ವಾರದ ಸುದ್ದಿ: ನೆಕ್ಸಾನ್ ಇವಿ ಪ್ರೈಮ್ ಮತ್ತು ಮ್ಯಾಗ್ನೈಟ್ ರೆಡ್ ಎಡಿಷನ್ ಬಿಡುಗಡೆ, ಎಕ್ಸ್‌ಯುವಿ700 ರೀಕಾಲ್..

ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳಲ್ಲಿ ಹೊಸ ಕಾರುಗಳ ಅನಾವರಣ ಮತ್ತು ಬಿಡುಗಡೆ ಸುದ್ದಿಗಳು ಪ್ರಮುಖವಾಗಿದ್ದು, ಇದರ ಜೊತೆಗೆ ಆಟೋ ಉದ್ಯಮಕ್ಕೆ ಸಂಬಂಧಿತ ಕೆಲವು ಹೊಸ ಬದಲಾವಣೆಗಳನ್ನು ಘೋಷಿಸಲಾಗಿದೆ.

ಇನ್ನುಳಿದಂತೆ ಈ ವಾರದ ಪ್ರಮುಖ ಸುದ್ದಿಗಳಲ್ಲಿ ಮಹೀಂದ್ರಾ ಎಕ್ಸ್‌ಯುವಿ700 ರೀಕಾಲ್ ಹೆಚ್ಚು ಚರ್ಚಿತ ವಿಷಯವಾಗಿದ್ದು, ಕೆಳಗಿನ ಸ್ಲೈಡ್‌ಗಳಲ್ಲಿ ಈ ವಾರದ ಪ್ರಮುಖ ಸುದ್ದಿಗಳ ಮತ್ತಷ್ಟು ಮಾಹಿತಿಗಳನ್ನು ಒಂದೊಂದಾಗಿ ನೋಡೋಣ.

ಈ ವಾರದ ಸುದ್ದಿಗಳು

ನೆಕ್ಸಾನ್ ಇವಿ ಪ್ರೈಮ್ ಬಿಡುಗಡೆ

ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ತನ್ನ ಇವಿ ಮಾದರಿಗಳಾದ ಟಾಟಾ ಟಿಗೋರ್ ಇವಿ, ನೆಕ್ಸಾನ್ ಇವಿ, ನೆಕ್ಸಾನ್ ಇವಿ ಮ್ಯಾಕ್ಸ್, ಎಕ್ಸ್‌ಪ್ರೆಸ್‌ ಟಿ ಕಾರುಗಳನ್ನು ಸದ್ಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು, ಇದೀಗ ಟಾಟಾ ಮೋಟಾರ್ಸ್ ಹೊಸ ನೆಕ್ಸಾನ್ ಇವಿ ಪ್ರೈಮ್ ಅನ್ನು ಪರಿಚಯಿಸಿದೆ.

ಈ ವಾರದ ಸುದ್ದಿಗಳು

ನೆಕ್ಸಾನ್ ಇವಿ ಪ್ರೈಮ್ ವಿವಿಧ ಡ್ರೈವ್ ಮೋಡ್‌ಗಳು, ಕ್ರೂಸ್ ಕಂಟ್ರೋಲ್, ಸ್ಮಾರ್ಟ್‌ವಾಚ್ ಸಂಪರ್ಕ ಮತ್ತು i-TPMS ಅನ್ನು ಪಡೆದುಕೊಂಡಿದ್ದು ಈ ಹೊಸ ವೈಶಿಷ್ಟ್ಯಗಳನ್ನು ಪ್ರಸ್ತುತ Nexon EV ಮಾಲೀಕರಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಹೊರತರಲಾಗುತ್ತದೆ. ಈ ನವೀಕರಣವು ಬ್ರ್ಯಾಂಡ್‌ನ ಸೇವಾ ಕೇಂದ್ರಗಳಲ್ಲಿ ಜುಲೈ 25 ರಿಂದ ಜಾರಿಗೆ ಬರಲಿದೆ.

