Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ವಾರದ ಸುದ್ದಿ: ನವೀಕೃತ ಬಲೆನೊ ಮತ್ತು ವ್ಯಾಗನ್‌ಆರ್ ಬಿಡುಗಡೆ, ಅನಾವರಣಗೊಂಡ ಜೀಪ್ ಮೆರಿಡಿಯನ್..
ಕೇಂದ್ರ ಸರ್ಕಾರವು ಮುಂಬರುವ ಏಪ್ರಿಲ್‌ನಿಂದ ಮಾಲಿನ್ಯ ನಿಯಂತ್ರಣಕ್ಕಾಗಿ ಹೊಸ ಎಮಿಷನ್ ಮಾನದಂಡ ಜಾರಿಗೆ ತರುತ್ತಿದ್ದು, ಹೊಸ ಎಮಿಷನ್‌ಗೆ ಅನುಗುಣವಾಗಿ ವಿವಿಧ ಹೊಸ ಕಾರು ಮಾದರಿಗಳು ಈ ವಾರ ಮಾರುಕಟ್ಟೆ ಪ್ರವೇಶಿಸಿವೆ. ಜೊತೆಗೆ ಇವಿ ಕಾರುಗಳ ಬಿಡುಗಡೆ ಪ್ರಕ್ರಿಯೆ ಕೂಡಾ ಜೋರಾಗಿದ್ದು, ಈ ವಾರದ ಪ್ರಮುಖ ಸುದ್ದಿಗಳಲ್ಲಿ ವಿವಿಧ ಹೊಸ ವಾಹನಗಳ ಬಿಡುಗಡೆಯ ಮಾಹಿತಿ ಜೊತೆಗೆಆಟೋ ಉದ್ಯಮದಲ್ಲಿನ ಈ ವಾರದ ಬೆಳವಣಿಗೆಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಒಂದೊಂದಾಗಿ ನೋಡೋಣ.

2022ರ ಮಾರುತಿ ಸುಜುಕಿ ಬಲೆನೊ ಬಿಡುಗಡೆ
ಹೊಸ ಬಲೆನೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.49 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಮಾದರಿಯು ಈ ಹಿಂದಿನ ಮಾದರಿಯಲ್ಲಿರುವಂತೆ ಎಂಜಿನ್ ಆಯ್ಕೆ ಹೊಂದಿದ್ದರೂ ಪ್ರೀಮಿಯಂ ಫೀಚರ್ಸ್ ಮತ್ತು ಬದಲಾವಣೆಗೊಳಿಸಲಾದ ವಿನ್ಯಾಸವು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದೆ.

ಬಲೆನೊ ಮಾದರಿಯು ಸಿಗ್ಮಾ, ಡೆಲ್ಟಾ, ಜೆಟಾ ಮತ್ತು ಅಲ್ಫಾ ಎಂಬ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ 1.2 ಲೀಟರ್ ಪೆಟ್ರೋಲ್ ಮಾದರಿಯೊಂದಿಗೆ ಹೊಸ ಕಾರು 6 ಏರ್‌ಬ್ಯಾಗ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವಾರು ಹೊಸ ಫೀಚರ್ಸ್ ಪಡೆದುಕೊಂಡಿದೆ.

2022ರ ಮಾರುತಿ ಸುಜುಕಿ ವ್ಯಾಗನ್‌ಆರ್ ಬಿಡುಗಡೆ
ಹೊಸ ವ್ಯಾಗನ್ಆರ್ ಕಾರು ಮಾದರಿಯು ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಎನ್ನುವ ಮೂರು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 5.40 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.10 ಲಕ್ಷ ಬೆಲೆ ಹೊಂದಿದೆ.

