India
YouTube

ವಾರದ ಸುದ್ದಿ: ಇವಿ ಉತ್ಪಾದನೆ ದ್ವಿಗುಣ, ಹೋಂಡಾ ಸಿಟಿ ಹೈಬ್ರಿಡ್ ಅನಾವರಣ, ಕಾರು ಖರೀದಿ ಮತ್ತಷ್ಟು ತುಟ್ಟಿ..

ಆಟೋಮೊಬೈಲ್ ಮಾರುಕಟ್ಟೆಯು ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಇದರ ನಡುವೆ ದುಬಾರಿ ಇಂಧನಗಳ ಪರಿಣಾಮ ಇವಿ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆ ಕಂಡುಬರುತ್ತಿದೆ. ಆದರೆ ಇವಿ ವಾಹನ ಮಾರಾಟವು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಮತ್ತಷ್ಟು ಮಾಹಿತಿಗಳೊಂದಿಗೆ ಒಂದೊಂದಾಗಿ ನೋಡೋಣ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

2022ರ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ಘೋಷಣೆ

ಜಾಗತಿಕ ಆಟೋ ಉದ್ಯಮದಲ್ಲಿನ ಬದಲಾವಣೆಗಾಗಿ ನೀಡಲಾಗುವ ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು, ವಿವಿಧ ವಿಭಾಗಗಳಲ್ಲಿ ಪ್ರಮುಖ ಐಷಾರಾಮಿ ಕಾರುಗಳನ್ನು ಹಿಂದಿಕ್ಕಿರುವ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕಾರು ಮಾದರಿಯು ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ವಾರದ ಸುದ್ದಿ

ವಿಶ್ವಾದ್ಯಂತ ಜನಪ್ರಿಯ ಕಾರು ಮಾದರಿಗಳಿಗೆ ಪ್ರತಿ ವರ್ಷ ನೀಡಲಾಗುವ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ(ವರ್ಲ್ಡ್ ಕಾರ್ ಆಫ್ ಇಯರ್) 2022ರ ಆವೃತ್ತಿಯು ಹಲವು ಹೊಸ ಮಾದರಿಗಳ ನಡುವಿನ ಪೈಪೋಟಿ ನಡುವೆ ಎಲೆಕ್ಟ್ರಿಕ್ ಕಾರು ಮಾದರಿಗಳು ಸಾಂಪ್ರದಾಯಿಕ ಕಾರು ಮಾದರಿಗಳನ್ನು ಹಿಂದಿಕ್ಕಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ.

ವಾರದ ಸುದ್ದಿ

ಇವಿ ವಾಹನಗಳ ನೋಂದಣಿಯಲ್ಲಿ ಹೊಸ ಮೈಲಿಗಲ್ಲು

ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನ ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವುದು ಮಹತ್ವದ ಬದಲಾವಣೆಗೆ ಕಾರಣವಾಗುತ್ತಿದೆ.

ವಾರದ ಸುದ್ದಿ

ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಇವಿ ವಾಹನ ಮಾರಾಟವು ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ರಾಜ್ಯ ಸಾರಿಗೆ ಇಲಾಖೆಯಲ್ಲಿ ಮೊದಲ ಬಾರಿಗೆ ಇವಿ ವಾಹನಗಳ ನೋಂದಣಿ ಪ್ರಮಾಣವು 1 ಲಕ್ಷ ಮಾದರಿಗಳ ಗುರಿತಲುಪಿದೆ.

ವಾರದ ಸುದ್ದಿ

2022ರ ಮಾರುತಿ ಸುಜುಕಿ ಎರ್ಟಿಗಾ ಬಿಡುಗಡೆ

2022ರ ಎರ್ಟಿಗಾದಲ್ಲಿ ಮಾರುತಿ ಸುಜುಕಿ ಕಂಪನಿಯು ಎಂಜಿನ್ ಬದಲಾವಣೆ ಸೇರಿದಂತೆ ಹಲವಾರು ಹೆಚ್ಚುವರಿ ಸುರಕ್ಷಾ ಸೌಲಭ್ಯಗಳು ಮತ್ತು ಪ್ರಮುಖ ಪ್ರೀಮಿಯಂ ಸೌಲಭ್ಯಗಳನ್ನು ಅಳವಡಿಸಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.79 ಲಕ್ಷ ಬೆಲೆ ಹೊಂದಿದೆ.

ವಾರದ ಸುದ್ದಿ

2022ರ ಎರ್ಟಿಗಾ ಮಾದರಿಯ ನವೀಕೃತ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್‌ಜಿ ಮಾದರಿಯ ಆಯ್ಕೆಯನ್ನು ಸಹ ಹೊಂದಿದ್ದು, ಹೊಸ ಮಾದರಿಯಲ್ಲಿ ಈ ಹಿಂದಿನ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಬದಲಾಗಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5 ಲೀಟರ್ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಮಾದರಿಯನ್ನು ಅಳವಡಿಸಲಾಗಿದೆ.

