ವಾರದ ಸುದ್ದಿಗಳು: ಕೊನೆಗೂ ಮಹೀಂದ್ರಾ ವಾಹನ ಖರೀದಿಸಿದ ತುಮಕೂರು ರೈತ, ಪ್ರಮುಖ ಇವಿ ವಾಹನಗಳ ಬಿಡುಗಡೆ..

Top Auto News Of The Week | ಹೊಸ ವರ್ಷದ ಆರಂಭದಲ್ಲಿ ಪ್ರಮುಖ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಗಳು ತಮ್ಮ ಬಹುನೀರಿಕ್ಷಿತ ಇವಿ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಇವಿ ಆವೃತ್ತಿಗಳ ಬಿಡುಗಡೆ ಪ್ರಕ್ರಿಯೆ ಜೋರಾಗಿದೆ. ಇದರ ಜೊತೆಗೆ ಈ ವಾರದ ಪ್ರಮುಖ ಸುದ್ದಿಗಳಲ್ಲಿ ಮಹೀಂದ್ರಾ ಶೋರೂಂನಲ್ಲಿ ನಡೆದ ರೈತನಿಗೆ ಅವಮಾನ ಪ್ರಕರಣದ ನಂತರ ನಡೆದ ಮಹತ್ವದ ಬೆಳವಣಿಗೆಗಳು ಕೂಡಾ ಪ್ರಮುಖವಾಗಿದ್ದು, ಕೆಳಗಿನ ಸ್ಲೈಡ್‌ಗಳಲ್ಲಿ ಈ ವಾರದ ಪ್ರಮುಖ ಸುದ್ದಿಗಳ ಹೈಲೆಟ್ಸ್ ಒಂದೊಂದಾಗಿ ನೋಡೋಣ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕೊನೆಗೂ ಬೊಲೆರೊ ಖರೀದಿಸಿದ ರೈತ ಕೆಂಪೇಗೌಡ

ತುಮಕೂರಿನ ಮಹೀಂದ್ರಾ ಶೋರೂಂನಲ್ಲಿ ನಡೆದಿದ್ದ ರೈತನಿಗೆ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಅವಮಾನಕ್ಕೊಳಾದ ರೈತ ಕೊನೆಗೂ ಹಠ ಬಿಡದೆ ಮಹೀಂದ್ರಾ ಬೊಲೆರೊ ಪಿಕ್ಅಪ್ ವಾಹನವನ್ನು ಖರೀದಿಸಿದ್ದಾರೆ. ಹೊಸ ವಾಹನ ಖರೀದಿ ಕುರಿತಂತೆ ಮಹೀಂದ್ರಾ ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರೇ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ವಾಹನ ವಿತರಣೆ ಮಾಡಿ ಮಹೀಂದ್ರಾ ಕುಟುಂಬಕ್ಕೆ ಸ್ವಾಗತ ಕೋರಿದ್ದಾರೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಮೊನ್ನೆ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿ ಕಂಪನಿಯ ಉದ್ದೇಶವೇ ಎಲ್ಲಾ ಸಮುದಾಯಗಳನ್ನು ಮತ್ತು ಪಾಲುದಾರರಿಗೆ(stakeholders) ಶಕ್ತಿ ತುಂಬುವುದಾಗಿದ್ದು, ಪ್ರತಿಯೊಬ್ಬರ ಘನತೆಯನ್ನು ಎತ್ತಿಹಿಡಿಯುವುದು ಕಂಪನಿಯ ಮೂಲ ಆಶಯವಾಗಿದೆ. ನಮ್ಮ ಮೌಲ್ಯಗಳೊಂದಿಗೆ ರಾಜಿ ಆಗುವುದು ಮತ್ತು ನಮ್ಮ ನೀತಿಗಳಿಂದ ದೂರ ಸರಿಯುವ ಯಾವುದೇ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಕ್ರಮ ಕೈಗೊಳ್ಳುವುದಾಗಿ ಆನಂದ್ ಮಹೀಂದ್ರಾ ಅವರು ಮಾಹಿತಿ ನೀಡಿದ್ದರು.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಗ್ರಾಹಕನಿಗೆ ಅವಮಾನಿಸಿದ್ದ ಶೋರೂಂ ಸಿಬ್ಬಂದಿ!