ಈ ವಾರದ ಸುದ್ದಿಗಳು

ಹೊಸ ನವೀಕರಣದ ಜೊತೆಗೆ ಬೆಲೆ ಕೂಡಾ ಹೆಚ್ಚಿಸಲಾಗಿದ್ದು, ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಹೊಸ ಕಾರು ಆರಂಭಿಕವಾಗಿ ಇದೀಗ ಆರಂಭಿಕವಾಗಿ ರೂ. 14.99 ಲಕ್ಷದಿಂದ ರೂ. 17.50 ಲಕ್ಷಕ್ಕೆ ಏರಿಕೆಯಾಗಿದ್ದು, ವಿವಿಧ ವೆರಿಯೆಂಟ್‌ಗಳನ್ನು ಆಧರಿಸಿ ರೂ. 35 ಸಾವಿರದಿಂದ ರೂ. 45 ಸಾವಿರದಷ್ಟು ದುಬಾರಿಯಾಗಿದೆ. ಈ ಮೊದಲು ರೂ. 17.74 ಲಕ್ಷ ದಿಂದ ರೂ. 19.24 ಲಕ್ಷ ಬೆಲೆ ಹೊಂದಿದ್ದ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಇದೀಗ ಹೊಸ ದರಪಟ್ಟಿಯಲ್ಲಿ ರೂ. 18.34 ಲಕ್ಷದಿಂದ ರೂ. 19. 84 ಲಕ್ಷ ಬೆಲೆ ಹೊಂದಿದ್ದು, ಸೆಮಿಕಂಡಕ್ಟರ್ ಕೊರತೆಯ ಪರಿಣಾಮ ಹೊಸ ಕಾರುಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳ ಮಾಡಲಾಗುತ್ತಿದೆ.

ಈ ವಾರದ ಸುದ್ದಿಗಳು

ಮ್ಯಾಗ್ನೈಟ್ ರೆಡ್ ಎಡಿಷನ್ ಬಿಡುಗಡೆ

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಮೂಲಕ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ನಿಸ್ಸಾನ್ ಕಂಪನಿಯು ಇದುವರೆಗೆ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡಿದೆ. ಹೀಗಾಗಿ ಮ್ಯಾಗ್ನೈಟ್ ಮಾದರಿಯಲ್ಲಿ ವಿಶೇಷ ಆವೃತ್ತಿ ಬಿಡುಗಡೆ ಮಾಡಲಾಗಿದ್ದು, ಮ್ನಾಗ್ನೈಟ್ ರೆಡ್ ಎಡಿಷನ್ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7,86,500 ಬೆಲೆ ಹೊಂದಿದೆ.

ಈ ವಾರದ ಸುದ್ದಿಗಳು

ಹೊಸ ಮ್ಯಾಗ್ನೈಟ್ ರೆಡ್ ಎಡಿಷನ್ ಮಾದರಿಯು ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಎಕ್ಸ್‌ವಿ ಮ್ಯಾನುವಲ್ ರೆಡ್ ವೆರಿಯೆಂಟ್ ರೂ. 7,86,500 ಆರಂಭಿಕ ಬೆಲೆ ಹೊಂದಿದ್ದರೆ ಎಕ್ಸ್‌ವಿ ಟರ್ಬೊ ಮ್ಯಾನುವಲ್ ವೆರಿಯೆಂಟ್ ರೂ. 9,24,500 ಬೆಲೆ ಹೊಂದಿದೆ. ಇದರೊಂದಿಗೆ ವಿಶೇಷ ಮಾದರಿಗಳ ಮುಂಭಾಗದ ಗ್ರಿಲ್, ಮುಂಭಾಗದ ಬಂಪರ್ ಕ್ಲಾಡಿಂಗ್, ವೀಲ್ಹ್ ಆರ್ಚ್‌ ಮತ್ತು ಬಾಡಿ ಸೈಡ್ ಕ್ಲಾಡಿಂಗ್‌ನಲ್ಲಿ ರೆಡ್ ಕ್ಲಾಡಿಂಗ್ ನೀಡಲಾಗಿದ್ದು, ಕಾರಿನ ಮೇಲೆ ಬೋಲ್ಡ್ ಗ್ರಾಫಿಕ್ಸ್, ಟೈಲ್ ಡೋರ್ ಗಾರ್ನಿಶ್, ಎಲ್ಇಡಿ ಸ್ಕಫ್ ಪ್ಲೇಟ್ ಮತ್ತು ರೆಡ್ ಎಡಿಷನ್ ಬ್ಯಾಡ್ಜ್ ಪಡೆದುಕೊಂಡಿವೆ.

