ಅಧಿಕ ಮೈಲೇಜ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗಿರುವ ಟಾಪ್ 5 ಸಿಎನ್‌ಜಿ ಕಾರುಗಳು

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯು ಭಾರತದಲ್ಲಿ ಸಿಎನ್‌ಜಿ ಕಾರುಗಳ ಮಾರಾಟದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಹಾಗಾಗಿ ಗ್ರಾಹಕರು ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾರು ತಯಾರಕರು ಕೂಡ ಸಿಎನ್‌ಜಿ ಕಾರು ತಯಾರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಟಾಪ್ 5 ಸಿಎನ್‌ಜಿ ಕಾರುಗಳು

ಸಿಎನ್‌ಜಿ ಪ್ರಯಾಣಿಕ ವಾಹನ ವಿಭಾಗದಲ್ಲಿ ಮಾರುತಿ ಸುಜುಕಿ ಪ್ರಾಬಲ್ಯ ಹೊಂದಿದ್ದರೆ, ಇತರ ಕಾರು ತಯಾರಕರು ಈಗ ಈ ವಿಭಾಗದಲ್ಲಿ ಹಲವಾರು ಮಾದರಿಗಳನ್ನು ಬಿಡುಗಡೆ ಮಾಡಿದ್ದಾರೆ. ಉಳಿದ ಕಂಪನಿಗಳು ಹೆಚ್ಚಿನ ಮಾದರಿಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯಲ್ಲಿದ್ದಾರೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಟಾಪ್ 5 ಸಿಎನ್‌ಜಿ ಕಾರುಗಳು

ಸದ್ಯ ಸಿಎನ್‌ಜಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಪ್ರಸ್ತುತ ಇರುವ ಸಿಎನ್‌ಜಿಗಳಿಗಿಂತಲೂ ಅಪ್‌ಡೇಟೆಡ್ ಆವೃತ್ತಿಗಳನ್ನು ತರಲು ಪ್ರಮುಖ ಕಂಪನಿಗಳು ಸಜ್ಜಾಗುತ್ತಿವೆ. ನಮಗಿರುವ ಮಾಹಿತಿಯಂತೆ 2022ರ ಅಂತ್ಯದೊಳಗೆ ಭಾರತದಲ್ಲಿ ಬಿಡುಗಡೆಯಾಗಲಿರುವ ಟಾಪ್ 5 CNG ಕಾರುಗಳನ್ನು ಈ ಕೆಳಗೆ ಪಟ್ಟಿ ಮಾಡಿದ್ದೇವೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಟಾಪ್ 5 ಸಿಎನ್‌ಜಿ ಕಾರುಗಳು

ಟೊಯೋಟಾ ಗ್ಲಾನ್ಜಾ CNG

ಟೊಯೊಟಾ ಶೀಘ್ರದಲ್ಲೇ ಭಾರತದಲ್ಲಿ ಗ್ಲಾನ್ಜಾ ಫೇಸ್‌ಲಿಫ್ಟ್‌ನ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಸೋರಿಕೆಯಾದ ARAI ದಾಖಲೆಯ ಪ್ರಕಾರ, ಟೊಯೋಟಾ ಗ್ಲ್ಯಾನ್ಜಾ CNG ಅನ್ನು 1.2-ಲೀಟರ್ K-ಸರಣಿ ಡ್ಯುಯಲ್ ಜೆಟ್, ಡ್ಯುಯಲ್ VVT ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುವುದು.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಟಾಪ್ 5 ಸಿಎನ್‌ಜಿ ಕಾರುಗಳು

ಈ ಎಂಜಿನ್ ಪೆಟ್ರೋಲ್ ಮಾದರಿಯಲ್ಲಿ 88.5 bhp ಪವರ್ ಉತ್ಪಾದಿಸುತ್ತದೆ, ಆದರೆ ದ್ವಿ-ಇಂಧನ CNG ಆವೃತ್ತಿಯು 76.4 bhp ಪವರ್ ಉತ್ಪಾದಿಸುತ್ತದೆ. ಜೊತೆಗೆ ಇದು 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾಗುತ್ತದೆ. ಇನ್ನು ಡಿಸೈನ್‌ನಲ್ಲಿ ಯಾವುದೇ ಬದಲಾವಣೆ ಇರದೇ ಮೂಲ ಮಾದರಿಯಂತೆ ಇರಲಿದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಟಾಪ್ 5 ಸಿಎನ್‌ಜಿ ಕಾರುಗಳು

ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ

ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ ಆವೃತ್ತಿಯೊಂದಿಗೆ ಮಾರಾಟವಾಗುವ ಕಂಪನಿಯ ಮೊದಲ ನೆಕ್ಸಾ ಮಾದರಿಯಾಗಿದೆ. ಇದನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಕಂಪನಿ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕಂಪನಿಯು ಇದೇ ವರ್ಷಾಂತ್ಯದೊಳಗೆ ಮಾರುಕಟ್ಟೆಗೆ ತರಬಹುದು.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಟಾಪ್ 5 ಸಿಎನ್‌ಜಿ ಕಾರುಗಳು

ಇದರ ಯಾಂತ್ರಿಕ ವಿವರಗಳ ಬಗ್ಗೆ ಮಾತನಾಡುವುದಾದರೆ, ಇದು ಟೊಯೋಟಾ ಗ್ಲಾನ್ಜಾ ಸಿಎನ್‌ಜಿಗೆ ಹೋಲುತ್ತದೆ. ಬಲೆನೊ ಸಿಎನ್‌ಜಿ 1.2-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿರುತ್ತದೆ. 25 ಕಿ.ಮೀ/ಕೆಜಿಗಿಂತ ಹೆಚ್ಚು ಮೈಲೇಜ್ ನೀಡುವ ಸಾಧ್ಯತೆಯಿದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಟಾಪ್ 5 ಸಿಎನ್‌ಜಿ ಕಾರುಗಳು

ಕಿಯಾ ಸೋನೆಟ್ CNG

ಕಿಯಾ ಇಂಡಿಯಾ ಸೋನೆಟ್ ಸಿಎನ್‌ಜಿಯ ರಸ್ತೆ ಪರೀಕ್ಷೆಯನ್ನು ಪ್ರಾರಂಭಿಸಿದೆ. ಇದು ಈ ವರ್ಷದ ಅಂತ್ಯದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಿಯಾ ಸೋನೆಟ್ CNG ಅನ್ನು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ನೀಡಬಹುದು ಎಂದು ಮೂಲಗಳು ಹೇಳುತ್ತಿವೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಟಾಪ್ 5 ಸಿಎನ್‌ಜಿ ಕಾರುಗಳು

ಇದು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿರುತ್ತದೆ. ಇದರ ಬಿಡುಗಡೆಯೊಂದಿಗೆ ಸೋನೆಟ್ ಕಾರು ಸಿಎನ್‌ಜಿ ಕಿಟ್‌ನೊಂದಿಗೆ ಬರುವ ಭಾರತದ ಮೊದಲ ಕಿಯಾ ಕಾರು ಆಗಬಹುದು. ಈ ಮೂಲಕ ಕಿಯಾ ಇಂಡಿಯಾ ಕೂಡ ಸಿಎನ್‌ಜಿ ವಲಯಕ್ಕೆ ಲಗ್ಗೆಯಿಟ್ಟಂತಾಗುತ್ತದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಟಾಪ್ 5 ಸಿಎನ್‌ಜಿ ಕಾರುಗಳು

ಮಾರುತಿ ಸುಜುಕಿ ಬ್ರೆಝಾ CNG

ತನ್ನ ಹಲವು ಮಾದರಿಗಳನ್ನು ಸಿಎನ್‌ಜಿಗೆ ಪರಿವರ್ತಿಸುತ್ತಿರುವ ಮಾರುತಿ ಸುಜುಕಿ, ಶೀಘ್ರದಲ್ಲೇ ಬ್ರೆಜ್ಜಾದ CNG ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಹೊಸ ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ 1.5-ಲೀಟರ್ ದ್ವಿ-ಇಂಧನ ಪೆಟ್ರೋಲ್ ಎಂಜಿನ್ ಪಡೆಯಲಿದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಟಾಪ್ 5 ಸಿಎನ್‌ಜಿ ಕಾರುಗಳು

