ವಾರದ ಸುದ್ದಿ: ಹೋಂಡಾ ಸಿಟಿ ಹೈಬ್ರಿಡ್, ಕ್ರೆಟಾ ನೈಟ್ ಎಡಿಷನ್ ಬಿಡುಗಡೆ, ಟಾಟಾ ಏಸ್ ಇವಿ ಅನಾವರಣ..

ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಏಸ್ ಇವಿ ಬಿಡುಗಡೆಯೊಂದಿಗೆ ಶೀಘ್ರದಲ್ಲಿಯೇ ತನ್ನ ನೆಕ್ಸಾನ್ ಇವಿ ಮಾದರಿಯನ್ನು ಹೊಸ ಹೆಸರಿನೊಂದಿಗೆ ಬಿಡುಗಡೆಗೆ ಸಿದ್ದವಾಗುತ್ತಿದೆ. ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳಲ್ಲಿ ಹೋಂಡಾ ಸಿಟಿ ಹೈಬ್ರಿಡ್ ಬಿಡುಗಡೆ ಸೇರಿದಂತೆ ಪ್ರಮುಖ ಸುದ್ದಿಗಳಿದ್ದು, ಕೆಳಗಿನ ಸ್ಲೈಡ್‌ಗಳಲ್ಲಿ ಮತ್ತಷ್ಟು ಮಾಹಿತಿಗಳನ್ನು ಒಂದೊಂದಾಗಿ ನೋಡೋಣ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ನೆಕ್ಸಾನ್ ಇವಿ ಮ್ಯಾಕ್ಸ್ ಟೀಸರ್ ಬಿಡುಗಡೆ

2022ರ ನೆಕ್ಸಾನ್ ಇವಿ ಮಾದರಿಯು ನೆಕ್ಸಾನ್ ಇವಿ ಮ್ಯಾಕ್ಸ್ ಹೆಸರಿನೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಂತೆ ಕಂಪನಿಯು ಇದೀಗ ಹೊಸ ಟೀಸರ್ ಪ್ರಕಟಿಸಿದೆ. ಹೊಸ ಟೀಸರ್ ವಿಡಿಯೋದಲ್ಲಿ ಹೊಸ ಕಾರಿನ ಮುಂಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗೊಳಿಸಿದ್ದು, ಕಾರಿನ ಒಳಭಾಗದಲ್ಲೂ ಹಲವಾರು ಹೊಸ ತಾಂತ್ರಿಕ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚಿನ ಮೈಲೇಜ್‌ನೊಂದಿಗೆ ಹೆಚ್ಚುವರಿ ಫೀಚರ್ಸ್ ಪಡೆದುಕೊಳ್ಳಲಿದೆ. ಹಾಗೆಯೇ ಹೊಸ ಕಾರು ನೆಕ್ಸಾನ್ ಮ್ಯಾಕ್ಸ್ ಹೆಸರಿನೊಂದಿಗೆ ಬಿಡುಗಡೆಯಾಗಲಿದ್ದು, ಅತ್ಯಧಿಕ ಮೈಲೇಜ್ ಬ್ಯಾಟರಿ ಪ್ಯಾಕ್ ಆಯ್ಕೆ ಹಿನ್ನಲೆಯಲ್ಲಿ ಮ್ಯಾಕ್ಸ್ ನೇಮ್‌ಪ್ಲೆಮ್ ಬಳಕೆ ಮಾಡಲಾಗುತ್ತಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಏಸ್ ಇವಿ ಅನಾವರಣ

