಾ

ಟೊಯೊಟಾ ಇನೋವಾ ಕ್ರಿಸ್ಟಾ ಅತ್ಯುತ್ತಮ ಫ್ಯಾಮಿಲಿ ಕಾರುಗಳಲ್ಲಿ ಒಂದಾಗಿದೆ. ಹೆಚ್ಚಿನ ಕುಟುಂಬಗಳ ಮೆಚ್ಚಿನಾ ಆಯ್ಕೆಯ ವಾಹನವಾಗಿದೆ. 2005ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಇನೋವಾ ಕಾರು ಮಾದರಿಯು ಈ ತನಕವು ಎಂಪಿವಿ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಹೊಸ ಕಾರಿನಲ್ಲಿ ಟೊಯೊಟಾ ಕಂಪನಿಯು ಕಾಲ ಕಾಲಕ್ಕೆ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಾ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಹೊಸ ತಲೆಮಾರಿನೊಂದಿಗೆ ಮಾರಾಟವಾಗುತ್ತಿರುವ ಇನೋವಾ ಕ್ರಿಸ್ಟಾ ಎಂಪಿವಿ 2016ರಲ್ಲಿ ನ್ಯೂ ಜನರೇಷನ್ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡಿತ್ತು. 2021ರ ಮಾದರಿಯಾಗಿ ಫೇಸ್‌ಲಿಫ್ಟ್ ಮಾದರಿಯನ್ನು ಬಿಡಗಡೆ ಮಾಡಲಾಗಿತ್ತು. ಅದು ಹಳೆಯ ಆವೃತ್ತಿಗಿಂತಲೂ ಫೇಸ್‌ಲಿಫ್ಟ್ ಮಾದರಿಯು ಸಾಕಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇನ್ನು ಒಟ್ಟಾರೆಯಾಗಿ ಟೊಯೊಟಾ ಕಾರುಗಳು ಮಾರಾಟದಲ್ಲಿ ಕಂಪನಿಗೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಈ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಎಂಪಿವಿಯ 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದೆ. ಹೊಸ ಎಮಿಷನ್ ನಂತರ 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸಿರುವ ಟೊಯೊಟಾ ಕಂಪನಿಯು 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಮಾತ್ರ ಮಾರಾಟ ಮಾಡುತ್ತಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಕಿಯಾ ಕಾರ್ನಿವಲ್

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾದ ಈ ಕಾರ್ನಿವಲ್ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಮೋಟಾರ್ಸ್‌ನ ಎರಡನೇ ಮಾದರಿಯಾಗಿದೆ. ಈ ಕಿಯಾ ಕಾರ್ನಿವಲ್ ಎಂಪಿವಿಯಲ್ಲಿ 8 ಇಂಚಿನ ಇನ್ಫೋಟೈನ್‌ಮೆಂಟ್, ಒಟಿಎ ಮ್ಯಾಪ್ ಅಪ್ ಡೇಟ್, ಯುವಿಒ ಸಪೋರ್ಟ್, ಇಸಿಎಂ ಮಿರರ್, ಹಿಂಭಾಗದ ಪ್ರಯಾಣಿಕರಿಗಾಗಿ ಸಿಂಗಲ್ 10.1 ಇಂಚಿನ ಡಿಸ್‌ಪ್ಲೇ, ಸ್ಮಾರ್ಟ್ ಪ್ಯೂರ್ ಏರ್ ಪ್ಯೂರಿಫೈಯರ್ ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಇದರೊಂದಿಗೆ ಸಂಪೂರ್ಣ ಸುಸಜ್ಜಿತವಾದ ಲಿಮೋಸಿನ್ ಪ್ಲಸ್ ಮಾದರಿಯು ಹರ್ಮನ್ ಕಾರ್ಡನ್ ಪ್ರೀಮಿಯಂ 8 ಸ್ಪೀಕರ್ ಆಡಿಯೋ ಸಿಸ್ಟಂ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 10 ವೇ ಪವರ್ ಡ್ರೈವರ್ ಸೀಟ್, ಡ್ರೈವರ್ ಸೀಟ್ ವೆಂಟಿಲೇಷನ್, ಲೆದರ್ ನಿಂದ ವ್ರಾಪ್ ಮಾಡಲಾದ ಸ್ಟೀಯರಿಂಗ್ ವ್ಹೀಲ್ ಹಾಗೂ ಗೇರ್ ನಾಬ್, ಪ್ರೀಮಿಯಂ ವುಡ್ ಗಾರ್ನಿಷ್, ಡ್ಯುಯಲ್ 10.1 ಇಂಚಿನ ಹಿಂಭಾಗದ ಡಿಸ್ಪ್ಲೇ, ಟಿಪಿಎಂಎಸ್ ಫೀಚರ್ ಗಳನ್ನು ಹೊಂದಿವೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಈ ಕಿಯಾ ಕಾರ್ನಿವಲ್ ಎಂಪಿವಿಯಲ್ಲಿ 2.2 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 197 ಬಿ‌ಹೆಚ್‌ಪಿ ಪವರ್ ಹಾಗೂ 440 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಎಂಟು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್'ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಟೊಯೊಟಾ ವೆಲ್‌ಫೈರ್‌

