ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!

ಹೊಸ ಕಾರುಗಳ ಖರೀದಿಯ ವೇಳೆ ಗ್ರಾಹಕರು ಇತ್ತೀಚೆಗೆ ಸುರಕ್ಷಿತ ಮಾದರಿಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದು ಹಲವಾರು ಬದಲಾವಣೆಗಳಿಗೆ ಕಾರಣವಾಗಿದ್ದು, ಇತ್ತೀಚೆಗೆ ಬಿಡುಗಡೆಗೊಂಡ ಹಲವು ಹೊಸ ಕಾರು ಮಾದರಿಗಳು ಎಡಿಎಎಸ್ ಸೇರಿದಂತೆ ಹಲವಾರು ಸುಧಾರಿತ ಸುರಕ್ಷಾ ತಂತ್ರಜ್ಞಾನ ಜೋಡಣೆ ಪಡೆದುಕೊಂಡಿವೆ.

ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!

ಆಧುನಿಕ ಕಾಲಘಟ್ಟದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗುತ್ತಿದ್ದು, ಇದರ ಭಾಗವಾಗಿ ಕಾರುಗಳ ಸುರಕ್ಷತಾ ಗುಣಮಟ್ಟವು ಸಾಕಷ್ಟು ಸುಧಾರಿಸಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ಪ್ರಯಾಣಿಕ ಕಾರುಗಳಲ್ಲಿ ಹಲವಾರು ಸುರಕ್ಷಾ ಮಾನದಂಡಗಳನ್ನು ಕಡ್ಡಾಯಗೊಳಿಸಲಾಗಿದ್ದು, ಭಾರತದಲ್ಲಿ ಬಿಡುಗಡೆಯಾಗುವ ಹೊಸ ಕಾರುಗಳಲ್ಲಿ ಗರಿಷ್ಠ ಸುರಕ್ಷತೆಗಾಗಿ ಅಂತರ್‌ರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!

ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆ ಆಧಾರದ ಮೇಲೆ ಅತ್ಯುತ್ತಮ ಸುರಕ್ಷಾ ಫೀಚರ್ಸ್ ಹೊಂದಿರುವ ಹಲವಾರು ಪ್ರಯಾಣಿಕ ಬಳಕೆಯ ಕಾರು ಖರೀದಿ ಲಭ್ಯವಿದ್ದರೂ ಎಂಟ್ರಿ ಲೆವಲ್ ಮತ್ತು ಮಧ್ಯಮ ಗಾತ್ರದ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.

ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!

ಅದೇ ರೀತಿ ಪ್ರಮುಖ ಪ್ರಯಾಣಿಕರ ಕಾರು ಮಾರಾಟ ಕಂಪನಿಗಳು ಅಂತರ್‌ರಾಷ್ಟ್ರೀಯ ಗುಣಮಟ್ಟದ ಕಾರು ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದು, ಇತ್ತೀಚೆಗೆ ಮಾರುಕಟ್ಟೆಗೆ ಪ್ರವೇಶಿಸಿದ ಹೊಸ ಕಾರುಗಳಲ್ಲಿ ಎಡಿಎಎಸ್(ಅಡ್ವಾನ್ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಂ) ಸೌಲಭ್ಯವು ಸಾಕಷ್ಟು ಜನಪ್ರಿಯ ಹೊಂದುತ್ತಿದೆ.

ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!

ಅಡ್ವಾನ್ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಂ ಸೌಲಭ್ಯವು ಕೆಲವೇ ಕೆಲವು ಕಾರು ಮಾದರಿಗಳಲ್ಲಿ ಆಯ್ಕೆ ರೂಪದಲ್ಲಿ ನೀಡಲಾಗುತ್ತಿದ್ದರೂ ಮುಂಬರುವ ದಿನಗಳಲ್ಲಿ ಹಲವು ಹೊಸ ಕಾರುಗಳಲ್ಲಿ ಇದು ವ್ಯಾಪಕವಾಗಿ ಬಳಕೆಯಾಗಲಿದ್ದು, ಅಡ್ವಾನ್ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಂ ಸೌಲಭ್ಯದೊಂದಿಗೆ ಸದ್ಯ ಖರೀದಿಗೆ ಲಭ್ಯವಿರುವ ಕಾರು ಮಾದರಿಗಳ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!

ಎಂಜಿ ಆಸ್ಟರ್

ಎಂಜಿ ಮೋಟಾರ್ ಕಂಪನಿಯು ಹೊಸ ಆಸ್ಟರ್ ಕಾರ್ ಮಾದರಿಯಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಎಡಿಎಎಸ್ ತಂತ್ರಜ್ಞಾನವನ್ನು ಜೋಡಣೆ ಮಾಡಿದ ಖ್ಯಾತಿ ಹೊಂದಿದ್ದು, ಹೊಸ ತಂತ್ರಜ್ಞಾನ ಸೌಲಭ್ಯವನ್ನು ಕಂಪನಿಯು ಟಾಪ್-ಎಂಡ್ ರೂಪಾಂತವಾದ ಶಾರ್ಪ್ ಆಪ್ಷನ್‌ನಲ್ಲಿ ಮಾತ್ರ ನೀಡಲಾಗಿದೆ. ಇದು ಎಕ್ಸ್‌ಶೋರೂಂ ಪ್ರಕಾರ ರೂ. 16.50 ಲಕ್ಷ ಬೆಲೆ ಹೊಂದಿದ್ದು, ಲೆವಲ್ 2 ಎಡಿಎಎಸ್ ಸೌಲಭ್ಯವು 27 ಸೇಫ್ಟಿ ಫೀಚರ್ಸ್‌ಗಳೊಂದಿಗೆ ಕಾರು ಚಾಲನೆ ವೇಳೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!

