ವಾರದ ಸುದ್ದಿ: ಹಳೆ ವಾಹನಗಳ ಮರು ನೋಂದಣಿ ದರ ಹೆಚ್ಚಳ, ಫೋರ್ಡ್ ಕಾರು ಉತ್ಪಾದನಾ ಘಟಕ ಟಾಟಾ ಪಾಲು..

ಸೆಮಿಕಂಡಕ್ಟರ್ ಕೊರತೆ ನಡುವೆಯೂ ಹೊಸ ಕಾರುಗಳ ಬಿಡುಗಡೆ ಜೋರಾಗಿದ್ದು, ಟೊಯೊಟಾ ಹೊಸ ಗ್ಲಾಂಝಾ ಬಿಡುಗಡೆಯಾಗಿದೆ. ಜೊತೆಗೆ ಮಹೀಂದ್ರಾ ಕಂಪನಿಯು ತನ್ನ ಮೊದಲ ಬಾರ್ನ್ ಇವಿ ಸರಣಿ ಮಾದರಿಯ ಟೀಸರ್ ಅನಾವರಣಗೊಳಿಸಿದ್ದು, ಇದರ ನಡುವೆ ಹಳೆಯ ವಾಹನಗಳಿಗೆ ಬ್ರೇಕ್ ಹಾಕಲು ನೋಂದಣಿ ಶುಲ್ಕವನ್ನು ಸಹ ಹೆಚ್ಚಿಸಲಾಗುತ್ತಿದೆ. ಈ ವಾರದ ಪ್ರಮುಖ ಸುದ್ದಿಗಳಲ್ಲಿ ವಿವಿಧ ಹೊಸ ವಾಹನಗಳ ಬಿಡುಗಡೆಯ ಮಾಹಿತಿ ಜೊತೆಗೆ ಆಟೋ ಉದ್ಯಮದಲ್ಲಿನ ಬೆಳವಣಿಗೆಗಳ ಕುರಿತು ಕೆಳಗಿನ ಸ್ಲೈಡ್‌ಗಳಲ್ಲಿ ಒಂದೊಂದಾಗಿ ನೋಡೋಣ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಟೊಯೊಟಾ ಗ್ಲಾಂಝಾ ಬಿಡುಗಡೆ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಬಹುನಿರೀಕ್ಷಿತ ಗ್ಲಾಂಝಾ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಗ್ಲಾಂಝಾ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.39 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.69 ಲಕ್ಷ ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಗ್ಲಾಂಝಾ ಹೊಸ ಕಾರಿನಲ್ಲಿ 1.2-ಲೀಟರ್ ಡ್ಯುಯಲ್-ಜೆಟ್ ಪೆಟ್ರೋಲ್ ಎಂಜಿನ್‌ ಜೋಡಿಸಲಾಗಿದ್ದು, 89 ಬಿಹೆಚ್‌ಪಿ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದ್ದು, ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಿಸಲಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹಳೆ ವಾಹನಗಳ ಮರು ನೋಂದಣಿ ನವೀಕರಣ ಮತ್ತಷ್ಟು ದುಬಾರಿ

