ವಾರದ ಸುದ್ದಿ: ಫೋಕ್ಸ್‌ವ್ಯಾಗನ್ ವರ್ಟಸ್ ಬಿಡುಗಡೆ, ಸಿಟ್ರನ್ ಸಿ3 ಅನಾವರಣ, ತಗ್ಗಲಿದೆ ಇವಿ ಮೇಲಿನ ಜಿಎಸ್‌ಟಿ..

ಸೆಮಿಕಂಡಕ್ಟರ್ ಪೂರೈಕೆ ಪ್ರಮಾಣವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಹೊಸ ಕಾರುಗಳ ಬಿಡುಗಡೆ ಪ್ರಕ್ರಿಯೆ ಜೋರಾಗುತ್ತಿದೆ. ಕಳೆದ ವಾರ ಭಾರತದಲ್ಲಿ ಹಲವು ಹೊಸ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರುಗಳ ಬಿಡುಗಡೆಯ ಜೊತೆಗೆ ಆಟೋ ಉದ್ಯಮಕ್ಕೆ ಸಂಬಂಧಿತ ಹಲವು ಘಟನೆಗಳು ನಡೆದಿವೆ. ಕೆಳಗಿನ ಸ್ಲೈಡ್‌ಗಳಲ್ಲಿ ಈ ವಾರದ ಪ್ರಮುಖ ಸುದ್ದಿಗಳ ಮತ್ತಷ್ಟು ಮಾಹಿತಿಗಳನ್ನು ಒಂದೊಂದಾಗಿ ನೋಡೋಣ.

ಈ ವಾರದ ಪ್ರಮುಖ ಸುದ್ದಿಗಳು

ಫೋಕ್ಸ್‌ವ್ಯಾಗನ್ ವರ್ಟಸ್ ಬಿಡುಗಡೆ

ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ಬಹುನಿರೀಕ್ಷಿತ ವರ್ಟಸ್ ಸೆಡಾನ್ ಕಾರು ಮಾದರಿಯನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿದ್ದು, ಈ ಹೊಸ ಸೆಡಾನ್ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11.21 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 17.91 ಲಕ್ಷ ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಸುದ್ದಿಗಳು

ಹೊಸ ಕಾರು ಸ್ಕೋಡಾ ಸ್ಲಾವಿಯಾ ಮಾದರಿಯೊಂದಿಗೆ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ಹಂಚಿಕೊಂಡಿದ್ದು, ಹೊಸ ಕಾರು ಎಂಜಿನ್ ಆಯ್ಕೆಗೆ ಅನುಗುಣವಾಗಿ ಕಂಫರ್ಟ್‌ಲೈನ್, ಹೈಲೈನ್ ಮತ್ತು ಟಾಪ್‌ಲೈನ್ ವೆರಿಯೆಂಟ್ ಹೊಂದಿದೆ. 1.0 ಲೀಟರ್ ಟಿಎಸ್ಐ ಪೆಟ್ರೋಲ್ ಮತ್ತು 1.5 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರುವ ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಸುರಕ್ಷತೆಯಲ್ಲೂ ಗಮನಸೆಳೆಯಲಿದೆ.

ಈ ವಾರದ ಪ್ರಮುಖ ಸುದ್ದಿಗಳು

ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಅನ್ನು ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.50 ಕೋಟಿಗೆ ಬಿಡುಗಡೆಗೊಳಿಸಿದ್ದು, ಸದ್ಯಕ್ಕೆ ಕಂಪನಿಯು ಹೊಸ ಕಾರಿನ ಎರಡು ಯುನಿಟ್‌ಗಳನ್ನು ಮಾತ್ರ ಭಾರತದಲ್ಲಿ ವಿತರಣೆ ಮಾಡುತ್ತಿದೆ.

