ವಾರದ ಸುದ್ದಿ: ಟಾಟಾ ಮತ್ತು ಮಾರುತಿ ಸುಜುಕಿ ಹೊಸ ಸಿಎನ್‌ಜಿ ವರ್ಷನ್ ಬಿಡುಗಡೆ, ಟೊಯೊಟಾ ಹೈಲಕ್ಸ್ ಅನಾವರಣ..

ಹೊಸ ವರ್ಷದ ಆರಂಭದಲ್ಲಿ ಪ್ರಮುಖ ಕಾರು ಕಂಪನಿಗಳ 2022ರ ಆವೃತ್ತಿಗಳ ಬಿಡುಗಡೆ ಪ್ರಕ್ರಿಯೆ ಜೋರಾಗಿದ್ದು, ಇದರ ಜೊತೆಗೆ ಸಿಎನ್‌ಜಿ ಕಾರು ಮಾದರಿಗಳ ಬಿಡುಗಡೆ ಕೂಡಾ ಹೆಚ್ಚಳವಾಗುತ್ತಿದೆ. ಹೊಸ ಕಾರುಗಳ ಬಿಡುಗಡೆಯ ಜೊತೆ ಈ ವಾರದ ಪ್ರಮುಖ ಸುದ್ದಿಗಳಲ್ಲಿ ಸೆಮಿಕಂಡಕ್ಟರ್ ಕುರಿತಾಗಿ ಸುದ್ದಿಗಳಿದ್ದು, ಕೆಳಗಿನ ಸ್ಲೈಡ್‌ಗಳಲ್ಲಿ ಈ ವಾರದ ಪ್ರಮುಖ ಸುದ್ದಿಗಳ ಹೈಲೆಟ್ಸ್ ಒಂದೊಂದಾಗಿ ನೋಡೋಣ.

ಈ ವಾರದ ಸುದ್ದಿಗಳು

ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ಮಾರುತಿ ಸುಜುಕಿ ಕಂಪನಿಯು ತನ್ನ ನ್ಯೂ ಜನರೇಷನ್ ಸೆಲೆರಿಯೊ ಮಾದರಿಯಲ್ಲಿ ಸಿಎನ್‌ಜಿ ಮಾದರಿಯನ್ನು ಬಿಡುಗಡೆ ಮಾಡಿದ್ದು, ಸಿಎನ್‌ಜಿ ಮಾದರಿಗಳಲ್ಲಿಯೇ ಅತಿ ಮೈಲೇಜ್ ಹೊಂದಿರುವ ಸೆಲೆರಿಯೊ ಸಿಎನ್‌ಜಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.58 ಲಕ್ಷ ಬೆಲೆ ಹೊಂದಿದೆ. ಹೊಸ ಸೆಲೆರಿಯೊ ಸಿಎನ್‌ಜಿ ಅತ್ಯಂತ ಇಂಧನ ದಕ್ಷತೆಯ ಕಾರು ಎಂದು ಮಾರುತಿ ಸುಜುಕಿ ಹೇಳಿಕೊಂಡಿದ್ದು, ಸೆಲೆರಿಯೊ ಸಿಎನ್‌ಜಿ ಕಾರು ಪ್ರತಿ ಕೆಜಿ ಸಿಎನ್‌ಜಿಗೆ ಗರಿಷ್ಠ 35.60 ಕಿಮೀ ಮೈಲೇಜ್ ನೀಡುತ್ತದೆ.