ಟೊಯೊಟಾ ವೆಲ್‌ಫೈರ್ ಸರಿಯಾದ ಐಷಾರಾಮಿ ಕಾರು, ಇದು ಒಂದೇ ರೂಪಾಂತರದಲ್ಲಿ ಲಭ್ಯವಿದೆ. ಈಟೊಯೊಟಾ ವೆಲ್‌ಫೈರ್‌ ಎಂಪಿವಿಯಲ್ಲಿ 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಜೋಡಿಸಲ್ಪಟ್ಟಿದೆ, ಇದು ಎಂಜಿನ್ ಒಟ್ಟಾಗಿ 198 ಬಿಹೆಚ್‍ಪಿ ಪವರ್ ಮತ್ತು 235 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಈ ವೆಲ್‌ಫೈರ್‌ನ ಒಳಭಾಗದಲ್ಲಿ ಎರಡನೇ ಸಾಲಿನಲ್ಲಿ ಎರಡು ಬೆಲೆಬಾಳುವ ಎಲೆಕ್ಟ್ರಿಕ್ ಆಗಿ ಅಡೆಜೆಸ್ಟ್ ಮಾಡುವ ವಿಐಪಿ ಸೀಟುಗಳನು ಒಳಗೊಂಡಿವೆ. ಇನ್ನು ಇದರಲ್ಲಿ ಕೂಲಿಂಗ್ ಫಂಕ್ಷನ್ ಅನ್ನು ಕೂಡ ಒಳಗೊಂಡಿದೆ. ಜೊತೆಗೆ ಲೆಗ್ ರೆಸ್ಟ್ ಮತ್ತು ರೆಕ್ಲೈನಬಲ್ ಬ್ಯಾಕ್‌ರೆಸ್ಟ್ ಮತ್ತು ಮೆಮೊರಿ ಫಂಕ್ಷನ್ ಅನ್ನು ಒಳಗೊಂಡಿದೆ. ಈ ಐಷಾರಾಮಿ ಎಂಪಿವಿಯಲ್ಲಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ನೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯೊಂದಿಗೆ 13 ಇಂಚಿನ ಹಿಂಭಾಗದ ಡಿಸ್ ಪ್ಲೇಯನ್ನು ರೂಫ್ ಮೇಲೆ ನೀಡಲಾಗಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯುತ್ತಮ ಫ್ಯಾಮಿಲಿ ಕಾರುಗಳಿವು...

ಇದರೊಂದಿಗೆ ಈ ಎಂಪಿವಿಯಲ್ಲಿ ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಂ, ಎರಡನೇ ಮತ್ತು ಮೂರನೇ ಸಾಲುಗಳಿಗೆ ಸನ್ ಬ್ಲೈಂಡ್ಸ್, 16-ಬಣ್ಣದ ಆಂಬಿಯೆಂಟ್ ಲೈಟಿಂಗ್, ಮೂರು ಹಂತಹ ಆಟೋ ಕ್ಲೈಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳುನ್ನು ಒಳಗೊಂಡಿದೆ.

Most Read Articles

Kannada
English summary
Top 5 best family cars in india find here all details
Story first published: Friday, May 13, 2022, 19:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X