ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 SUVಗಳು: ಮಾರುತಿ, ಟೊಯೊಟಾ ಕಾರುಗಳೇ ಟಾಪ್

ಭಾರತದಲ್ಲಿ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು 2022ರ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಅನಾವರಣವು ಖರೀದಿದಾರರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿವೆ.

Recommended Video

Maruti Alto K10 Launched At Rs 3.99 Lakh | What’s New On The Hatchback? Dual-Jet VVT & AMT

ಈ ಎರಡೂ ಕಾರುಗಳು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರುತ್ತಿದ್ದು, SUV ವಿಭಾಗದಲ್ಲಿ ಅತ್ಯುತ್ತಮ ಮೈಲೇಜ್‌ನೊಂದಿಗೆ ಹೊಸ ಕ್ರಾಂತಿಯನ್ನು ಸೃಷ್ಟಿಸುವ ಮುನ್ಸೂಚನೆಯನ್ನು ನೀಡಿವೆ. ಎಸ್‌ಯುವಿ ವಿಭಾಗದಲ್ಲಿ ಈ ಎರಡೂ ಕಾರುಗಳು ಮಾರುಕಟ್ಟೆಯ ಇತರ ಕಾರುಗಳಿಗೆ ತೀವ್ರ ಪೈಪೋಟಿ ನೀಡುವುದು ಖಚಿತವಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 SUVಗಳು: ಮಾರುತಿ, ಟೊಯೊಟಾ ಕಾರುಗಳೇ ಟಾಪ್

ಅಷ್ಟೇ ಅಲ್ಲದೇ ಎರಡೂ ಮಧ್ಯಮ ಗಾತ್ರದ SUVಗಳು ಹೊಸ ಡಿಸೈನ್, ವಿಭಾಗದ ಪ್ರಮುಖ ವೈಶಿಷ್ಟ್ಯಗಳು ಮತ್ತು ಹೊಸ ತಂತ್ರಜ್ಞಾನವನ್ನು ಒಳಗೊಂಡಿವೆ. ಇನ್ನು ಈ ಎರಡೂ ಕಾರುಗಳನ್ನು ಹೊರತುಪಡಿಸಿದರೆ ಕಿಯಾ, ಹ್ಯುಂಡೈ, ಟಾಟಾ ಮೋಟಾರ್ಸ್ ಕಂಪನಿಗಳು ಉತ್ತಮ ಮೈಲೇಜ್ ನೀಡುವ ಕಾರುಗಳ ಪಟ್ಟಿಯಲ್ಲಿ ಸ್ಥಾನ ದಕ್ಕಿಸಿಕೊಂಡಿವೆ.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 SUVಗಳು: ಮಾರುತಿ, ಟೊಯೊಟಾ ಕಾರುಗಳೇ ಟಾಪ್

ಇಂಧನ ಬೆಲೆಗಳು ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ಅಧಿಕ ಮೈಲೇಜ್ ನೀಡುವ SUV ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವುದರಿಂದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಾಹನ ತಯಾರಕರು ಈಗ 20 kmpl ಗಿಂತ ಹೆಚ್ಚು ಮೈಲೇಜ್ ಅಂಕಿಅಂಶಗಳೊಂದಿಗೆ SUV ಗಳನ್ನು ನೀಡುತ್ತಿರುವುದು ಅಪೇಕ್ಷಣೀಯವಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 SUVಗಳು: ಮಾರುತಿ, ಟೊಯೊಟಾ ಕಾರುಗಳೇ ಟಾಪ್

ಒಂದು ವೇಳೆ ನಿಮಗೆ ಎಸ್‌ಯುವಿಗಳನ್ನು ಖರೀದಿಸುವ ಬಯಕೆಯಿದ್ದು ಮೈಲೇಜ್ ವಿಷಯದಲ್ಲಿ ಹಿಂದೇಟು ಹಾಕುತ್ತಿದ್ದರೇ, ನಾವು ಪಟ್ಟಿ ಮಾಡಿರುವ ಈ ಕಾರುಗಳನ್ನು ಒಮ್ಮೆ ನೋಡಿ. ಅತ್ಯುತ್ತಮ ಇಂಧನ ದಕ್ಷತೆಯೊಂದಿಗೆ ನೀವು ಭಾರತದಲ್ಲಿ ಖರೀದಿಸಬಹುದಾದ ಟಾಪ್ 5 SUV ಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 SUVಗಳು: ಮಾರುತಿ, ಟೊಯೊಟಾ ಕಾರುಗಳೇ ಟಾಪ್

1. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ - 27.97 kmpl

ಹೊಸ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬಗ್ಗೆ ಭಾರತೀಯರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. 2022 ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಕಂಪನಿಯ ಮೊದಲ ಉತ್ಪನ್ನವಾಗಿದ್ದು, ಇದನ್ನು ಮಾರುತಿ ಸುಜುಕಿ ಮತ್ತು ಟೊಯೋಟಾ ಪಾಲುದಾರಿಕೆಯಲ್ಲಿ ನಿರ್ಮಿಸಲಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 SUVಗಳು: ಮಾರುತಿ, ಟೊಯೊಟಾ ಕಾರುಗಳೇ ಟಾಪ್

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾವನ್ನು ಹಲವಾರು ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸಿದೆ. ಎರಡು ಪ್ರಮುಖವಾದವುಗಳೆಂದರೆ ಅದರ ಇಂಧನ ದಕ್ಷತೆ - 27.9 kmpl - ಮತ್ತು ಅದರ ಆಲ್-ಗ್ರಿಪ್ AWD ಸಿಸ್ಟಮ್, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಹೊರತುಪಡಿಸಿ ಈ ವಿಭಾಗದಲ್ಲಿ ವೈಶಿಷ್ಟ್ಯಗೊಳಿಸಿದ ಏಕೈಕ SUV ಇದಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 SUVಗಳು: ಮಾರುತಿ, ಟೊಯೊಟಾ ಕಾರುಗಳೇ ಟಾಪ್

2. ಟೊಯೋಟಾ ಅರ್ಬನ್ ಕ್ರೂಸರ್ ಹೈರಿಡರ್ - 27.97 kmpl

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಮಿಡ್ ಸೈಜ್ ಎಸ್‍ಯುವಿಯಾದ ಅರ್ಬನ್ ಕ್ರೂಸರ್ ಹೈರೈಡರ್ ಮಾದರಿಯನ್ನು ಜಾಗತಿಕವಾಗಿ ಇತ್ತೀಚೆಗೆ ಅನಾವರಣಗೊಳಿಸಿದೆ. ಮಧ್ಯಮ ಗಾತ್ರದ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಮೊದಲ ಕಾರು ಮಾದರಿಯಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 SUVಗಳು: ಮಾರುತಿ, ಟೊಯೊಟಾ ಕಾರುಗಳೇ ಟಾಪ್

ಜೊತೆಗೆ ಇದು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾಗೆ ಮೆಕ್ಯಾನಿಕಲ್ ಟ್ವಿನ್ ಮಾದರಿಯಾಗಿರುವುದರಿಂದ, 2022 ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಕೂಡ ಗ್ರಾಂಡ್ ವಿಟಾರಾ ರೀತಿಯ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ. 1.5L ಮೈಲ್ಡ್-ಹೈಬ್ರಿಡ್ ಮತ್ತು 1.5L ಸ್ಟ್ರಾಂಗ್-ಹೈಬ್ರಿಡ್ ಎಂಬ ಎರಡು ಎಂಜಿನ್ ಆಯ್ಕೆಗಳೊಂದಿಗೆ ಸಜ್ಜಾಗಿದ್ದು, ಇದರಲ್ಲಿ ಎರಡನೆಯದು 27.97 kmpl ಮೈಲೇಜ್‌ನೊಂದಿಗೆ ದೇಶದ ಯಾವುದೇ SUV ನೀಡದ ಅತ್ಯಧಿಕ ಮೈಲೇಜ್ ಅನ್ನು ಹೊಂದಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 SUVಗಳು: ಮಾರುತಿ, ಟೊಯೊಟಾ ಕಾರುಗಳೇ ಟಾಪ್