ಈ ವಾರದ ಸುದ್ದಿಗಳು

ಪೆಟ್ರೋಲ್ ಎಂಜಿನ್ ಹೊಂದಿರುವ ನ್ಯೂ ಜನರೇಷನ್ ಸೆಲೆರಿಯೊ ಕಾರು ಮಾದರಿಯು ಪ್ರತಿ ಲೀಟರ್‌ಗೆ 26.68 ಮೈಲೇಜ್ ಹೊಂದಿದ್ದು, ಸಿಎನ್‌ಜಿ ಮಾದರಿಯು ದೀರ್ಘಾವಧಿಯಲ್ಲಿ ಪೆಟ್ರೋಲ್ ಮಾದರಿಗಿಂತ ಹೆಚ್ಚು ಮಿತವ್ಯಯಕಾರಿಯಾಗಿದೆ. ಸೆಲೆರಿಯೊ ಸಿಎನ‌ಜಿ ಮಾದರಿಯಲ್ಲಿ ಪೆಟ್ರೋಲ್ ಮಾದರಿಯಂತೆಯೇ 1.0-ಲೀಟರ್ ಕೆ10ಸಿ ಡ್ಯುಯಲ್ ಜೆಟ್ ಎಂಜಿನ್ ಹೊಂದಿದ್ದು, ಈ ಎಂಜಿನ್ 57 ಬಿಎಚ್‌ಪಿ ಮತ್ತು 82.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ವಾರದ ಸುದ್ದಿಗಳು

ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ಸಿಎನ್‌ಜಿ ತಂತ್ರಜ್ಞಾನವನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಮತ್ತಷ್ಟು ಬದಲಾವಣೆಗೊಳಿಸಿ ಇನ್‌ಕ್ರೆಡೆಬಲ್‌ ಸಿಎನ್‌ಜಿ(ಐ-ಸಿಎನ್‌ಜಿ) ಎಂದು ಘೋಷಣೆ ಮಾಡಿದ್ದು, ಹೊಸ ಸಿಎನ್‌ಜಿ ಕಾರುಗಳಲ್ಲಿ ಯಾವುದೇ ಕಂಪನಿಯು ನೀಡಿರದಂತಹ ಹಲವು ತಾಂತ್ರಿಕ ಸೌಲಭ್ಯಗಳನ್ನು ನೀಡಿದೆ.

ಈ ವಾರದ ಸುದ್ದಿಗಳು

ಹೊಸ ಟಾಟಾ ಟಿಯಾಗೋ ಸಿಎನ್‌ಜಿ ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6,09,900 ದಿಂದ ಟಾಪ್ ಎಂಡ್ ಮಾದರಿಯು ರೂ. 7,52,900 ಬೆಲೆ ಹೊಂದಿದ್ದರೆ ಟಿಗೋರ್ ಸಿಎನ್‌ಜಿ ಆವೃತ್ತಿಯು ಪ್ರಮುಖ ಎರಡು ವೆರಿಯೆಂಟ್‌ಗಳೊಂದಿಗೆ ಆರಂಭಿಕವಾಗಿ ರೂ. 7,69,900 ದಿಂದ ಟಾಪ್ ಎಂಡ್ ಮಾದರಿಯು ರೂ. 8,29,900 ಬೆಲೆ ಹೊಂದಿದೆ.

ಈ ವಾರದ ಸುದ್ದಿಗಳು

ಹೊಸ ಟಿಯಾಗೋ ಸಿಎನ್‌ಜಿ ಮತ್ತು ಟಿಗೋರ್ ಸಿಎನ್‌ಜಿ ಮಾದರಿಗಳು ಸ್ಟ್ಯಾಂಡರ್ಡ್ ಪೆಟ್ರೋಲ್ ಮಾದರಿಗಿಂತಲೂ ರೂ. 1 ಲಕ್ಷದಷ್ಟು ದುಬಾರಿಯಾಗಿದ್ದರೂ ಪರಿಸರ ಸ್ನೇಹಿ ಸಿಎನ್‌ಜಿ ತಂತ್ರಜ್ಞಾನದೊಂದಿಗೆ ಅತ್ಯಧಿಕ ಮೈಲೇಜ್ ಪ್ರೇರಣೆ ಹೊಂದಿವೆ.

ಈ ವಾರದ ಸುದ್ದಿಗಳು

ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಅನಾವರಣ

ಟೊಯೊಟಾ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಬಹುನೀರಿಕ್ಷಿತ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಮಾದರಿಯನ್ನು ಅನಾವರಣಗೊಳಿಸಿ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಮುಂಬರುವ ಮಾರ್ಚ್ ಆರಂಭದಲ್ಲಿ ಹೊಸ ಪಿಕ್ಅಪ್ ಮಾದರಿಯ ಬೆಲೆ ಘೋಷಣೆ ಮಾಡಲಾಗುತ್ತದೆ.

