ವಾರದ ಸುದ್ದಿಗಳು: ಸೆಕೆಂಡ್ ಹ್ಯಾಂಡ್ ಡೀಲರ್ಸ್‌ಗಳಿಗೆ ಹೊಸ ನಿಯಮ, ಮಾರುಕಟ್ಟೆಗೆ ಲಗ್ಗೆಯಿಟ್ಟ ಟೊಯೊಟಾ ಹೈರೈಡರ್..

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳಲ್ಲಿ ಪ್ರಮುಖ ಹೊಸ ಕಾರುಗಳ ಬಿಡುಗಡೆ ಜೊತೆಗೆ ಆಟೋಮೊಬೈಲ್ ವಲಯದಲ್ಲಿ ಪ್ರಮುಖ ಬೆಳವಣಿಗೆ ನಡೆದಿದ್ದು, ಈ ವಾರದ ಪ್ರಮುಖ ಸುದ್ದಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಒಂದೊಂದಾಗಿ ನೋಡೋಣ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಸೆಕೆಂಡ್ ಹ್ಯಾಂಡ್ ವಾಹನಗಳ ಮಾರುಕಟ್ಟೆ ನಿಯಂತ್ರಣಕ್ಕಾಗಿ ಹೊಸ ರೂಲ್ಸ್

ದೇಶಿಯ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಜೊತೆಗೆ ಬಳಕೆ ಮಾಡಿದ ವಾಹನ ವಹಿವಾಟು ಕೂಡಾ ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಆದರೆ ಬಳಕೆ ಮಾಡಿದ ವಾಹನ ಮಾರುಕಟ್ಟೆಯಲ್ಲಿ ಯಾವುದೇ ನಿಯಂತ್ರಣಗಳಲ್ಲಿರುವುದರಿಂದ ಮೋಸದ ವ್ಯವಹಾರ ಹೆಚ್ಚುತ್ತಿದ್ದು, ಇದಕ್ಕಾಗಿ ಕೇಂದ್ರ ಸಾರಿಗೆ ಇಲಾಖೆಯು ಸೆಕೆಂಡ್ ಹ್ಯಾಂಡ್ ವಾಹನಗಳ ಡೀಲರ್ಸ್‌ಗಳಿಗೆ ಹೊಸ ನಿಯಮಗಳನ್ನು ಪರಿಚಯಿಸುತ್ತಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ನಿಯಮಗಳ ಪ್ರಕಾರ ಇನ್ಮುಂದೆ ಬಳಸಿದ ವಾಹನಗಳ ಮಾರಾಟ ಮಾಡುವ ಡೀಲರ್‌ಗಳು ಮಾರಾಟದ ಪ್ರಕ್ರಿಯೆಯ ಬಗ್ಗೆ ಸಾರಿಗೆ ಇಲಾಖೆಗೆ ಕಡ್ಡಾಯವಾಗಿ ಮಾಹಿತಿ ಸಲ್ಲಿಸಬೇಕಿದ್ದು, ಇದರಲ್ಲಿ ಡೀಲರ್, ವಾಹನ ಮಾರಾಟ ಮಾಡುವ ಮಾಲೀಕ ಮತ್ತು ವಾಹನ ಖರೀದಿಸುವ ಗ್ರಾಹಕರ ಮಾಹಿತಿಯನ್ನು ಒಳಗೊಂಡಿರುತ್ತದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ನಿಯಮದಡಿಯಲ್ಲಿ ಆಯಾ ವ್ಯಾಪ್ತಿಯಲ್ಲಿರುವ ಸಾರಿಗೆ ಸಂಸ್ಥೆಗಳು ಬಳಸಿದ ವಾಹನಗಳ ಮರು-ಮಾರಾಟಗಾರನಿಗೆ ಪರವಾನಗಿಯನ್ನು ಸಹ ನೀಡಲಿದ್ದು, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಮೋಸದ ವ್ಯವಹಾರ ಕೈಗೊಂಡಲ್ಲಿ ಅಂತಹ ಡೀಲರ್ಸ್‌ಗಳ ಪರವಾನಿಗೆಯನ್ನು ರದ್ದುಗೊಳಿಸಬಹುದಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಟಾಟಾ ಸಫಾರಿ ಮತ್ತು ಹ್ಯಾರಿಯರ್ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ಸಫಾರಿ ಮತ್ತು ಹ್ಯಾರಿಯರ್ ಎಸ್‌ಯುವಿಗಳಲ್ಲಿ ಹೊಸದಾಗಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದೆ. ಹ್ಯಾರಿಯರ್ ಎಕ್ಸ್ಎಂಎಸ್ ಮ್ಯಾನುವಲ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ 17.20 ಲಕ್ಷ ಬೆಲೆ ಹೊಂದಿದ್ದರೆ ಎಕ್ಸ್ಎಂಎಎಸ್ ಆಟೋಮ್ಯಾಟಿಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 18.50 ಲಕ್ಷ ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಸಫಾರಿ ಎಕ್ಸ್ಎಂಎಸ್ ಮ್ಯಾನುವಲ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 17.96 ಲಕ್ಷ ಬೆಲೆ ಹೊಂದಿದ್ದರೆ ಎಕ್ಸ್ಎಂಎಎಸ್ ಆಟೋಮ್ಯಾಟಿಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 19.26 ಲಕ್ಷ ಬೆಲೆ ಹೊಂದಿದೆ. ಹೊಸ ವೆರಿಯೆಂಟ್‌ಗಳಲ್ಲಿ ಕಂಪನಿಯು ಹೊಸದಾಗಿ ಹಲವು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡಿದ್ದು, ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಖರೀದಿಸುವ ಗ್ರಾಹಕರಿಗೆ ಪನರೊಮಿಕ್ ಸನ್‌ರೂಫ್, 17 ಇಂಚಿನ ಅಲಾಯ್ ವ್ಹೀಲ್‌ಗಳು, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 8 ಸ್ಪೀಕರ್ಸ್ ಮ್ಯೂಸಿಕ್ ಸಿಸ್ಟಂ, ಪಾರ್ಕಿಂಗ್ ಕ್ಯಾಮೆರಾ, ಅಂಡ್ರಾಯಿಡ್ ಆಟೋ ಜೊತೆ ಆ್ಯಪಲ್ ಕಾರ್‌ಪ್ಲೇ ಸೌಲಭ್ಯಗಳನ್ನು ನೀಡಲಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೈರೈಡರ್ ಹೈಬ್ರಿಡ್ ಎಸ್‌ಯುವಿ ಬಿಡುಗಡೆ