ಕೇಂದ್ರ ಸರ್ಕಾರವು 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿ ಜಾರಿಯಾಗಿರುವುದರಿಂದ ಹಳೆ ವಾಹನಗಳ ಮರು ನೋಂದಣಿ ನವೀಕರಣ ಶುಲ್ಕವನ್ನು ಬರೋಬ್ಬರಿ 8 ಪಟ್ಟು ಹೆಚ್ಚಳ ಮಾಡಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಸಂಬಂಧ ಆದೇಶವನ್ನು ಹೊರಡಿಸಿದ್ದು, 15 ವರ್ಷಗಳ ಹಳೆಯ ವಾಹನ ನೋಂದಣಿ ನವೀಕರಣ ಶುಲ್ಕವನ್ನು ರೂ. 600 ರಿಂದ ರೂ. 5 ಸಾವಿರಕ್ಕೆ ಏರಿಕೆ ಮಾಡಿದ್ದು, 2022ರ ಏಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ದ್ವಿಚಕ್ರ ವಾಹನಗಳ ನೋಂದಣಿ ನವೀಕರಣ ದರ ರೂ. 300ರಿಂದ ರೂ. 1 ಸಾವಿರಕ್ಕೆ ಏರಿಕೆಯಾಗಲಿದೆ. 15 ವರ್ಷ ಮೇಲ್ಪಟ್ಟ ಬಸ್, ಟ್ರಕ್‌ಗಳಿಗೆ ಫಿಟ್‌ನೆಸ್ ಪ್ರಮಾಣ ಪತ್ರ ನವೀಕರಣ ಶುಲ್ಕ 1,500 ರೂ.ನಿಂದ 12,500 ರೂ.ಗೆ ಹೆಚ್ಚಳ ಆಗಲಿದೆ. ಜೊತೆಗೆ 15 ವರ್ಷ ಹಳೆಯ ವಾಹನಗಳ ಬಳಕೆಯನ್ನು ಮುಂದುವರೆಸಿದರೆ 5 ವರ್ಷಗಳಿಗೆ ಒಮ್ಮೆ ನೋಂದಣಿ ನವೀಕರಿಸಬೇಕಾಗುತ್ತದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಫೋರ್ಡ್ ಉತ್ಪಾದನಾ ಘಟಕ ಟಾಟಾ ಪಾಲು

ಭಾರತದಲ್ಲಿ ಕಾರು ಉತ್ಪಾದನೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿರುವ ಫೋರ್ಡ್ ಇಂಡಿಯಾ ಕಂಪನಿಯು ತನ್ನ ಬೃಹತ್ ಕಾರು ಉತ್ಪಾದನಾ ಘಟಕದ ಸ್ಟಾಕ್ ಮಾರಾಟ ಮಾಡಲು ನಿರ್ಧರಿಸಿದ್ದು, ಗುಜುರಾತಿನ ಸನಂದ್‌ನಲ್ಲಿರುವ ಕಾರು ಉತ್ಪಾದನಾ ಘಟಕವನ್ನು ದೇಶದ ಮುಂಚೂಣಿ ಕಾರು ಉತ್ಪಾದನಾ ಕಂಪನಿಯಾದ ಟಾಟಾ ಮೋಟಾರ್ಸ್ ಖರೀದಿಗೆ ಸಿದ್ದವಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಟಾಟಾ ಮೋಟಾರ್ಸ್ ಕಂಪನಿಯು ಫೋರ್ಡ್ ಘಟಕವನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದು ಬಹುತೇಕ ಖಚಿತವಾಗಿದ್ದು, ಉತ್ಪಾದನಾ ಘಟಕ ಮಾಲೀಕತ್ವ ಬದಲಾವಣೆಗಾಗಿ ಎರಡು ಕಂಪನಿಗಳು ಒಪ್ಪಿಗೆ ಪತ್ರ ಸಲ್ಲಿಸಿವೆ. ಮುಂಬರುವ ಕೆಲವೇ ವಾರಗಳಲ್ಲಿ ಉತ್ಪಾದನಾ ಘಟಕ ಮಾಲೀಕತ್ವ ಬದಲಾವಣೆಗಾಗಿ ಅನುಮೋದನೆ ಸಿಗಲಿದ್ದು, ಗುಜರಾತ್ ರಾಜ್ಯ ಸರ್ಕಾರ ರಚಿಸಿರುವ ಹೈ ಪವರ್ ಸಮಿತಿಯು ಹೊಸ ಪ್ರಸ್ತಾವನೆಗೆ ಶೀಘ್ರವೇ ಅನುಮೋದನೆ ನೀಡಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೈಡ್ರೋಜನ್ ಚಾಲಿತ ಟೊಯೊಟಾ ಮಿರಾಯ್ ಭಾರತಕ್ಕೆ!