ಈ ವಾರದ ಸುದ್ದಿಗಳು

ಹೈಲಕ್ಸ್ ಪಿಕ್ಅಪ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಎಂಪಿವಿ ಮತ್ತು ಫಾರ್ಚೂನರ್ ಎಸ್‌ಯುವಿ ನಡುವಿನ ಸ್ಥಾನದಲ್ಲಿ ಮಾರಾಟಗೊಳ್ಳಲಿದ್ದು,2.8-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ ಆಯ್ಕೆಯೊಂದಿಗೆ ಬಿಡುಗಡೆ ಮಾಡುತ್ತಿದೆ. ಹೊಸ ಪಿಕ್ಅಪ್ ಮಾದರಿಯು ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಆಕರ್ಷಕ ವಿನ್ಯಾಸ ಮತ್ತು ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಆಫ್ ರೋಡ್ ಪ್ರಿಯರ ಪ್ರಮುಖ ಆಕರ್ಷಣೆಯಾಗಲಿದೆ.

ಈ ವಾರದ ಸುದ್ದಿಗಳು

ಟಾಟಾ ಸಫಾರಿ ಡಾರ್ಕ್ ಎಡಿಷನ್ ಬಿಡುಗಡೆ

ಡಾರ್ಕ್ ಎಡಿಷನ್‌ಗಳನ್ನು ಟಾಟಾ ಮೋಟಾರ್ಸ್ ಕಂಪನಿಯು ಈಗಾಗಲೇ ನೆಕ್ಸಾನ್, ಆಲ್‌ಟ್ರೊಜ್ ಮತ್ತು ಹ್ಯಾರಿಯರ್ ಮಾದರಿಗಳಲ್ಲಿ ಮಾರಾಟಗೊಳಿಸುತ್ತಿದ್ದು, ಕಂಪನಿಯು ಇದೀಗ ಸಫಾರಿ ಎಸ್‌ಯುವಿ ಮಾದರಿಯಲ್ಲೂ ಡಾರ್ಕ್ ಎಡಿಷನ್ ಬಿಡುಗಡೆ ಮಾಡಿದೆ. ಹೊಸ ಡಾರ್ಕ್ ಎಡಿಷನ್ ಮಾದರಿಯು ಸಫಾರಿ ಎಸ್‌ಯುವಿಯ ಎಕ್ಸ್‌ಟಿ ಪ್ಲಸ್, ಎಕ್ಸ್‌ಟಿಎ ಪ್ಲಸ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್‌ಎ ಪ್ಲಸ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಈ ವಾರದ ಸುದ್ದಿಗಳು

ಸಂಪೂರ್ಣ ಕಪ್ಪು ಬಣ್ಣದೊಂದಿಗೆ ಐಷಾರಾಮಿ ಲುಕ್ ಹೊಂದಿರುವ ಸಫಾರಿ ಡಾರ್ಕ್ ಎಡಿಷನ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 19.05 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 22.51 ಲಕ್ಷ ಬೆಲೆ ಹೊಂದಿದೆ. ಸಫಾರಿ ಎಸ್‌ಯುವಿ ಮಾದರಿಯು ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸ್ಟ್ಯಾಂಡರ್ಡ್, ಡಾರ್ಕ್ ಮತ್ತು ಅಡ್ವೆಂಚರ್ ಪೆರಸೊನಾ ಆವೃತ್ತಿಗಳನ್ನು ಹೊಂದಿದ್ದು, ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 14.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 23.19 ಲಕ್ಷ ಬೆಲೆ ಹೊಂದಿದೆ.

