ವಾರದ ಪ್ರಮುಖ ಸುದ್ದಿಗಳು: ಹೊಸ ಹ್ಯುಂಡೈ ವೆನ್ಯೂ ಬಿಡುಗಡೆ, ಇವಿ ಬಸ್ ಬಿಡುಗಡೆ ಮಾಡಿದ ಸ್ವಿಚ್ ಮೊಬಿಲಿಟಿ..

ಸೆಮಿಕಂಡಕ್ಟರ್ ಪೂರೈಕೆಯಲ್ಲಿನ ಇಳಿಕೆಯ ನಡುವೆಯೂ ಹೊಸ ಕಾರುಗಳ ಬಿಡುಗಡೆ ಪ್ರಕ್ರಿಯೆ ಜೋರಾಗುತ್ತಿದೆ. ಈ ವಾರ ಭಾರತದಲ್ಲಿ ಹಲವು ಹೊಸ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರುಗಳ ಬಿಡುಗಡೆಯ ಜೊತೆಗೆ ಆಟೋ ಉದ್ಯಮಕ್ಕೆ ಸಂಬಂಧಿತ ಹಲವು ಘಟನೆಗಳು ನಡೆದಿವೆ. ಕೆಳಗಿನ ಸ್ಲೈಡ್‌ಗಳಲ್ಲಿ ಈ ವಾರದ ಪ್ರಮುಖ ಸುದ್ದಿಗಳ ಮತ್ತಷ್ಟು ಮಾಹಿತಿಗಳನ್ನು ಒಂದೊಂದಾಗಿ ನೋಡೋಣ.

ಈ ವಾರದ ಪ್ರಮುಖ ಸುದ್ದಿಗಳು

ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್ ಬಿಡುಗಡೆ

ಹೊಸ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ವಿವಿಧ ಎಂಜಿನ್ ಆಯ್ಕೆಗಳಿಗೆ ಅನುಗುಣವಾಗಿ ಇ, ಎಸ್, ಎಸ್(ಒ), ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ) ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರು ಆರಂಭಿಕವಾಗಿ ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 7.53 ಲಕ್ಷ ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಸುದ್ದಿಗಳು

ಹ್ಯುಂಡೈ ಕಂಪನಿಯು ವೆನ್ಯೂ ವಿವಿಧ ವೆರಿಯೆಂಟ್‌ಗಳ ಬೆಲೆಯಲ್ಲಿ ಹಳೆಯ ಮಾದರಿಗಿಂತ ಸುಮಾರು ರೂ. 31,700 ರಿಂದ ರೂ. 1,42,501 ಬೆಲೆ ಹೆಚ್ಚಿಸಿದ್ದು, ಹೊಸ ಮಾದರಿಯು ಸದ್ಯ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.53 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.57 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಮಾದರಿಯನ್ನು ಈ ಹಿಂದಿನಂತೆ 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದೆ.

ಈ ವಾರದ ಪ್ರಮುಖ ಸುದ್ದಿಗಳು

ಅಲ್ಟಿಮೇ ರೋಡ್‌ಸ್ಟರ್ ವಿತರಣೆ ಆರಂಭ

ಇಟಾಲಿಯನ್ ಸೂಪರ್ ಕಾರು ತಯಾರಕ ಕಂಪನಿಯಾಗಿರುವ ಲಂಬೋರ್ಗಿನಿಯು ತನ್ನ ಹೊಸ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಕಾರಿನ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಮೊದಲ ಯುನಿಟ್ ಅನ್ನು ಭಾರತದಲ್ಲಿ ವಿತರಣೆ ಮಾಡಿದೆ.