3. ಕಿಯಾ ಸಾನೆಟ್ - 24.1 ಕೆಎಂಪಿಎಲ್

ಹೆಚ್ಚಿನ ಮೈಲೇಜ್ ಹೊಂದಿರುವ SUV ಗಳ ಪಟ್ಟಿಯಲ್ಲಿ Kia Sonet ಮೂರನೇ ಸ್ಥಾನದಲ್ಲಿದ್ದು, ಇದರಲ್ಲಿ ಕೇವಲ ಡೀಸೆಲ್ ರೂಪಾಂತರ ಮಾತ್ರ ಸ್ಥಾನ ಪಡೆದುಕೊಂಡಿದೆ. ಈ ಡೀಸಲ್ ವೇರಿಯೆಂಟ್ 24.1 kmpl ಮೈಲೇಜ್ ಅನ್ನು ಹೊಂದಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 SUVಗಳು: ಮಾರುತಿ, ಟೊಯೊಟಾ ಕಾರುಗಳೇ ಟಾಪ್

ಈ ಕಾಂಪ್ಯಾಕ್ಟ್ SUV ಅನ್ನು 1.0L ಟರ್ಬೊ-ಪೆಟ್ರೋಲ್ ಮೋಟಾರ್ ಮತ್ತು 1.2L NA ಪೆಟ್ರೋಲ್ ಮೋಟರ್‌ನೊಂದಿಗೆ ಮಾರಾಟ ಮಾಡಲಾಗುತ್ತಿದೆ. ಸಾನೆಟ್ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ದಕ್ಷಿಣ ಕೊರಿಯಾದ ಕಾರು ತಯಾರಕರ ಅತ್ಯಂತ ಕೈಗೆಟುಕುವ ಕೊಡುಗೆಯಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 SUVಗಳು: ಮಾರುತಿ, ಟೊಯೊಟಾ ಕಾರುಗಳೇ ಟಾಪ್

4. ಹುಂಡೈ ವೆನ್ಯೂ - 23.4 kmpl

ಕಿಯಾ ಸಾನೆಟ್ ಅನ್ನು ಅನುಸರಿಸುವುದರೊಂದಿಗೆ ಅದರ ನಿಕಟ ಸೋದರಸಂಬಂಧಿಯಂತೆ ಗುರ್ತಿಸಿಕೊಂಡಿರುವ ಹ್ಯುಂಡೈ ವೆನ್ಯೂ, ಅದೇ ರೀತಿಯ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು 1.5L ಡೀಸೆಲ್, 1.2L NA ಪೆಟ್ರೋಲ್, ಮತ್ತು 1.0L ಟರ್ಬೊ-ಪೆಟ್ರೋಲ್ ಆಯಿಲ್ ಬರ್ನರ್ 23.4 kmpl ನಷ್ಟು ಮೈಲೇಜ್ ನೀಡುವ ಮೂಲಕ ಈ ಎಸ್‌ಯುವಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 SUVಗಳು: ಮಾರುತಿ, ಟೊಯೊಟಾ ಕಾರುಗಳೇ ಟಾಪ್

5. ಟಾಟಾ ನೆಕ್ಸಾನ್ - 21.5 kmpl

ಟಾಟಾ ನೆಕ್ಸಾನ್ 5-ಸ್ಟಾರ್ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಅನ್ನು ಗಳಿಸಿದ ಮೊದಲ ಭಾರತೀಯ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕುತೂಹಲಕಾರಿಯಾಗಿ, ಇದು ಡೀಸೆಲ್ ಎಂಜಿನ್ ಮತ್ತು ಸ್ಟಿಕ್-ಶಿಫ್ಟ್ ಗೇರ್‌ಬಾಕ್ಸ್‌ನೊಂದಿಗೆ 21.5 kmpl ಇಂಧನ ದಕ್ಷತೆಯನ್ನು ಹೊಂದಿರುವ ಇಂಧನ-ಸಮರ್ಥ ಕಾಂಪ್ಯಾಕ್ಟ್ SUV ಆಗಿದೆ. ನೆಕ್ಸಾನ್ ಅನ್ನು 1.2L ಟರ್ಬೊ-ಪೆಟ್ರೋಲ್ ಮೋಟರ್‌ನೊಂದಿಗೆ ಸಹ ಹೊಂದಬಹುದು.

Most Read Articles

Kannada
English summary
Top 5 SUVs with highest mileage Maruti Toyota cars are top
Story first published: Tuesday, August 23, 2022, 17:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X