ಈ ವಾರದ ಸುದ್ದಿಗಳು

ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಬಿಡುಗಡೆ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ನವೀಕರಿಸಿದ ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ.59.90 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, 30ಐ ಸ್ಪೋರ್ಟ್ಎಕ್ಸ್ ಪ್ಲಸ್ (30i SportX Plus) ಮತ್ತು 30ಐ ಎಂ ಸ್ಪೋರ್ಟ್ (30i M Sport) ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಈ ವಾರದ ಸುದ್ದಿಗಳು

ಹೊಸ ಎಕ್ಸ್3 ಎಸ್‍ಯುವಿಯು 2.0-ಲೀಟರ್, ನಾಲ್ಕು-ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 252 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಈ ವಾರದ ಸುದ್ದಿಗಳು

ಕಿಯಾ ಕಾರೆನ್ಸ್ ಬುಕ್ಕಿಂಗ್ ಆರಂಭ

ಕಿಯಾ ಇಂಡಿಯಾ ಕಂಪನಿಯು ತನ್ನ ಹೊಸ ಎಸ್‌ಯುವಿ ಮಾದರಿಯಾದ ಕಾರೆನ್ಸ್ ಮಾದರಿಯನ್ನು ಮುಂದಿನ ತಿಂಗಳು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಂಪನಿಯು ರೂ. 25 ಸಾವಿರ ಮುಂಗಡ ಹಣದೊಂದಿಗೆ ಅಧಿಕೃತ ಬುಕ್ಕಿಂಗ್ ಆರಂಭಿಸಿದೆ.

ಈ ವಾರದ ಸುದ್ದಿಗಳು

ಹೊಸ ಕಾರು ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭಿಸಿದ ಮೊದಲ ದಿನವೇ ಸುಮಾರು 7,738 ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದು, ಹೊಸ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಮೊದಲ ದಿನವೇ ದಾಖಲೆ ಪ್ರಮಾಣದ ಬುಕ್ಕಿಂಗ್ ಸಂಖ್ಯೆ ಇದಾಗಿದೆ. ಹೊಸ ಕಾರು ಫೆಬ್ರವರಿ ಮಧ್ಯಂತರದಲ್ಲಿ ಬಿಡುಗಡೆಯಾಗಲಿದ್ದು, 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18 ಲಕ್ಷದ ತನಕ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದೆಂದು ಅಂದಾಜಿಸಲಾಗಿದೆ.

ಈ ವಾರದ ಸುದ್ದಿಗಳು

ಸ್ಲಾವಿಯಾ ಸೆಡಾನ್ ಉತ್ಪಾದನೆ ಆರಂಭ

ಸ್ಕೋಡಾ(Skoda) ಕಂಪನಿಯು ತನ್ನ ಹೊಚ್ಚ ಹೊಸ ಸ್ಲಾವಿಯಾ(Slavia) ಸೆಡಾನ್ ಮಾದರಿಯನ್ನು ಅನಾವರಣಗೊಳಿಸಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಮುಂದಿನ ತಿಂಗಳು ಅಧಿಕೃತವಾಗಿ ಬಿಡುಗಡೆಗೊಳ್ಳಲಿರುವ ಹೊಸ ಕಾರಿನ ಉತ್ಪಾದನೆಗೆ ಸ್ಕೋಡಾ ಕಂಪನಿಯು ಅಧಿಕೃತವಾಗಿ ಚಾಲನೆ ನೀಡಿದೆ.

ಈ ವಾರದ ಸುದ್ದಿಗಳು

ಮಹಾರಾಷ್ಟ್ರದ ಚಾಕನ್‌ನಲ್ಲಿರುವ ಫೋಕ್ಸ್‌ವ್ಯಾಗನ್-ಸ್ಕೋಡಾ ಆಟೋ ಕಾರು ಉತ್ಪಾದನಾ ಘಟಕದಲ್ಲಿ ಹೊಸ ಸ್ಲಾವಿಯಾ ಕಾರಿನ ಉತ್ಪಾದನೆಗೆ ಚಾಲನೆ ನೀಡಲಾಗಿದ್ದು, ಹೊಸ ಕಾರು ವಿವಿಧ ಎಂಜಿನ್ ಆಯ್ಕೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಮತ್ತು ಆಕರ್ಷಕ ಬೆಲೆಯೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಈ ವಾರದ ಸುದ್ದಿಗಳು