ಈ ವಾರದ ಸುದ್ದಿಗಳು

ಹೊಸ ಎಕ್ಸ್‌ಯುವಿ700 ಹಿಂಪಡೆದ ಮಹೀಂದ್ರಾ

ಹೊಸ ಎಕ್ಸ್‌ಯುವಿ700 ಕಾರು ಮಾದರಿಯು ಭಾರೀ ಬೇಡಿಕೆಯ ನಡುವೆಯೂ ಕೆಲವು ಗ್ರಾಹಕರಿಂದ ತಾಂತ್ರಿಕ ಸೌಲಭ್ಯಗಳ ಕುರಿತಾಗಿ ದೂರುಗಳು ಹೆಚ್ಚಳವಾಗುತ್ತಿವೆ. ಈ ಹಿನ್ನಲೆಯಲ್ಲಿ ಮಹೀಂದ್ರಾ ಕಂಪನಿಯು ಹೊಸ ಕಾರಿನಲ್ಲಿ ತಾಂತ್ರಿಕ ದೋಷದಿಂದ ಕೂಡಿರುವ ಪ್ರಮುಖ ವೆರಿಯೆಂಟ್‌ಗಳನ್ನು ಹಿಂಪಡೆಯುತ್ತಿದ್ದು, ಹೊಸ ಕಾರಿನಲ್ಲಿ 4x4 ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಸೌಲಭ್ಯ ಹೊಂದಿರುವ ಡೀಸೆಲ್ ವೆರಿಯೆಂಟ್ ಹಿಂಪಡೆಯಲಾಗಿದೆ.

ಈ ವಾರದ ಸುದ್ದಿಗಳು

ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಸೌಲಭ್ಯ ಹೊಂದಿರುವ ಡೀಸೆಲ್ ವೆರಿಯೆಂಟ್ ಹೊರತುಪಡಿಸಿ ಇನ್ನುಳಿದ ಯಾವುದೇ ವೆರಿಯೆಂಟ್‌ನಲ್ಲೂ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ ಎಂದಿರುವ ಮಹೀಂದ್ರಾ ಕಂಪನಿಯು ತಾಂತ್ರಿಕ ದೋಷ ಹೊಂದಿರುವ ಕಾರು ಮಾದರಿಗಳನ್ನು ಶೀಘ್ರದಲ್ಲಿಯೇ ಸರಿಪಡಿಸುವುದಾಗಿ ಭರವಸೆ ನೀಡಿದೆ.

ಈ ವಾರದ ಸುದ್ದಿಗಳು

2022ರ ರೇಂಜ್ ರೋವರ್ ವಿತರಣೆ ಆರಂಭ

ಲ್ಯಾಂಡ್ ರೋವರ್ ಕಂಪನಿಯು ತನ್ನ ಹೊಸ ರೇಂಜ್ ರೋವರ್ ಎಸ್‌ಯುವಿ ಮಾದರಿಯನ್ನು ಕಳೆದ ಜನವರಿಯಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಕಾರು ಖರೀದಿಗೆ ಇದೀಗ ಚಾಲನೆ ನೀಡಿದ್ದು, ಹೊಸ ಕಾರು ವಿವಿಧ ಎಂಜಿನ್ ಆಯ್ಕೆಗಳು ಮತ್ತು ಬೆಲೆ ಆಧರಿಸಿ ಒಟ್ಟು 33 ವೆರಿಯೆಂಟ್‌ಗಳನ್ನು ಹೊಂದಿದೆ.

ಈ ವಾರದ ಸುದ್ದಿಗಳು

ನ್ಯೂ ಜನರೇಷನ್ ವೈಶಿಷ್ಟ್ಯತೆ ಹೊಂದಿರುವ ರೇಂಜ್ ರೋವರ್ ಎಸ್‍ಯುವಿಯನ್ನು ಕಳೆದ ಜನವರಿಯಲ್ಲಿ ಬಿಡುಗಡೆ ಮಾಡಿದ್ದ ಸಂದರ್ಭದಲ್ಲಿ ಎಕ್ಸ್ ಶೋರೂಂ ಪ್ರಕಾರ ರೂ. 2.32 ಕೋಟಿ ಆರಂಭಿಕ ಬೆಲೆ ವಿಧಿಸಿದ್ದ ಕಂಪನಿಯು ಇದೀಗ ಆರಂಭಿಕ ಮಾದರಿಯಿಂದ ಹಿಡಿದು ಟಾಪ್ ಎಂಡ್ ಮಾದರಿಯ ತನಕ ಬೆಲೆ ಹೆಚ್ಚಿಸಲಾಗಿದ್ದು, ಇದೀಗ ಹೊಸ ಕಾರು ಆರಂಭಿಕವಾಗಿ ರೂ. 2.39 ಕೋಟಿ ಬೆಲೆ ಹೊಂದಿದ್ದ ಕಾರು ಇದೀಗ ಟಾಪ್ ಎಂಡ್‌ ಮಾದರಿಗೆ ರೂ. 3.44 ಕೋಟಿ ಬೆಲೆ ಹೊಂದಿದೆ.