ಟಾಟಾ ಮೋಟಾರ್ಸ್ ಕಂಪನಿಯು ಏಸ್ ಇವಿ ಮೂಲಕ ಇವಿ ವಾಣಿಜ್ಯ ವಾಹನಗಳ ವಿಭಾಗದಲ್ಲೂ ಹೊಸ ಅಧ್ಯಾಯ ಆರಂಭಿಸಿದ್ದು, ಹೊಸ ಎಲೆಕ್ಟ್ರಿಕ್ ವಾಣಿಜ್ಯ ವಾಹನವು ಕಂಪನಿಯ ಸುಧಾರಿತ ತಂತ್ರಜ್ಞಾನ ಪ್ರೇರಿತ ಇವೊಜೆನ್(Evogen) ಪ್ಲಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಪಡಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ತಂತ್ರಜ್ಞಾನ ಪರಿಣಾಮ ಹೊಸ ವಾಹನದ ಕಂಟೈನರ್ ಸಾಕಷ್ಟು ಹಗುರವಾಗಿದ್ದು, ಇ-ಕಾಮರ್ಸ್ ಲಾಜಿಸ್ಟಿಕ್ಸ್‌ ಅಪ್ಲಿಕೇಶನ್‌ಗಳಿಗೆ ಇದು ಲಾಭದಾಯಕ ಅಂಶವಾಗಿದೆ. ಜೊತೆಗೆ ಸಂಪೂರ್ಣವಾಗಿ ಲೋಡ್ ಮಾಡಲಾದ ಪರಿಸ್ಥಿತಿಗಳಲ್ಲೂ ಹೊಸ ಇವಿ ವಾಹನ ಸುಲಭವಾಗಿ ಚಾಲನೆಯಾಗಲಿದ್ದು, ಇದು ಪ್ರತಿ ಚಾರ್ಜ್‌ಗೆ 154 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಸದ್ಯ ಹೊಸ ವಾಹನವನ್ನು ಇ-ಕಾಮರ್ಸ್ ಕಂಪನಿಗಳಿಗೆ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಸಾಮಾನ್ಯ ಗ್ರಾಹಕರಿಗೂ ಹೊಸ ವಾಹನ ಖರೀದಿಗೆ ಲಭ್ಯವಿರಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಬಿಡುಗಡೆ

ಹೋಂಡಾ ಕಾರ್ಸ್ ಇಂಡಿಯಾ ತನ್ನ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಸಿಟಿ ಇ:ಎಚ್‌ಇವಿ ಸೆಡಾನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.19.50 ಲಕ್ಷವಾಗಿದೆ. ಹೈಬ್ರಿಡ್ ಮಾದರಿಯು ಸಿಟಿ ಸೆಡಾನ್‌ನ ಟಾಪ್-ಸ್ಪೆಕ್ 'ZX' ಟ್ರಿಮ್ ಅನ್ನು ಆಧರಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಸಿಟಿ ಇ:ಎಚ್‌ಇವಿ ಹೈಬ್ರಿಡ್ 1.5 ಲೀಟರ್, ನಾಲ್ಕು-ಸಿಲಿಂಡರ್, ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಮತ್ತು ಎರಡು ಎಲೆಕ್ಟ್ರಿಕ್ ಮೋಟರ್‌ಗಳಿಂದ ಚಾಲಿತವಾಗಿದ್ದು, ಪೆಟ್ರೋಲ್ ಮಾದರಿಗಿಂತಲೂ 40 ಪ್ರತಿಶತ ಹೆಚ್ಚು ಇಂಧನ-ಸಮರ್ಥವಾಗಿದೆ ಮತ್ತು 26.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಹೋಂಡಾ ಹೇಳಿಕೊಂಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹ್ಯುಂಡೈ ಕ್ರೆಟಾ ನೈಟ್ ಎಡಿಷನ್ ಬಿಡುಗಡೆ

ಕ್ರೆಟಾ ಎರಡನೇ ತಲೆಮಾರಿನ ಆವೃತ್ತಿಯ ಮಾರಾಟದೊಂದಿಗೆ ಹಲವಾರು ದಾಖಲೆಗಳನ್ನು ತನ್ನದಾಗಿಸಿಕೊಂಡಿರುವ ಹ್ಯುಂಡೈ ಕಂಪನಿಯು ಕ್ರೆಟಾ ಪ್ರಿಯರಿಗಾಗಿ ಇದೀಗ ನೈಟ್ ಎಡಿಷನ್ ಪರಿಚಯಿಸಿದ್ದು, ಎಸ್ ಪ್ಲಸ್ ಮತ್ತು ಎಸ್ಎಕ್ಸ್(ಒ) ಮಾದರಿಯನ್ನು ಆಧರಿಸಿ ಬಿಡುಗಡೆಯಾಗಿರುವ ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.13.51 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.18.18 ಲಕ್ಷ ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕ್ರೆಟಾ ನೈಟ್ ಎಡಿಷನ್ ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಪೆಟ್ರೋಲ್ ಮಾದರಿಯಲ್ಲಿ ಎರಡು ಮತ್ತು ಡೀಸೆಲ್ ಮಾದರಿಯಲ್ಲಿ ಎರಡು ವೆರಿಯೆಂಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಗ್ಲಾಸ್ ಬ್ಲ್ಯಾಕ್ ಕಲರ್ ಆಯ್ಕೆ ಹೊಂದಿರುವ ಹೊಸ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಜೀಪ್ ಮೆರಿಡಿಯನ್ ಅಧಿಕೃತ ಬುಕಿಂಗ್ ಆರಂಭ