ಲೆಕ್ಸಸ್ ಎನ್ಎಕ್ಸ್ 350ಹೆಚ್ ಬುಕ್ಕಿಂಗ್ ಆರಂಭ

ಲೆಕ್ಸಸ್ ತನ್ನ ಹೊಸ ಎನ್ಎಕ್ಸ್ 350ಹೆಚ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಲೆಕ್ಸಸ್ ಕಂಪನಿಯು ಈ ಹೊಸ ಎನ್ಎಕ್ಸ್ 350ಹೆಚ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ.

ಈ ವಾರದ ಸುದ್ದಿಗಳು

ಹೊಸ ಲೆಕ್ಸಸ್ ಎನ್ಎಕ್ಸ್ 350ಹೆಚ್ ಎಸ್‍ಯುವಿಯು ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಎನ್ಎಕ್ಸ್ 350ಹೆಚ್ ಎಸ್‍ಯುವಿಯ ಹೊಸ ಟೀಸರ್ ಅನ್ನು ಸಹ ಬಿಡುಗಡೆಗೊಳಿಸಿದೆ. ಈ ಎಸ್‍ಯುವಿಯು ಕಳೆದ ವರ್ಷ ಜೂನ್‌ನಲ್ಲಿ ಮೊದಲ ಬಾರಿಗೆ ಜಾಗತಿಕ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಲೆಕ್ಸಸ್ ಎನ್ಎಕ್ಸ್ 350ಹೆಚ್ ಎಸ್‍ಯುವಿಯು ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (TNGA) ಪ್ಲಾಟ್‌ಫಾರ್ಮ್‌ನ GA-K ಆವೃತ್ತಿಯನ್ನು ಆಧರಿಸಿದೆ.

ಈ ವಾರದ ಸುದ್ದಿಗಳು

ಸೆಮಿಕಂಡಕ್ಟರ್ ಕೊರೆತೆ ಅನುಭವಿಸುತ್ತಿದೆ ಸ್ಕೋಡಾ

ಎಲೆಕ್ಟ್ರಾನಿಕ್ ಚಿಪ್ ಅಗತ್ಯ ಪ್ರಮಾಣದ ಸ್ಟಾಕ್ ಇಲ್ಲದಿರುವ ಕಾರಣಕ್ಕೆ ತನ್ನ ಪ್ರಮುಖ ಕಾರು ಉತ್ಪಾದನಾ ಘಟಕಗಳು ಕೇವಲ ಒಂದೇ ಶಿಫ್ಟ್ ಮೂಲಕ ಉತ್ಪಾದನೆಯನ್ನು ಕೈಗೊಳ್ಳುತ್ತಿದ್ದು, ಇದೇ ಕಾರಣಕ್ಕೆ ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ ಕಂಪನಿಯು ತಮ್ಮ ಹೊಸ ಕಾರುಗಳಾದ ಕುಶಾಕ್ ಮತ್ತು ಟೈಗುನ್ ಕಾರುಗಳ ಆಟೋ ಫೋಲ್ಡಿಂಗ್ ಒಆರ್‌ವಿಎಂ ಸೌಲಭ್ಯವನ್ನು ತೆಗೆದುಹಾಕಿ ಮ್ಯಾನುವಲ್ ಮಾದರಿಯನ್ನು ಜೋಡಣೆ ಮಾಡಿದೆ.

ಈ ವಾರದ ಸುದ್ದಿಗಳು

ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕಂಪನಿಯ ಸಿಇಒ ಜಾಕ್ ಹೋಲಿಸ್ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಆಟೋ ಫೋಲ್ಡಿಂಗ್ ಒಆರ್‌ವಿಎಂ ಹೊರತುಪಡಿಸಿ ಇತರೆ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳಲಾಗಿದೆ.

Most Read Articles

Kannada
English summary
Top auto news of the week tiago tigor cng launched celerio s cng launched hilux revealed
Story first published: Sunday, January 23, 2022, 0:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X