ಮಾರುತಿ ಗ್ರ್ಯಾಂಡ್ ವಿಟಾರಾವನ್ನು ಸುಲಭವಾಗಿ ಸೆಡ್ಡುಹೊಡೆಯುವ ಕಿಯಾ ಸೆಲ್ಟೋಸ್‌ನ ಟಾಪ್ 5 ಫೀಚರ್ಸ್

C-ಸೆಗ್ಮೆಂಟ್ SUV ವಿಭಾಗವು ಭಾರತದಲ್ಲಿ ಕಾರು ತಯಾರಕರಿಗೆ ಚಿನ್ನದ ಗಣಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ವಿಭಾಗವು ಹ್ಯುಂಡೈ ಕ್ರೆಟಾದಿಂದ ಪ್ರಾಬಲ್ಯ ಸಾಧಿಸಿದ್ದು, ಇದರ ಸಹೋದರ ಕಾರೆಂದು ಕರೆಯಲಾಗುವ ಸೆಲ್ಟೋಸ್ ಬಹುತೇಕ ಕ್ರೆಟಾವನ್ನು ಅನುಸರಿಸುತ್ತದೆ. ಇನ್ನು ಮಾರುತಿಯು ಹೊಸ ಗ್ರ್ಯಾಂಡ್ ವಿಟಾರಾದೊಂದಿಗೆ ಹುಂಡೈ ಹಾಗೂ ಕಿಯಾ ಕಾರುಗಳನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದೆ.

ಸದ್ಯದ ಪರಿಸ್ಥಿತಿಗಳಲ್ಲಿ ಹ್ಯುಂಡೈ ಕ್ರೆಟಾವನ್ನು ಹಿಂದಿಕ್ಕುವುದು ಸುಲಭದ ಕೆಲಸವಲ್ಲ. ಏಕೆಂದರೆ ಗ್ರಾಹಕರಲ್ಲಿ ಕ್ರೆಟಾ ಮಾದರಿಯು ವಿನ್ಯಾಸ, ವೈಶಿಷ್ಟ್ಯ, ಪರ್ಫಾಮೆನ್ಸ್ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೂ ಮಾರುತಿ ಗ್ರ್ಯಾಂಡ್ ವಿಟಾರಾ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಆದರೆ ಇದನ್ನು ಕಿಯಾ ಸೆಲ್ಟೋಸ್‌ಗೆ ಹೋಲಿಸಿಕೊಂಡರೆ ಗ್ರಾಂಡ್ ವಿಟಾರಾ ಕೆಲವು ವೈಶಿಷ್ಟ್ಯಗಳಲ್ಲಿ ಹಿಂದಿದೆ. ಈ ಲೇಖನದಲ್ಲಿ ಕಿಯಾ ಸೆಲ್ಟೋಸ್ ವಿರುದ್ಧ ಗ್ರ್ಯಾಂಡ್ ವಿಟಾರಾವನ್ನು ಹೋಲಿಕೆ ಮಾಡಿ ನೋಡೋಣ.

ಬ್ಲೈಂಡ್ ಸ್ಪಾಟ್ ಮಾನಿಟರ್
ಕಿಯಾ ಸೆಲ್ಟೋಸ್ ಬ್ಲೈಂಡ್ ಸ್ಪಾಟ್ ಮಾನಿಟರ್‌ನೊಂದಿಗೆ ಬರುತ್ತದೆ, ಇದು ಇಂಡಿಕೇಟರ್‌ಗಳನ್ನು ಬಳಸಿದಾಗ ಸಕ್ರಿಯಗೊಳಿಸುತ್ತದೆ. ಅಲ್ಲದೇ ಡ್ರೈವರ್‌ಗೆ ಎಚ್ಚರಿಕೆ ನೀಡುವ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಬ್ಲೈಂಡ್ ಸ್ಪಾಟ್ ಅನ್ನು ಪ್ರದರ್ಶಿಸುತ್ತದೆ. ನಗರದ ಟ್ರಾಫಿಕ್‌ನಲ್ಲಿ ಮತ್ತು ಹೆದ್ದಾರಿಯಲ್ಲಿ ಲೇನ್‌ಗಳನ್ನು ಬದಲಾಯಿಸುವಾಗ ಈ ವೈಶಿಷ್ಟ್ಯವು ತುಂಬಾ ಅನುಕೂಲಕರವಾಗಿದೆ. ಇದು ಕಿಯಾ ಸೆಲ್ಟೋಸ್ ಗ್ರಾಹಕರಿಗೆ ಕಂಪನಿ ನೀಡುತ್ತಿರವ ಪ್ರಮಾಣಿತ ವೈಶಿಷ್ಟ್ಯವಾಗಿದ್ದು, ಸದ್ಯ ಸಿ ಸೆಗ್ಮೆಂಟ್ ವಿಭಾಗದ ಕಾರುಗಳಲ್ಲಿ ವಿರಳವಾಗಿ ಕಾಣುತ್ತದೆ.

ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು
ಸೆಲ್ಟೋಸ್ 360 ಡಿಗ್ರಿ ಕ್ಯಾಮೆರಾದೊಂದಿಗೆ ಬರುತ್ತದೆ, ಇದು ಗ್ರ್ಯಾಂಡ್ ವಿಟಾರಾದಲ್ಲಿಯೂ ಇದೆ. ಆದರೇ ಸೆಲ್ಟೋಸ್ 360 ಡಿಗ್ರಿ ಕ್ಯಾಮೆರಾ ಜೊತೆಗೆ ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳೊಂದಿಗೆ ಬರುತ್ತದೆ. ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಬಿಗಿಯಾದ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವಾಗ ದೂರವನ್ನು ಅಳೆಯಲು ಸುಲಭವಾಗಿಸುತ್ತದೆ. ಇತ್ತೀಚಿನ ನಗರ ಪ್ರದೇಶಗಳಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಸ್ವಲ್ಪ ಯಾಮಾರಿದರೂ ಪಕ್ಕದ ವಾಹನಕ್ಕೆ ಡೆಂಟ್ ಆಗುವುದು ಖಚಿತ. ಇಂತಹ ಸಂದರ್ಭಗಳಲ್ಲಿ ಕ್ಯಾಮರಾದೊಂದಿಗೆ ಸೆನ್ಸಾರ್‌ಗಳು ಬಹಳ ಮುಖ್ಯ.

ರೈನ್-ಸೆನ್ಸಾರ್ ವೈಪರ್‌ಗಳು
ಗ್ರ್ಯಾಂಡ್ ವಿಟಾರಾ ಸ್ವಯಂಚಾಲಿತ ಹೆಡ್‌ಲ್ಯಾಂಪ್‌ಗಳೊಂದಿಗೆ ಬರುತ್ತದೆ. ಆದರೆ ಆಟೋ ಹೆಡ್‌ಲ್ಯಾಂಪ್‌ಗಳು ಮತ್ತು ಆಟೋ ವೈಪರ್‌ಗಳನ್ನು ನೀಡುವ ಮೂಲಕ ಕಿಯಾ ಒಂದು ಹೆಜ್ಜೆ ಮುಂದೆ ಹೋಗಿದೆ. ಸ್ವಯಂಚಾಲಿತ ವೈಪರ್‌ಗಳು ವಿಂಡ್‌ಶೀಲ್ಡ್‌ನಲ್ಲಿ ನೀರನ್ನು ಗ್ರಹಿಸಿ ಅದನ್ನು ಸ್ವಯಂಚಾಲಿತವಾಗಿ ಆನ್ ಮಾಡುವ ಆಯ್ಕೆ ನೀಡುತ್ತದೆ. ಅವು ಮಳೆಯ ತೀವ್ರತೆಗೆ ಅನುಗುಣವಾಗಿ ವೈಪರ್‌ನ ವೇಗವನ್ನು ಸರಿಹೊಂದಿಸುತ್ತವೆ. ಇದರಿಂದ ಮಳೆ ಬಿದ್ದಾಗ ಪದೇ ಪದೆ ನಾವು ಮ್ಯಾನುವಲ್ ಆಗಿ ವೈಪರ್ ಬಳಸುವುದನ್ನು ತಪ್ಪಿಸುತ್ತದೆ.