ಭಾರತ ಸರ್ಕಾರದ ಆಟೋಮೋಟಿವ್ ಟೆಸ್ಟಿಂಗ್ ಏಜೆನ್ಸಿಯಾಗಿರುವ iCAT (ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ) ಜೊತೆಗೆ ಟೊಯೊಟಾ ಕಂಪನಿಯ ಮಿರಾಯ್ ಫ್ಯೂಲ್ ಸೆಲ್ ಎಲೆಕ್ಟ್ರಿಕ್ ವಾಹನವನ್ನು (ಎಫ್‌ಸಿಇವಿ) ಅಧ್ಯಯನ ಮಾಡಲು ಮತ್ತು ಮೌಲ್ಯಮಾಪನ ಮಾಡಲು ಭಾರತದಲ್ಲಿ ಬಿಡುಗಡೆ ಮಾಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕೇಂದ್ರ ಸರ್ಕಾರ ಪಳೆಯುಳಿಕೆ ಇಂಧನಗಳ ಮೇಲಿನ ನಮ್ಮ ಪ್ರಸ್ತುತ ಅವಲಂಬನೆಯನ್ನು ಪರಿಗಣಿಸಿ ಹೊಸ ಅಧ್ಯಯನಕ್ಕೆ ಚಾಲನೆ ನೀಡಿದ್ದು, ಹೈಡ್ರೋಜನ್ ಇಂಧನ ಸೆಲ್ ಕಾರುಗಳನ್ನು ಬಳಸಲು ಇರುವ ಬಹುತೇಕ ಸಾಧ್ಯತೆಗಳನ್ನು ಸಹ ಪರಿಶೀಲಿಸುತ್ತಿದೆ. ಇದರ ಭಾಗವಾಗಿ ಐಸಿಎಟಿ ನಡೆಸುತ್ತಿರುವ ಪ್ರಾಯೋಗಿಕ ಯೋಜನೆಯಾದ ಎರಡನೇ ತಲೆಮಾರಿನ ಟೊಯೋಟಾ ಮಿರಾಯ್ ಫ್ಯೂಯಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ) ಯೋಜನೆಯನ್ನು ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ಉದ್ಘಾಟಿಸಿದರು.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಆಡಿ A6 ಅವಂತ್ ಇ-ಟ್ರಾನ್ ಕಾನ್ಸೆಪ್ಟ್‌ ಅನಾವರಣ

ಆಡಿ ಕಂಪನಿಯು ತನ್ನ ಬಹುನಿರೀಕ್ಷಿತ ಎ6 ಅವಂತ್ ಇ-ಟ್ರಾನ್ ಕಾನ್ಸೆಪ್ಟ್‌ ಮಾದರಿಯನ್ನು ಅನಾವರಣಗೊಳಿಸಿದ್ದು, ಈ ಉತ್ಪಾದನಾ ಮಾದರಿಯು 2024ರಲ್ಲಿ ಮಾರುಕಟ್ಟೆಗೆ ಬರಲಿದೆ. 2021ರ ಶಾಂಘೈ ಮೋಟಾರ್ ಶೋನಲ್ಲಿ ಬಹಿರಂಗಪಡಿಸಿದ A6 ಸ್ಪೋರ್ಟ್‌ಬ್ಯಾಕ್ ಎಲೆಕ್ಟ್ರಿಕ್ ಕಾರಿನ ನಂತರ ಹೊರಬರುತ್ತಿರುವ ಎರಡನೇ EV ಆಗಿ ಹೊಸ ಆಡಿ ಎ6 ಅವಂತ್ ಇ-ಟ್ರಾನ್ ಹೊರಹೊಮ್ಮುತ್ತಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಕಾರು ಶಕ್ತಿಯುತ 800 ವೋಲ್ಟ್ ತಂತ್ರಜ್ಞಾನ, 270 kW ಚಾರ್ಜಿಂಗ್ ಸಾಮರ್ಥ್ಯ ಮತ್ತು WLTP ಜೋಡಣೆ ಹೊಂದಿದ್ದು, ಇದು ಪ್ರತಿ ಚಾರ್ಜ್‌ಗೆ 700 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಡ್ಯುಯಲ್-ಮೋಟರ್ ಸೆಟಪ್‌ನಿಂದಾಗಿ 469 ಬಿಎಚ್‌ಪಿ ಮತ್ತು 800 ಎನ್ಎಂ ಪಿಕ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಸೂಪರ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 10-ನಿಮಿಷದ ಚಾರ್ಜ್‌ನಿಂದ ಕನಿಷ್ಠ 300 ಕಿಲೋಮೀಟರ್‌ ಚಲಿಸುವ ಸಾಮರ್ಥ್ಯವಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಸಿಎನ್‌ಜಿ ಕಾರುಗಳ ಮಾರಾಟದಲ್ಲಿ ಮಾರುತಿ ಹೊಸ ಮೈಲಿಗಲ್ಲು

