ವಾರದ ಸುದ್ದಿ: ದುಬಾರಿಯಾದ ವಾಹನ ವಿಮೆ, ಕಿಯಾ ಇವಿ6 ಬಿಡುಗಡೆ, ಹೊಸ ಡಿಫೆಂಡರ್ ಎಸ್‍ಯುವಿ ಅನಾವರಣ..

ಕೇಂದ್ರ ಸರ್ಕಾರವು ವಾಹನಗಳ ಮೂರನೇ ವ್ಯಕ್ತಿಗೆ ಸುರಕ್ಷತೆ ನೀಡುವ ವಿಮಾ ಮೊತ್ತವನ್ನು ಜೂನ್ 1ರಿಂದಲೇ ಜಾರಿಗೆ ಬರುವಂತೆ ಜಾರಿಗೊಳಿಸಿದ್ದು, ಈ ವಾರದ ಪ್ರಮುಖ ಸುದ್ದಿಗಳಲ್ಲಿ ಇನ್ಸುರೆನ್ಸ್ ದರ ಹೆಚ್ಚಳದ ಸುದ್ದಿಯ ಜೊತೆಗೆ ಪ್ರಮುಖ ಕಾರು ಮಾದರಿಗಳ ಬಿಡುಗಡೆ ಸುದ್ದಿ ಕೂಡಾ ಪ್ರಮುಖವಾಗಿವೆ. ಕೆಳಗಿನ ಸ್ಲೈಡ್‌ಗಳಲ್ಲಿ ಈ ವಾರದ ಪ್ರಮುಖ ಸುದ್ದಿಗಳ ಮತ್ತಷ್ಟು ಮಾಹಿತಿಗಳನ್ನು ಒಂದೊಂದಾಗಿ ನೋಡೋಣ.

ಈ ವಾರದ ಪ್ರಮುಖ ಸುದ್ದಿಗಳು..

ವೆಹಿಕಲ್ ಇನ್ಸುರೆನ್ಸ್ ಹೆಚ್ಚಳ

ಮೂರನೇ ವ್ಯಕ್ತಿಯ ವಾಹನ ವಿಮಾ ಪ್ರೀಮಿಯಂ ದರಗಳನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು(MoRTH) ಹೆಚ್ಚಳ ಮಾಡಿದ್ದು, ಹೊಸ ದರದಲ್ಲಿ ಕಾರುಗಳು, ಬೈಕ್‌ಗಳು ಮತ್ತು ವಾಣಿಜ್ಯ ವಾಹನಗಳಿಗೆ ಹೊಸ ಪ್ರೀಮಿಯಂ ದರಗಳನ್ನು ಹೆಚ್ಚಿಸಲಾಗಿದೆ. ಹೊಸ ಅಧಿಸೂಚನೆಯ ಪ್ರಕಾರ ಜೂನ್ 1, 2022 ರಿಂದ ಜಾರಿಗೆ ಬರುವಂತೆ 150 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಮೇಲೆ ಮೂರನೇ ವ್ಯಕ್ತಿಯ ವಿಮಾ ಪ್ರೀಮಿಯಂ ದರವು ಶೇ. 15 ರಷ್ಟು ಹೆಚ್ಚಿಸಲಾಗಿದ್ದು, 150 ಸಿಸಿ ಒಳಗಿನ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಈ ವಾರದ ಪ್ರಮುಖ ಸುದ್ದಿಗಳು..