ಜೀಪ್ ಹೊಸ ಮೆರಿಡಿಯನ್ ಎಸ್‌ಯುವಿ ಸ್ಟ್ಯಾಂಡರ್ಡ್ ಕಂಪಾಸ್ ಎಸ್‍ಯುವಿಯನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಹೊಸ ಕಾರು ಮುಂದಿನ ತಿಂಗಳು ಜೂನ್ ಆರಂಭದಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದೆ. ಸದ್ಯ ಹೊಸ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಿರುವ ಜೀಪ್ ಕಂಪನಿಯು ಹೊಸ ಕಾರಿಗಾಗಿ ರೂ. 50 ಸಾವಿರ ಮುಂಗಡ ಹಣದೊಂದಿಗೆ ಬುಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಕಾರು ಮಾದರಿಯನ್ನು ಜೀಪ್ ಕಂಪನಿಯು ಮಹಾರಾಷ್ಟ್ರದ ಪುಣೆ ಬಳಿಯಿರುವ ರಂಜನ್‌ಗಾಂವ್ ಘಟಕದಲ್ಲಿ ಈಗಾಗಲೇ ಉತ್ಪಾದನೆಯನ್ನು ಆರಂಭಿಸಿದ್ದು, ಸಂಪೂರ್ಣವಾಗಿ ದೇಶಿಯ ಮಾರುಕಟ್ಟೆಯಲ್ಲಿಯೇ ನಿರ್ಮಾಣಗೊಂಡಿರುವ ಹೊಸ ಕಾರು ಕಂಪಾಸ್‌ಗೆ ಹೋಲಿಸಿದರೆ ವಿಭಿನ್ನವಾದ ಸ್ಟೈಲಿಂಗ್ ಅಂಶಗಳೊಂದಿಗೆ ಹೆಚ್ಚು ಬಲಿಷ್ಠತೆಯನ್ನು ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಅನಾವರಣ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ನ್ಯೂ ಜನರೇಷನ್ ಸಿ-ಕ್ಲಾಸ್ ಕಾರನ್ನು ಅನಾವರಣಗೊಳಿಸಿದ್ದು, ಈ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ 2022ರ ಮೇ 10 ರಂದು ಬಿಡುಗಡೆಯಾಗಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

5ನೇ ತಲೆಮಾರಿನ ಮಾದರಿಯಾಗಿರುವ ಹೊ ಸಿ-ಕ್ಲಾಸ್ ಸೆಡಾನ್ ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. 48V ಬೆಲ್ಟ್-ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಅನ್ನು ಸಹ ಹೊಂದಿವೆ. ಈ ಸಿಸ್ಟಂ 19.7 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಆಡಿ ಎ8 ಎಲ್ ಬುಕಿಂಗ್ ಆರಂಭ

ಜರ್ಮನ್ ಐಷಾರಾಮಿ ಕಾರು ತಯಾರಕರಾದ ಆಡಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ 2022ರ ಆಡಿ ಎ8 ಎಲ್ ಸೆಡಾನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಈ ವರ್ಷ ಬಿಡುಗಡೆಯಾಗುವ ಬ್ರ್ಯಾಂಡ್‌ನ ಎರಡನೇ ಮಾದರಿಯಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕಂಪನಿಯು ಅಧಿಕೃತವಾಗಿ 2022ರ ಆಡಿ ಎ8 ಎಲ್ ಸೆಡಾನ್ ಖರೀದಿಗಾಗಿ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಆಸಕ್ತ ಖರೀದಿದಾರರು ರೂ. 10 ಲಕ್ಷ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಈ ಐಷಾರಾಮಿ ಸೆಡಾನ್ ಅನ್ನು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಡೀಲರ್‌ಶಿಪ್‌ನಲ್ಲಿ ಮುಂಗಡವಾಗಿ ಬುಕ್ ಮಾಡಬಹುದು. ಹೊಸ ಕಾರು 3.0-ಲೀಟರ್ TFSI ಎಂಜಿನ್‌ನಿಂದ 48V ಸೌಮ್ಯ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಚಾಲಿತವಾಗಲಿದ್ದು, 340 ಬಿಹೆಚ್‍ಪಿ ಮತ್ತು 540 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
Top auto news of the week honda city hybrid launched mercedes benz c class unveiled and more
Story first published: Sunday, May 8, 2022, 3:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X