ವಾರದ ಸುದ್ದಿ: ಇವಿ ವಾಹನ ಸುರಕ್ಷತೆ ಹೊಸ ಮಾನದಂಡ, ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಬಿಡುಗಡೆ..

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೊಸ ಸುರಕ್ಷಾ ಮಾನದಂಡಗಳ ಬಿಡುಗಡೆ, ಹೊಸ ಕಾರುಗಳ ಬಿಡುಗಡೆ ಮತ್ತು ಕಾರುಗಳ ಅನಾವರಣ ಸುದ್ದಿಗಳು ಪ್ರಮುಖವಾಗಿದ್ದು, ಇದರ ಜೊತೆಗೆ ಆಟೋಮೊಬೈಲ್ ವಲಯದಲ್ಲಿ ಜರುಗಿದ ಈ ವಾರದ ಪ್ರಮುಖ ಸುದ್ದಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಒಂದೊಂದಾಗಿ ನೋಡೋಣ.

ಈ ವಾರದ ಪ್ರಮುಖ ಸುದ್ದಿಗಳು..

ಇವಿ ವಾಹನಗಳಿಗೆ ಅಕ್ಟೋಬರ್ 1ರಿಂದ ಹೊಸ ಸುರಕ್ಷಾ ಮಾನದಂಡ

ದೇಶಾದ್ಯಂತ ಇವಿ ವಾಹನಗಳ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವಾಗಲೇ ಹೆಚ್ಚುತ್ತಿರುವ ಅಗ್ನಿ ಅವಘಡಗಳು ಇವಿ ವಾಹನಗಳ ಸುರಕ್ಷತೆ ವಿಚಾರವು ಗ್ರಾಹಕರಲ್ಲಿ ಗೊಂದಲ ಮೂಡಿಸುತ್ತಿವೆ. ಇದರಿಂದ ಗ್ರಾಹಕರ ಸುರಕ್ಷತೆಗಾಗಿ ಹೊಸ ಇವಿ ವಾಹನಗಳಲ್ಲಿ ಇದೀಗ ಹಲವಾರು ಹೊಸ ಸುರಕ್ಷಾ ಮಾನದಂಡಗಳನ್ನು ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಕಳೆದ ಕೆಲ ತಿಂಗಳ ಹಿಂದಷ್ಟೇ ದೇಶಾದ್ಯಂತ ದಾಖಲಾದ ಸರಣಿ ಇವಿ ವಾಹನಗಳಲ್ಲಿನ ಅಗ್ನಿ ಅವಘಡ ಪ್ರಕರಣಗಳು ಇವಿ ಗ್ರಾಹಕರ ಆಯ್ಕೆಯ ಮೇಲೆ ಭಾರೀ ಪರಿಣಾಮ ಬೀರಿತ್ತು. ಆದರೆ ಇದೀಗ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ಸುರಕ್ಷಾ ಮಾನದಂಡಗಳು ಹೊಸ ಇವಿ ವಾಹನಗಳಿಗೆ ಉತ್ತಮ ಸುರಕ್ಷತೆ ಖಾತ್ರಿ ಪಡಿಸಲಿದ್ದು, ಮುಖ್ಯವಾಗಿ ಬ್ಯಾಟರಿ ಸ್ಪೋಟ ಪ್ರಕರಣಗಳನ್ನು ಪರಿಣಾಮಕಾರಿ ತಗ್ಗಿಸುವತ್ತ ಗಮನಹರಿಸಲಾಗಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಇವಿ ವಾಹನಗಳಲ್ಲಿ ಅಗ್ನಿ ಅವಘಡಗಳ ಕುರಿತಾಗಿ ಕುಲಂಕೂಶವಾಗಿ ಅಧ್ಯಯನ ನಡೆಸಿರುವ ತಜ್ಞರ ಸಮಿತಿಯ ಶಿಫಾರಸ್ಸು ಆಧರಿಸಿ ಕೇಂದ್ರ ಸಾರಿಗೆ ಸಚಿವಾಲಯವು ಅಕ್ಟೋಬರ್ 1ರಿಂದಲೇ ಹೊಸ ಸುರಕ್ಷಾ ಮಾನದಂಡಗಳನ್ನು ಜಾರಿಗೆ ತರಲು ಮುಂದಾಗಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಕಿಯಾ ಸೊನೆಟ್ ಎಕ್ಸ್ ಲೈನ್ ಬಿಡುಗಡೆ

