Just In
- 19 min ago
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- 21 min ago
ಕೇಂದ್ರ ಬಜೆಟ್: ಸಾರಿಗೆ ವಲಯಕ್ಕೆ ಬಂಪರ್... ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆ
- 1 hr ago
ಡ್ರೈವಿಂಗ್ ಕಲಿತು ರಸ್ತೆಗಿಳಿಯಬೇಕು... ಬ್ರೇಕ್ ಬದಲಿಗೆ ಆಕ್ಸಿಲೇಟರ್ ಒತ್ತಿದ ಮಹಿಳೆ
- 2 hrs ago
ದೇಶದಲ್ಲಿ ಅಬ್ಬರಿಸಲು ಮತ್ತೆ ಬರುತ್ತಿದೆ LML: ಅದು EV ಸ್ಕೂಟರ್ನೊಂದಿಗೆ.. ಎಲ್ಲ ದಾಖಲೆ ಪುಡಿಪುಡಿ?
Don't Miss!
- News
Budget 2023: ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯನ್ನು ಲೋಕಸಭೆಯಲ್ಲಿ ವೀಕ್ಷಿಸಿದ ಪುತ್ರಿ, ಸಂಬಂಧಿಕರು- ಪತಿ ಗೈರು
- Sports
ENG vs SA ODI: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ: ಸರಣಿ ವೈಟ್ವಾಶ್ ಮಾಡುವ ಗುರಿ
- Technology
ಬಜೆಟ್ ಬೆಲೆಯಲ್ಲಿ ದೂಳೆಬ್ಬಿಸಲು ಮೊಟೊ E13 ತಯಾರಿ! ಲಾಂಚ್ ಯಾವಾಗ!
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Movies
Paaru serial: ಅಮ್ಮನಿಂದ ದೂರ ಆದ ಆದಿಗೆ ಕೆಲಸ ಸಿಗುತ್ತಾ?
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಾರದ ಪ್ರಮುಖ ಸುದ್ದಿಗಳು: ಟಾಟಾ ಜೆಟ್ ಎಡಿಷನ್ ಬಿಡುಗಡೆ, ಹ್ಯುಂಡೈ ವೆನ್ಯೂ ಎನ್-ಲೈನ್ ಅನಾವರಣ..
ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳಲ್ಲಿ ಹೊಸ ಕಾರುಗಳ ಬಿಡುಗಡೆ, ಕಾರುಗಳ ಅನಾವರಣ ಸುದ್ದಿಗಳು ಪ್ರಮುಖವಾಗಿದೆ.
ಜೊತೆಗೆ ಆಟೋಮೊಬೈಲ್ ವಲಯದಲ್ಲಿ ಜರುಗಿದ ಈ ವಾರದ ಪ್ರಮುಖ ಸುದ್ದಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಒಂದೊಂದಾಗಿ ನೋಡೋಣ.

ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಕಾರು ಮಾದರಿಗಳಾದ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳಲ್ಲಿ ಜೆಟ್ ಎಡಿಷನ್ ಬಿಡುಗಡೆ ಮಾಡಿದೆ. ಜೆಟ್ ಎಡಿಷನ್ ಸ್ಟ್ಯಾಂಡರ್ಡ್ ಮಾದರಿಗಿಂತ ಹೆಚ್ಚಿನ ಫೀಚರ್ಸ್‌ಗಳೊಂದಿಗೆ ವಿಶೇಷ ಬಣ್ಣದ ಆಯ್ಕೆ ಹೊಂದಿರಲಿವೆ. ಜೆಟ್ ಆವೃತ್ತಿಗಳು ಅಸ್ತಿತ್ವದಲ್ಲಿರುವ ಮಾದರಿಗಳ ಉನ್ನತ ರೂಪಾಂತರವನ್ನು ಆಧರಿಸಿದ್ದು, ಇವುಗಳು ವಿಶಿಷ್ಟವಾದ ಡ್ಯುಯಲ್ ಟೋನ್ ಸ್ಟಾರ್‌ಲೈಟ್ ಬಣ್ಣದ ಆಯ್ಕೆ ಹಾಗೂ ಕಂಚು ಬಣ್ಣದೊಂದಿಗೆ ಸಿಲ್ವರ್ ರೂಫ್ ಹೊಂದಿವೆ.

ಆರಂಭಿಕ ಮಾದರಿಯಾದ ನೆಕ್ಸಾನ್ ಜೆಟ್ ಎಡಿಷನ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.13 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.08 ಲಕ್ಷ ಬೆಲೆ ಹೊಂದಿದ್ದು, ಹ್ಯಾರಿಯರ್ ರೂ. 22.20 ಲಕ್ಷದಿಂದ ರೂ. 22.90 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಸಫಾರಿ ಎಸ್‌ಯುವಿಯ ಜೆಟ್ ಎಡಿಷನ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 21.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 22.75 ಲಕ್ಷ ಬೆಲೆ ಹೊಂದಿವೆ.