ತುಮಕೂರಿನ ರಾಮನಪಾಳ್ಯದಲ್ಲಿ ಕೆಂಪೇಗೌಡ ಅನ್ನುವ ಯುವ ರೈತ ವಾಣಿಜ್ಯ ಬಳಕೆಗಾಗಿ ಬೊಲೆರೊ ಪಿಕ್‌ಅಪ್ ಖರೀದಿಸಲು ಮಹೀಂದ್ರಾ ಶೋರೂಂಗೆ ತಮ್ಮ ಸ್ನೇಹಿತರೊಂದಿಗೆ ಬುಕ್ ಮಾಡಲು ಬಂದಿದ್ದರು. ಈ ವೇಳೆ ರೈತನ ಸಾಮಾನ್ಯ ವೇಷ ಭೂಷಣ ನೋಡಿದ ಶೋರೂರಂ ಸಿಬ್ಬಂದಿ ವಾಹನ ಬಗೆಗೆ ಸರಿಯಾದ ಮಾಹಿತಿ ನೀಡದೆ ಅವಮಾನಿಸಿದ್ದಲ್ಲದೆ 10 ರೂಪಾಯಿ ಹೊಂದಿಸಲು ಯೋಗ್ಯತೆ ಇಲ್ಲ, ಹೊಸ ವಾಹನ ಖರೀದಿಸುತ್ತಾನಂತೆ ಎಂದು ಹಂಗಿಸಿದ್ದರು. ಆದರೆ ಇದೀಗ ಅವರು ತಮ್ಮ ಕನಸಿನ ವಾಹನ ಖರೀದಿ ಮಾಡಿದ್ದು, ವಾಹನ ಖರೀದಿಯ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕಿಯಾ ಕಾರೆನ್ಸ್ ಎಸ್‌ಯುವಿ ರಿವ್ಯೂ

