2023 ರಲ್ಲಿ ಮಹೀಂದ್ರಾ, ಹ್ಯುಂಡೈ, ಸ್ಕೋಡಾ, ಆಡಿಯಿಂದ ಬಿಡುಗಡೆಯಾಗುವ ಟಾಪ್ EV ಕಾರುಗಳು

2023ರ ಮೊದಲ ತಿಂಗಳಲ್ಲೇ ಆಟೋ ಎಕ್ಸ್‌ಪೋ ಆರಂಭವಾಗಲಿದೆ. ಎಲೆಕ್ಟ್ರಿಕ್ ಕಾರುಗಳು ಹಾಗೂ ದ್ವಿಚಕ್ರ ವಾಹನಗಳು ಈ ಎಕ್ಸ್‌ಪೋದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು ಈಗಾಗಲೇ ಬಹುತೇಕ ಖಚಿತವಾಗಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನಗಳ ಏರಿಕೆಯು ಸಾಕಷ್ಟು ಸ್ಪಷ್ಟವಾಗಿದ್ದು, ನಾವು ಹೊಸ ವರ್ಷಕ್ಕೆ ಕಾಲಿಡುವ ಮೊದಲೇ EV ವಿಭಾಗದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡೋಣ.

ಸಿಟ್ರನ್ eC3
ICE-ಚಾಲಿತ ಸಿಟ್ರನ್ C3 ನ ಎಲೆಕ್ಟ್ರಿಕ್ ಆವೃತ್ತಿಯಾದ eC3 ಮಾದರಿಯು ಜನವರಿ 2023 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದರ ನಿರೀಕ್ಷಿತ ಬೆಲೆಯು ರೂ. 10-12 ಲಕ್ಷದವರೆಗು ಇರಬಹುದು. ಇದರ ವಿನ್ಯಾಸದ ಬಗ್ಗೆ ಹೇಳುವುದಾದರೆ ಹೆಚ್ಚಾಗಿ C3 ನಂತೆ ಕಾಣುತ್ತದೆ, ಇದರ ಮುಂಭಾಗದ ಫೆಂಡರ್‌ನಲ್ಲಿ ಚಾರ್ಜಿಂಗ್ ಪೋರ್ಟ್ ಅನ್ನು ಪಡೆಯುತ್ತದೆ. ಗೇರ್ ಲಿವರ್ ಅನ್ನು ಡ್ರೈವ್ ನಿಯಂತ್ರಕದೊಂದಿಗೆ ಬದಲಾಯಿಸುತ್ತದೆ.

2023 ರಲ್ಲಿ ಮಹೀಂದ್ರಾ, ಹ್ಯುಂಡೈ, ಸ್ಕೋಡಾ, ಆಡಿಯಿಂದ ಬಿಡುಗಡೆಯಾಗುವ ಟಾಪ್ EV ಕಾರುಗಳು

ಇದು C3 ಗಿಂತ ಹೆಚ್ಚಿನ ವೈಶಿಷ್ಟ್ಯಗಳಾದ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರಿಯರ್ ವೈಪರ್ ಮತ್ತು ವಾಷರ್ ಇತ್ಯಾದಿಗಳನ್ನು ಪಡೆಯುವ ಸಾಧ್ಯತೆಯಿದೆ. Citroenನ ಈ ಎಲೆಕ್ಟ್ರಿಕ್ ಕಾರು 3.3kW ಆನ್‌ಬೋರ್ಡ್ AC ಚಾರ್ಜರ್ ಅನ್ನು ಸಹ ಪಡೆಯುತ್ತದೆ. CCS2 ವೇಗದ ಚಾರ್ಜಿಂಗ್ ಬೆಂಬಲದೊಂದಿಗೂ ಲಭ್ಯವಿರುತ್ತದೆ. ಇದು ತನ್ನ ವಿಭಾಗದ ಮಾರುಕಟ್ಟೆಯಲ್ಲಿನ ಟಾಟಾ ಹಾಗೂ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳೊಂದಿಗೆ ಸ್ಪರ್ಧಿಸಿಲಿದೆ.