150 ಸಿಸಿಯಿಂದ 350 ಸಿಸಿ ಒಳಗಿನ ದ್ವಿಚಕ್ರ ವಾಹನಗಳಿಗೆ ಹೆಚ್ಚಳವಾದ ಪ್ರೀಮಿಯಂ ದರ ಪಟ್ಟಿಯಲ್ಲಿ ರೂ. 1,366 ವಿಧಿಸಲಾಗುತ್ತಿದ್ದು, 350 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ರೂ. 2,804 ವಿಧಿಸಲು ನಿರ್ಧರಿಸಿದೆ. ಅದೇ ರೀತಿ ಕಾರುಗಳ ವಿಭಾಗದಲ್ಲಿ 1000 ಸಿಸಿಯಿಂದ 1500 ಸಿಸಿ ಕಾರುಗಳು ಅಥವಾ ಎಸ್‌ಯುವಿಗಳಂತಹ ಖಾಸಗಿ ನಾಲ್ಕು ಚಕ್ರದ ವಾಹನಗಳ ವಿಮಾ ಮೊತ್ತವನ್ನು ಶೇಕಡಾ 6 ರಷ್ಟು ಹೆಚ್ಚಿಸಲಾಗುತ್ತಿದ್ದು, ಈ ಮೊದಲಿನ ರೂ. 3,221 ಪ್ರೀಮಿಯಂ ಮೊತ್ತವು ರೂ. 3,416 ಕ್ಕೆ ಏರಿಕೆಯಾಗಲಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಅದೇ ಸಮಯದಲ್ಲಿ ವಿಮೆ ದರ ಪರಿಷ್ಕರಣಾ ಪಟ್ಟಿಯಲ್ಲಿ 1500 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಖಾಸಗಿ ಕಾರುಗಳ ಮೇಲಿನ ಪ್ರೀಮಿಯಂನಲ್ಲಿ ಅಲ್ಪ ಪ್ರಮಾಣದ ಕಡಿತವನ್ನು ಮಾಡಲಾಗಿದ್ದು, 1,500 ಸಿಸಿ ಮೇಲ್ಪಟ್ಟ ಕಾರುಗಳುಗಳಿದ್ದ ಪ್ರೀಮಿಯಂ ದರವು ರೂ. 7,890 ರಿಂದ ರೂ. 7,897ಕ್ಕೆ ಏರಿಕೆಯಾಗಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಕಿಯಾ ಇವಿ6 ಬಿಡುಗಡೆ

ಕಿಯಾ ಇಂಡಿಯಾ ಕಂಪನಿಯು ಇವಿ6 ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದ್ದು, ಜಿಟಿ ಲೈನ್ ಫ್ರಂಟ್ ವ್ಹೀಲ್ ಡ್ರೈವ್ ವೆರಿಯೆಂಟ್ ಎಕ್ಸ್‌ಶೋರೂಂ ಪ್ರಕಾರ ರೂ. 59.95 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ವೆರಿಯೆಂಟ್ ಜಿಟಿ ಲೈನ್ ಆಲ್ ವ್ಹೀಲ್ ಡ್ರೈವ್ ಮಾದರಿಯು ರೂ. 64.95 ಲಕ್ಷ ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಹೊಸ ಇವಿ6 ಎಲೆಕ್ಟ್ರಿಕ್ ಕಾರು ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್(E-GMP) ಅನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಇದು ಬ್ರ್ಯಾಂಡ್‌ನ ಭವಿಷ್ಯದ ಶ್ರೇಣಿಯ ಎಲೆಕ್ಟ್ರಿಕ್ ಕೊಡುಗೆಗಳ ಆಧಾರವಾಗಿದೆ. ಹೊಸ ಕಾರಿನಲ್ಲಿ ಕಂಪನಿಯು 77.4kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಅತ್ಯಧಿಕ ಮೈಲೇಜ್ ನೀಡಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 528 ಕಿ.ಮೀ ಮೈಲೇಜ್ ರೇಂಜ್ ಖಚಿತಪಡಿಸುತ್ತದೆ.

ಈ ವಾರದ ಪ್ರಮುಖ ಸುದ್ದಿಗಳು..

ಡಿಫೆಂಡರ್ 8-ಸೀಟರ್ ಆವೃತ್ತಿ

ಐಷಾರಾಮಿ ವಾಹನ ತಯಾರಕ ಕಂಪನಿಯಾದ ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಐಕಾನಿಕ್ ಡಿಫೆಂಡರ್ ಆಫ್-ರೋಡ್ ಎಸ್‍ಯುವಿಯನ್ನು 2020ರಲ್ಲಿ ಸಂಪೂರ್ಣವಾಗಿ ಪರಿಷ್ಕರಿಸಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಈ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯ ಸರಣಿಗೆ ಮೊದಲ ಬಾರಿಗೆ 8-ಸೀಟರ್ ಆವೃತ್ತಿಯನ್ನು ಸೇರಿಸಲಾಗಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಲ್ಯಾಂಡ್ ರೋವರ್ ತನ್ನ ಹೊಸ ಡಿಫೆಂಡರ್ 130 ಮಾದರಿಯನ್ನು ಅನಾವರಣಗೊಳಿಸಿದೆ. ಲ್ಯಾಂಡ್ ರೋವರ್ ಡಿಫೆಂಡರ್ 110 ಗಿಂತ 130 ರ ವೀಲ್‌ಬೇಸ್‌ಗೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. 130 ಗಿಂತ 110 ಗಮನಾರ್ಹವಾದ 340 ಮಿಮೀ ಉದ್ದವನ್ನು ಹೊಂದಿದೆ. ವಿಸ್ತೃತ ಹಿಂಭಾಗದ ಓವರ್‌ಹ್ಯಾಂಗ್‌ನಿಂದಾಗಿ ನಿರ್ಗಮನ ಕೋನವು 40 ಡಿಗ್ರಿಗಳಿಂದ 28.5 ಡಿಗ್ರಿಗಳಿಗೆ ಕುಗ್ಗುವುದರೊಂದಿಗೆ ಡಿಫೆಂಡರ್‌ನ ಆಫ್-ರೋಡಿಂಗ್ ಅಂಕಿಅಂಶಗಳ ಮೇಲೆ ಹೆಚ್ಚುವರಿ ಉದ್ದವು ಪ್ರಭಾವ ಬೀರುತ್ತದೆ.