ಕಿಯಾ ಇಂಡಿಯಾ ಕಂಪನಿಯು ತನ್ನ ಹೊಸ ಎಸ್‌ಯುವಿ ಮಾದರಿಯಾದ ಕಾರೆನ್ಸ್ ಆವೃತ್ತಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಾರಿನ ಕಾರ್ಯಕ್ಷಮತೆ ಪರೀಕ್ಷೆಗಾಗಿ ಫಸ್ಟ್ ಡ್ರೈವ್ ಆಯೋಜಿಸಿತ್ತು. ಫಸ್ಟ್ ಡ್ರೈವ್‌ಗೆ ಡ್ರೈವ್‌ಸ್ಪಾರ್ಕ್ ತಂಡವನ್ನು ಸಹ ಆಹ್ವಾನಿಸಿದ್ದ ಕಿಯಾ ಕಂಪನಿಯು ಹೊಸ ಕಾರಿನ ಮೂಲಕ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಶ್ರೇಣಿಯಲ್ಲಿರುವ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಎಂಪಿವಿ ಕಾರು ಮಾದರಿಗಳಾದ ಎರ್ಟಿಗಾ ಹಾಗೂ ಇನೋವಾ ಕ್ರಿಸ್ಟಾ ಆರಂಭಿಕ ಮಾದರಿಗಳಿಗೂ ಇದು ಪೈಪೋಟಿ ನೀಡಲಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18 ಲಕ್ಷದ ತನಕ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದೆಂದು ಅಂದಾಜಿಸಲಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಟಾಟಾ ಟಿಗೋರ್ ಸಿಎನ್‌ಜಿ ರಿವ್ಯೂ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಟಿಯಾಗೋ ಮತ್ತು ಟಿಗೋರ್ ಕಾರು ಮಾದರಿಗಳ ಸಿಎನ್‌ಜಿ ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಟಿಯಾಗೋ ಸಿಎನ್‌ಜಿ ಹ್ಯಾಚ್‌ಬ್ಯಾಕ್ ಮಾದರಿಯು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಪ್ಲಸ್ ವೆರಿಯೆಂಟ್ ಹೊಂದಿದ್ದರೆ ಟಿಗೋರ್ ಸಿಎನ್‌ಜಿ ಕಂಪ್ಯಾಕ್ಟ್ ಸೆಡಾನ್ ಮಾದರಿಯು ಎಕ್ಸ್‌ಜೆಡ್ ಮತ್ತು ಎಕ್ಸ್‌ಜೆಡ್ ಪ್ಲಸ್ ವೆರಿಯೆಂಟ್‌‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಟಿಯಾಗೋ ಸಿಎನ್‌ಜಿ ಮತ್ತು ಟಿಗೋರ್ ಸಿಎನ್‌ಜಿ ಮಾದರಿಗಳು ಸ್ಟ್ಯಾಂಡರ್ಡ್ ಪೆಟ್ರೋಲ್ ಮಾದರಿಗಿಂತಲೂ ರೂ. 1 ಲಕ್ಷದಷ್ಟು ದುಬಾರಿಯಾಗಿದ್ದರೂ ಪರಿಸರ ಸ್ನೇಹಿ ಸಿಎನ್‌ಜಿ ತಂತ್ರಜ್ಞಾನದೊಂದಿಗೆ ಅತ್ಯಧಿಕ ಮೈಲೇಜ್ ಪ್ರೇರಣೆ ಹೊಂದಿವೆ. ಹೊಸ ಟಾಟಾ ಟಿಯಾಗೋ ಸಿಎನ್‌ಜಿ ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6,09,900 ದಿಂದ ಟಾಪ್ ಎಂಡ್ ಮಾದರಿಯು ರೂ. 7,52,900 ಬೆಲೆ ಹೊಂದಿದ್ದರೆ ಟಿಗೋರ್ ಸಿಎನ್‌ಜಿ ಆವೃತ್ತಿಯು ಪ್ರಮುಖ ಎರಡು ವೆರಿಯೆಂಟ್‌ಗಳೊಂದಿಗೆ ಆರಂಭಿಕವಾಗಿ ರೂ. 7,69,900 ದಿಂದ ಟಾಪ್ ಎಂಡ್ ಮಾದರಿಯು ರೂ. 8,29,900 ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೈ ಸ್ಪೀಡ್ ವೆನಿಸ್ ಇ-ಸ್ಕೂಟರ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಅತಿದೊಡ್ಡ ಇವಿ ವಾಹನಗಳ ಡೀಲರ್‌ಶಿಪ್ ಜಾಲ ಹೊಂದಿರುವ ಕೊಮಾಕಿ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹೊಸ ವೆನಿಸ್ ಇವಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.15 ಲಕ್ಷ ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ವೆನಿಸ್ ಇವಿ ಸ್ಕೂಟರ್ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ ಮಾದರಿಯಾಗಿರುವ ವೆನಿಸ್ ಆವೃತ್ತಿಯು ಪ್ರತಿ ಚಾರ್ಜ್‌ಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಹೊಸ ಸ್ಕೂಟರ್ ಮಾದರಿಯು ಪ್ರತಿ ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಗರಿಷ್ಠ 120 ಕಿ.ಮೀ ಮೈಲೇಜ್ ಖಾತ್ರಿಪಡಿಸುತ್ತದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕೊಮಾಕಿ ರೇಂಜರ್ ಇ-ಬೈಕ್ ಬಿಡುಗಡೆ

