Just In
- 23 min ago
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
- 2 hrs ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 2 hrs ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 2 hrs ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
Don't Miss!
- Sports
ಟೆಸ್ಟ್ ಮಾದರಿಗೆ ಕಮ್ಬ್ಯಾಕ್ ಮಾಡುವ ಬಗ್ಗೆ ಹಾರ್ದಿಕ್ ಪಾಂಡ್ಯ ಕುತೂಹಲಕಾರಿ ಪ್ರತಿಕ್ರಿಯೆ
- News
ಶ್ರೀರಾಮುಲು-ಸಂತೋಷ್ ಲಾಡ್ ಆಲಿಂಗನ: ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯನ್ನು ಹಣಿಯಲು ಹೊಸ ತಂತ್ರ?
- Technology
ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
- Finance
Union Budget: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿ ಏರಿಕೆ
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Movies
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ 10 ಲಕ್ಷದೊಳಗಿನ ಟಾಪ್ 5 ವೇಗದ SUVಗಳು: ಪರ್ಫಾಮೆನ್ಸ್‌ನಲ್ಲಿ ಒಂದಕ್ಕೊಂದು ಪೈಪೋಟಿ
ಕಾಂಪ್ಯಾಕ್ಟ್ ಮತ್ತು ಸಬ್-ಕಾಂಪ್ಯಾಕ್ಟ್ ಎಸ್‌ಯುವಿಗಳು ಓಡಿಸಲು ಮೋಜು, ಸ್ಪೋರ್ಟಿ ಅನುಭವ ನೀಡುವುದಿಲ್ಲ ಎಂದು ನೀವು ಭಾವಿಸಿದ್ದರೆ ಖಂಡಿತ ಏಳೆಂಟು ವರ್ಷಗಳ ಹಿಂದಿದ್ದೀರಾ ಅಂತಲೇ ಅರ್ಥ. ಕೆಲವು ವರ್ಷಗಳ ಹಿಂದೆ ಈ ವಿಭಾಗವು 10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಡೀಸೆಲ್ ಎಸ್‌ಯುವಿಗಳಿಂದ ಪ್ರಾಬಲ್ಯ ಹೊಂದಿದ್ದವು. ಆದರೆ ಈಗ ಎಲ್ಲವೂ ಬದಲಾಗಿವೆ.

ಪ್ರಸ್ತುತ ಸನ್ನಿವೇಶವು ಸಂಪೂರ್ಣವಾಗಿ ವಿಭಿನ್ನವಾಗಿದೆ, ಕಾರು ಉತ್ಸಾಹಿಗಳಿಗೆ ಅನುಗುಣವಾಗಿ ತಯಾರಕರು ಸ್ಪೋರ್ಟಿಯಾಗಿ ಕಾರುಗಳನ್ನು ನಿರ್ಮಿಸುತ್ತಿದ್ದಾರೆ. ಜೊತೆಗೆ ಕಳೆದ ದಶಕದ ದ್ವಿತೀಯಾರ್ಧವು ಪರಿಸರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ವಾಯು ಮಾಲಿನ್ಯ, AQI ಸೂಚಿಕೆ, PM2.5, ವಾಹನ ಮಾಲಿನ್ಯ ನಿಯಂತ್ರಣಕ್ಕಾಗಿ ಹಲವು ಹೊಸ ಎಂಜಿನ್‌ಗಳನ್ನು ತರಲಾಗಿದೆ.

2020 ರಲ್ಲಿ ಕೋವಿಡ್ ಪ್ರಾರಂಭವಾದ ನಂತರ ಭಾರತದಲ್ಲಿ BS6 ಹೊರಸೂಸುವಿಕೆಯ ಮಾನದಂಡಗಳನ್ನು ಜಾರಿಗೆ ತರಲಾಯಿತು. ಈಗ ಡೀಸೆಲ್ ಎಂಜಿನ್‌ಗಳನ್ನು ಹೊರತೆಗೆಯಲಾಗುತ್ತಿದೆ. ಆಧುನಿಕ ನೀತಿಗಳು ಮತ್ತು ಚಲನಶೀಲತೆಯ ಅಗತ್ಯತೆಗಳೊಂದಿಗೆ ಅವು ಅತ್ಯಂತ ಪ್ರಾಯೋಗಿಕ ಆಯ್ಕೆಯಾಗಿಲ್ಲ, ಹಾಗಾಗಿ ಮಾರುಕಟ್ಟೆಯು ಪೆಟ್ರೋಲ್ ಆಯ್ಕೆಯತ್ತ ತಿರುಗಿದೆ.