ಮಾರುತಿ ಸುಜುಕಿ ಕಂಪನಿಯು ಹೊಸ ಕಾರು ಮಾದರಿಯಲ್ಲಿ ಈ ಬಾರಿ ಸಿಎನ್‌ಜಿ ಆವೃತ್ತಿಗಳ ಆಯ್ಕೆ ಹೆಚ್ಚಿಸಿದ್ದು, ವ್ಯಾಗನ್ಆರ್ ಮಾದರಿಯಲ್ಲಿ 1.0 ಲೀಟರ್ ಮತ್ತು 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಮಾದರಿಯು ಖರೀದಿಗೆ ಲಭ್ಯವಿವೆ. 1.0 ಲೀಟರ್ ಎಲ್ಎಕ್ಸ್ಐ ಮತ್ತು ವಿಎಕ್ಸ್ಐ ಮಾದರಿಗಳಲ್ಲಿ ಸಿಎನ್‌ಜಿ ಮಾದರಿಯು ಖರೀದಿಗೆ ಲಭ್ಯವಿದ್ದು, ವಾಣಿಜ್ಯ ಬಳಕೆದಾರರ ಬೇಡಿಕೆ ಅನುಸಾರವಾಗಿ ಸಿಎನ್‌ಜಿ ಮಾದರಿಯಲ್ಲಿ ವಿಶೇಷವಾಗಿ ಎಲ್ಎಕ್ಸ್ಐ ಸಿಎನ್‌ಜಿ ಟೂರ್ ಹೆಚ್3 ಎನ್ನುವ ವೆರಿಯೆಂಟ್ ಅಭಿವೃದ್ದಿಪಡಿಸಿದೆ.

ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ
ದೇಶಿಯ ಮಾರುಕಟ್ಟೆಯಲ್ಲಿ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಪ್ರಮುಖ ಎಸ್‌ಯುವಿ ಕಾರು ಮಾದರಿಗಳಿಗಾಗಿ ಕಾಜಿರಂಗ ಎಡಿಷನ್ ಪರಿಚಯಿಸಿದ್ದು, ಹೊಸ ಕಾರುಗಳು ವಿನೂತನ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ.

ಕಾಜಿರಂಗ ಎಡಿಷನ್ ಹೊಂದಿರುವ ಪಂಚ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.59 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು 9.49 ಲಕ್ಷ ಬೆಲೆ ಹೊಂದಿದ್ದರೆ ನೆಕ್ಸಾನ್ ಕಾಜಿರಂಗ ಎಡಿಷನ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.74 ಲಕ್ಷ ಬೆಲೆ ಹೊಂದಿವೆ.

ಹ್ಯಾರಿಯರ್ ಕಾಜಿರಂಗ ಎಡಿಷನ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 20.41 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯನ್ನು ರೂ. 21.71 ಲಕ್ಷಕ್ಕೆ ದರ ನಿಗದಿಪಡಿಸಿದ್ದರೆ ಸಫಾರಿ ಕಾಜಿರಂಗ ಮಾದರಿಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 21 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 22.40 ಲಕ್ಷ ಬೆಲೆ ಹೊಂದಿದೆ.

ಕಾಜಿರಂಗ ಆವೃತ್ತಿಗಳಿಗೆ ಮೆಟೆರಿಯಲ್ ಬ್ರೋಂಜ್ ಬಣ್ಣದ ಆಯ್ಕೆ ನೀಡಲಾಗಿದ್ದು, ಹೊಸ ಬಣ್ಣದ ಜೊತೆಗೆ ಕಾರಿನ ಹಿಂಬದಿಯ ಟೈಲ್‌ಗೇಟ್, ವ್ಹೀಲ್, ಫೆಂಡರ್‌ಗಳು ಮತ್ತು ಇಂಟಿರಿಯರ್‌ನಲ್ಲಿ ರೈನೊ ಬ್ಯಾಜ್ಡ್ ಜೊತೆಗೆ ಕಾರಿನ ಇಂಟಿರಿಯರ್‌ನಲ್ಲಿ ರೈನೊ ಮೋಟಿಫ್ ಜೋಡಿಸಲಾಗಿದೆ. ಹೊಸ ಆವೃತ್ತಿಗಳು ಆಕರ್ಷಕ ಬಣ್ಣದ ಆಯ್ಕೆ ಜೊತೆಗೆ ಕೆಲವು ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಇನ್ನುಳಿದಂತೆ ಎಲ್ಲಾ ತಾಂತ್ರಿಕ ಸೌಲಭ್ಯಗಳು ಸಾಮಾನ್ಯ ಮಾದರಿಯಲ್ಲಿರುವಂತೆಯೇ ಇರಲಿವೆ.

ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು ಬಿಡುಗಡೆ
ಮಿನಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದೆ. ಹೊಸ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.47.20 ಲಕ್ಷವಾಗಿದೆ. ಈ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು ಭಾರತಕ್ಕೆ ಸಿಬಿಯು ಮಾದರಿಯಾಗಿ ಭಾರತದಲ್ಲಿ ಮಾರಾಟವಾಗಲಿದೆ.

ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು 32.6 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, 150 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಡಬ್ಲ್ಯುಎಲ್‌ಟಿಪಿ ಪ್ರಕಾರ ಹೊಸ ಮಿನಿ ಎಲೆಕ್ಟ್ರಿಕ್ ಕಾರು ಒಂದು ಭಾರೀ ಪೂರ್ತಿ ಚಾರ್ಜ್‌ನೊಂದಿಗೆ ಗರಿಷ್ಠ 270 ಕಿಲೋಮೀಟರ್‌ಗಳ ವರೆಗೆ ಚಲಿಸುತ್ತದೆ. ಗ್ರಾಹಕರು 50kW DC ಫಾಸ್ಟ್ ಚಾರ್ಜರ್ ಅನ್ನು ಸಹ ಬಳಸಬಹುದಾಗಿದ್ದು, ಕೇವಲ 36 ನಿಮಿಷಗಳಲ್ಲಿ 0-80 ಪ್ರತಿಶತದಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು.

ಜೀಪ್ ಮೆರಿಡಿಯನ್ 7-ಸೀಟರ್ ಎಸ್‍ಯುವಿ ಅನಾವರಣ
ಅಮೆರಿಕದ ವಾಹನ ತಯಾರಕ ಕಂಪನಿ ಜೀಪ್ ತನ್ನ ಹೊಸ 7-ಸೀಟರ್ ಮೆರಿಡಿಯನ್ ಪ್ರೀಮಿಯಂ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ಜೀಪ್ ಮೆರಿಡಿಯನ್ ಮೂಲತಃ ಕಂಪಾಸ್‌ನ 7-ಸೀಟರ್ ಆವೃತ್ತಿಯಾಗಿದೆ.

ಹೊಸ ಮೆರಿಡಿಯನ್‌ನ ಎಸ್‍ಯುವಿಯ ಮುಂಭಾಗವನ್ನು ಕಂಪಾಸ್‌ಗೆ ಹೋಲಿಸಿದರೆ ವಿಭಿನ್ನ ಸ್ಟೈಲಿಂಗ್ ಅಂಶಗಳೊಂದಿಗೆ ಇದು ಹೆಚ್ಚು ಮಸ್ಕ್ಲರ್ ಲುಕ್ ಅನ್ನು ಹೊಂದಿದ್ದು, 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ II ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 170 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಹೊಸ ಕಾರು ಮುಂಬರುವ ಮೇ ಹೊತ್ತಿಗೆ ಬಿಡುಗಡೆಯಾಗಲಿದ್ದು, ಹೊಸ ಕಾರು 4x4 ಸೌಲಭ್ಯದೊಂದಿಗೆ ಫಾರ್ಚೂನರ್ ಮಾದರಿಗೆ ಪೈಪೋಟಿಯಾಗಿ ರೂ. 30 ಲಕ್ಷದಿಂದ ರೂ. 35 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿವೆ.

ಬಿಎಂಡಬ್ಲ್ಯು ಎಕ್ಸ್4 ಪ್ರಿ-ಬುಕಿಂಗ್ ಆರಂಭ!
ಜನಪ್ರಿಯ ಐಷಾರಾಮಿ ಕಾರು ಕಂಪನಿಯಾದ ಬಿಎಂಡಬ್ಲ್ಯು ಭಾರತದಲ್ಲಿ ತನ್ನ ಹೊಸ 2022ರ ಎಕ್ಸ್ 4 ಕೂಪೆ ಮಾದರಿಗಾಗಿ ಪ್ರೀ ಬುಕಿಂಗ್ ಆರಂಭಿಸಿದ್ದು, ಇದು ಬಿಎಂಡಬ್ಲ್ಯು ಎಕ್ಸ್4 ಮಾದರಿಯ ಫೇಸ್‌ಲಿಫ್ಟ್ ಆವೃತ್ತಿಯಾಗಿದೆ. ಆಸಕ್ತ ಗ್ರಾಹಕರು ಆನ್ ಲೈನ್ ನಲ್ಲಿ ರೂ. 50,000 ಪಾವತಿಸುವ ಮೂಲಕ 5 ಆಸನಗಳ ಕೂಪೆ ಎಸ್‌ಯುವಿಯನ್ನು ಬುಕ್ ಮಾಡಿಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ. ಮೂಲಗಳ ಪ್ರಕಾರ, ಹೊಸ 2022 ಬಿಎಂಡಬ್ಲ್ಯು ಎಕ್ಸ್ 4 ಫೇಸ್‌ಲಿಫ್ಟ್ ಮಾದರಿಯು ಮಾರ್ಚ್ ನಲ್ಲಿ ಮಾರುಕಟ್ಟೆಗೆ ಬರಲಿದೆ.