ಈ ವಾರದ ಪ್ರಮುಖ ಸುದ್ದಿಗಳು

ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಎರಡು ಯುನಿಟ್‌ಗಳು ಈಗಾಗಲೇ ಮಾರಾಟಗೊಂಡಿದ್ದು, ಹೊಸ ಕಾರು ಬಿಡುಗಡೆಯ ದಿನದಂದೆ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ. ಮೊದಲ ಯುನಿಟ್ ಅನ್ನು ನಮ್ಮ ಬೆಂಗಳೂರಿನ ಬ್ರೆನ್ ಗ್ಯಾರೇಜ್ ಮಾಲೀಕ ಭೂಪೇಶ್ ರೆಡ್ಡಿ ಖರೀದಿಸಿದ್ದು, ಹೊಸ ಕಾರು 720 ಬಿಎಚ್‌ಪಿ ಉತ್ಪಾದನಾ ಪ್ರೇರಿತ ಫ್ಲಾಟ್-ಪ್ಲೇನ್ ಕ್ರ್ಯಾಂಕ್ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ8 ಎಂಜಿನ್‌ ಜೋಡಣೆ ಹೊಂದಿದೆ.

ಈ ವಾರದ ಪ್ರಮುಖ ಸುದ್ದಿಗಳು

ಸಿಟ್ರನ್ ಸಿ3 ಕಂಪ್ಯಾಕ್ಟ್ ಎಸ್‌ಯುವಿ ಮಾಹಿತಿ ಬಹಿರಂಗ

ಸಿ3 ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಾಗಿ ಸಿಟ್ರನ್ ಕಂಪನಿಯು ಈಗಾಗಲೇ ಅಧಿಕೃತ ಬುಕಿಂಗ್ ಕೂಡಾ ಆರಂಭಿದ್ದು, ಹೊಸ ಕಾರು ಮಾದರಿಯು ಜುಲೈ 20ರಂದು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಪ್ರಮುಖ ಎರಡು ಮಾದರಿಗಳಲ್ಲಿ ಬಿಡುಗಡೆಯಾಗಲಿದೆ. ಹೊಸ ಕಾರು ಲೈವ್ ಮತ್ತು ಫೀಲ್ ಎನ್ನುವ ಎರಡು ಮಾದರಿಗಳನ್ನು ಹೊಂದಿರಲಿದ್ದು, ಹೊಸ ಕಾರು ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಈ ವಾರದ ಪ್ರಮುಖ ಸುದ್ದಿಗಳು

ಹೊಸ ಕಾರಿನಲ್ಲಿ ಕಂಪನಿಯು 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಪರಿಚಯಿಸುತ್ತಿದ್ದು, 1.2-ಲೀಟರ್ ಪೆಟ್ರೋಲ್ ಮಾದರಿಯನ್ನು ಕಂಪನಿಯು ನ್ಯಾಚುರಲಿ ಆಸ್ಪೆರೆಡ್ ಮತ್ತು ಟರ್ಬೊ ಮಾದರಿಗಳಲ್ಲಿ ಅಭಿವೃದ್ದಿಗೊಳಿಸಿದೆ. ಸದ್ಯಕ್ಕೆ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆಯಾಗಲಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.8 ಲಕ್ಷದಿಂದ ರೂ. 12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

ಈ ವಾರದ ಪ್ರಮುಖ ಸುದ್ದಿಗಳು

ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿ ಅನಾವರಣ

ಹ್ಯುಂಡೈ ತನ್ನ ಕ್ರೆಟಾ ಎನ್ ಲೈನ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಕ್ರೆಟಾ ಎನ್ ಲೈನ್ ಕಾರು ಹಲವಾರು ಹೊಸ ವಿನ್ಯಾಸಗಳೊಂದಿಗೆ 1.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಮತ್ತು ಪರಿಷ್ಕೃತ ಸಸ್ಪೆಂಕ್ಷನ್ ಸೆಟಪ್ ನೊಂದಿಗ ಬಿಡುಗಡೆಯಾಗಲಿದೆ.