ಈ ವಾರದ ಸುದ್ದಿಗಳು

ಹ್ಯುಂಡೈ ಟ್ಯೂಸಾನ್ ಅನಾವರಣ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಇಂಡಿಯಾ ತನ್ನ ನ್ಯೂ ಜನರೇಷನ್ ಟ್ಯೂಸಾನ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದ್ದು, ಹೊಸ ಟ್ಯೂಸಾನ್ ಎಸ್‍ಯುವಿಯು ಮುಂಬರುವ ಆಗಸ್ಟ್ 4 ರಂದು ಬಿಡುಗಡೆಯಾಗಲಿದೆ.

ಈ ವಾರದ ಸುದ್ದಿಗಳು

ನಾಲ್ಕನೇ ತಲೆಮಾರಿನ ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಸಾಕಷ್ಟು ಬದಲಾವಣೆಗಳಿವೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಹ್ಯುಂಡೈನ 'ಸೆನ್ಶುಯಲ್ ಸ್ಪೋರ್ಟಿನೆಸ್' ವಿನ್ಯಾಸ ಶೈಲಿಯನ್ನು ಹೊಂದಿದೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಈಗಾಗಲೇ ಹಲವು ವಿದೇಶಗಳಲ್ಲಿನ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಇದೀಗ ಈ ಹೊಸ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿದೆ.

ಈ ವಾರದ ಸುದ್ದಿಗಳು

ನೆಕ್ಸಾನ್ ಎಕ್ಸ್ಎಂ ಪ್ಲಸ್ ಎಸ್ ವೆರಿಯೆಂಟ್ ಬಿಡುಗಡೆ

ಟಾಟಾ ನೆಕ್ಸಾನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸುಮಾರು 29 ವೆರಿಯೆಂಟ್‌ಗಳನ್ನು ಹೊಂದಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಎಕ್ಸ್ಎಂ ಪ್ಲಸ್ ಎಸ್ ವೆರಿಯೆಂಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಒಟ್ಟು ನಾಲ್ಕು ವೆರಿಯೆಂಟ್‌ಗಳನ್ನು ಹೊಂದಿದೆ. ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.75 ಲಕ್ಷ ಬೆಲೆ ಹೊಂದಿದ್ದು, ಹೊಸ ವೆರಿಯೆಂಟ್‌ನಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಿದೆ.

ಈ ವಾರದ ಸುದ್ದಿಗಳು

ಹೊಸ ಎಕ್ಸ್ಎಂ ಪ್ಲಸ್ ಎಸ್ ವೆರಿಯೆಂಟ್‌ನಲ್ಲಿ ಕಂಪನಿಯು ಎಲೆಕ್ಟ್ರಿಕ್ ಸನ್‌ರೂಫ್, 7-ಇಂಚಿನ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, 4-ಸ್ಪೀಕರ್ ಸಿಸ್ಟಂ, ಕೂಲ್ಡ್ ಗ್ಲೋವ್ ಬಾಕ್ಸ್, ರಿಯರ್ ಎಸಿ ವೆಂಟ್‌ಗಳು, ರೈನ್-ಸೆನ್ಸಿಂಗ್ ವೈಪರ್‌ಗಳು, ಆಟೋ ಹೆಡ್‌ಲ್ಯಾಂಪ್ ಸೌಲಭ್ಯಗಳನ್ನು ನೀಡಿದೆ.