ಆದ್ದರಿಂದ ಇಲ್ಲಿ ನಾವು ಅತಿ ಕಡಿಮೆ ಸಮಯದಲ್ಲಿ 100 ಕಿ.ಮೀ ವೇಗವನ್ನು ತಲುಪುವ ಟಾಪ್ 5 ವೇಗದ ಪೆಟ್ರೋಲ್ ಎಂಜಿನ್ ಹೊಂದಿರುವ SUV ಗಳ ಮೇಲೆ ಕೇಂದ್ರೀಕರಿಸಿದ್ದು, ಇವೆಲ್ಲವು 10 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿವೆ.

ರೆನಾಲ್ಟ್ ಕಿಗರ್ ಟರ್ಬೊ - 10.20 ಸೆಕೆಂಡ್‌ಗಳು
ರೆನಾಲ್ಟ್ ಕಂಪನಿಯು ತಮ್ಮ ಡಸ್ಟರ್‌ನೊಂದಿಗೆ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದ ಯುಟಿಲಿಟಿ ಭಾಗದಲ್ಲಿ ಭಾರೀ ಪೈಪೋಟಿ ನೀಡಿತ್ತು. ಹಾಗೆಯೇ ಅವರು ತಮ್ಮ ಕ್ವಿಡ್‌ನೊಂದಿಗೆ ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್ ವಿಭಾಗದ ಮೇಲೂ ಪ್ರಭಾವ ಬೀರಿದರು. ತಮ್ಮ ಸಬ್-ಕಾಂಪ್ಯಾಕ್ಟ್ ಮಾದರಿಯಾದ ಕಿಗರ್ ಅನ್ನು ಸ್ಪೋರ್ಟಿಯಾಗಿ ನೀಡಲಾಗಿದೆ.

Renault Kiger turbo 8.92 ಲಕ್ಷದ ಎಕ್ಸ್ ಶೋರೂಂ ಬೆಲೆಯಿಂದ ಪ್ರಾರಂಭವಾಗುತ್ತದೆ. ಇದು 1.0 L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. 98.6 bhp ಮತ್ತು 160 nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದು ಕೇವಲ 10.20 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ತಲುಪುತ್ತದೆ.

ನಿಸ್ಸಾನ್ ಮ್ಯಾಗ್ನೈಟ್ ಟರ್ಬೊ - 10.30 ಸೆಕೆಂಡ್‌ಗಳು
ನಿಸ್ಸಾನ್ ಅತ್ಯುತ್ತಮ ಜಪಾನೀಸ್ ವಾಹನ ತಯಾರಕರಲ್ಲಿ ಒಂದಾಗಿದೆ. ನಿಸ್ಸಾನ್ ಮ್ಯಾಗ್ನೈಟ್‌ನ ಟರ್ಬೋಚಾರ್ಜ್ಡ್ ಆವೃತ್ತಿಯು ರೂ. 8.01 ಲಕ್ಷದ ಎಕ್ಸ್ ಶೋ ರೂಂ ಬೆಲೆಯಿಂದ ಪ್ರಾರಂಭವಾಗುತ್ತದೆ. ನೀವು 10 ಲಕ್ಷದೊಳಗೆ ಖರೀದಿಸಬಹುದಾದ ಅತ್ಯಂತ ಮೋಜಿನ ಎಸ್‌ಯುವಿ ಇದಾಗಿದೆ.

ಇದು 98.6 bhp ಮತ್ತು 160 nm ಟಾರ್ಕ್ ಅನ್ನು ಉತ್ಪಾದಿಸುವ 1.0L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಕೇವಲ 10.30 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ತಲುಪುತ್ತದೆ.

ಹುಂಡೈ ವೆನ್ಯೂ ಟರ್ಬೊ ಪೆಟ್ರೋಲ್ - 10.70 ಸೆಕೆಂಡ್‌ಗಳು
ಹ್ಯುಂಡೈ ಕಂಪನಿಯು ಇದೀಗ ಕೆಲವು ತ್ವರಿತ ಕಾರುಗಳನ್ನು ಪರಿಚಯಿಸಿದೆ. ಭಾರತದಲ್ಲಿ ತನ್ನ N-ಲೈನ್ ಅನ್ನು ಸಹ ಪರಿಚಯಿಸಿದೆ. ಎನ್-ಲೈನ್ ಕಂಪನಿಯ ಪರ್ಫಾಮೆನ್ಸ್ ವಿಭಾಗವಾಗಿದೆ. ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ವೆನ್ಯೂದ ಟರ್ಬೋಚಾರ್ಜ್ಡ್ ಪೆಟ್ರೋಲ್ ಆವೃತ್ತಿಯ ಬೆಲೆಯು ರೂ 10.00 ಲಕ್ಷದಿಂದ ಪ್ರಾರಂಭವಾಗುತ್ತದೆ.