ಈ ವಾರದ ಪ್ರಮುಖ ಸುದ್ದಿಗಳು

ಹ್ಯುಂಡೈ ಕ್ರೆಟಾ ಎನ್ ಲೈನ್ ಕೆಲವು ಸುಧಾರಿತ ವಿನ್ಯಾಸ ಸೌಲಭ್ಯ ಪಡೆದುಕೊಳ್ಳಲಿದ್ದು, ಇದು ಎಸ್‌ಯುವಿಯ ಸಾಮಾನ್ಯ ಆವೃತ್ತಿಯಿಂದ ಭಿನ್ನವಾಗಿ ಕಾಣಲು ಸಹಾಯ ಮಾಡುತ್ತದೆ. ಕ್ರೆಟಾ ಎನ್ ಲೈನ್‌ನಲ್ಲಿನ ಈ ವಿನ್ಯಾಸ ಬದಲಾವಣೆಗಳು ಹೊಸ ವಿಶಾಲವಾದ ಗ್ರಿಲ್‌ನ ರೂಪದಲ್ಲಿ ಬರುತ್ತವೆ, ಇದು ಮುಂಬರುವ ಟ್ಯೂಸಾನ್ ನಂತಹ ಹೆಚ್ಚಿನ ಹ್ಯುಂಡೈ ಎಸ್‌ಯುವಿಗಳು ಇದೇ ಮಾದರಿಯ ವಿನ್ಯಾಸವನ್ನು ಅನುಕರಿಸುತ್ತದೆ. ಈ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಎಸ್‍ಯುವಿಯು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಈ ವಾರದ ಪ್ರಮುಖ ಸುದ್ದಿಗಳು

ಇವಿ ಬ್ಯಾಟರಿ ಮೇಲಿನ ಜಿಎಸ್‌ಟಿ ಕಡಿತ ಸಾಧ್ಯತೆ

ಕೇಂದ್ರ ಸರ್ಕಾರವು ಇವಿ ಜಿಎಸ್‌ಟಿ ಕಡಿತ ಸಾಧ್ಯತೆಯನ್ನು ಅನ್ವೇಷಿಸುತ್ತಿದೆ. ಇದರ ಭಾಗವಾಗಿ ಹೊಸ ಯೋಜನೆ ರೂಪಿಸಿರುವ ಹಣಕಾಸು ಆಯೋಗವು ಇದೀಗ ಲಿಥಿಯಂ-ಐಯಾನ್ ಬ್ಯಾಟರಿಗಳ ಮೇಲಿನ ಜಿಎಸ್‌ಟಿ ತೆರಿಗೆಯಲ್ಲಿ ಕಡಿತವನ್ನು ಘೋಷಿಸಲು ಮುಂದಾಗಿದ್ದು, ಮುಂಬರುವ ಜಿಎಸ್‌ಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುವ ನಿರೀಕ್ಷೆಯಿದೆ.

ಈ ವಾರದ ಪ್ರಮುಖ ಸುದ್ದಿಗಳು

ಎಲೆಕ್ಟ್ರಿಕ್ ವಾಹನಗಳು ಪ್ರಸ್ತುತ ಬ್ಯಾಟರಿಗಳ ಮೇಲೆ ಶೇಕಡಾ 18 ಮತ್ತು ಒಟ್ಟು ವಾಹನಗಳ ಮೇಲೆ 5 ಶೇಕಡಾ GST ಗೆ ಒಳಪಟ್ಟಿವೆ. 2018 ರ ಮೊದಲು, ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ಮೇಲಿನ GST ತೆರಿಗೆಯು ಶೇ28 ರಷ್ಟು ಇತ್ತು. ಆ ಬಳಿಕ ಅದನ್ನು ಶೇ.18ಕ್ಕೆ ಇಳಿಸಲಾಗಿದ್ದು, ಈಗ ಮತ್ತೆ ಬ್ಯಾಟರಿ ಮೇಲಿನ ತೆರಿಗೆಯನ್ನು ಇಳಿಸುವ ಪ್ರಯತ್ನಗಳು ನಡೆಯುತ್ತಿವೆ.

ಈ ವಾರದ ಪ್ರಮುಖ ಸುದ್ದಿಗಳು

ಬಿಡುಗಡೆಗೆ ಸಜ್ಜಾದ ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್

ಹ್ಯುಂಡೈ ಇತ್ತೀಚೆಗೆ ತನ್ನ ಹೊಸ ವೆನ್ಯೂ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಈ 2022ರ ಹ್ಯುಂಡೈ ವೆನ್ಯೂ ಗಮನಾರ್ಹ ವಿನ್ಯಾಸ ಬದಲಾವಣೆಗಳು ಮತ್ತು ಅನೇಕ ವಿಭಾಗದ ಪ್ರಮುಖ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದ ಒಳಾಂಗಣದೊಂದಿಗೆ ಬರುತ್ತದೆ.