ಟೊಯೊಟಾ ಕಂಪನಿಯು ಹೊಸ ಹೈರೈಡರ್ ಹೈಬ್ರಿಡ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರು ಬಿಡುಗಡೆ ಕೆಲವೇ ದಿನಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೈರೈಡರ್ ಮಾದರಿಯು ಸ್ಮಾರ್ಟ್ ಹೈಬ್ರಿಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಸದ್ಯ ಕಂಪನಿಯು ಸ್ಟ್ರಾಂಗ್ ಹೈಬ್ರಿಡ್ ಮಾದರಿಗಳ ಬೆಲೆ ಮಾಹಿತಿಯನ್ನು ಮಾತ್ರ ಹಂಚಿಕೊಂಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಅರ್ಬನ್ ಕ್ರೂಸರ್ ಹೈರೈಡರ್ ಸ್ಟ್ರಾಂಗ್ ಹೈಬ್ರಿಡ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.11 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.99 ಲಕ್ಷ ಬೆಲೆ ಹೊಂದಿದ್ದು, ಇದರಲ್ಲಿ ಡ್ಯುಯಲ್ ಟೋನ್ ವೆರಿಯೆಂಟ್‌ಗಳು ತುಸು ದುಬಾರಿಯಾಗಿರಲಿವೆ. ಹೈರೈಡರ್ನಲ್ಲಿ 1.5 ಲೀಟರ್ ಅಟ್ಕಿನ್ಸನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಬಲಶಾಲಿ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಇದು ಪ್ರತಿ ಲೀಟರ್‌ಗೆ 27.97 ಕಿ.ಮೀ ಇಂಧನ ದಕ್ಷತೆ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ರೂ. 260 ಕೋಟಿ ಹೂಡಿಕೆಗೆ ಸಿದ್ದವಾದ ಹೋಂಡಾ