ಈ ವಾರದ ಪ್ರಮುಖ ಸುದ್ದಿಗಳು

ಅವೆಂಟಡಾರ್ ಅಲ್ಟಿಮೇ ಮಾದರಿಯನ್ನು ಲಂಬೋರ್ಗಿನಿ ಕಂಪನಿಯು ರೋಡ್‌ಸ್ಟರ್ ಮತ್ತು ಕೂಪೆ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದ್ದು, ಸೀಮಿತ ಸಂಖ್ಯೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಹೊಸ ಕಾರು ಮಾದರಿಯು ಮೊದಲ ಬಾರಿಗೆ ಭಾರತದಲ್ಲಿ ವಿತರಣೆಗೊಂಡಿವೆ. ಹೊಸ ಕಾರು 6.5-ಲೀಟರ್ ವಿ12 ಎಂಜಿನ್‌ ಅನ್ನು ಪಡೆದುಕೊಂಡಿದ್ದು, ಹೊಸ ಕಾರು 7-ಸ್ಪೀಡ್ ಆಟೋಮ್ಯಾಟೆಡ್ ಮ್ಯಾನುವಲ್ ಟ್ರಾನ್‌ಮಿಷನ್ ಮೂಲಕ 770 ಬಿಎಚ್‌ಪಿ ಮತ್ತು 720 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಈ ವಾರದ ಪ್ರಮುಖ ಸುದ್ದಿಗಳು

ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್

ಗೂಗಲ್ ಕಂಪನಿಯು ಬಳಕೆದಾರರಿಗೆ ಸಹಕಾರಿಯಾಗಲು ನಿರಂತರವಾಗಿ ಗೂಗಲ್ ಮ್ಯಾಪ್‌‌ನಲ್ಲಿ ಹೊಸ ನವೀಕರಣಗಳನ್ನು ನೀಡುತ್ತಿದ್ದು, ಇದೀಗ ಹೊಸ ಅಪ್‌ಡೇಟ್ ಮೂಲಕ ಬಳಕೆದಾರರು ನ್ಯಾವಿಗೇಟ್ ಆರಂಭಿಸುವ ಪ್ರಾರಂಭಿಸುವ ಮುನ್ನು ಗೂಗಲ್ ನಕ್ಷೆಯಲ್ಲಿ ನಿಮ್ಮ ಗಮ್ಯಸ್ಥಾನದ ಅಂದಾಜು ಟೋಲ್ ಶುಲ್ಕ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಈ ವಾರದ ಪ್ರಮುಖ ಸುದ್ದಿಗಳು

ಹೊಸ ವೈಶಿಷ್ಟ್ಯತೆಯನ್ನು ಕಂಪನಿಯು ಈ ವರ್ಷದ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಘೋಷಣೆ ಮಾಡಿದ ನಂತರ ಇದೀಗ ಟೆಕ್ ದೈತ್ಯ ಅಂಡ್ರಾಯಿಡ್ ಮತ್ತು ಐಎಸ್ಓ ಪ್ಲಾಟ್‌ಫಾರ್ಮ್‌ಗಳಲ್ಲಿ ಗೂಗಲ್ ಮ್ಯಾಪ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯತೆಯ ಸೇವೆಯನ್ನು ನೀಡಲಾಗುತ್ತಿದೆ. ಹೊಸ ವೈಶಿಷ್ಟ್ಯತೆಯೊಂದಿಗೆ ಬಳಕೆದಾರರು ಟೋಲ್ ರಸ್ತೆಗಳು ಮತ್ತು ಸಾಮಾನ್ಯ ರಸ್ತೆಗಳನ್ನು ಆಯ್ಕೆ ಮಾಡಲು ಸುಲಭಗೊಳಿಸುವುದಲ್ಲದೆ ನಿಖರವಾದ ವಿವರಗಳಿಗಾಗಿ ಕಂಪನಿಯು ಸ್ಥಳೀಯ ಟೋಲ್ ಬೂತ್ ಅಧಿಕಾರಿಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತದೆ.