ವಾರದ ಸುದ್ದಿ

ಸಿಟಿ ಇ-ಹೆಚ್‌ಇವಿ ಹೈಬ್ರಿಡ್ ಕಾರು ಅನಾವರಣ

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿದ್ದು, 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಸಂಯೋಜಿಸುವ ಹೈಬ್ರಿಡ್ ಪವರ್‌ಟ್ರೇನ್ ಸೆಟಪ್ ಅನ್ನು ಹೊಂದಿದೆ.

ವಾರದ ಸುದ್ದಿ

ಸಿಟಿ ಇಹೆಚ್‌ಇವಿಯ ಹೈಬ್ರಿಡ್ ಪವರ್‌ಟ್ರೇನ್ ಎಲೆಕ್ಟ್ರಿಕಲ್ ನಿರಂತರವಾಗಿ ವೇರಿಯಬಲ್ ಟ್ರಾನ್ಸ್‌ಮಿಷನ್ (ಇ-ಸಿವಿಟಿ) ಮೂಲಕ ಮುಂಭಾಗದ ಚಕ್ರಗಳಿಗೆ ಪವರ್ ಕಳುಹಿಸಲಿದ್ದು, ಹೊಸ ಕಾರು ಪ್ರತಿ ಲೀಟರ್‌ಗೆ ಗರಿಷ್ಠ 26.5 ಕಿ.ಮೀ ಮೈಲೇಜ್ ನೀಡುತ್ತದೆ. ಜೊತೆಗೆ ಪ್ಯೂರ್ ಎಲೆಕ್ಟ್ರಿಕ್ ಇವಿ, ಹೈಬ್ರಿಡ್ ಮತ್ತು ಎಂಜಿನ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳಿದ್ದು, ಈ ತಿಂಗಳಾಂತ್ಯಕ್ಕೆ ಹೊಸ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

ವಾರದ ಸುದ್ದಿ

ಇವಿ ಕಾರು ಉತ್ಪಾದನೆ ದ್ವಿಗುಣಗೊಳಿಸಲಿದೆ ಟಾಟಾ

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ನೆಕ್ಸಾನ್ ಇವಿ , ಟಿಗೋರ್ ಇವಿ ಮತ್ತು ಎಕ್ಸ್‌ಪ್ರೆಸ್-ಟಿ ಇವಿ ಕಾರು ಮಾದರಿಗಳ ಮಾರಾಟದೊಂದಿಗೆ ಹೊಸ ದಾಖಲೆಗಳಿಗೆ ಕಾರಣವಾಗಿದೆ.

ವಾರದ ಸುದ್ದಿ

ವರದಿಗಳ ಪ್ರಕಾರ ಟಾಟಾ ಮೋಟಾರ್ಸ್ ಕಂಪನಿಯು ಪ್ರತಿ ತಿಂಗಳು 5,500 ರಿಂದ 6,000 ಯುನಿಟ್ ಎಲೆಕ್ಟ್ರಿಕ್ ಕಾರುಗಳಿಗೆ ಬುಕಿಂಗ್ ತೆಗೆದುಕೊಳ್ಳುತ್ತಿದ್ದು, ಸದ್ಯ ಕಂಪನಿಯು ಪ್ರತಿ ತಿಂಗಳು ಮೂರು ಸಾವಿರದಿಂದ ಮೂರುವರೆ ಸಾವಿರ ಯುನಿಟ್ ಮಾತ್ರ ಉತ್ಪಾದನೆ ಮಾಡಿ ವಿತರಣೆಗೊಳಿಸುತ್ತಿದೆ. ಹೀಗಾಗಿ ಶೀಘ್ರದಲ್ಲೇ ನಿಗದಿತ ಅವಧಿಯಲ್ಲಿ ಗ್ರಾಹಕರ ಬೇಡಿಕೆಗಳ ಪೂರೈಕೆಗಾಗಿ ಉತ್ಪಾದನಾ ಪ್ರಮಾಣ ಹೆಚ್ಚಿಸಲು ನಿರ್ಧರಿಸಿದ್ದು, ಉತ್ಪಾದನಾ ಪ್ರಮಾಣವು ಹೆಚ್ಚಳಗೊಂಡರೆ ವಿತರಣೆ ಅವಧಿಯನ್ನು ತಗ್ಗಿಸಲು ಸಹಕಾರಿಯಾಗಲಿದೆ.