ಹ್ಯುಂಡೈ ವೆನ್ಯೂ ಎನ್-ಲೈನ್ ಬುಕಿಂಗ್ ಆರಂಭ
ಹೊಸ ವೆನ್ಯೂ ಎನ್-ಲೈನ್ ಮಾದರಿಗಾಗಿ ಹ್ಯುಂಡೈ ಕಂಪನಿಯು ಈಗಾಗಲೇ ಬುಕಿಂಗ್ ಸಹ ಆರಂಭಿಸಿದೆ. ರೂ. 21 ಸಾವಿರ ಮುಂಗಡದೊಂದಿಗೆ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹೊಸ ಆವೃತ್ತಿಗಾಗಿ ಗ್ರಾಹಕರ ಆನ್‌ಲೈನ್ ಅಥವಾ ನೇರವಾಗಿ ಡೀಲರ್ಸ್ ಬಳಿಯಲ್ಲಿ ಮುಂಗಡ ಹಣ ಪಾವತಿ ಮಾಡಬಹುದಾಗಿದೆ.

ವೆನ್ಯೂ ಎನ್-ಲೈನ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಅತ್ಯುತ್ತಮ ಫೀಚರ್ಸ ಮತ್ತು ಸ್ಪೋರ್ಟಿ ಡಿಸೈನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಫೀಚರ್ಸ್‌ಗಳಿಗೆ ಅನುಗುಣವಾಗಿ ಎನ್6 ಮತ್ತು ಎನ್8 ವೆರಿಯೆಂಟ್ ಹೊಂದಿರಲಿದೆ. ಭಾರತದಲ್ಲಿ ಹ್ಯುಂಡೈ ಕಂಪನಿಯು ಈಗಾಗಲೇ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಎನ್-ಲೈನ್ ಆವೃತ್ತಿಯನ್ನು ಮಾರಾಟಗೊಳಿಸುತ್ತಿದ್ದು, ಈ ವರ್ಷಾಂತ್ಯದೊಳಗಾಗಿ ಮತ್ತೆರಡು ಹೊಸ ಕಾರು ಮಾದರಿಗಳಲ್ಲಿ ಹೊಸ ಪರ್ಫಾಮೆನ್ಸ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಎಲೆಕ್ಟ್ರಿಕ್ ಕಾರ್ ಶೋರೂಂ ಆರಂಭಿಸಿದ ಬಿವೈಡಿ
ಬಿವೈಡಿ ಇಂಡಿಯಾ ಕಂಪನಿಯು ತನ್ನ ಪ್ರೀಮಿಯಂ ಇ6 ಎಲೆಕ್ಟ್ರಿಕ್ ಎಂಪಿವಿ ಕಾರು ಮಾದರಿಯ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕಾರು ಮಾದರಿಯೊಂದಿಗೆ ಕಂಪನಿಯು ಇದೀಗ ತನ್ನದೇ ಬ್ರಾಂಡ್ ಅಡಿ ಹೊಸ ಮಾರಾಟ ಮಳಿಗೆಗಳನ್ನು ಆರಂಭಿಸಿದೆ. ಭಾರತದಲ್ಲಿ ಕೆಲ ತಿಂಗಳ ಹಿಂದಷ್ಟೇ ಇ6 ಬಿಡುಗಡೆಯೊಂದಿಗೆ ಪ್ರಮುಖ ಕಾರು ಮಾರಾಟ ಸಂಸ್ಥೆಯೊಂದಿಗೆ ಸಹಭಾಗೀತ್ವ ಯೋಜನೆ ಅಡಿ ಹೊಸ ಕಾರಿನ ಮಾರಾಟ ಆರಂಭಿಸಿದ್ದ ಬಿವೈಡಿ ಕಂಪನಿಯು ಇದೀಗ ಮೊದಲ ಬಾರಿಗೆ ಅಧಿಕೃತ ಮಾರಾಟ ಮಳಿಗೆ ಆರಂಭಿಸಿದೆ.

