ವಾರದ ಸುದ್ದಿ: ಹೊಸ ಎಕ್ಸ್ಎಲ್6 ಬಿಡುಗಡೆ, ಇವಿ ಮಾರಾಟದಲ್ಲಿ ಟಾಟಾ ಹೊಸ ಸಾಧನೆ, ಸ್ಥಗಿತಗೊಂಡ ದಟ್ಸನ್ ಬ್ರಾಂಡ್!

ದುಬಾರಿ ಇಂಧನಗಳ ಪರಿಣಾಮ ಇವಿ ವಾಹನಗಳ ಮಾರಾಟವು ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಇವಿ ವಾಹನ ಮಾರಾಟವು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳಲ್ಲಿ ಇವಿ ಕಾರುಗಳ ಮಾರಾಟ ಹೆಚ್ಚಳ, ಇವಿ ವಾಹನಗಳ ಪೂರಕವಾದ ಯೋಜನೆಗಳ ಆರಂಭ ಸೇರಿದಂತೆ ಪ್ರಮುಖ ಸುದ್ದಿಗಳಿದ್ದು, ಕೆಳಗಿನ ಸ್ಲೈಡ್‌ಗಳಲ್ಲಿ ಮತ್ತಷ್ಟು ಮಾಹಿತಿಗಳೊಂದಿಗೆ ಒಂದೊಂದಾಗಿ ನೋಡೋಣ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ದಟ್ಸನ್ ಬ್ರಾಂಡ್

ಇತ್ತೀಚೆಗೆ ಉದ್ಯಮದಲ್ಲಿ ಭಾರೀ ನಷ್ಟದ ಪರಿಣಾಮ ಭಾರತದಿಂದ ಫೋರ್ಡ್ ಹೊರನಡೆದ ಬೆನ್ನಲ್ಲೇ ಇದೀಗ ನಿಸ್ಸಾನ್ ತನ್ನ ಅಧೀನದಲ್ಲಿರುವ ದಟ್ಸನ್ ಬ್ರಾಂಡ್ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಭಾರತದಲ್ಲಿ ದಟ್ಸನ್ ಬ್ರಾಂಡ್ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿದರೂ ಸಹ ಮುಂದಿನ 10 ವರ್ಷಗಳ ಅವಧಿಗೆ ಗ್ರಾಹಕರ ಸೇವೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಒದಗಿಸುವುದಾಗಿ ಘೋಷಣೆ ಮಾಡಿದೆ. ನಿಸ್ಸಾನ್ ಕಂಪನಿಯು ಜಾಗತಿಕ ಮಾರುಕಟ್ಟೆಯ ಕಾರ್ಯತಂತ್ರದ ಭಾಗವಾಗಿ ಹೆಚ್ಚು ಲಾಭದಾಯಕವಾದ ಪ್ರಮುಖ ಮಾದರಿಗಳು ಮತ್ತು ವಿಭಾಗಗಳ ಮೇಲೆ ಕೇಂದ್ರೀಕರಿಸಲು ಈ ನಿರ್ಧಾರ ಪ್ರಕಟಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಬೃಹತ್ ತ್ರಿ-ಚಕ್ರ ವಾಣಿಜ್ಯ ವಾಹನ ಉತ್ಪಾದನಾ ಘಟಕ ಆರಂಭ

