ವಾರದ ಸುದ್ದಿಗಳು: ಎಕ್ಸ್‌ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..

ಈ ವಾರದ ಸುದ್ದಿಗಳಲ್ಲಿ ಹೊಸ ಕಾರುಗಳ ಬಿಡುಗಡೆ ಪ್ರಕ್ರಿಯೆ ಜೊತೆಗೆ ಆಟೋ ಉದ್ಯಮಕ್ಕೆ ಸಂಬಂಧಿತ ಹಲವು ಘಟನೆಗಳು ನಡೆದಿವೆ. ಕ್ರ್ಯಾಶ್ ಟೆಸ್ಟಿಂಗ್‌ ಫಲಿತಾಂಶಗಳು ಈ ವಾರದ ಪ್ರಮುಖ ಸುದ್ದಿಗಳಲ್ಲಿ ಹೆಚ್ಚು ಚರ್ಚಿತ ವಿಷಯವಾಗಿದ್ದು, ಕೆಳಗಿನ ಸ್ಲೈಡ್‌ಗಳಲ್ಲಿ ಈ ವಾರದ ಪ್ರಮುಖ ಸುದ್ದಿಗಳ ಮತ್ತಷ್ಟು ಮಾಹಿತಿಗಳನ್ನು ಒಂದೊಂದಾಗಿ ನೋಡೋಣ.

ಈ ವಾರದ ಪ್ರಮುಖ ಸುದ್ದಿಗಳು

ಶುರುವಾಗಲಿದೆ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್

ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ಅಡಿಯಲ್ಲಿ ಕ್ರ್ಯಾಶ್ ಟೆಸ್ಟ್‌ಗೆ ಒಳಗಾಗುವ ಕಾರುಗಳಿಗೆ ಸೇಫ್ಟಿ ರೇಟಿಂಗ್ಸ್ ನೀಡಲಾಗುತ್ತಿದ್ದು, ಭಾರತದಲ್ಲಿ ನಿರ್ಮಾಣವಾಗುತ್ತಿರುವ ಪ್ರಮುಖ ಕಾರುಗಳು ಕ್ರ್ಯಾಶ್ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿವೆ. ಸದ್ಯ ಭಾರತದಲ್ಲಿ ನಿರ್ಮಾಣದ ಕಾರುಗಳು ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಾಗಿ ಜಾಗತಿಕ ಮಾರುಕಟ್ಟೆಯಲ್ಲಿನ ಮಾನದಂಡಗಳನ್ನು ಅನುಸರಿಸುತ್ತಿದ್ದು, ಶೀಘ್ರದಲ್ಲಿಯೇ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಭಾರತದಲ್ಲಿ ಆರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ.

ಈ ವಾರದ ಪ್ರಮುಖ ಸುದ್ದಿಗಳು

ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಎನ್‌ಸಿಎಪಿ) ಆರಂಭಕ್ಕೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಈಗಾಗಗಲೇ ಹೊಸ ಯೋಜನೆಯ ಕರಡು ಅಧಿಸೂಚನೆಯನ್ನು ಅನುಮೋದಿಸಿದ್ದು ದೇಶಿಯ ಮಾರುಕಟ್ಟೆಯಲ್ಲಿ ಕಾರುಗಳ ಸುರಕ್ಷತೆಯನ್ನು ಬಲಪಡಿಸಲು ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ಪರಿಚಯಿಸಲಾಗುತ್ತಿದೆ.

ಈ ವಾರದ ಪ್ರಮುಖ ಸುದ್ದಿಗಳು

ಸಾಧಾರಣ ಪ್ರದರ್ಶನ ತೋರಿದ ಕಿಯಾ ಕಾರೆನ್ಸ್

ಕಿಯಾ ಕಂಪನಿಯು ಭಾರತದಲ್ಲಿ ತನ್ನ ಹೊಸ ಕಾರೆನ್ಸ್ ಎಂಯುವಿ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಮಾದರಿಯು ಬೆಲೆ ವಿಚಾರವಾಗಿ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ. ಆದರೆ ಹೊಸ ಕಾರಿನಲ್ಲಿ ಗರಿಷ್ಠ ಸುರಕ್ಷಾ ಫೀಚರ್ಸ್ ಹೊರತಾಗಿಯೂ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಸಾಧಾರಣ ಪ್ರದರ್ಶನ ತೋರಿದ್ದು, ಹೊಸ ಕಾರು ಖರೀದಿದಾರರಿಗೆ ಇದು ಅಸಮಾಧಾನ ಉಂಟು ಮಾಡಿದೆ.