ಈ ಎಕ್ಸ್4 ಮಾಡಲ್‌ನ ಹಿಂದಿನ ಮಾದರಿಗೆ ಹೋಲಿಸಿಕೊಂಡರೆ ಇದು ಗಮನಾರ್ಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದ್ದು, ನವೀಕರಣಗೊಂಡ ಬಿಎಂಡಬ್ಲ್ಯು ಎಕ್ಸ್ 4 ಹೊಸ ವೈಶಿಷ್ಟ್ಯಗಳು ಮತ್ತು ಸ್ಟೈಲಿಂಗ್ ಫೀಚರ್ ಗಳನ್ನು ಮುಂಬರುವ ಭಾರತದಲ್ಲಿನ 2022 ಬಿಎಂಡಬ್ಲ್ಯು ಎಕ್ಸ್ 4 ನಲ್ಲಿ ನಿರೀಕ್ಷಿಸಲಾಗಿದೆ.

25 ಸಾವಿರ ಯುನಿಟ್ ದಾಟಿದ ಕಾರೆನ್ಸ್ ಬುಕ್ಕಿಂಗ್
ಕಿಯಾ ಇಂಡಿಯಾ ಕಂಪನಿಯು ಹೊಸ ಕಾರೆನ್ಸ್ ಎಂಯುವಿ ಮಾದರಿಯನ್ನು ಬಿಡುಗಡೆಗೊಳಿಸಿ ವಿತರಣೆ ಆರಂಭಿಸಿದ್ದು, ಹೊಸ ಕಾರು ಆಕರ್ಷಕ ಬೆಲೆ ಮತ್ತು ವಿವಿಧ ಎಂಜಿನ್ ಆಯ್ಕೆಯೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಬರೋಬ್ಬರಿ 25 ಸಾವಿರ ಗ್ರಾಹಕರಿಂದ ಬುಕ್ಕಿಂಗ್ ಪಡೆದುಕೊಂಡಿದೆ.

ಕಾರೆನ್ಸ್ ಕಾರಿನ ಬುಕ್ಕಿಂಗ್ ಪ್ರಮಾಣವನ್ನು ಆಧರಿಸಿ ವಿತರಣೆಯನ್ನು ತೀವ್ರಗೊಳಿಸಿರುವ ಕಿಯಾ ಕಂಪನಿಯು ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ಮಾದರಿಗಳಿಗೆ ನಿಗದಿತ ಕಾಯುವಿಕೆ ಅವಧಿಯನ್ನು ಪ್ರಕಟಸಿದೆ. ಹೊಸ ಕಾರು ಮಾದರಿಯಲ್ಲಿ ಪೆಟ್ರೋಲ್ ಮಾದರಿಗಳಿಂತಲೂ ಡೀಸೆಲ್ ಮಾದರಿಗಳಿಗೆ ಹೆಚ್ಚು ಬೇಡಿಕೆಯಿದ್ದು, ಹೊಸದಾಗಿ ಬುಕ್ಕಿಂಗ್ ಸಲ್ಲಿಸಲಿರುವ ಗ್ರಾಹಕರು ಹೊಸ ಕಾರಿಗಾಗಿ ಕನಿಷ್ಠ 15 ವಾರಗಳಿಂದ 49 ವಾರಗಳ ಕಾಲ ಕಾಯಬೇಕಾಗುತ್ತದೆ.