ಆಡಿ ಕ್ಯೂ8 ಇ-ಟ್ರಾನ್
ಜಾಗತಿಕವಾಗಿ 505-600kms ವರೆಗಿನ ಶ್ರೇಣಿಯೊಂದಿಗೆ, Audi Q8 e-tron ಎರಡು ಬ್ಯಾಟರಿಗಳ 89kW ಮತ್ತು 104kWh ಆಯ್ಕೆಯನ್ನು ಪಡೆಯುತ್ತದೆ. ಈ ಕಾರು ಸದ್ಯ ಮಾರಾಟದಲ್ಲಿರು ತನ್ನ ಹಳೆಯ ಮಾದರಿಗಳಿಂದ ಹೆಚ್ಚಿನ ವಿನ್ಯಾಸವನ್ನು ಪಡೆದುಕೊಂಡಿದೆ. ಆದರೆ ಆಡಿ ಕ್ಯೂ8 ಇ-ಟ್ರಾನ್ ರಿಫ್ರೆಶ್ ಮಾಡಿದ ಬಂಪರ್‌ಗಳು, ಹೊಸ ಮುಂಭಾಗದ ಗ್ರಿಲ್ ಮತ್ತು ಮರುನಿರ್ಮಾಣ ಮಾಡಿದ ಹೆಡ್ ಮತ್ತು ಟೈಲ್-ಲೈಟ್‌ಗಳನ್ನು ಪಡೆಯುತ್ತದೆ. ಕ್ಯಾಬಿನ್ ಮರುಬಳಕೆಯ ಅಪ್ಹೋಲ್ಸ್ಟರಿಯನ್ನು ಒಳಗೊಂಡಿದೆ.

ಮಲ್ಟಿಮೀಡಿಯಾ ಇಂಟರ್ಫೇಸ್ (MMI) ಗೆ ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಉದಾಹರಣೆಗೆ MMI ನ್ಯಾವಿಗೇಷನ್ ಜೊತೆಗೆ ಇ-ಟ್ರಾನ್ ರೂಟ್ ಪ್ಲಾನರ್ ಅನ್ನು ಪ್ರಮಾಣಿತವಾಗಿ ಒಳಗೊಂಡಿದೆ. ಇದು ಮೇಲ್ಭಾಗದಲ್ಲಿ 10.1-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಬರುತ್ತದೆ. ಕೆಳಭಾಗದಲ್ಲಿ 8.6-ಇಂಚಿನ ಸ್ಕ್ರೀನ್ ಏರ್‌ಕಾನ್ ಕಾರ್ಯಗಳನ್ನು ಸಹ ನಿಯಂತ್ರಿಸುತ್ತದೆ. ಈ ಕಾರಿನ ನಿರೀಕ್ಷಿತ ಆಗಮನವು 2023 ರ ಕೊನೆಯಲ್ಲಿ ಎಂದು ಹೇಳಲಾಗುತ್ತಿದೆ. ಹಾಗೆಯೇ ಇದರ ನಿರೀಕ್ಷಿತ ಬೆಲೆಯು ರೂ. 1.05 ಕೋಟಿಯಿಂದ 1.25 ಕೋಟಿ ರೂ. ಇರಬಹುದು.

ಹ್ಯುಂಡೈ ಅಯೋನಿಕ್ 5
ಹ್ಯುಂಡೈ Ioniq 5 ಅನ್ನು ಜನವರಿ 2023 ರಲ್ಲಿ ಪರಿಚಯಿಸುವ ಸಾಧ್ಯತೆಯಿದೆ. ಈ ಕಾರನ್ನು ಭಾರತದಲ್ಲಿಯೇ ಜೋಡಿಸಲಾಗುವುದು ಮತ್ತು ಬ್ರ್ಯಾಂಡ್‌ನ ಸಾಲಿನಲ್ಲಿ ಇದು ಪ್ರಮುಖ ಉತ್ಪನ್ನವಾಗಿದೆ. ಇದು ತನ್ನ EV ಪ್ಲಾರ್ಟ್‌ಫಾಮ್ ಅನ್ನು Kia EV6 ನೊಂದಿಗೆ ಹಂಚಿಕೊಳ್ಳುತ್ತದೆ, ಆದರೆ EV6 ಅನ್ನು CBU ಆಗಿ ತರಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, Ioniq 5 ಭಾರತಕ್ಕೆ 58kW ಮತ್ತು 77.4kW ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತದೆ. ಇದು 631km (ARAI- ಕ್ಲೈಮ್) ರೇಂಜ್ ಅನ್ನು ಹಿಂದಿರುಗಿಸುತ್ತದೆ. ಭಾರತ-ಸ್ಪೆಕ್ ಮಾದರಿಯ ಪವರ್ ಮತ್ತು ಟಾರ್ಕ್ ಅಂಕಿಅಂಶಗಳನ್ನು 217hp ಮತ್ತು 350Nm ನಲ್ಲಿ ರೇಟ್ ಮಾಡಲಾಗಿದೆ. ಇದರ ನಿರೀಕ್ಷಿತ ಬೆಲೆಯು ರೂ. 50 ಲಕ್ಷ ಎನ್ನಲಾಗಿದೆ.