ಪೆಟ್ರೋಲ್ ಮಾದರಿಗಳ ಜೊತೆಗೆ ಜನಪ್ರಿಯ ಕಾರು ಮಾದರಿಗಳಾದ ಆಲ್ಟೊ, ವ್ಯಾಗನ್‌ಆರ್, ಸೆಲೆರಿಯೊ, ಎಸ್ ಪ್ರೆಸ್ಸೊ, ಇಕೋ, ಡಿಜೈರ್ ಎರ್ಟಿಗಾ ಮತ್ತು ಟೂರ್ ಎಸ್ ಮಾದರಿಯಲ್ಲಿ ಸಿಎನ್‌ಜಿ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಮಾರುತಿ ಸುಜುಕಿ ಕಂಪನಿಯು ಕೆಲವೇ ವರ್ಷಗಳಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಸಿಎನ್‌ಸಿ ಕಾರುಗಳ ಮಾರಾಟದಲ್ಲಿ ದೊಡ್ಡ ಮಟ್ಟದ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಮಾರುತಿ ಸುಜುಕಿ ಕಂಪನಿಯು ಕಳೆದ 12 ವರ್ಷಗಳಲ್ಲಿ ಸುಮಾರು 10 ಲಕ್ಷ ಕಾರುಗಳನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲು ಸಾಧಿಸಿದೆ. ಮಾರುತಿ ಸುಜುಕಿ ಕಂಪನಿಯು ಎಸ್-ಸಿಎನ್‌ಜಿ ಹೆಸರಿನಲ್ಲಿ ಸಿಎನ್‌ಜಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಕಂಪನಿಯು ವೈಯಕ್ತಿಕ ಮತ್ತು ವಾಣಿಜ್ಯ ವಿಭಾಗದಲ್ಲಿ ಕಾರ್ಯಾಚರಣೆಗಾಗಿ ಒಟ್ಟು 9 ಸಿಎನ್‌ಜಿ ಕಾರುಗಳನ್ನು ಮಾರಾಟ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕಾರೆನ್ಸ್ ಎಂಯುವಿ ಗ್ರಾಹಕರಿಗೆ ಹೊಸ ಸರ್ವಿಸ್ ಪ್ಯಾಕೇಜ್

ಕಿಯಾ ಇಂಡಿಯಾ ಕಂಪನಿಯು ಕಾರೆನ್ಸ್ ಎಂಯುವಿ ಮೂಲಕ ಕಾರು ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಳ್ಳುತ್ತಿದ್ದು, ಕಾರೆನ್ಸ್ ಹೊಸ ಮಾದರಿಯ ಮಾಲೀಕರಿಗೆ ಕಂಪನಿಯು ಮಾರಾಟ ನಂತರದ ಪ್ರಮುಖ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ನೀಡುವ ಉದ್ದೇಶದಿಂದ 'ಮೈ ಕನ್ವೀನಿಯನ್ಸ್ ಪ್ಯಾಕೇಜ್' ಅನ್ನು ಪರಿಚಯಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಮೈ ಕನ್ವೀನಿಯನ್ಸ್ ಪ್ಯಾಕೇಜ್‌ನಲ್ಲಿ ಗ್ರಾಹಕರು ನಿಯಮಿತ ನಿರ್ವಹಣೆ, ವಿಸ್ತೃತ ವಾರಂಟಿ, ಟೈರ್, ಅಪಘಾತ ದುರಸ್ತಿ ಮತ್ತು ರಸ್ತೆ ಬದಿಯ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಇದಲ್ಲದೆ ಕಾರೆನ್ಸ್ ಗ್ರಾಹಕರಿಗಾಗಿ ಕಿಯಾ ಕಂಪನಿಯು ಕಾರ್ ಶೀಲ್ಡ್ ಪ್ಯಾಕೇಜ್ ಅನ್ನು ಸಹ ಬಿಡುಗಡೆ ಮಾಡಿದ್ದು, ಕಾರ್ ಶೀಲ್ಡ್ ಪ್ಯಾಕೇಜ್ ಅಡಿಯಲ್ಲಿ ಕಂಪನಿಯು ಅಪಘಾತದಲ್ಲಿ ಉಂಟಾಗುವ ಹಾನಿಯನ್ನು ಭರಿಸುತ್ತದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಇವಿ ಕಾರಿನ ಟೀಸರ್ ಬಿಡುಗಡೆ ಮಾಡಿದ ಮಹೀಂದ್ರಾ