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ದೇಶಾದ್ಯಂತ ಹರಡಿಕೊಂಡಿರುವ ತನ್ನ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ನವೀಕರಿಸಲು ಸಿದ್ಧವಾಗಿದ್ದು, ಇದಕ್ಕಾಗಿ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾಗಿದೆ. ಕಾರ್ ಡೀಲರ್‌ಶಿಪ್‌ಗಳನ್ನು ಅಪ್‌ಗ್ರೇಡ್ ಮಾಡಲು ಅದರ ಡೀಲರ್ ಪಾಲುದಾರರೊಂದಿಗೆ ಸಹಯೋಗದಲ್ಲಿ ಸುಮಾರು ರೂ. 260 ಕೋಟಿ ಹೂಡಿಕೆ ಮಾಡಲು ಮುಂದಾಗಿರುವ ಹೋಂಡಾ ಕಂಪನಿಯು ಹೊಸ ಡೀಲರ್‌ಶಿಪ್‌ಗಳೊಂದಿಗೆ ಗ್ರಾಹಕರಿಗೆ ಹೆಚ್ಚು ಪ್ರೀಮಿಯಂ ಅನುಭವವನ್ನು ನೀಡುವ ಯೋಜನೆಯಲ್ಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಎಸ್‌ಯುವಿ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೂ ಮುನ್ನ ಕಂಪನಿಯು ಕಾರ್ ಡೀಲರ್‌ಶಿಪ್‌ಗಳನ್ನು ಅಪ್‌ಗ್ರೇಡ್ ಮಾಡಲು ನಿರ್ಧರಿಸಿದ್ದು, ಪ್ರೀಮಿಯಂ ಕಾರು ಮಾದರಿಗಳೊಂದಿಗೆ ಕಾರು ಮಾರಾಟ ಸೌಲಭ್ಯವನ್ನು ಸಹ ನವೀಕರಿಸುತ್ತಿದೆ. ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಹೋಂಡಾ ಕಂಪನಿಯು ಸುಮಾರು 350 ಡೀಲರ್‌ಶಿಪ್‌ಗಳನ್ನು ಹೊಂದಿದ್ದು, ಈಗಾಗಲೇ ಹಳೆಯ ಶೋರೂಂಗಳ ನವೀಕರಣಕ್ಕಾಗಿ ಸುಮಾರು ರೂ. 100 ಕೋಟಿ ಹೂಡಿಕೆಯಲ್ಲಿ ನವೀಕರಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಎಲೆಕ್ಟ್ರಿಕ್ ಕಾರು ಮಾರಾಟ ಮಳಿಗೆ ಆರಂಭಿಸಿದ ಬಿವೈಡಿ

ಬಿವೈಡಿ ಇಂಡಿಯಾ ಕಂಪನಿಯು ದೇಶಾದ್ಯಂತ ಪ್ರಮುಖ ನಗರಗಳಲ್ಲಿ ತನ್ನ ಅಧಿಕೃತ ಮಾರಾಟ ಮಳಿಗೆಗಗಳ ಆರಂಭಕ್ಕೆ ಚಾಲನೆ ನೀಡುತ್ತಿದ್ದು, ನಮ್ಮ ಬೆಂಗಳೂರಿನಲ್ಲಿ ಇದೀಗ ಮೊದಲ ಮಾರಾಟ ಮಳಿಗೆಯನ್ನು ಆರಂಭಿಸಿದೆ. ಇ6 ಎಲೆಕ್ಟ್ರಿಕ್ ಎಂಪಿವಿ ಕಾರು ಮಾದರಿಯೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಬಿವೈಡಿ ಕಂಪನಿಯು ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಅಧಿಕೃತ ಮಾರಾಟ ಮಳಿಗೆಗಳನ್ನು ಆರಂಭಿಸುತ್ತಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಈ ಹಿಂದೆ ಪ್ರಮುಖ ಕಾರು ಮಾರಾಟ ಸಂಸ್ಥೆಗಳೊಂದಿಗೆ ವಿತರಣೆ ಸೌಲಭ್ಯಕ್ಕೆ ಮಾತ್ರ ಒಪ್ಪಂದ ಮಾಡಿಕೊಂಡಿದ್ದ ಕಂಪನಿಯು ಇದೀಗ ಅಧಿಕೃತ ಮಾರಾಟ ಮಳಿಗೆಯ ಜೊತೆ ಗ್ರಾಹಕರ ಸೇವಾ ಕೇಂದ್ರಗಳನ್ನು ತೆರೆಯುತ್ತಿದೆ. ನಮ್ಮ ಬೆಂಗಳೂರಿನಲ್ಲಿ ಪಿಪಿಎಸ್ ಮೋಟಾರ್ಸ್ ಜೊತೆಗೂಡಿ ಹೊಸ ಮಾರಾಟ ಮಳಿಗೆಯನ್ನು ಆರಂಭಿಸಿದ್ದು, ಯಲಹಂಕದಲ್ಲಿ ಅತಿದೊಡ್ಡ ಇವಿ ಕಾರು ಮಾರಾಟ ಮಳಿಗೆಯು ಆರಂಭಗೊಂಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಟೈರ್ ಉತ್ಪನ್ನಗಳನ್ನು ಪರಿಚಯಿಸಿದ ಅಪೋಲೊ ಟೈರ್ಸ್