ಈ ವಾರದ ಸುದ್ದಿಗಳು

ಇವಿ ವಾಹನ ಅಳವಡಿಕೆಯಲ್ಲಿ ಕರ್ನಾಟಕ ನಂ.1

ದೇಶದಲ್ಲಿ ವಾಹನ ಉದ್ಯಮವು ಈ ಹಿಂದಿಗಿಂತ ಬಹಳಷ್ಟು ಬದಲಾಗಿದೆ. ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳು ಆಟೋಮೊಬೈಲ್ ಉದ್ಯಮವನ್ನು ಆವರಿಸುತ್ತಿವೆ. ಸದ್ಯ ಇಂಧನ ಚಾಲಿತ ವಾಹನಗಳ ಮಟ್ಟಿಗೆ ಮಾರಾಟವಾಗದಿದ್ದರೂ ಮುಂದಿನ ದಿನಗಳಲ್ಲಿ ಇವುಗಳಿಗೆ ಪೈಪೋಟಿ ನೀಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಾರದ ಸುದ್ದಿಗಳು

ಕರ್ನಾಟಕದಲ್ಲೂ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹಿಂದೆಂದಿಗಿಂತ ಹೆಚ್ಚಾಗಿದೆ. ಇದರಲ್ಲಿ ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳು ಮೇಲುಗೈ ಸಾಧಿಸಿವೆ. ಎಲೆಕ್ಟ್ರಿಕ್ ಕಾರುಗಳ ಮಾರಾಟವು ಉತ್ತಮವಾಗಿದೆಯಾದರೂ ದ್ವಿಚಕ್ರ ವಾಹನಗಳಿಗೆ ಹೋಲಿಸಿಕೊಂಡರೆ ಕಡಿಮೆಯೆಂದೇ ಹೇಳಬಹುದು. ಅಂಕಿಅಂಶಗಳ ಪ್ರಕಾರ ಕರ್ನಾಟಕವು ಶೇ. 4.66 ರಷ್ಟು ಮಾರುಕಟ್ಟೆ ದರದೊಂದಿಗೆ ಮುಂಚೂಣಿಯಲ್ಲಿದ್ದರೆ ನಂತರ ಗೋವಾ ಮತ್ತು ಮಹಾರಾಷ್ಟ್ರವು ಕ್ರಮವಾಗಿ ಶೇ. 4.39 ಮತ್ತು ಶೇ.3.14ರಷ್ಟು ಎಲೆಕ್ಟ್ರಿಕ್ ಸ್ಕೂಟರಗಳನ್ನು ಅಳವಡಿಸಿಕೊಂಡಿವೆ

ಈ ವಾರದ ಸುದ್ದಿಗಳು

ಹರಿಯಾಣದಲ್ಲಿ ಇವಿ ಪಾಲಿಸಿ ಅನುಮೋದನೆ

ಹರಿಯಾಣ ಸರ್ಕಾರವು ಸರ್ಕಾರವು ಇದೀಗ ಹೊಸ ಇವಿ ಪಾಲಿಸಿಗೆ ಅಧಿಕೃತವಾಗಿ ಅನುಮೋದನೆ ನೀಡಿದ್ದು, ಹೊಸ ಇವಿ ನೀತಿ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳು, ಹೈಬ್ರಿಡ್ ವಾಹನಗಳು, ಇವಿ ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳಿಗೆ ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳ ತಯಾರಕರಿಗೆ ಹಲವಾರು ಧನಸಹಾಯ ಘೋಷಣೆ ಮಾಡಿದೆ.