ಈ ಕಾರನ್ನು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುವುದು. ಇದು ಮಾರುತಿಯ ಮೊದಲ ಆಟೋಮ್ಯಾಟಿಕ್ ಸಿಎನ್‌ಜಿ ಕಾರು ಆಗಲಿದೆ. ಇದರಲ್ಲಿ ಪ್ರೀಮಿಯಂ ಫೀಚರ್ಸ್ ಕೂಡ ಇರಲಿವೆ ಎಂಬ ಮಾಹಿತಿ ಹರಿದಾಡುತ್ತಿದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಟಾಪ್ 5 ಸಿಎನ್‌ಜಿ ಕಾರುಗಳು

ಕಿಯಾ ಕಾರೆನ್ಸ್ CNG

ಈ ಪಟ್ಟಿಯಲ್ಲಿರುವ ಕೊನೆಯ ಕಾರು ಕಿಯಾ ಕಾರೆನ್ಸ್ ಆಗಿದೆ. ಕಿಯಾ ಸೋನೆಟ್‌ನಂತೆ ಕಾರೆನ್ಸ್ ಸಿಎನ್‌ಜಿ ಕೂಡ ಮೊದಲ ರಸ್ತೆ ಪರೀಕ್ಷೆಯ ಸಮಯದಲ್ಲಿ ಕ್ಯಾಮರಾ ಕಣ್ಣುಗೆ ಬಿದ್ದಿದೆ. ಈ ಕಾರು ಸದ್ಯ ಪರೀಕ್ಷಾ ಹಂತದಲ್ಲಿದ್ದು ಇದರ ಬಗ್ಗೆ ಶೀಘ್ರದಲ್ಲೇ ಕಂಪನಿಯು ಮಾಹಿತಿಯನ್ನು ಹೊರತರಬಹುದು.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಟಾಪ್ 5 ಸಿಎನ್‌ಜಿ ಕಾರುಗಳು

ಕಿಯಾ ಕ್ಯಾರೆನ್ಸ್ ಸಿಎನ್‌ಜಿಯನ್ನು 1.4-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮೋಟಾರ್‌ನೊಂದಿಗೆ ನೀಡಲಾಗುವುದು. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗುವುದು. ಉಳಿದಂತೆ ಮುಲ ಮಾದರಿಯಂತೆ ಡಿಸೈನ್ ಹಾಗೂ ಫೀಚರ್‌ಗಳನ್ನು ಒಳಗೊಂಡು ಬರಲಿದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಟಾಪ್ 5 ಸಿಎನ್‌ಜಿ ಕಾರುಗಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸಿಎನ್‌ಜಿ ವಾಹನಗಳು ಪ್ರಸ್ತುತ ದೇಶದಲ್ಲಿ ಇಂಧನ ವಾಹನಗಳ ಪರ್ಯಾಯವಾಗುತ್ತಿವೆ. ಗ್ರಾಹಕರು ಕೂಡ ಸಿಎನ್‌ಜಿ ವಾಹನಗಳಿಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿರುವುದರಿಂದ ಪ್ರತಿ ವಾಹನ ತಯಾರಕರು ಕೂಡ ಸಿಎನ್‌ಜಿ ಆವೃತ್ತಿಗಳಿಗೆ ತಮ್ಮ ಮಾದರಿಗಳನ್ನು ಪರಿವರ್ತಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೇಲೆ ತಿಳಿಸಿರುವ ಎಲ್ಲಾ ವಾಹನಗಳು ಸಿಎನ್‌ಜಿ ಹೆಸರಿನೊಂದಿಗೆ ಮಾರುಕಟ್ಟೆಗೆ ಶೀಘ್ರದಲ್ಲೇ ಲಗ್ಗೆಯಿಡಲಿವೆ.

Article Published On: Friday, October 28, 2022, 15:43 [IST]
English summary
Top 5 cng cars all set to hit the market soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+