ಮಹೀಂದ್ರಾ XUV400
ಮಹೀಂದ್ರಾ XUV400, XUV300 ಮತ್ತು 2020 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ eXUV300 ಪರಿಕಲ್ಪನೆಯಿಂದ ಸ್ಫೂರ್ತಿ ಪಡೆದಿದ್ದರೂ, ಅದರ ತಾಮ್ರ-ಬಣ್ಣದ ಆಕ್ಸೆಂಟ್‌ಗಳು ಮತ್ತು ಮುಚ್ಚಿದ ಗ್ರಿಲ್‌ನ ಸಹಾಯದಿಂದ ಇದನ್ನು ವಿಭಿನ್ನಗೊಳಿಸಬಹುದು. ಈ ಎಲೆಕ್ಟ್ರಿಕ್ SUV 456 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. 150kmph ಗರಿಷ್ಠ ವೇಗದೊಂದಿಗೆ, ಇದು 8.3 ಸೆಕೆಂಡುಗಳಲ್ಲಿ 0-100kmph ವೇಗವನ್ನು ಪಡೆಯುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರು ಜನವರಿ 2023 ರಲ್ಲಿ ಆಗಮಿಸಲಿದ್ದು, ನಿರೀಕ್ಷಿತ ಬೆಲೆಯು 18 ಲಕ್ಷ-20 ಲಕ್ಷ ರೂ. ಇರಬಹುದಾಗಿದೆ.

ಎಂಜಿ ಏರ್ ಇವಿ
ಎರಡು-ಬಾಗಿಲಿನ ವುಲಿಂಗ್ ಏರ್ ಇವಿ ಆಧರಿಸಿ, MG ಏರ್ ಇವಿ ಮಾರುತಿ ಸುಜುಕಿ ಆಲ್ಟೊಗಿಂತ ಚಿಕ್ಕದಾಗಿರುತ್ತದೆ. ಇದು 200-300 ಕಿ.ಮೀ ವ್ಯಾಪ್ತಿಯನ್ನು ನೀಡುವುದಾಗಿ ಕಂಪನಿ ಹೇಳುತ್ತಿದೆ. ಸುಮಾರು 20kWh ನಿಂದ 25kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ. ಮುಂಭಾಗದ-ಆಕ್ಸಲ್ ಮೋಟಾರ್ ಅನ್ನು ಬಳಸುವುದರಿಂದ, ಏರ್ EV ಸುಮಾರು 68bhp ಉತ್ಪಾದಿಸುವ ನಿರೀಕ್ಷೆಯಿದೆ. ಈ ಮಿನಿ ಇವಿಯನ್ನು ಮೇ 2023 ರಲ್ಲಿ ಮಾರಾಟಕ್ಕೆ ತರಲಿದೆ. ನಿರೀಕ್ಷಿತ ಬೆಲೆಯು 10 ಲಕ್ಷ-12 ಲಕ್ಷ ರೂ. ಎನ್ನಲಾಗಿದೆ.

ಎನ್ಯಾಕ್ iV ಯೊಂದಿಗೆ, ಸ್ಕೋಡಾ ಟಾಪ್-ಸ್ಪೆಕ್ 80x ಪವರ್‌ಟ್ರೇನ್ ಅನ್ನು ಭಾರತಕ್ಕೆ CBU ಆಗಿ ಪಡೆಯುವ ಸಾಧ್ಯತೆಯಿದೆ. ಇದು 125kW DC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 82kWh ಬ್ಯಾಟರಿಯನ್ನು ಪಡೆಯುತ್ತದೆ. ಈ ಮೂಲಕ 513km ವರೆಗಿನ ವ್ಯಾಪ್ತಿಯನ್ನು ನೀಡುವುದಾಗಿ ಕಂಪನಿ ಹೇಳಿದೆ. ಎನ್ಯಾಕ್ iV ಆಲ್-ವೀಲ್ ಡ್ರೈವ್ ಸಿಸ್ಟಮ್ ಅನ್ನು ಪಡೆಯುತ್ತದೆ. ಜೊತೆಗೆ ಡ್ಯುಯಲ್-ಎಲೆಕ್ಟ್ರಿಕ್ ಮೋಟಾರ್‌ಗಳು - ಪ್ರತಿ ಆಕ್ಸಲ್‌ನಲ್ಲಿ ಒಟ್ಟು 265hp ಉತ್ಪಾದಿಸುತ್ತದೆ. ಸ್ಕೋಡಾ ಕಡಿಮೆ ವೈಶಿಷ್ಟ್ಯಗಳೊಂದಿಗೆ ಕಡಿಮೆ ಬೆಲೆಯಲ್ಲಿ Enyaq iV ಯ ಟೂ-ವೀಲ್ ಡ್ರೈವ್ ರೂಪಾಂತರಗಳನ್ನು ಸಹ ನೀಡುವ ಸಾಧ್ಯತೆಯಿದೆ. ಈ ಮಾದರಿಯು 2023 ರ ಮದ್ಯಾರ್ಧದಲ್ಲಿ ಬಿಡುಗಡೆಯಾಗಲಿದ್ದು, ನಿರೀಕ್ಷಿತ ಬೆಲೆಯು 60 ಲಕ್ಷ ರೂ. ಇರಲಿದೆ.

Article Published On: Saturday, December 31, 2022, 10:37 [IST]
English summary
Top ev cars to be launched in 2023 by mahindra hyundai skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+