ಎಡಿಎಎಸ್ ಸೌಲಭ್ಯದಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವಡ್ ಕೂಲಿಷನ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ಲೈನ್ ಡಿಫಾರ್ಚರ್ ಪ್ರಿವೆಷನ್, ಸ್ಪೀಡ್ ವಾರ್ನಿಂಗ್, ಇಂಟೆಲಿಜೆಂಟ್ ಮೋಡ್ ಹೊಂದಿರುವ ಸ್ಪಿಡ್ ಅಸಿಸ್ಟ್ ಸಿಸ್ಟಂ, ಮ್ಯಾನುವಲ್ ಮೋಡ್ ಹೊಂದಿರುವ ಸ್ಪೀಡ್ ಅಸಿಸ್ಟ್ ಸಿಸ್ಟಂ, ರಿಯರ್ ಡ್ರೈವ್ ಅಸಿಸ್ಟ್, ಲೈನ್ ಚೆಂಜ್ ಅಲರ್ಟ್, ಕ್ರಾಸ್ ಟ್ರಾಫಿಕ್ ಅಲರ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಇಂಟೆಲಿಜೆಂಟ್ ಹೆಡ್‌ಲ್ಯಾಂಪ್ ಲೈಟಿಂಗ್ಸ್ ಕಂಟ್ರೋಲ್‌ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿವೆ.

ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!

ಮಹೀಂದ್ರಾ ಎಕ್ಸ್‌ಯುವಿ700

ಎಕ್ಸ್700 ಎಸ್‌ಯುವಿನಲ್ಲಿ ಮಹೀಂದ್ರಾ ಕಂಪನಿಯು ಎಡಿಎಎಸ್ ತಂತ್ರಜ್ಞಾನವನ್ನು ಜೋಡಣೆ ಮಾಡುತ್ತಿದ್ದು, ಈ ಹೊಸ ವೈಶಿಷ್ಟ್ಯವನ್ನು ಒದಗಿಸುವ ಕಂಪನಿಯ ಮೊದಲ ಕಾರು ಮಾದರಿ ಇದಾಗಿದೆ. ಮಹೀಂದ್ರಾ ಹೊಸ ತಂತ್ರಜ್ಞಾನವನ್ನು ಉನ್ನತ-ಮಟ್ಟದ ರೂಪಾಂತರವಾದ ಎಎಕ್ಸ್7 ನಲ್ಲಿ ಮಾತ್ರ ನೀಡಲಾಗುತ್ತಿದ್ದು, ಈ ರೂಪಾಂತರವು ದೆಹಲಿ ಎಕ್ಸ್‌ಶೋರೂಂ ರೂ. 19.20 ಲಕ್ಷ ಬೆಲೆ ಹೊಂದಿದೆ.

ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!

ಹೊಸ ಎಕ್ಸ್‌ಯುವಿ700 ನಲ್ಲಿರುವ ಲೆವಲ್ 2 ಎಡಿಎಎಸ್‌ನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಡಿಪಾರ್ಚರ್ ವಾರ್ನಿಂಗ್, ಲೇನ್ ಕೀಪ್ ಅಸಿಸ್ಟ್, ಫಾರ್ವರ್ಡ್ ಕೂಲಿಷನ್ ವಾರ್ನಿಂಗ್, ಹೈ ಬೀಮ್ ಅಸಿಸ್ಟ್ ಮತ್ತು ಟ್ರಾಫಿಕ್ ಸಿಗ್ನಲ್ ರೆಕಗ್ನಿಷನ್ ವೈಶಿಷ್ಟ್ಯಗಳು ಪ್ರಮುಖವಾಗಿವೆ.

ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!

ಹೋಂಡಾ ಸಿಟಿ ಹೈಬ್ರಿಡ್

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಹೊಸ ಸಿಟಿ ಹೈಬ್ರಿಡ್ ಕಾರು ಮಾದರಿಯನ್ನು ಹೆಚ್ಚು ತಾಂತ್ರಿಕವಾಗಿ ಮುಂದುವರಿದ ಕಾರು ಮಾದರಿಯಾಗಿ ಬಿಡುಗಡೆ ಮಾಡಿತು. ಹೈಬ್ರಿಡ್ ಮತ್ತು ಎಡಿಎಸ್ಎ ವೈಶಿಷ್ಟ್ಯಗಳ ಹೊಂದಿರುವ ಸಿಟಿ ಹೊಸ ಕಾರು ಮಾದರಿಯು ಒಂದೇ ವೆರಿಯೆಂಟ್ ಹೊಂದಿದ್ದು, ಇದು ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!