ಈ ವಾರದ ಪ್ರಮುಖ ಸುದ್ದಿಗಳು

2022ರ ಹ್ಯುಂಡೈ ವೆನ್ಯೂ ಗಮನಾರ್ಹವಾಗಿ ಪರಿಷ್ಕೃತ ವಿನ್ಯಾಸದೊಂದಿಗೆ ಬರುತ್ತದೆ, ಏಕೆಂದರೆ ಇದು ಬ್ರ್ಯಾಂಡ್‌ನ ಹೊಸ ಸೆನ್ಸೌಸ್ ಸ್ಪೋರ್ಟಿನೆಸ್ ವಿನ್ಯಾಸದ ತತ್ತ್ವಶಾಸ್ತ್ರವನ್ನು ಒಳಗೊಂಡಿದೆ. ಮುಂಭಾಗದ ವಿನ್ಯಾಸವು ಹೊಸ ಟ್ಯೂಸಾನ್ ಮತ್ತು ಪಾಲಿಸೇಡ್ ಎಸ್‍ಯುವಿಗಳಿಂದ ಹೆಚ್ಚು ಪ್ರೇರಿತವಾಗಿದೆ.

ಈ ವಾರದ ಪ್ರಮುಖ ಸುದ್ದಿಗಳು

ಇವಿ ವಾಹನಗಳ ಉತ್ತೇಜಿಸಲು ಮಹತ್ವದ ನಿರ್ಣಯ

ವಿಶ್ವಾದ್ಯಂತ ಇಂಧನ ಚಾಲಿತ ವಾಹನಗಳನ್ನು ತಗ್ಗಿಸಲು ಮತ್ತು ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾಲು ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತಷ್ಟು ಹೊಸ ಕ್ರಮಗಳನ್ನು ಪ್ರಕಟಿಸಲಾಗುತ್ತಿದೆ.

ಈ ವಾರದ ಪ್ರಮುಖ ಸುದ್ದಿಗಳು

ಇಂಧನ ಚಾಲಿತ ವಾಹನಗಳಿಗೆ ಹೋಲಿಕೆ ಮಾಡಿದರೆ ಇವಿ ವಾಹನಗಳ ಬಳಕೆಯು ಇನ್ನು ಕೂಡಾ ಸಾಕಷ್ಟು ಸುಧಾರಿಸಬೇಕಿದ್ದು, ಈ ಹಿನ್ನಲೆಯಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿರುವ ಯುರೋಪಿಯನ್ ಒಕ್ಕೂಟವು 2035ರ ವೇಳೆಗೆ ಶೇ.100 ರಷ್ಟು ಇಂಧನ ಚಾಲಿತ ವಾಹನಗಳನ್ನು ನಿಷೇಧಿಸುವುದಾಗಿ ಘೋಷಣೆ ಮಾಡಿದೆ.

ಈ ವಾರದ ಪ್ರಮುಖ ಸುದ್ದಿಗಳು

27 ದೇಶಗಳನ್ನು ಒಳಗೊಂಡಿರುವ ಯುರೋಪಿಯನ್ ಒಕ್ಕೂಟವು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಮತ್ತು ವಿದ್ಯುದ್ದೀಕರಣದಲ್ಲಿ ಹೆಚ್ಚಿನ ಹೂಡಿಕೆಗೆ ಸಹಕಾರಿಯಾಗುವಂತೆ ಹೊಸ ನಿರ್ಣಯ ಪ್ರಕಟಿಸಿದ್ದು, ಹೊಸ ಉಪಕ್ರಮಗಳ ಪರಿಣಾಮ ಈ ದಶಕದ ಅಂತ್ಯಕ್ಕೆ ಕಾರ್ಬನ್ ಡೈಆಕ್ಸೈಡ್ (CO2) ಹೊರಸೂಸುವಿಕೆ ಪ್ರಮಾಣವು ಸರಾಸರಿ 37.5 ಪ್ರತಿಶತದಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ.

Article Published On: Sunday, June 12, 2022, 8:45 [IST]
English summary
Top auto news of the week volkswagen virtus launched citroen c3 details revealed and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+