ಈ ವಾರದ ಪ್ರಮುಖ ಸುದ್ದಿಗಳು..

ವೆನ್ಯೂ ಫೇಸ್‌ಲಿಫ್ಟ್

ಹ್ಯುಂಡೈ ಮೋಟಾರ್ ಇಂಡಿಯಾ ವೆನ್ಯೂ ಫೇಸ್‌ಲಿಫ್ಟ್ ಬಿಡುಗಡೆಗೂ ಮುನ್ನ ಬುಕ್ಕಿಂಗ್ ಆರಂಭಿಸಿದೆ. ಹೊಸ ಹ್ಯುಂಡೈ ವೆನ್ಯೂ ಅನ್ನು ಬುಕ್ ಮಾಡಲು, ಕಂಪನಿಯು 21,000 ರೂಪಾಯಿಗಳ ಬುಕಿಂಗ್ ಮೊತ್ತವನ್ನು ವಿಧಿಸುತ್ತಿದೆ. ಕಂಪನಿಯ ಪ್ರಕಾರ, ಹ್ಯುಂಡೈ ಫೇಸ್‌ಲಿಫ್ಟ್ ಅನ್ನು ಕಂಪನಿಯ ಅಧಿಕೃತ ಡೀಲರ್‌ಶಿಪ್‌ಗಳು ಮತ್ತು ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು.

ಈ ವಾರದ ಪ್ರಮುಖ ಸುದ್ದಿಗಳು..

ಹ್ಯುಂಡೈ ವೆನ್ಯೂ ಹೊಸ ವಿನ್ಯಾಸ ಮತ್ತು ಹಲವು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ. ವೆನ್ಯೂ ಫೇಸ್‌ಲಿಫ್ಟ್ ತನ್ನ ವಿಭಾಗದಲ್ಲಿ ಅಲೆಕ್ಸಾ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆನ್ಸ್‌ನೊಂದಿಗೆ ತರಲಾದ ಮೊದಲ ಸಬ್-ಕಾಂಪ್ಯಾಕ್ಟ್ SUV ಆಗಿದೆ. ವಾಯ್ಸ್ ಅಸಿಸ್ಟ್‌ನಲ್ಲಿ, ಕಂಪನಿಯು ಹಿಂದಿ ಮತ್ತು ಇಂಗ್ಲಿಷ್ ಅನ್ನು ಹೊರತುಪಡಿಸಿ 10 ಪ್ರಾದೇಶಿಕ ಭಾಷೆಗಳಿಗೆ ಸಪೋರ್ಟ್‌ ಮಾಡುತ್ತದೆ.

ಈ ವಾರದ ಪ್ರಮುಖ ಸುದ್ದಿಗಳು..