ಇದು 118.3 bhp ಮತ್ತು 172 nm ಟಾರ್ಕ್ ಅನ್ನು ಹೊರಹಾಕುವ 1.0 L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಕೇವಲ 10.70 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ತಲುಪುತ್ತದೆ.

ಟಾಟಾ ನೆಕ್ಸಾನ್ ಪೆಟ್ರೋಲ್ - 11.64 ಸೆಕೆಂಡ್‌ಗಳು
ಟಾಟಾ ಮೋಟಾರ್ಸ್ ನೆಕ್ಸಾನ್ ಅನ್ನು ಪೆಟ್ರೋಲ್, ಡೀಸೆಲ್ ಮತ್ತು ಎರಡು ಟ್ಯೂನ್ ಇವಿ ಪವರ್‌ಟ್ರೇನ್‌ಗಳಲ್ಲಿ ನೀಡುತ್ತಿದೆ. ಇದು ಸುರಕ್ಷಿತ ಕಾರು, ಹೆಚ್ಚು ಇಂಧನ ದಕ್ಷತೆಯ ಕಾರು ಮತ್ತು ವೇಗದ ಕಾರುಗಳ ಪಟ್ಟಿಯಲ್ಲೂ ತನ್ನನ್ನು ಗುರ್ತಿಸಿಕೊಂಡಿದೆ. ಇದು ದೇಶದಲ್ಲಿ ಹೆಚ್ಚು ಮಾರಾಟವಾಗುವ SUV ಗಳಲ್ಲಿ ಒಂದಾಗಿದೆ.

ಇತ್ತೀಚಿಗೆ ಇದು 4 ಲಕ್ಷ ಯುನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ತಲುಪಿದ ಅತ್ಯಂತ ವೇಗದ ಕಾರಾಗಿದೆ. ನೆಕ್ಸಾನ್‌ನ ಪೆಟ್ರೋಲ್ ಆವೃತ್ತಿಯು ರೂ. 7.60 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದು 1.2L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 118.3 bhp ಮತ್ತು 170 nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದು ಕೇವಲ 11.64 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ತಲುಪುತ್ತದೆ.

ಟೊಯೋಟಾ ಅರ್ಬನ್ ಕ್ರೂಸರ್ - 12.10 ಸೆಕೆಂಡ್‌ಗಳು
ಟೊಯೊಟಾ ಅರ್ಬನ್ ಕ್ರೂಸರ್ ಮಾರುತಿ ಸುಜುಕಿ ಬ್ರೆಝಾವನ್ನು ಹೋಲುತ್ತದೆ. ಆದರೆ ಬ್ರೆಝಾಗೆ ಹೋಲಿಸಿದರೆ ಇದು ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುತ್ತದೆ. ಅರ್ಬನ್ ಕ್ರೂಸರ್ 103.29 bhp ಮತ್ತು 138 nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಆದರೆ ಬ್ರೆಝಾ 101.64 bhp ಮತ್ತು 136.8 nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅರ್ಬನ್ ಕ್ರೂಸರ್ ಕೇವಲ 12.10 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ತಲುಪುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ರೆನಾಲ್ಟ್ ಕಿಗರ್ ಟರ್ಬೊ, ನಿಸ್ಸಾನ್ ಮ್ಯಾಗ್ನೈಟ್ ಟರ್ಬೊ, ಹ್ಯುಂಡೈ ವೆನ್ಯೂ ಟರ್ಬೊ, ಟಾಟಾ ನೆಕ್ಸಾನ್ ಪೆಟ್ರೋಲ್ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಈ ಎಲ್ಲವೂ 10 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿರುವ ಕಾರುಗಳಾಗಿವೆ. ಅಲ್ಲದೇ 100 ಕಿ.ಮೀ ವೇಗವನ್ನು ಕಡಿಮೆ ಸಮಯದಲ್ಲಿ ತಲುಪಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಅವಕಾಶ ಸಿಕ್ಕರೆ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.