ಈ ವಾರದ ಸುದ್ದಿಗಳು

ಹೊಸ ಇವಿ ನೀತಿ ಅಡಿಯಲ್ಲಿ ಹರಿಯಾಣ ಸರ್ಕಾರವು ತನ್ನ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಅಥವಾ ಹೈಬ್ರಿಡ್ ವಾಹನಗಳ ಖರೀದಿದಾರರಿಗೆ ರೂ.3 ಲಕ್ಷದಿಂದ ರೂ. 10 ಲಕ್ಷದವರೆಗೆ ಸಬ್ಸಿಡಿ ಘೋಷಣೆ ಮಾಡಿದ್ದು, ನೋಂದಣಿ ಶುಲ್ಕದಲ್ಲಿ ರಿಯಾಯಿತಿ ಮತ್ತು ಮೋಟಾರ್ ವಾಹನ ತೆರಿಗೆಯಲ್ಲಿ ಸಹ ವಿನಾಯ್ತಿ ಪಡೆಯಲಿದ್ದಾರೆ. ಹಾಗೆಯೇ ಇ-ರಿಕ್ಷಾಗಳು ಮತ್ತು ಲಘು ವಾಣಿಜ್ಯ ಎಲೆಕ್ಟ್ರಿಕ್ ವಾಹನಗಳ ಮೇಲೆ ಕ್ರಮವಾಗಿ ರೂ. 25 ಸಾವಿರ ಮತ್ತು ರೂ. 50 ಸಾವಿರ ಸಬ್ಸಿಡಿ ನೀಡಲಿದ್ದು, ಸಬ್ಸಿಡಿ ದರಗಳು ಆಮದು ಮಾಡಲಾದ ಮಾದರಿಗಳಿಗೂ ಅನ್ವಯಿಸುತ್ತವೆ. ಆದರೆ ಪ್ರವೇಶ ಮಟ್ಟದ ಮಾದರಿಯು ಮಾತ್ರ ಸಬ್ಸಿಡಿಗೆ ಅರ್ಹವಾಗಿರಲಿದ್ದು, ಈ ಸಬ್ಸಿಡಿಯು ಮೊದಲ ಬಾರಿಗೆ ಖರೀದಿಸುವವರಿಗೆ ಮಾತ್ರ ಸೀಮಿತವಾಗಿದೆ.

ಈ ವಾರದ ಸುದ್ದಿಗಳು

ಪಿಯಾಜಿಯೊ ಅಪೆ ನೆಕ್ಸ್ಟ್ ಪ್ಲಸ್ ಬಿಡುಗಡೆ

ಭಾರತದಲ್ಲಿ ಸಣ್ಣ ವಾಣಿಜ್ಯ ವಾಹನಗಳ ಪ್ರಮುಖ ತಯಾರಕ ಕಂಪನಿಯಾಗಿರುವ ಪಿಯಾಜಿಯೊ ವೆಹಿಕಲ್ಸ್ ಕಂಪನಿಯು ಪ್ರಯಾಣಿಕರ ಬಳಕೆಯ ತ್ರಿಚಕ್ರ ವಾಹನಗಳ ವಿಭಾಗದಲ್ಲಿ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸದಾಗಿ ಪರಿಚಯಿಸಲಾಗಿರುವ ಅಪೆ ನೆಕ್ಸ್ಟ್ ಪ್ಲಸ್ ಮಾದರಿಯು ಪೆಟ್ರೋಲ್, ಸಿಎನ್‌ಜಿ ಮತ್ತು ಎಲ್‌ಪಿಜಿ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಾಗಿದೆ.

ಈ ವಾರದ ಸುದ್ದಿಗಳು

ಅಪೆ ನೆಕ್ಸ್ಟ್ ಪ್ಲಸ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 2,12,212 ಆರಂಭಿಕ ಬೆಲೆ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್, ಸಿಎನ್‌ಜಿ ಮತ್ತು ಎಲ್‌ಪಿಜಿ ರೂಪಾಂತರಗಳನ್ನು ಆಯ್ಕೆ ಮಾಡಬಹುದು. ಅಪೆ ನೆಕ್ಸ್ಟ್ ಪ್ಲಸ್ ಪೆಟ್ರೋಲ್, ಸಿಎನ್‌ಜಿ ಮತ್ತು ಎಲ್‌ಪಿಜಿ ರೂಪಾಂತರಗಳು ಹೆಚ್ಚಿನ ಆದಾಯ ತಂದುಕೊಡುವ ಮಾದರಿಗಳಾಗಿದ್ದು, ಇದರಲ್ಲಿ ಸಿಎನ್‌ಜಿ ರೂಪಾಂತರವು ಪ್ರತಿ ಕೆಜಿಗೆ ಗರಿಷ್ಠ 50 ಕಿ.ಮೀ ಮೈಲೇಜ್ ಹಿಂದುರುಗಿಸುವುದಾಗಿ ಪಿಯಾಜಿಯೊ ಕಂಪನಿಯು ಭರವಸೆ ನೀಡಿದೆ.

Most Read Articles

Kannada
English summary
Top auto news of the week nexon ev prime launched magnite red edition launched and more
Story first published: Sunday, July 17, 2022, 9:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X