ಭಾರತದ ಪ್ರಮುಖ ಟೈಯರ್ ಉತ್ಪಾದನಾ ತಯಾರಕ ಕಂಪನಿಯಾಗಿರುವ ಅಪೋಲೊ ಟೈರ್ಸ್ ಗ್ರಾಹಕರ ಬೇಡಿಕೆ ಆಧರಿಸಿ ಮತ್ತೇರಡು ಹೊಸ ಉತ್ಪನ್ನಗಳನ್ನು ಪರಿಚಯಿಸಿದ್ದು, 150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಕಂಪನಿಯು ಎಂಡ್ಯೂರೋ ಆಫ್-ರೋಡ್ ಮತ್ತು ಎಂಡ್ಯೂರೋ ಸ್ಟ್ರೀಟ್ ಟೈರ್‌ಗಳ ಟ್ರ್ಯಾಂಪ್ಲರ್ ಶ್ರೇಣಿಯನ್ನು ಪರಿಚಯಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಎಂಡ್ಯೂರೋ ಆಫ್-ರೋಡ್ ಮತ್ತು ಎಂಡ್ಯೂರೋ ಸ್ಟ್ರೀಟ್ ಟೈರ್‌ಗಳ ಟ್ರ್ಯಾಂಪ್ಲರ್ ಶ್ರೇಣಿಯನ್ನು ಕಂಪನಿಯು ಸ್ಪೋರ್ಟ್ ಟೂರಿಂಗ್, ಅಡ್ವೆಂಚರ್ ಟೂರಿಂಗ್, ಕ್ರೂಸರ್ ಮತ್ತ ಸ್ಟ್ರೀಟ್ ಸ್ಪೋರ್ಟ್ ಬೈಕ್ ಮಾದರಿಗಳಿಗಾಗಿ ಪರಿಚಯಿಸಿದೆ. ಹೊಸ ಟ್ರ್ಯಾಂಪ್ಲರ್ ಟೈರ್ ಶ್ರೇಣಿಯು ಎರಡು ಮಾದರಿಯಲ್ಲಿ ಲಭ್ಯವಿದ್ದು, ಟ್ರ್ಯಾಂಪ್ಲರ್ ಎಕ್ಸ್ಆರ್ ಮತ್ತು ಟ್ರ್ಯಾಂಪ್ಲರ್ ಎಸ್‌ಟಿ ಮಾದರಿಗಳಲ್ಲಿ ಖರೀದಿಸಬಹುದಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ರಸ್ತೆಗಿಳಿಯಲಿವೆ ಬರೋಬ್ಬರಿ 35 ಸಾವಿರ ಎಲೆಕ್ಟ್ರಿಕ್ ಬಸ್‌ಗಳು

ಪ್ರಸ್ತುತ ಸೇವೆಯಲ್ಲಿರುವ ಸಾಂಪ್ರದಾಯಿಕ ಡೀಸೆಲ್ ಬಸ್‌ಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದಲ್ಲದೆ ಇವುಗಳಿಂದ ಹೊರಸೂಸುವ ಮಾಲಿನ್ಯ ಪ್ರಮಾಣವು ಕೂಡಾ ಹೆಚ್ಚಳವಾಗುತ್ತಿದ್ದು, ಪರ್ಯಾಯ ಇಂಧನ ಮಾದರಿಗಳ ಜೊತೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್ ಸೇವೆಯ ಕುರಿತಾಗಿ ಮಾತನಾಡಿರುವ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಮುಂಬರುವ 2030ರ ವೇಳೆಗೆ ಬರೋಬ್ಬರಿ 35 ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ಸಿದ್ದವಾಗಿದೆ ಎಂದಿದ್ದಾರೆ. 2030ರ ವೇಳೆಗೆ ರಾಜ್ಯಾದ್ಯಂತ ಎಲ್ಲಾ ಬಸ್‌ಗಳು ಎಲೆಕ್ಟ್ರಿಕ್ ಮಾದರಿಗಳಾಬೇಕೆಂಬುದು ನಮ್ಮ ಸಂಕಲ್ಪವಾಗಿ ಎಂದಿರುವ ಶ್ರೀರಾಮುಲು ಅವರು ಹಂತ-ಹಂತವಾಗಿ ಇವಿ ಬಸ್ ಬಸ್‌ಗಳನ್ನು ಅಳವಡಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Most Read Articles

Kannada
English summary
Top auto news of the week tata safari and harrier xmas and xms variants launched and more
Story first published: Saturday, September 17, 2022, 21:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X