ಈ ವಾರದ ಪ್ರಮುಖ ಸುದ್ದಿಗಳು

ಹೊಸ ಕಾರು ಭರ್ಜರಿ ಬೇಡಿಕೆಯ ನಡುವೆ ಇದೀಗ ಗ್ಲೋಬಲ್ ಎನ್‌ಸಿಎಪಿಯು ಸುರಕ್ಷತಾ ಫಲಿತಾಂಶವನ್ನು ಪ್ರಕಟಿಸಿದ್ದು, ಹೊಸ ಕಾರು ಗರಿಷ್ಠ ಸುರಕ್ಷಾ ಫೀಚರ್ಸ್‌ಗಳ ನಡುವೆಯೂ ಗರಿಷ್ಠ 5 ಸ್ಟಾರ್ ರೇಟಿಂಗ್ಸ್‌ನಲ್ಲಿ 3 ಸ್ಟಾರ್ ರೇಟಿಂಗ್ಸ್ ಪಡೆದುಕೊಳ್ಳುವ ಮೂಲಕ ಸಾಧಾರಣ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಈ ವಾರದ ಪ್ರಮುಖ ಸುದ್ದಿಗಳು

ಸೇಫರ್ ಚಾಯ್ಸ್ ಪ್ರಶಸ್ತಿ ಪಡೆದ ಎಕ್ಸ್‌ಯುವಿ700

ಭಾರತದಲ್ಲಿ ಎಕ್ಸ್‌ಯುವಿ700 ಕಾರು ಮಾದರಿಯು 'ಸೇಫರ್ ಛಾಯ್ಸ್' ಪ್ರಶಸ್ತಿ ಪಡೆದ ಮೊದಲ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಹೊಸ ಕಾರಿನಲ್ಲಿ ಪ್ರಯಾಣಿಕರ ಗರಿಷ್ಠ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ಈ ವಾರದ ಪ್ರಮುಖ ಸುದ್ದಿಗಳು

ಹೊಸ ಕಾರಿನಲ್ಲಿರುವ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟಂ ಸಿಸ್ಟಂ ಸೌಲಭ್ಯವನ್ನು ಪ್ರತ್ಯೇಕವಾಗಿ ಪರೀಕ್ಷಿಸಿರುವ ಗ್ಲೊಬಲ್ ಎನ್‌ಸಿಎಪಿ ಸಂಸ್ಥೆಯು ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್ ಮತ್ತು ಪೆಡೆಟ್ರೆಷಿಯನ್ ಪ್ರೊಟೆಕ್ಷನ್ ಸೌಲಭ್ಯಗಳಿಗೆಗಾಗಿ 'ಸೇಫರ್ ಛಾಯ್ಸ್' ಪ್ರಶಸ್ತಿ ನೀಡಿದೆ.

ಈ ವಾರದ ಪ್ರಮುಖ ಸುದ್ದಿಗಳು

ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್‌ಟೆಸ್ಟಿಂಗ್‌ನಲ್ಲಿ ಎಕ್ಸ್‌ಯುವಿ700 ಮಾದರಿಯು ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ ನೀಡುವ 17 ಅಂಕಗಳಲ್ಲಿ 16.03 ಅಂಕಗಳನ್ನು ಮತ್ತು ಮಕ್ಕಳ ಸುರಕ್ಷತೆಗಾಗಿ ನೀಡಲಾಗುವ 49 ಅಂಕಗಳಲ್ಲಿ 41.66 ಅಂಕಗಳೊಂದಿಗೆ ಗರಿಷ್ಠ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದ್ದು, ಇದೀಗ ಹೊಸ ಕಾರಿನ ಸುರಕ್ಷಾ ಸೌಲಭ್ಯಗಳನ್ನು ಆಧರಿಸಿ ಗ್ಲೊಬಲ್ ಎನ್‌ಸಿಎಪಿ ಸಂಸ್ಥೆಯು ಮತ್ತೊಂದು ಅತ್ಯುನ್ನತ ಪ್ರಶಸ್ತಿ ನೀಡಿದೆ.