ವಾರದ ಸುದ್ದಿ

ಮಾರುತಿ ಸುಜುಕಿ ಎಕ್ಸ್ಎಲ್6 ಬುಕಿಂಗ್ ಆರಂಭ

2022ರ ಎಕ್ಸ್ಎಲ್6 ಮಾದರಿಯು ಎರ್ಟಿಗಾ ಮಾದರಿಯೆಂತೆ ಹಲವಾರು ಹೊಸ ಸೌಲಭ್ಯಗಳೊಂದಿಗೆ ಹಲವು ಹೊಸ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳುತ್ತಿದ್ದು, ಇದೇ ತಿಂಗಳು 21ರಂದು ಬಿಡುಗಡೆಯಾಗಲಿರುವ ಹೊಸ ಕಾರು ಖರೀದಿಗಾಗಿ ಕಂಪನಿಯು ಈಗಾಗಲೇ ರೂ.11 ಸಾವಿರ ಮುಂಗಡದೊಂದಿಗೆ ಬುಕಿಂಗ್ ಆರಂಭಿಸಿದೆ.

ವಾರದ ಸುದ್ದಿ

2022ರ ಎಕ್ಸ್ಎಲ್6 ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಎಕ್ಸ್ಎಲ್6 ಮಾದರಿಗಾಗಿ ಕಂಪನಿಯು ಈ ಬಾರಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸೇರಿದಂತೆ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಬಂಪರ್ ಮತ್ತು ಹೆಡ್‌ಲೈಟ್ ಕ್ಲಸ್ಟರ್ ವಿನ್ಯಾಸವನ್ನು ಬದಲಾವಣೆ ಮಾಡಲಿದೆ.

ವಾರದ ಸುದ್ದಿ

ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಉತ್ಪಾದನಾ ವೆಚ್ಚವನ್ನು ಸರಿದೂಗಿಸಲ ದರ ಹೆಚ್ಚಿಸಲಾಗುತ್ತಿದೆ. ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದ್ದು, ಕಳೆದ ಜನವರಿಯಲ್ಲಿ ದರ ಹೆಚ್ಚಿಸಿದ್ದ ಪ್ರಮುಖ ವಾಹನ ಉತ್ಪಾದನಾ ಕಂಪನಿಯು ಇದೀಗ ವರ್ಷದಲ್ಲಿ ಎರಡನೇ ಬಾರಿಗೆ ದರ ಹೆಚ್ಚಿಸಿವೆ.

ವಾರದ ಸುದ್ದಿ

ಹೊಸ ದರಪಟ್ಟಿಯಲ್ಲಿ ಎಂಟ್ರಿ ಲೆವಲ್ ಕಾರುಗಳ ಬೆಲೆಯು ರೂ. 5 ಸಾವಿರದಿಂದ ರೂ. 15 ಸಾವಿರ ತನಕ ಹೆಚ್ಚಳವಾಗಿದ್ದರೆ, ಮಧ್ಯಮ ಕ್ರಮಾಂಕದ ಕಾರುಗಳ ಬೆಲೆಯಲ್ಲಿ ರೂ. 10 ಸಾವಿರದಿಂದ ರೂ. 60 ಸಾವಿರ ತನಕ ಮತ್ತು ರೂ. 20 ಲಕ್ಷ ಮೌಲ್ಯ ಮೇಲ್ಪಟ್ಟ ಎಸ್‌ಯುವಿ ಕಾರುಗಳ ಬೆಲೆಯಲ್ಲಿ ರೂ.40 ಸಾವಿರ ರೂ.90 ಸಾವಿರ ತನಕ ದರ ಹೆಚ್ಚಳವಾಗಿವೆ.

ವಾರದ ಸುದ್ದಿ

ಐಷಾರಾಮಿ ಕಾರುಗಳ ಬೆಲೆಗಳಲ್ಲೂ ಕೂಡಾ ವಿವಿಧ ಮಾದರಿಗಳನ್ನು ಆಧರಿಸಿ ಶೇ.1 ರಿಂದ ಶೇ.3 ರ ತನಕ ದರ ಹೆಚ್ಚಳವಾಗಬಹುದಾಗಿದ್ದು, ರೂ.50 ಸಾವಿರದಿಂದ ರೂ. 2 ಲಕ್ಷದ ತನಕ ದರ ಹೆಚ್ಚಳವಾಗಿವೆ. ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿದ್ದು, ಪ್ರಮುಖ ವಾಹನಗಳ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿರುವುದು ಆಟೋ ಉತ್ಪಾದನಾ ಕಂಪನಿಗಳ ಆದಾಯಕ್ಕೆ ಹೊಡೆತ ನೀಡುತ್ತದೆ.

Most Read Articles

Kannada
English summary
Top auto news of the week new ertiga launched new city hybrid unveiled details
Story first published: Sunday, April 17, 2022, 9:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X