ಕಿಯಾ ಇಂಡಿಯಾ ತನ್ನ ಜನಪ್ರಿಯ ಕಾರು ಮಾದರಿಯಾದ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಹೊಸದಾಗಿ ಎಕ್ಸ್ ಲೈನ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ. 13.39 ಲಕ್ಷ ಆರಂಭಿಕ ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಎಸ್‍ಯುವಿಯ ಟಾಪ್-ಸ್ಪೆಕ್ GTX+ ರೂಪಾಂತರವನ್ನು ಆಧರಿಸಿದೆ. ಸೊನೆಟ್ ಎಕ್ಸ್-ಲೈನ್ ಸ್ಟ್ಯಾಂಡರ್ಡ್ ಮಾದರಿಯೊಂದಿಗೆ ತನ್ನನ್ನು ಪ್ರತ್ಯೇಕಿಸಲು ಕೆಲವು ನವೀಕರಣಗಳನ್ನು ಪಡೆದುಕೊಂಡಿದೆ. ಸೊನೆಟ್ ಎಕ್ಸ್ ಲೈನ್‌ನ ಅತಿದೊಡ್ಡ ಕಾಸ್ಮೆಟಿಕ್ ಬದಲಾವಣೆಯೆಂದರೆ ಮ್ಯಾಟ್ ಗ್ರೇ ಪೇಂಟ್ ಸ್ಕೀಮ್‌ ಪಡೆದುಕೊಂಡಿದ್ದು, ಇದು ಭಾರತದಲ್ಲಿ ಸಬ್ -4-ಮೀಟರ್ ಎಸ್‌ಯುವಿಗಳಲ್ಲಿ ಹೊಸ ಬಣ್ಣದ ಆಯ್ಕೆಯಾಗಿದೆ. ಈ ಹೊಸ ಸೊನೆಟ್ ಎಕ್ಸ್ ಲೈನ್ ಎಸ್‍ಯುವಿಯಲ್ಲಿ 'ಟೈಗರ್ ನೋಸ್' ಗ್ರಿಲ್, ಮುಂಭಾಗ ಮತ್ತು ಹಿಂಭಾಗದ ಸ್ಕೀಡ್ ಪ್ಲೇಟ್‌ಗಳು ಮತ್ತು ರಿಯರ್ ವ್ಯೂ ಮಿರರ್‌ಗಳು ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಹೊಂದಿದೆ.

ಈ ವಾರದ ಪ್ರಮುಖ ಸುದ್ದಿಗಳು..

2022ರ ಎಂಜಿ ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆ

ಎಂಜಿ ಮೋಟಾರ್ ಕಂಪನಿಯು ತನ್ನ ಹೊಸ 2022ರ ಗ್ಲೊಸ್ಟರ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 31.99 ಲಕ್ಷ ಬೆಲೆಯೊಂದಿಗೆ ಹಲವಾರು ಅತ್ಯಾಧುನಿಕ ಫೀಚರ್ಸ್ ಹೊಂದಿದೆ.

ಈ ವಾರದ ಪ್ರಮುಖ ಸುದ್ದಿಗಳು..

2022ರ ಎಂಜಿ ಗ್ಲೊಸ್ಟರ್ ಎಸ್‌ಯುವಿಯು ಸೂಪರ್, ಶಾರ್ಪ್ ಮತ್ತು ಸ್ಯಾವಿ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದ್ದು, 6 ಸೀಟರ್ ಮತ್ತು 7 ಸೀಟರ್ ಆಯ್ಕೆ ಹೊಂದಿರುವ ಹೊಸ ಕಾರು ನವೀಕೃ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟ್ ಸಿಸ್ಟಮ್ (ADAS) ನೊಂದಿಗೆ ಡೋರ್ ಓಪನ್ ವಾರ್ನಿಂಗ್ (DOW), ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ (RCTA), ಮತ್ತು ಲೇನ್ ಚೇಂಜ್ ಅಸಿಸ್ಟ್ (LCA) ನಂತಹ ಹೆಚ್ಚುವರಿ ಮೊದಲ-ಇನ್-ಸೆಗ್ಮೆಂಟ್ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಈ ವಾರದ ಪ್ರಮುಖ ಸುದ್ದಿಗಳು..