ಈ ವಾರದ ಪ್ರಮುಖ ಸುದ್ದಿಗಳು

ಔರಾ ಎಸ್ಎಕ್ಸ್ ಸಿಎನ್‌ಜಿ ಬಿಡುಗಡೆ

ಹ್ಯುಂಡೈ ಕಂಪನಿಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಸೆಡಾನ್ ಮಾದರಿಯಾದ ಔರಾ ಸಿಎನ್‌ಜಿ ಆವೃತ್ತಿಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇದೀಗ ಗ್ರಾಹಕರ ಬೇಡಿಕೆಗೆ ತಕ್ಕಂತೆ ಔರಾ ಸಿಎನ್‌ಜಿ ಮಾದರಿಯಲ್ಲಿ ಎಸ್ಎಕ್ಸ್ ವೆರಿಯೆಂಟ್ ಬಿಡುಗಡೆ ಮಾಡಿದೆ.

ಈ ವಾರದ ಪ್ರಮುಖ ಸುದ್ದಿಗಳು

ಔರಾ ಸಿಎನ್‌ಜಿ ಎಸ್ ವೆರಿಯೆಂಟ್ ಮಾತ್ರ ಹೊಂದಿದ್ದ ಕಂಪನಿಯು ಇದೀಗ ಎಸ್ಎಕ್ಸ್ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 8.57 ಲಕ್ಷ ಬೆಲೆ ಹೊಂದಿದೆ. ಔರಾ ಎಸ್ ಸಿಎನ್‌ಜಿ ಮಾದರಿಗಿಂತ ಹೊಸ ವೆರಿಯೆಂಟ್ ಸುಮಾರು ರೂ. 79 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ವೆರಿಯೆಂಟ್‌ನಲ್ಲಿ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡಿದೆ.

ಈ ವಾರದ ಪ್ರಮುಖ ಸುದ್ದಿಗಳು

ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ ಹೊಸ ದಾಖಲೆ

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿರುವ ಬಿವೈಡಿ ಕಂಪನಿಯು ಹೊಸ ಇವಿ6 ಎಂಪಿವಿ ಮೂಲಕ ಭಾರತದಲ್ಲೂ ಹೊಸ ದಾಖಲೆಗೆ ಕಾರಣವಾಗಿದ್ದು, ಇವಿ6 ಕಾರು ಮಾದರಿಯು 6 ದಿನಗಳಲ್ಲಿ ಒಟ್ಟು 2,203 ಕಿ.ಮೀ ದೂರ ಕ್ರಮಿಸಿದೆ.

ಈ ವಾರದ ಪ್ರಮುಖ ಸುದ್ದಿಗಳು

ಸಾಮಾನ್ಯ ಕಾರುಗಳ ಮೂಲಕ 2,203 ಪ್ರಯಾಣವನ್ನು ಅತಿ ಕಡಿಮೆ ಅವಧಿಯಲ್ಲಿ ಮಾಡಬಹುದಾದರೂ ಎಲೆಕ್ಟ್ರಿಕ್ ಕಾರು ಮಾದರಿಯ ಮೂಲಕ ಈ ದೂರುವನ್ನು ಕ್ರಮಿಸುವುದು ಸುಲಭವಲ್ಲ.