ಫರಿದಾಬಾದ್‌ನಲ್ಲಿ ತಾತ್ಕಾಲಿಕ ಉತ್ಪಾದನಾ ಘಟಕದೊಂದಿಗೆ ಕಳೆದ ವರ್ಷ ಇವಿ ತ್ರಿ-ಚಕ್ರ ವಾಹನಗಳ ಉತ್ಪಾದನೆ ಆರಂಭಿಸಿದ್ದ ಓಮೆಗಾ ಸೈಕ್ ಕಂಪನಿಯು ಇದೀಗ ಬೃಹತ್ ಬಂಡವಾಳದೊಂದಿಗೆ ಬೆಂಗಳೂರಿನ ಗ್ರಾಮಾಂತರದಲ್ಲಿ ಸುಮಾರು 250 ಎಕರೆ ವಿಸ್ತೀರ್ಣದಲ್ಲಿ ಹೊಸ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಉತ್ಪಾದನಾ ಘಟಕದ ಉತ್ಪಾದನೆಗಾಗಿ ಕಂಪನಿಯು ಸುಮಾರು 250 ಮಿಲಿಯನ್ ಯುಎಸ್ ಡಾಲರ್(ರೂ.1,900 ಕೋಟಿ) ಹೂಡಿಕೆ ಮಾಡಿದ್ದು, ಹೊಸ ವಾಹನ ಉತ್ಪಾದನಾ ಘಟಕದಲ್ಲಿ ಕಂಪನಿಯು ಮುಂದಿನ ಮೂರು ವರ್ಷದೊಳಗಾಗಿ ವಾರ್ಷಿಕವಾಗಿ 10 ಲಕ್ಷ ಇವಿ ವಾಣಿಜ್ಯ ವಾಹನಗಳನ್ನು ಉತ್ಪಾದನೆ ಮಾಡಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಲಾಗ್9 ಇವಿ ಬ್ಯಾಟರಿ ಸೆಲ್ ಉತ್ಪಾದನಾ ಘಟಕ

ಭಾರತದಲ್ಲಿ ಸದ್ಯ ಪ್ರಮುಖ ಇವಿ ವಾಹನಗಳ ಕಂಪನಿಗಳು ಇವಿ ವಾಹನ ಉತ್ಪಾದನೆ ಸ್ಥಳೀಕರಣ ಅಳವಡಿಸಿಕೊಂಡರೂ ಬ್ಯಾಟರಿ ಸೌಲಭ್ಯಕ್ಕಾಗಿ ವಿದೇಶಿ ಮಾರುಕಟ್ಟೆಗಳನ್ನು ಅವಲಂಬಿಸಿರುವುದು ಹೆಚ್ಚಿನ ಮಟ್ಟದ ಬೆಲೆ ಹೊಂದಿರುವುದಕ್ಕೆ ಪ್ರಮುಖ ಕಾರಣವಾಗಿದ್ದು, ಸ್ಥಳೀಯವಾಗಿ ಬ್ಯಾಟರಿ ನಿರ್ಮಾಣ ಮಾಡಲು ಸದ್ಯ ಪ್ರಮುಖ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಬ್ಯಾಟರಿ ಉತ್ಪಾದನಾ ಘಟಕಗಳನ್ನು ನಿರ್ಮಾಣ ಮಾಡುತ್ತಿವೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಈ ನಿಟ್ಟಿನಲ್ಲಿ ಮಹತ್ವದ ಯೋಜನೆ ಆರಂಭಿಸಿದ ನಮ್ಮ ಬೆಂಗಳೂರು ಮೂಲದ ಲಾಗ್9 ಮೆಟೀರಿಯಲ್ಸ್‌ ಕಂಪನಿಯು ಸ್ಥಳೀಯವಾಗಿ ಬ್ಯಾಟರಿ ಸೆಲ್ ಉತ್ಪಾದನೆಯನ್ನು ಆರಂಭಿಸುತ್ತಿದ್ದು, ಪ್ರಾಯೋಗಿಕ ಪರೀಕ್ಷೆಗಳಲ್ಲಿ ಯಶಸ್ವಿ ಹೊಂದಿರುವ ಕಂಪನಿಯು ಇದೀಗ ಬೃಹತ್ ಪ್ರಮಾಣದಲ್ಲಿ ಬ್ಯಾಟರಿ ಸೆಲ್ ನಿರ್ಮಾಣಕ್ಕಾಗಿ ಪ್ರತ್ಯೇಕ ನಿಯಂತ್ರಿತ ಕಾರ್ಖಾನೆಯನ್ನು ಆರಂಭಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಇವಿ ಕಾರು ವಿತರಣೆಯಲ್ಲಿ ಹೊಸ ದಾಖಲೆ

ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಒಂದೇ ದಿನದಲ್ಲಿ ದಾಖಲೆಯ ವಿತರಣೆಯನ್ನು ನೋಂದಾಯಿಸಿದೆ. ತನ್ನ ಗ್ರಾಹಕರಿಗೆ ಒಂದೇ ದಿನದಲ್ಲಿ 101 ಇವಿ ಕಾರುಗಳನ್ನು ವಿತರಣೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಟಾಟಾ ಮೋಟಾರ್ಸ್ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಟಾಟಾ ಮೋಟಾರ್ಸ್ 70 ನೆಕ್ಸಾನ್ ಇವಿ ಮತ್ತು 31 ಟಿಗೋರ್ ಇವಿಗಳು ಸೇರಿ ಒಟ್ಟು 101 ಇವಿ ಕಾರುಗಳನ್ನು ಈ ತಿಂಗಳ ಆರಂಭದಲ್ಲಿ ಟಾಟಾ ಮೋಟಾರ್ಸ್ 712 ನೆಕ್ಸಾನ್ ಮತ್ತು ಟಿಗೋರ್ ಇವಿ ಮಾದರಿಗಳನ್ನು ಮಹಾರಾಷ್ಟ್ರ ಮತ್ತು ಗೋವಾದಲ್ಲಿ ವಿತರಣೆ ಮಾಡಿತ್ತು.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಬಿಡುಗಡೆ

ಹೊಸ ಎಕ್ಸ್ಎಲ್6 ಮಾದರಿಯು ಎರ್ಟಿಗಾ ಪ್ರೀಮಿಯಂ ಮಾದರಿಯಾಗಿ ಮಾರಾಟಗೊಳ್ಳುತ್ತಿದ್ದು, ನೆಕ್ಸಾ ಡೀಲರ್ಸ್ ಮೂಲಕ ಮಾರಾಟಗೊಳ್ಳುತ್ತಿರುವ ಹೊಸ ಎಕ್ಸ್ಎಲ್6 ಕಾರು ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಈ ಬಾರಿ ಪ್ರಮುಖ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬಂದಿದೆ. ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11.29 ಲಕ್ಷ ಬೆಲೆ ಹೊಂದಿದ್ದು, ಹೊಸ ಬದಲಾವಣೆಗಳು ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

2022ರ ಎಕ್ಸ್ಎಲ್6 ಮಾದರಿಯು ಅಲ್ಫಾ, ಜೆಟಾ, ಅಲ್ಫಾ ಪ್ಲಸ್ ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ರೂ. 11.29 ಲಕ್ಷದಿಂದ ಆರಂಭಗೊಂಡ ಟಾಪ್ ಎಂಡ್ ಮಾದರಿಗೆ ರೂ. 14.55 ಲಕ್ಷ ಬೆಲೆ ಹೊಂದಿದೆ. ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5 ಲೀಟರ್ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಮಾದರಿಯನ್ನು ಅಳವಡಿಸಲಾಗಿದ್ದು, 5 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋ ಗೇರ್‌ಬಾಕ್ಸ್ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಜೀಪ್ ಕಂಪಾಸ್ ನೈಟ್ ಈಗಲ್ ಎಡಿಷನ್

ಅಮೆರಿಕಾ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ತನ್ನ ಹೊಸ ಕಂಪಾಸ್ ನೈಟ್ ಈಗಲ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಜೀಪ್ ಕಂಪಾಸ್ ನೈಟ್ ಈಗಲ್ ಎಡಿಷನ್ ಆರಂಬಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.21.95 ಲಕ್ಷವಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಇದು ಗ್ಲಾಸ್ ಬ್ಲ್ಯಾಕ್ ಗ್ರಿಲ್ ಜೊತೆಗೆ ಅದೇ ರೀತಿ ಸಿದ್ಧಪಡಿಸಿದ ಗ್ರಿಲ್ ರಿಂಗ್‌ಗಳು, 18-ಇಂಚಿನ ಬ್ಲ್ಯಾಕ್ ಅಲಾಯ್ ವ್ಹೀಲ್ ಗಳು, ಬ್ಲ್ಯಾಕ್ ರೂಫ್ ರೈಲ್ ಗಳು, ಗ್ಲೋಸ್ ಬ್ಲ್ಯಾಕ್ ವಿಂಗ್ ಮಿರರ್‌ಗಳು ಮತ್ತು ಫಾಗ್ ಲ್ಯಾಂಪ್ ಬೆಜೆಲ್‌ಗಳನ್ನು ಪಡೆಯುತ್ತದೆ. ನೈಟ್ ಈಗಲ್ ಎಡಿಷನ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಿದ್ದು, 2.0-ಲೀಟರ್ ಟರ್ಬೊ, ಆರು-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ಮತ್ತು 1.4-ಲೀಟರ್ ಮಲ್ಟಿಏರ್ ಪೆಟ್ರೋಲ್ ಟರ್ಬೊ 7-ಸ್ಫೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್