ಈ ವಾರದ ಪ್ರಮುಖ ಸುದ್ದಿಗಳು

ಸ್ಕಾರ್ಪಿಯೋ-ಎನ್ ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ತಲೆಮಾರಿನ ಕಾರು ಮಾದರಿಯು ಸ್ಕಾರ್ಪಿಯೋ-ಎನ್(Scorpio-N) ಹೆಸರಿನೊಂದಿಗೆ ಬಿಡುಗಡೆಯಾಗಲಿದ್ದರೆ ಹೊಸ ಮಾದರಿಯೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯು ಸ್ಕಾರ್ಪಿಯೋ ಕ್ಲಾಸಿಕ್(Scorpio Classic) ಹೆಸರಿನೊಂದಿಗೆ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರು ಮಾದರಿಯು ಲ್ಯಾಡರ್ ಫ್ರೇಮ್ ಚಾಸಿಸ್ ಮೇಲೆ ನಿರ್ಮಾಣಗೊಂಡಿರುವುದು ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ.

ಈ ವಾರದ ಪ್ರಮುಖ ಸುದ್ದಿಗಳು

ಹೊಸ ಪ್ಲಾಟ್‌ಫಾರ್ಮ್ ಆಧರಿಸಿರುವ ಸ್ಕಾರ್ಪಿಯೋ-ಎನ್ ಮಾದರಿಯು 7 ಸೀಟರ್ ಮತ್ತು 6 ಸೀಟರ್ ಸೌಲಭ್ಯವನ್ನು ಹೊಂದಿದ್ದು, 7 ಸೀಟರ್ ಮಾದರಿಯಲ್ಲಿ 2+3+2 ಮಾದರಿಯಲ್ಲಿ ಆಸನ ಸೌಲಭ್ಯ ನೀಡಲಾಗಿದ್ದರೆ 6 ಸೀಟರ್ ಮಾದರಿಯಲ್ಲಿ 2+2+2 ಮಾದರಿಯ ಆಸನ ಸೌಲಭ್ಯಗಳನ್ನು ನೀಡಲಾಗಿದೆ. ಹೊಸ ಕಾರಿನಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯು ಈ ಹಿಂದಿನಂತೆಯೇ 2.2-ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಯೊಂದಿಗೆ ಮಾರಾಟ ಮುಂದುವರಿಯಲಿದೆ.

ಈ ವಾರದ ಪ್ರಮುಖ ಸುದ್ದಿಗಳು

ಇವಿ ಬಸ್ ಬಿಡುಗಡೆ ಮಾಡಿದ ಸ್ವಿಚ್ ಮೊಬಿಲಿಟಿ

ಭಾರತವನ್ನು ಕಾರ್ಬನ್ ಮುಕ್ತಗೊಳಿಸುವ ಕಾರ್ಯ ವೇಗಗೊಳ್ಳುತ್ತಿದೆ. ಹಲವು ಇವಿ ತಯಾರಕರು ತಮ್ಮ ಹೊಸ ಮಾದರಿಗಳೊಂದಿಗೆ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿದ್ದರೇ, ಸ್ವಿಚ್ ಮೊಬಿಲಿಟಿಯು ಇನ್ನು ಒಂದು ಹೆಜ್ಜೆ ಮುಂದಿಟ್ಟು ಇವಿ ಬಸ್‌ಗಳನ್ನು ಬಿಡುಗಡೆ ಮಾಡಿದೆ. ಈ ಬಸ್‌ಗಳು ಒಂದೇ ಬಾರಿ ಚಾರ್ಜ್‌ ಮಾಡಿದರೆ 500 ಕಿ.ಮೀ. ಮೈಲೇಜ್ ನೀಡಲಿದೆ. ಅಲ್ಲದೇ ಎಲೆಕ್ಟ್ರಿಕ್ ಡ್ರೈವ್‌ಟ್ರೇನ್ ಮತ್ತು ಬ್ಯಾಟರಿಯು ದೀರ್ಘಾವಧಿಯ ಬ್ಯಾಟರಿ ಬಾಳಿಕೆಯೊಂದಿಗೆ ಉತ್ಕೃಷ್ಟ ದಕ್ಷತೆಯನ್ನು ಖಚಿತಪಡಿಸುತ್ತವೆ.