ಪವರ್-ಅಡ್ಜಸ್ಟಬಲ್ ಸೀಟ್ಸ್
ಸೆಲ್ಟೋಸ್‌ನ ಕ್ಯಾಬಿನ್ ಅನ್ನು ತನ್ನ ಪ್ರಯಾಣಿಕರಿಗೆ ಸಾಧ್ಯವಾದಷ್ಟು ಅನುಕೂಲಕರವಾಗಿಸಲು ಕಿಯಾ ಪ್ರಯತ್ನಿಸಿದೆ. ಸೆಲ್ಟೋಸ್ ಚಾಲಕನ ಬದಿಯಲ್ಲಿ 8-ವೇ ಪವರ್-ಅಡ್ಜಸ್ಟನಲ್ ಸೀಟ್‌ಗಳೊಂದಿಗೆ ಬರುತ್ತದೆ. ಮತ್ತೊಂದೆಡೆ, ಗ್ರ್ಯಾಂಡ್ ವಿಟಾರಾ ಮ್ಯಾನುವಲ್ ಹೊಂದಾಣಿಕೆಯೊಂದಿಗೆ ಹೊಂದಾಣಿಕೆ ಮಾಡಬಹುದಾದ ಅಂಡರ್-ಥೈಸ್ ಬೆಂಬಲವಿಲ್ಲದೆ ಬರುತ್ತದೆ. ಈ ಮೂಲಕ ಸೆಲ್ಟೋಸ್ ಪವರ್ ಸೀಟಿಂಗ್ ವಿಷಯದಲ್ಲಿ ಗ್ರಾಂಡ್ ವಿಟಾರವನ್ನು ಹಿಂದಿಕ್ಕಿದ್ದು, ಸಿ ಸೆಗ್ಮೆಂಟ್‌ನಲ್ಲಿ ಮಾರುತಿ ವಿಟಾರಾಗೆ ಪೈಪೋಟಿ ನೀಡುವಲ್ಲಿ ಗಟ್ಟಿಯಾಗಿ ನಿಂತಿದೆ.

ಹಿಂಭಾಗದ ಸನ್ ಶೇಡ್ಸ್
ಕಿಯಾ ಸೆಲ್ಟೋಸ್ ಅದರ ಹೆಚ್ಚಿನ ರೂಪಾಂತರಗಳಲ್ಲಿ ಹಿಂಭಾಗದ ಸೂರ್ಯನ ಛಾಯೆಗಳೊಂದಿಗೆ (ಸನ್ ಶೇಡ್ಸ್) ಬರುತ್ತದೆ. ನಮ್ಮ ದೇಶದ ಬಿಸಿ ವಾತಾವರಣದಲ್ಲಿ ಇದು ನಿಫ್ಟಿ ವೈಶಿಷ್ಟ್ಯವಾಗಿದೆ. ಹಿಂಬದಿಯ ಸೂರ್ಯನ ನೆರಳು ಸುಲಭವಾಗಿ ಆಫ್ಟರ್‌ಮಾರ್ಕೆಟ್ ಫಿಟ್‌ಮೆಂಟ್‌ನಂತೆ ಹೊಂದಿಕೆಯಾಗಬಹುದಾದರೂ, ಕಾರ್ಖಾನೆಯಿಂದ ಅವುಗಳನ್ನು ಹೊಂದುವುದು ಹೆಚ್ಚುವರಿ ಅನುಕೂಲವಾಗಿದೆ. ಇದು ಸಮಾನ್ಯವಾಗಿ ಆಫ್ಟರ್ ಮಾರ್ಕೆಟ್‌ಗಿಂತ ಕಂಪನಿಯಿಂದ ಸಿಗುವ ಫೀರ್‌ಗಳು ಬಹಳ ಪ್ರಮಾಣಿತವಾಗಿರುತ್ತವೆ ಎಂಬುದು ಗ್ರಾಹಕರ ನಂಬಿಕೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ. ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Top 5 features of kia seltos to rival maruti grand vitara
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X