ನೆಕ್ಸಾನ್ ಇವಿ ಜೆಟ್ ಎಡಿಷನ್ ಬಿಡುಗಡೆ

ಹೊಸದಾಗಿ ಬಿಡುಗಡೆಯಾಗಿರುವ ಟಾಟಾ ಜೆಟ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಫೀಚರ್ಸ್‌ ಮತ್ತು ವಿಶೇಷ ಬಣ್ಣದ ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ತಾಂತ್ರಿಕ ಸೌಲಭ್ಯಗಳು ಗ್ರಾಹಕರಿಗೆ ಪ್ರೀಮಿಯಂ ಅನುಭವ ನೀಡಲಿವೆ. ಜೆಟ್ ಆವೃತ್ತಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತಲೂ ವಿಭಿನ್ನವಾಗಿ ಕಾಣಲು ಹೊರಭಾಗ ಮತ್ತು ಒಳಭಾಗವನ್ನು ನವೀಕರಿಸಲಾಗಿದ್ದು, ನೆಕ್ಸಾನ್ ಇವಿ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಜೆಡ್ ಮತ್ತು ಎಕ್ಸ್‌ಜೆಡ್ ಪ್ಲಸ್ ಆವೃತ್ತಿಗಳಲ್ಲಿ ಜೆಟ್ ಎಡಿಷನ್ ಬಿಡುಗಡೆ ಮಾಡಲಾಗಿದೆ.

ಈ ವಾರದ ಪ್ರಮುಖ ಸುದ್ದಿಗಳು..

ನೆಕ್ಸಾನ್ ಇವಿ ಜೆಟ್ ಎಡಿಷನ್ ಆರಂಭಿಕ ಮಾದರಿಯು ರೂ. 17.50 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 19.54 ಲಕ್ಷ ಬೆಲೆ ಹೊಂದಿದೆ. ಹೊಸ ಮಾದರಿಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ವಿಶೇಷವಾದ ಸ್ಟಾರ್‌ಲೈಟ್ ಡ್ಯುಯಲ್ ಬಣ್ಣದೊಂದಿಗೆ ಪರಿಚಯಿಸಿದ್ದು, ಸ್ಟ್ಯಾಂಡರ್ಡ್ ಮಾದರಿಗಳಲ್ಲಿ ನೀಡಲಾಗಿರುವ ಬ್ಲ್ಯೂ ಆಕ್ಸೆಂಟ್ ಬದಲಾಗಿ ವೈಟ್ ಆಕ್ಸೆಂಟ್ ನೀಡಲಾಗಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಇನೋವಾ ಕ್ರಿಸ್ಟಾ ಪೆಟ್ರೋಲ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಟೊಯೊಟಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಎಂಪಿವಿ ಮಾದರಿಯಾದ ಇನೋವಾ ಕ್ರಿಸ್ಟಾದಲ್ಲಿ ಹೊಸ ಫೀಚರ್ಸ್ ಒಳಗೊಂಡ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಿದೆ. ಹೊಸ ಆವೃತ್ತಿಯು ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳಲ್ಲಿ ಖರೀದಿಸಬಹುದಾಗಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಹೊಸ ಆವೃತ್ತಿಗಳು ಜಿಎಕ್ಸ್ ರೂಪಾಂತರವನ್ನು ಆಧರಿಸಿರುವ ಲಿಮಿಟೆಡ್ ಎಡಿಷನ್ ಮ್ಯಾನುವಲ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 17.45 ಲಕ್ಷ ಬೆಲೆ ಹೊಂದಿದ್ದರೆ ಆಟೋಮ್ಯಾಟಿಕ್ ಮಾದರಿಯು ರೂ. 19.02 ಲಕ್ಷ ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಸುದ್ದಿಗಳು..

ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಬಿಡುಗಡೆ

ರೆನಾಲ್ಟ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಮುಖ ಕಾರುಗಳ ಸರಣಿಯಲ್ಲಿ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳನ್ನು ಬಿಡುಗಡೆ ಮಾಡಿದೆ. ವಿಶೇಷ ಮಾದರಿಗಳು ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಮುಂಬರುವ ದಸರಾ ಮತ್ತು ದೀಪಾವಳಿ ಸಂಭ್ರಮಕ್ಕಾಗಿ ಬಿಡುಗಡೆ ಮಾಡಲಾಗಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಫೆಸ್ಟಿವಲ್ ಲಿಮಿಟೆಡ್ ಎಡಿಷನ್‌ಗಳನ್ನು ರೆನಾಲ್ಟ್ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ಹೆಚ್ಚಿನ ಬೆಲೆಯೊಂದಿಗೆ ವಿಶೇಷ ಬಣ್ಣಗಳ ಆಯ್ಕೆ ಮತ್ತು ಹೆಚ್ಚುವರಿ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರಾಟ ಮಾಡಲಿದ್ದು, ವಿಶೇಷತೆ ಆವೃತ್ತಿಗಳ ಬಿಡುಗಡೆಯೊಂದಿಗೆ ಇಂದಿನಿಂದ ಬುಕಿಂಗ್ ಆರಂಭಿಸಲಾಗಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಭರ್ಜರಿ ಬೇಡಿಕೆ ಪಡೆದುಕೊಂಡ ಫೋಕ್ಸ್‌ವ್ಯಾಗನ್ ವರ್ಟಸ್

ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ವರ್ಟಸ್ ಸೆಡಾನ್ ಮಾದರಿಯು ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರು ಮಾರುಕಟ್ಟೆಗೆ ಪ್ರವೇಶಿಸಿದ ಕೇವಲ ಎರಡು ತಿಂಗಳ ಅವಧಿಯಲ್ಲಿ 5 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡು ಭರ್ಜರಿ ಪೈಪೋಟಿ ನೀಡಿದೆ.

ಈ ವಾರದ ಪ್ರಮುಖ ಸುದ್ದಿಗಳು..

ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ಕ್ರಮಾಂಕದ ಸೆಡಾನ್ ಮಾದರಿಗಳಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್ ಮತ್ತು ಹ್ಯುಂಡೈ ವೆರ್ನಾ ಕಾರುಗಳಿಗೆ ಪೈಪೋಟಿಯಾಗಿ ಬಿಡುಗಡೆಯಾದ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಇದುವರೆಗೆ ಸುಮಾರು 10 ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬುಕಿಂಗ್ ಪಡೆದುಕೊಂಡಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಬಿಡುಗಡೆಯಾಗಲಿವೆ ಟಾಟಾ ಹೊಸ ಪಿಕ್ಅಪ್ ಶ್ರೇಣಿಗಳು

ಪ್ರಯಾಣಿಕರ ಕಾರು ಮಾರಾಟದಲ್ಲಿ ಮಹತ್ವದ ಬದಲಾವಣೆಯನ್ನು ಅಳವಡಿಸಿಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ವಾಣಿಜ್ಯ ವಾಹನಗಳ ನಿರ್ಮಾಣದಲ್ಲೂ ಹಂತ-ಹಂತವಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ತಂತ್ರಜ್ಞಾನ ಬಳಕೆಯೊಂದಿಗೆ ಉತ್ಪಾದನಾ ಗುಣಮಟ್ಟವನ್ನು ಹೆಚ್ಚಿಸುತ್ತಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಹೊಸ ಟೀಸರ್ ಮೂಲಕ ಮಾರುಕಟ್ಟೆಯಲ್ಲಿರುವ ಏಸ್ ಗೋಲ್ಡ್, ಇಂಟ್ರಾ ವಿ-10, ಇಂಟ್ರಾ ವಿ-30 ಮತ್ತು ಯೋಧಾ ಪಿಕ್ಅಪ್ ಮಾದರಿಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ವಾಹನಗಳು ಸುಧಾರಿತ ವಿನ್ಯಾಸಗಳು, ಉನ್ನತೀಕರಿಸಿದ ವೈಶಿಷ್ಟ್ಯಗಳು ಮತ್ತು ನವೀಕರಿಸಿದ ತಂತ್ರಜ್ಞಾನದೊಂದಿಗೆ ಬರುವ ನಿರೀಕ್ಷೆಯಿದೆ.

Most Read Articles

Kannada
English summary
Top auto news of the week morth issues new ev norms renault limited edition launched and more
Story first published: Sunday, September 4, 2022, 9:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X