ಹೊಸ ಕೊಮಾಕಿ ರೇಂಜರ್ ಇ ಬೈಕ್ ಮಾದರಿಯು 4kWh ಲೀಥಿಯಂ ಬ್ಯಾಟರಿ ಜೊತೆಗೆ 5,000 ವ್ಯಾಟ್ ಮೋಟಾರ್‌ನಿಂದ ಚಾಲಿತವಾಗಲಿದ್ದು, ಇದು ವಿವಿಧ ರೈಡಿಂಗ್ ಮೋಡ್‌ಗಳೊಂದಿಗೆ ಪ್ರತಿ ಚಾರ್ಜ್‌ಗೆ 180 ಕಿ.ಮೀ ನಿಂದ 220 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಇವಿ ಕ್ರೂಸರ್ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.68 ಲಕ್ಷ ಬೆಲೆ ಹೊಂದಿದ್ದು, ಇವಿ ಬೈಕ್ ಮಾದರಿಗಳಲ್ಲಿಯೇ ಅತಿ ಹೆಚ್ಚು ಪ್ರೀಮಿಯಂ ಫೀಚರ್ಸ್ ಹೊಂದಿರುವ ಹೊಸ ರೇಂಜರ್ ಬೈಕ್ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಡಚ್ ಮೂಲದ ಇ-ಬೈಕ್ ಕಂಪನಿ ಖರೀದಿಸಿದ ಟಿವಿಎಸ್

ಡಚ್ ಮೂಲದ ಸ್ವಿಸ್ ಇ-ಮೊಬಿಲಿಟಿ ಗ್ರೂಪ್ ಕೂಡಾ ಇವಿ ವಾಹನ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಲ್ಲಿ ಭಾರತದ ಅತಿ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವ ಟಿವಿಎಸ್ ಮೋಟಾರ್ ಕೂಡಾ ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಸ್ವಿಸ್ ಇ-ಮೊಬಿಲಿಟಿ ಗ್ರೂಪ್‌ನಲ್ಲಿ ಶೇ.75ರಷ್ಟು ಸ್ವಾಧೀನಪಡಿಸಿಕೊಂಡಿರುವ ಟಿವಿಎಸ್ ಮೋಟಾರ್ ಕಂಪನಿಯು ಇವಿ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸಿದ್ದು, ವಾರ್ಷಿಕವಾಗಿ 100 ಮಿಲಿಯನ್ ಯುಎಸ್ ಡಾಲರ್ ಆದಾಯ ಹೊಂದಿರುವ ಕಂಪನಿಯಲ್ಲಿ ಟಿವಿಎಸ್ ಮೋಟಾರ್ ಹೊಸ ಅಧ್ಯಾಯ ಆರಂಭಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಎಲೆಕ್ಟ್ರಿಕ್ ಕಾರು ವಿತರಣೆ ಆರಂಭಿಸಿದ ಬಿವೈಡಿ

ಬಿವೈಡಿ ಇಂಡಿಯಾ ಕಂಪನಿಯು ತನ್ನ ಹೊಸ ಇ6 ಎಲೆಕ್ಟ್ರಿಕ್ ಎಂಪಿವಿ ಕಾರು ಬಿಡುಗಡೆಯ ಮೂಲಕ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕಳೆದ ನವೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಹೊಸ ಕಾರಿನ ವಿತರಣೆಯನ್ನು ಇಂದು ಅಧಿಕೃತವಾಗಿ ಆರಂಭಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಬಿವೈಡಿ ಇವಿ ಎಲೆಕ್ಟ್ರಿಕ್ ಎಂಪಿವಿ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 29.15 ಲಕ್ಷ ಬೆಲೆ ಹೊಂದಿದ್ದು, ಹೊಸ ಎಲೆಕ್ಟ್ರಿಕ್ ಕಾರನ್ನು ಕಂಪನಿಯು ಸದ್ಯ ಬಿ2ಬಿ ಉದ್ದೇಶಗಳಿಗೆ ಮಾತ್ರ ಮಾರಾಟ ಮಾಡುತ್ತಿದೆ. WLTP ಮಾನದಂಡಗಳ ಪ್ರಕಾರ ಹೊಸ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 415 ಕಿ.ಮೀ ನಿಂದ ಗರಿಷ್ಠ 520 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಜಿಟಿ 120 ಸ್ಪೋರ್ಟ್ ಇವಿ ಬೈಕ್ ಅನಾವರಣ