ಪ್ರಯಾಣದೊಂದಿಗೆ ಎಲೆಕ್ಟ್ರಿಕ್ ಕಾರು ಮಾದರಿಗೆ ಸೂಕ್ತವಾದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುವುದು ಅತ್ಯಅವಶ್ಯಕವಾಗಿದ್ದು, ಪ್ರತಿ ಚಾರ್ಜ್‌ನಲ್ಲೂ ಗರಿಷ್ಠ ಪ್ರಮಾಣದ ದೂರ ಕ್ರಮಿಸುವ ಮೂಲಕ 9 ಪ್ರಮುಖ ನಗರಗಳನ್ನು ದಾಟಿ ರಾಷ್ಟ್ರೀಯ ರಾಜಧಾನಿಯನ್ನು ತಲುಪಿತು.

ಈ ವಾರದ ಪ್ರಮುಖ ಸುದ್ದಿಗಳು

5 ಸ್ಟಾರ್ ಹೊಂದಿರುವ ಟೈರ್ ಬಿಡುಗಡೆ ಮಾಡಿದ ಮೈಕೆಲಿನ್

ಭಾರತ ಸರ್ಕಾರವು ಹೊಸದಾಗಿ ಪ್ರಾರಂಭಿಸಿರುವ ಸ್ಟಾರ್ ಲೇಬಲಿಂಗ್ ಕಾರ್ಯಕ್ರಮದಡಿ ಅನುಮೋದಿಸಲ್ಪಟ್ಟ ಭಾರತದಲ್ಲಿನ ಪ್ರಯಾಣಿಕ ವಾಹನ ವಿಭಾಗದಲ್ಲಿ ಮೈಕೆಲಿನ್ ಮೊದಲ ಟೈರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದ್ದು, ಮೈಕೆಲಿನ್ ಅಭಿವೃದ್ದಿಪಡಿಸಿದ ಲ್ಯಾಟಿಟ್ಯೂಡ್ ಸ್ಪೋರ್ಟ್ 3 ಮತ್ತು ಲ್ಯಾಟಿಟ್ಯೂಡ್ ಸ್ಪೋರ್ಟ್ 4 ಟೈರ್‌ಗಳು 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿವೆ.

ಈ ವಾರದ ಪ್ರಮುಖ ಸುದ್ದಿಗಳು

ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ(BEE) ಯಿಂದ ಸ್ಟಾರ್ ರೇಟಿಂಗ್ ಅನ್ನು ಪಡೆದ ಭಾರತದ ಮೊದಲ ಬ್ರ್ಯಾಂಡ್ ಮೈಕೆಲಿನ್ ಹೊಸ ಉತ್ಪನ್ನಗಳನ್ನು ಗರಿಷ್ಠ ಸುರಕ್ಷತೆ ಮತ್ತು ಇಂಧನ ದಕ್ಷತೆಗೆ ಪೂರಕವಾಗಿ ಹೊಸ ಟೈರ್ ಮಾದರಿಗಳನ್ನು ಅಭಿವೃದ್ದಿಪಡಿಸಿದೆ.

ಈ ವಾರದ ಪ್ರಮುಖ ಸುದ್ದಿಗಳು

ಹೊಸ ನಿಯಮವು ಕಡ್ಡಾಯವಾಗಿರುವುದರಿಂದ ಎಲ್ಲಾ ದೇಶೀಯ ಮತ್ತು ವಿದೇಶಿ ಟೈರ್ ತಯಾರಕರು ಮತ್ತು ಟ್ರಕ್, ಬಸ್ ಮತ್ತು ಪ್ರಯಾಣಿಕ ಕಾರ್ ಟೈರ್‌ಗಳ ಆಮದುದಾರರು ಭಾರತದಲ್ಲಿ ಮಾರಾಟ ಮಾಡುವ ಟೈರ್‌ಗಳನ್ನು ಇನ್ಮುಂದೆ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಸ್ಟಾರ್ ಲೇಬಲ್ ಗುಣಲಕ್ಷಣವನ್ನು ಹೊಂದಿರಬೇಕಾಗುತ್ತದೆ.

Most Read Articles

Kannada
English summary
Top auto news of the week xuv700 get safer choice award carens gets 3 star safety rating and more
Story first published: Sunday, June 26, 2022, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X