ಎಡಿಎಎಸ್ ವೈಶಿಷ್ಟ್ಯದ ಮೂಲಕ ಸಿಟಿ ಹೈಬ್ರಿಡ್‌‌ನಲ್ಲಿ ಲೇನ್ ಕೀಪ್ ಅಸಿಸ್ಟ್, ಎಮರ್ಜೆನ್ಸಿ ಬ್ರೇಕಿಂಗ್, ರೋಡ್ ಡಿಪಾರ್ಚರ್ ಮಿಟಿಗೇಷನ್ ಸಿಸ್ಟಮ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಹೈ ಬೀಮ್ ಲಭ್ಯವಿದ್ದು, ಆದಾಗ್ಯೂ ಹೊಸ ಕಾರಿನಲ್ಲಿ ಬ್ಲೈಂಡ್ ಸ್ಪಾಟ್ ಮಾನಿಟರ್ ಮತ್ತು ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ವೈಶಿಷ್ಟ್ಯತೆ ನೀಡಲಾಗಿಲ್ಲ.

ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!

ಎಂಜಿ ಗ್ಲೊಸ್ಟರ್

ಭಾರತದಲ್ಲಿ ಎಂಜಿ ಮೋಟಾರ್ ಕಂಪನಿಯು ಎಡಿಎಎಸ್ ಸೌಲಭ್ಯ ನೀಡಿದ ಮೊದಲ ಕಾರು ಗ್ಲೊಸ್ಸರ್ ಮಾದರಿಯಾಗಿದ್ದು, ಕಂಪನಿಯು ಈ ಕಾರಿನ ಉನ್ನತ-ಮಟ್ಟದ ರೂಪಾಂತರದಲ್ಲಿ ಎಡಿಎಸ್ ವೈಶಿಷ್ಟ್ಯತೆವನ್ನು ನೀಡುತ್ತದೆ.

ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!

ರೂ. 39.50 ಲಕ್ಷ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿರುವ ಗ್ಲೊಸ್ಟರ್ ಸೇವಿ ರೂಪಾಂತರದಲ್ಲಿ ಮಾತ್ರ ಆ ವೈಶಿಷ್ಟ್ಯವನ್ನು ನೀಡಲಾಗಿದ್ದು, ಇದು ಆಸ್ಚರ್ ಮಾರಿಯಲ್ಲಿನ ಎಡಿಎಎಸ್ ಆಯ್ಕೆಗಿಂತಲೂ ತುಂಬಾ ಹೊಸ ಫೀಚರ್ಸ್ ಹೊಂದಿದೆ.

ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!

ಹ್ಯುಂಡೈ ಟುಸಾನ್

ಹ್ಯುಂಡೈ ಇಂಡಿಯ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ 20202 ಟುಸಾನ್ ಅನ್ನು ಬಿಡುಗಡೆ ಮಾಡುತ್ತಿದ್ದು, ವರದಿಗಳ ಪ್ರಕಾರ ಕಂಪನಿಯು ಈ ಕಾರಿನಲ್ಲಿ ಎಡಿಎಎಸ್ ವೈಶಿಷ್ಟ್ಯವನ್ನು ನೀಡಲು ಯೋಜಿಸುತ್ತಿದೆ. ಈ ಕಾರಿನ ಬೆಲೆ ಮತ್ತು ಪ್ರಮುಖ ವಿವರಗಳನ್ನು ಮುಂಬರುವ ಆಗಸ್ಟ್‌ನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.

ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಕಾರು ಮಾದರಿಗಳಿವು!

ಹೊಸ ಕಾರಿನಲ್ಲಿ ಕಂಪನಿಯು ಪ್ರತಿ ಮಾದರಿಗೂ ಲಭ್ಯವಾಗುವಂತೆ ಹೊಸ ಸುರಕ್ಷಾ ಫೀಚರ್ಸ್ ಜೋಡಣೆ ಮಾಡಲಾಗುತ್ತಿದ್ದು, ಹೊಸ ಕಾರಿನಲ್ಲಿ ಬ್ಲೈಂಡ್ ಸ್ಪಾಟ್ ಡಿಕ್ಕಿಯನ್ನು ತಪ್ಪಿಸುವುದು, ಲೇನ್ ಕೀಪಿಂಗ್, ಸುರಕ್ಷಿತ ಲೇನ್ ನಿರ್ಗಮನ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈ ಬೀಮ್ ಅಸಿಸ್ಟ್ ಸೇರಿದಂತೆ ಪ್ರಮುಖ ವಾಹನ ನಿರ್ಗಮನ ಎಚ್ಚರಿಕೆ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ನಿರೀಕ್ಷಿಸಲಾಗಿದೆ.

Most Read Articles

Kannada
English summary
Top 5 most affordable cars with adas safety feature in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X