ಈ ವಾರದ ಪ್ರಮುಖ ಸುದ್ದಿಗಳು

ಸ್ವಿಚ್ ಮೊಬಿಲಿಟಿ ಲಿಮಿಟೆಡ್ ಹೊಸ ಪೀಳಿಗೆಯ ಕಾರ್ಬನ್ ನ್ಯೂಟ್ರಲ್ ಬಸ್ 'SWITCH EiV 12' ಬಸ್‌ EiV 12 ಲೋ ಫ್ಲೋರ್ ಮತ್ತು EiV 12 ಸ್ಟ್ಯಾಂಡರ್ಡ್ ಎಂಬ ಎರಡು ರೂಪಾಂತರಗಳನ್ನು ಬಿಡುಗಡೆ ಮಾಡಿದೆ. ಈ ಎರಡೂ ಸ್ವಿಚ್ ಬಸ್‌ಗಳನ್ನು ಇಂಟ್ರಾಸಿಟಿ, ಇಂಟರ್‌ಸಿಟಿ, ಶಾಲೆ, ಕಾಲೇಜು, ಸಿಬ್ಬಂದಿ ಮುಂತಾದ ವಿವಿಧ ರೀತಿಯ ಕೆಲಸಗಳಿಗೆ ಬಳಸಬಹುದು. ಈ ಬಸ್‌ಗಳಲ್ಲಿ ಹೆಚ್ಚಿನ ಶ್ರೇಣಿಯನ್ನು ಒದಗಿಸಲು ಕಂಪನಿಯು ಸುಧಾರಿತ ಲಿಥಿಯಂ-ಐಯಾನ್ ಎನ್‌ಎಂಸಿ ಮಾಡ್ಯುಲರ್ ಬ್ಯಾಟರಿಗಳನ್ನು ಬಳಸಿದೆ, ಇದು ಭಾರತೀಯ ಪರಿಸರ ಮತ್ತು ತಾಪಮಾನಕ್ಕೆ ಸರಿಯಾಗಿ ಹೊಂದಿಕೆಯಾಗಲಿದೆ.

ಈ ವಾರದ ಪ್ರಮುಖ ಸುದ್ದಿಗಳು

ಎಕ್ಸ್‌ಯುವಿ300 ಮಾದರಿಗೆ ಹೊಸ ವಿನ್ಯಾಸದ ಅಲಾಯ್ ವ್ಹೀಲ್

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಗರಿಷ್ಠ ಸುರಕ್ಷಾ ಹೊಂದಿರುವ ಕಾರು ಮಾದರಿಯಾಗಿ ಹೊರಹೊಮ್ಮಿರುವ ಎಕ್ಸ್‌ಯುವಿ300 ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳುತ್ತಿದ್ದು, ಕಂಪನಿಯು ಎಕ್ಸ್‌ಯುವಿ300 ಮಾದರಿಯ ಟಾಪ್ ಎಂಡ್ ವೆರಿಯೆಂಟ್ ಡಬ್ಲ್ಯು8 ಆಪ್ಷನ್ ಮಾದರಿಯಲ್ಲಿ ಹೊಸ ಅಲಾಯ್ ವ್ಹೀಲ್ ಜೋಡಣೆ ಮಾಡಿದೆ.

ಈ ವಾರದ ಪ್ರಮುಖ ಸುದ್ದಿಗಳು

ಎಕ್ಸ್‌ಯುವಿ300 ಡಬ್ಲ್ಯು8 ಆಪ್ಷನ್ ಮಾದರಿಯು ಇನ್ಮುಂದೆ 17-ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಹೊಂದಿರಲಿದ್ದು, ಇನ್ನುಳಿದ ಮಾದರಿಗಳಲ್ಲಿ ಕಂಪನಿಯು 16 ಇಂಚಿನ ಅಲಾಯ್ ವ್ಹೀಲ್ ನೀಡುತ್ತದೆ. ಟಾಪ್ ಎಂಡ್ ಮಾದರಿಯಲ್ಲಿ ಹೊಸ ಡ್ಯುಯಲ್ ಟೋನ್ ಮಾದರಿಯ ಹೊರತಾಗಿಯೂ ಕಂಪನಿಯು ಈ ಹಿಂದಿನ ಬೆಲೆ ಪಟ್ಟಿಯನ್ನು ಮುಂದುವರಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕಂಪನಿಯು ಎಕ್ಸ್‌ಯುವಿ300 ಮಾದರಿಯ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.