ಹೊಸ ಇ6 ಎಂಪಿವಿ ಎಲೆಕ್ಟ್ರಿಕ್ ಕಾರು ಬಿಡುಗಡೆಯ ಸಂದರ್ಭದಲ್ಲಿ ಉತ್ಪಾದನಾ ಪ್ರಮಾಣಕ್ಕೆ ಅನುಗುಣವಾಗಿ ಬಿ ಟು ಬಿ ಉದ್ದೇಶಗಳಿಗೆ ಮಾತ್ರ ಕಾರು ವಿತರಣೆ ಆರಂಭಿಸಿದ್ದ ಬಿವೈಡಿ ಕಂಪನಿಯು ಇದೀಗ ವೈಯಕ್ತಿಕ ಕಾರು ಬಳಕೆದಾರರಿಗೂ ಹೊಸ ಇವಿ ಕಾರಿನ ವಿತರಣೆ ಆರಂಭಿಸುತ್ತಿದೆ. ಹೀಗಾಗಿ ಉದ್ಯಮ ವಿಸ್ತರಣೆಯ ಉದ್ದೇಶದಿಂದ ಕಂಪನಿಯು ಮಾರಾಟ ಮಳಿಗೆಗಳ ನಿರ್ಮಾಣಕ್ಕೆ ಚಾಲನೆ ನೀಡಿದೆ.

ಎಕ್ಸ್7 ಜಹ್ರೇ ಎಂ ಎಡಿಷನ್ ಬಿಡುಗಡೆ
ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಸರಣಿಯಲ್ಲಿ ಹೊಸದಾಗಿ 50ಎಂ ಜಹ್ರೇ ಎಂ ಎಡಿಷನ್ ಬಿಡುಗಡೆಗೊಳಿಸುತ್ತಿದೆ. ಕಂಪನಿಯು ಇದೀಗ ಹೊಸ ಎಕ್ಸ್7 40ಐ ಎಂ ಸ್ಪೋರ್ಟ್ ಮಾದರಿಯಲ್ಲೂ ಕೂಡಾ ವಿನೂತನ ವಿನ್ಯಾಸದ 50 ಜಹ್ರೇ ಎಂ ಎಡಿಷನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಹೊಸ ಎಕ್ಸ್7 40ಐ ಎಂ ಸ್ಪೋರ್ಟ್ 50 ಜಹ್ರೇ ಎಂ ಎಡಿಷನ್ ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.20 ಕೋಟಿ ಬೆಲೆ ಹೊಂದಿದ್ದು, ಹೊಸ ಕಾರು ಮಾದರಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ವಿತರಣೆ ಆರಂಭಗೊಳ್ಳುವುದಾಗಿ ಬಿಎಂಡಬ್ಲ್ಯು ಕಂಪನಿಯು ಮಾಹಿತಿ ಹಂಚಿಕೊಂಡಿದೆ.

ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಬಿಡುಗಡೆ
ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಸೆಡಾನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಆರಂಭಿಕ ಬೆಲೆಯು ರೂ.2.45 ಕೋಟಿಯಾಗಿದೆ. ಈ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಸೆಡಾನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಇ-ಟ್ರಾನ್ ಆರ್‌ಎಸ್ ಮತ್ತು ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಸೆಡಾನ್ ಸಾಕಷ್ಟು ಸ್ಪೋರ್ಟಿ ಲುಕ್ ಅನ್ನು ಹೊಂದಿದ್ದು, ದೂರದಿಂದ ನೋಡಿದಾಗ ಪೆಟ್ರೋಲ್-ಚಾಲಿತ ಮರ್ಸಿಡಿಸ್-ಎಎಂಜಿ ಕಾರಿನಂತೆ ಕಾಣುತ್ತದೆ. ಈ ಹೊಸ ಎಲೆಕ್ಟ್ರಿಕ್ ಕಾರಿನ ಸ್ಟೈಲಿಂಗ್‌ನಲ್ಲಿ ಶಾರ್ಪ್ ಮತ್ತು ಭವ್ಯವಾದ ನಿಲುವನ್ನು ಹೊಂದಿದೆ.

ಪಂಚ್ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ
ಮೈಕ್ರೊ ಎಸ್‌ಯುವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಪಂಚ್ ಕಾರು ಮಾದರಿಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದೆ. ಹೊಸ ಆಕ್ಸೆಸರಿಸ್ ಪ್ಯಾಕೇಜ್ ಮೈಕ್ರೊ ಎಸ್‌ಯುವಿ ಮಾದರಿಗಾಗಿ ಹಲವಾರು ಸ್ಪೋರ್ಟಿ ಹೊಂದಿರುವ ಬಿಡಿಭಾಗಗಳು ಲಭ್ಯವಿವೆ.

ಪಂಚ್ ಮಾದರಿಯ ಮೂಲಕ ಮೈಕ್ರೊ ಎಸ್‌ಯುವಿ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರು ಮಾದರಿಗೆ ಮತ್ತಷ್ಟು ಸ್ಪೋರ್ಟಿ ನೀಡುವ ಉದ್ದೇಶದಿಂದ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ್ದು, ಹೊಸ ಆಕ್ಸೆಸರಿಸ್ ಪ್ಯಾಕೇಜ್ ಅನ್ನು ಗ್ರಾಹಕರು ಹೆಚ್ಚುವರಿ ದರ ಪಾವತಿಸಿ ಖರೀದಿಸಬಹುದು.