ಇಗ್ನಿಟ್ರಾನ್ ಮೋಟೋಕಾರ್ಪ್ ಕಂಪನಿಯು ತನ್ನ ಸಹ ಬ್ರಾಂಡ್ ಸೈಬೋರ್ಗ್ ಬ್ರಾಂಡ್ ಅಡಿ ವಿವಿಧ ಮಾದರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಬೃಹತ್ ಯೋಜನೆ ರೂಪಿಸಿದ್ದು, ಸೈಬೋರ್ಗ್ ಬ್ರಾಂಡ್ ಅಡಿಯಲ್ಲಿ ಮೂರನೇ ಬೈಕ್ ಮಾದರಿಯನ್ನು ಇದೀಗ ಅನಾವರಣಗೊಳಿಸಲಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಜಿಟಿ 120 ಎಲೆಕ್ಟ್ರಿಕ್ ಸ್ಪೋರ್ಟ್ ಬೈಕ್ ಮಾದರಿಯು ಮೊದಲೆರಡು ಬೈಕ್ ಮಾದರಿಗಳಂತೆ ಪ್ರಮುಖ ತಾಂತ್ರಿಕ ವೈಶಿಷ್ಟ್ಯತೆಗಳನ್ನು ಹೊಂದಿದ್ದರೂ ಎಲೆಕ್ಟ್ರಿಕ್ ಮೋಟಾರ್ ಮತ್ತು ಗರಿಷ್ಠ ವೇಗದಲ್ಲಿ ಮಿಂಚಲಿದ್ದು, 6000 ವೊಲ್ಟ್ ಮೋಟಾರ್ ಪವರ್ ಮೂಲಕ ಇದು ಪ್ರತಿ ಗಂಟೆಗೆ 125 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. 125 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 180 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಟಾರ್ಕ್ ಮೋಟಾರ್ಸ್ ಹೊಸ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಬೈಕ್ ಮಾದರಿಗಳು ಪುಣೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.07 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 1.22 ಲಕ್ಷ ಬೆಲೆ ನಿಗದಿಪಡಿಸಿದೆ. ಹೊಸ ಬೈಕ್‌ಗಳ ಬೆಲೆಗಳು ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ಸಬ್ಸಡಿ ಯೋಜನೆಗಳಿಂದ ಕೆಲವು ರಾಜ್ಯಗಳಲ್ಲಿನ ಇವಿ ಬೆಲೆಗಳಲ್ಲಿ ಏರಿಳಿತವಾಗಲಿದ್ದು, ಹೊಸ ಬೈಕ್ ನಮ್ಮ ಬೆಂಗಳೂರಿನಲ್ಲಿ ಆರಂಭಿಕವಾಗಿ ರೂ. 1.32 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 1.47 ಲಕ್ಷ ಬೆಲೆ ಹೊಂದಿರಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಸ್ಪ್ಲೀಟ್ ಟೆಲ್ಲಿಸ್ ಫ್ರೆಮ್‌ ಮೇಲೆ ನಿರ್ಮಾಣವಾಗಿರುವ ಹೊಸ ಕ್ರಾಟೋಸ್ ಮಾದರಿಯು ಪ್ರತಿ ಗಂಟೆಗೆ ಗರಿಷ್ಠ 100ಕಿ.ಮೀ ಟಾಪ್ ಸ್ಪೀಡ್ ಮೂಲಕ ಪ್ರತಿ ಚಾರ್ಜ್‌ಗೆ 120 ಕಿ.ಮೀ ಮೈಲೇಜ್ ನೀಡಿದರೆ ಕ್ರಾಟೋಸ್ ಆರ್ ಮಾದರಿಯು 120 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

Article Published On: Sunday, January 30, 2022, 9:30 [IST]
English summary
Top auto news of the week tumkur farmer gets new vehicle komaki ev bike launch and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+