ಹ್ಯುಂಡೈ ಹಿಂದಿಕ್ಕಿದ ಟಾಟಾ ಮೋಟಾರ್ಸ್

ದೇಶಿಯ ಮಾರುಕಟ್ಟೆಯಲ್ಲಿ ಕಾರು ಮಾರಾಟದಲ್ಲಿ ಹ್ಯುಂಡೈ ಇಂಡಿಯಾ ಮತ್ತು ಟಾಟಾ ಮೋಟಾರ್ಸ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಮೇ ಅವಧಿಯಲ್ಲಿ ಪ್ರಯಾಣಿಕರ ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಹ್ಯುಂಡೈ ಕಂಪನಿಯನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದುಕೊಂಡಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಮೇ ಅವಧಿಯಲ್ಲಿ ಹ್ಯುಂಡೈ ಕಂಪನಿಯು ಒಟ್ಟು 51,263 ಕಾರುಗಳನ್ನು ಮಾರಾಟ ಮಾಡಿದ್ದು, ಇದರಲ್ಲಿ 42,293 ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮತ್ತು ಇನ್ನುಳಿದ 9 ಸಾವಿರ ಕಾರುಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿದೆ. ಇದೇ ಅವಧಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 43,341 ಕಾರುಗಳನ್ನು ಪೂರ್ಣ ಪ್ರಮಾಣದಲ್ಲಿ ದೇಶಿಯ ಮಾರುಕಟ್ಟೆಯಲ್ಲಿಯೇ ಮಾರಾಟಗೊಳಿಸಿದ್ದು, ಸತತ ಎರಡನೇ ಸ್ಥಾನದಲ್ಲಿರುತ್ತಿದ್ದ ಹ್ಯುಂಡೈ ಕಂಪನಿಗೆ ತೀವ್ರ ಪೈಪೋಟಿ ನೀಡಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಫೋರ್ಡ್ ಕಾರು ಉತ್ಪಾದನಾ ಘಟಕ ಸ್ವಾಧೀನಪಡಿಸಿಕೊಂಡ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಫೋರ್ಡ್ ಇಂಡಿಯಾ ಕಂಪನಿಯ ಕಾರು ಉತ್ಪಾದನಾ ಘಟಕ ಸ್ವಾಧೀನಕ್ಕೆ ಅಂತಿಮ ಹಂತದ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದ್ದು, ಫೋರ್ಡ್ ಮತ್ತು ಟಾಟಾ ಕಂಪನಿಗಳ ಮಾರಾಟ ಮತ್ತು ಖರೀದಿ ಪ್ರಕ್ರಿಯೆಗೆ ಗುಜರಾತ್ ಸರ್ಕಾರದ ಸಚಿವ ಸಂಪುಟವು ಒಪ್ಪಿಗೆ ಸೂಚಿಸಿದೆ.

ಈ ವಾರದ ಪ್ರಮುಖ ಸುದ್ದಿಗಳು..

ರಾಜ್ಯ ಸರ್ಕಾರದ ಒಪ್ಪಿಗೆಯೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಈ ಹಿಂದೆ ಕಾರು ಉತ್ಪಾದನಾ ಘಟಕ ಪ್ರಾರಂಭಿಸುವ ಸಮಯದಲ್ಲಿ ಫೋರ್ಡ್‌ ಕಂಪನಿಗೆ ನೀಡಲಾಗಿದ್ದ ಪ್ರಮುಖ ವಿನಾಯ್ತಿಗಳು ಮತ್ತು ಪ್ರಯೋಜನಗಳು ಪಡೆಯಲು ಸಾಧ್ಯವಾಗಲಿದ್ದು, ಎರಡು ಕಂಪನಿಗಳ ಪ್ರಸ್ತಾವನೆಗೆ ಕ್ಯಾಬಿನೆಟ್ ಸಭೆಯು ನಿರಾಕ್ಷೇಪಣಾ(NOC) ಪ್ರಮಾಣಪತ್ರವನ್ನು ಸಹ ನೀಡಿದೆ.

ಈ ವಾರದ ಪ್ರಮುಖ ಸುದ್ದಿಗಳು..

ಸಿಎಂ ಭೂಪೇಂದ್ರ ಪಟೇಲ್ ಅವರ ಸಮ್ಮುಖದಲ್ಲಿ ಸೋಮವಾರ ಟಾಟಾ ಮೋಟಾರ್ಸ್ ಮತ್ತು ಫೋರ್ಡ್ ಮೋಟಾರ್ ಕಂಪನಿಗಳು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಿದ್ದು, ರಾಜ್ಯದಲ್ಲಿ ಕೈಗಾರಿಕೆ ಅಭಿವೃದ್ದಿಗಾಗಿ ಗುಜರಾತ್ ಸರ್ಕಾರವು ಟಾಟಾ ಹೊಸ ಯೋಜನೆಗೆ ಪ್ರಮುಖ ವಿನಾಯ್ತಿಗಳನ್ನು ಸಹ ನೀಡಿದೆ.

Most Read Articles

Kannada
English summary
Top auto news of the week vehicle insurance hiked kia ev6 suv launched and more
Story first published: Sunday, June 5, 2022, 2:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X