ಈ ವಾರದ ಪ್ರಮುಖ ಸುದ್ದಿಗಳು

ಹೊಸ ಇನ್ಪೋಟೈನ್‌ಮೆಂಟ್ ಪರಿಚಯಿಸಿದ ಸ್ಕೋಡಾ

ಸ್ಕೋಡಾ ಕಂಪನಿಯು ಕುಶಾಕ್ ಮತ್ತು ಸ್ಲಾವಿಯಾ ಮಾದರಿಗಳಲ್ಲಿ ಸೆಮಿಕಂಡಕ್ಟರ್ ಕೊರೆತಯ ಪರಿಣಾಮ ಈ ಹಿಂದೆ ನೀಡಲಾಗುತ್ತಿದ್ದ 10 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಬದಲಾಗಿ ಕಂಪನಿಯು 8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡಲಾಗುತ್ತಿದೆ. ಹೊಸ ಕಾರುಗಳಲ್ಲಿ ನೀಡಲಾಗುತ್ತಿರುವ ಪರಿಷ್ಕೃತ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೌಲಭ್ಯವು ಈ ಹಿಂದಿನ ಮಾದರಿಯೆಂತೆ ಹಲವಾರು ಫೀಚರ್ಸ್ ಹೊಂದಿದ್ದು, ಅತಿ ಕಡಿಮೆ ಚಿಪ್‌ಗಳನ್ನು ಹೊಂದಿರಲಿದೆ.

ಈ ವಾರದ ಪ್ರಮುಖ ಸುದ್ದಿಗಳು

ಸೆಮಿಕಂಡಕ್ಟರ್ ಬಳಕೆಯನ್ನು ತಗ್ಗಿಸುವ ಉದ್ದೇಶದಿಂದಲೇ ಕಂಪನಿಯು ಕಡಿಮೆ ಚಿಪ್‌ಗಳನ್ನು ಹೊಂದಿರುವ 8 ಇಂಚಿನ ಇನ್ಪೋಟೈನ್‌ಮೆಂಟ್ ಆಯ್ಕೆ ಮಾಡಿದ್ದು, ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಂ ಸೌಲಭ್ಯವು ಇತರೆ ಇನ್ಪೋಟೈನ್‌ಮೆಂಟ್ ಸೌಲಭ್ಯಗಳಂತೆ ಡೇಟಾವನ್ನು ಪ್ರಕ್ರಿಯೆಗೊಳಿಸಲು ಡಿಸ್ಪ್ಲೇ ಮತ್ತು ಅದರ ಹಿಂದೆ ಕಂಪ್ಯೂಟ್ ಅಂಶವನ್ನು ಹೊಂದಿರುತ್ತದೆ.

ಈ ವಾರದ ಪ್ರಮುಖ ಸುದ್ದಿಗಳು

ಹೀಗಾಗಿ ಹೊಸ ಇನ್ಪೋಟೈನ್‌ಮೆಂಟ್ ಮೂಲಕ ಚಿಪ್ ಕೊರತೆಗೆ ಪರ್ಯಾಯ ಕಂಡುಕೊಂಡಿರುವ ಕಂಪನಿಯು ಕೆಲವು ವೈಶಿಷ್ಟ್ಯತೆಗಳನ್ನು ಕೈಬಿಟ್ಟಿದ್ದು, ಕುಶಾಕ್ ಮಾಂಟೆ ಕಾರ್ಲೊ ಮಾದರಿಯಲ್ಲಿ ಮಾತ್ರವೇ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆಯನ್ನು ಮುಂದುವರಿಸಿದೆ.

Article Published On: Sunday, June 19, 2022, 8:45 [IST]
English summary
Top auto news of the week 2022 hyundai venue launched switch mobility ev bus launched and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+