ಪ್ರತ್ಯೇಕವಾದ ಇವಿ ಪ್ಲ್ಯಾಟ್‌ಫಾರ್ಮ್ ಮೇಲೆ ಮಹೀಂದ್ರಾ ಕಂಪನಿಯು ಹೊಸ ಎಸ್‌ಯುವಿ ಮಾದರಿಗಳನ್ನು ಅಭಿವೃದ್ದಿಗೊಳಿಸುತ್ತಿದ್ದು, ಮೂರು ಹೊಸ ಇವಿ ಕಾರಿಗಳಲ್ಲಿ ಮೊದಲ ಇವಿ ಎಸ್‌‌ಯುವಿ ಕಾರಿನ ಟೀಸರ್ ಹಂಚಿಕೊಂಡಿರುವ ಕಂಪನಿಯು ಮುಂಬರುವ ಜುಲೈನಲ್ಲಿ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸುವುದಾಗಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಮಹೀಂದ್ರಾ ಕಂಪನಿಯು ಬಾರ್ನ್ ಇವಿ ಪರಿಕಲ್ಪನೆ ಅಡಿ ಹೊಸ ಇವಿ ಕಾರುಗಳನ್ನು ಯುಕೆಯಲ್ಲಿರುವ ತನ್ನ ಅಡ್ವಾನ್ಸ್ಡ್ ಡಿಸೈನ್ ಸ್ಟುಡಿಯೋದಲ್ಲಿ ವಿನ್ಯಾಸಗೊಳಿಸುತ್ತಿದ್ದು, ಹೊಸ ಶ್ರೇಣಿಯ ಇವಿ ಕಾರುಗಳನ್ನು 2025 ಮತ್ತು 2026ರ ನಡುವೆ ಪರಿಚಯಿಸಬಹುದಾಗಿದೆ. ಅದಕ್ಕೂ ಮುನ್ನ ಕಂಪನಿಯು ಭಾರತದಲ್ಲಿ ಈಗಾಗಲೇ ಅನಾವರಣಗೊಳಿಸಲಾಗಿರುವ ಇಕೆಯುವಿ100 ಮತ್ತು ಇಎಕ್ಸ್‌ಯುವಿ300 ಕಾರುಗಳನ್ನು 2023ರ ಆರಂಭದಲ್ಲಿ ಬಿಡುಗಡೆ ಮಾಡಲಿದ್ದು, ಬಾರ್ನ್ ಇವಿ ಪರಿಕಲ್ಪನೆಯಲ್ಲಿ ಅಭಿವೃದ್ದಿಗೊಳ್ಳುತ್ತಿರುವ ಇವಿ ಕಾರುಗಳು ಇಕೆಯುವಿ100 ಮತ್ತು ಇಎಕ್ಸ್‌ಯುವಿ300 ಕಾರುಗಳಿಂತಲೂ ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆಯಾಗಲಿವೆ ಎನ್ನಬಹುದು.

Article Published On: Sunday, March 20, 2022, 9:00 [IST]
English summary
Top auto news of the week new glanza launched audi a6 avant e tron revealed and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+