ಲ್ಯಾಂಡ್ ರೋವರ್ ತನ್ನ ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಲ್ಯಾಂಡ್ ರೋವರ್ ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.26 ಕೋಟಿಯಾಗಿದೆ. ಹೊಸ ಎಡಿಷನ್ ಹಕುಬಾ ಸಿಲ್ವರ್, 20-ಇಂಚಿನ ಸ್ಯಾಟಿನ್ ಡಾರ್ಕ್ ಗ್ರೇ ಅಲಾಯ್ ವ್ಹೀಲ್ ಗಳು ಮತ್ತು ಬ್ಲ್ಯಾಕ್ ಲ್ಯಾಂಡ್ ರೋವರ್ ಬ್ರೇಕ್ ಕ್ಯಾಲಿಪರ್‌ಗಳನ್ನು ಒಳಗೊಂಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಎಡಿಷನ್ P360 ನ ಟರ್ಬೋಚಾರ್ಜ್ಡ್ 3.0-ಲೀಟರ್ ಎಂಜಿನ್ 5,500 ಮತ್ತು 6,500 ಆರ್‌ಪಿಎಂ ನಡುವೆ 355 ಬಿಹೆಚ್‍ಪಿ ಪವರ್ ಮತ್ತು 1,750 ಮತ್ತು 5,000 ಆರ್‌ಪಿಎಂ ನಡುವೆ 50 ಎನ್ಎಂ ಟಾರ್ಕ್ ಅನ್ನು ಉತ್ಪದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಎಕ್ಸ್4 ಸಿಲ್ವರ್ ಶ್ಯಾಡೋ ಎಡಿಷನ್

ಬಿಎಂಡಬ್ಲ್ಯು ಕಂಪನಿಯು ಹೊಸ ಎಕ್ಸ್4 ಸಿಲ್ವರ್ ಶ್ಯಾಡೋ ಮಾದರಿಯನ್ನು ಮೊದಲ ಬಾರಿಗೆ ಚೆನ್ನೈನಲ್ಲಿಯಲ್ಲಿರುವ ಕಾರು ಉತ್ಪಾದನಾ ಘಟಕದಲ್ಲಿ ಮರಜೋಡಣೆ ಕೈಗೊಂಡಿದ್ದು, ಹೊಸ ಕಾರು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಎರಡು ಮಾದರಿಗಳನ್ನು ಖರೀದಿಗೆ ಲಭ್ಯವಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಎಕ್ಸ್4 ಸಿಲ್ವರ್ ಶ್ಯಾಡೋ ಆವೃತ್ತಿಯ ಎಕ್ಸ್‌ಡ್ರೈವ್30ಐ ಮಾದರಿಯು ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದರೆ ಎಕ್ಸ್‌ಡ್ರೈವ್30ಡಿ ಮಾದರಿಯು ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಎಕ್ಸ್‌ಡ್ರೈವ್30ಐ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 71.90 ಲಕ್ಷ ಬೆಲೆ ಹೊಂದಿದ್ದರೆ ಎಕ್ಸ್‌ಡ್ರೈವ್30ಡಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 73.90 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Top auto news of the week maruti suzuki xl6 launched datsun discontinued and more
Story first published: Sunday, April 24, 2022, 8:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X