ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ಭಾರತದಲ್ಲಿ ಕಾರು ಖರೀದಿಸುವಾಗ ಹೆಚ್ಚಿನ ಗ್ರಾಹಕರು ಮೊದಲು ನೋಡುವುದು ಆ ಕಾರು ಎಷ್ಟು ಮೈಲೇಜ್ ನೀಡುತ್ತದೆ ಎಂದು. ಕುತೂಹಲಕಾರಿ ಸಂಗತಿ ಅಂದರೆ, ಭಾರತೀಯ ಮಾರುಕಟ್ಟೆಯಲ್ಲಿ ಅಧಿಕ ಮೈಲೇಜ್ ನೀಡುವ ಕಾರುಗಳು ಉತ್ತಮವಾಗಿ ಮಾರಾಟವಾಗುತ್ತವೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ಭಾರತದಲ್ಲಿ ಹೆಚ್ಚಿನ ಗ್ರಾಹಕರು ಮೈಲೇಜ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬೇರೆ ಗಗನದೆತ್ತರಕ್ಕೆ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾರು ಖರೀದಿಸುವ ಗ್ರಾಹಕರು ಹೆಚ್ಚು ಮೈಲೇಜ್ ನೀಡುವ ಕಾರಿನ ಕಡೆ ಹೆಚ್ಚು ಒಲವನ್ನು ಹೊಂದಿರುತ್ತಾರೆ. ಹ್ಯಾಚ್‌ಬ್ಯಾಕ್‌ಗಳಿಂದ ಎಸ್‌ಯುವಿಗಳವರೆಗೆ ಹೆಚ್ಚು ಮೈಲೇಜ್ ನೀಡುವ ಕಾರುಗಳು ಲಭ್ಯವಿದೆ, ಇಲ್ಲಿ ನಾವು ಭಾರತದಲ್ಲಿನ ಅತ್ಯುತ್ತಮ ಮೈಲೇಜ್ ನೀಡುವ ಎಸ್‌ಯುವಿಗಳ ಬಗ್ಗೆ ಮಾಹಿತಿ ನೀಡುತ್ತೇವೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ಕಿಯಾ ಸೊನೆಟ್

ಕಿಯಾ ಮೋಟಾರ್ಸ್ ಸೋನೆಟ್ ಎಸ್‌ಯುವಿಯೊಂದಿಗೆ ಸಬ್-4 ಮೀಟರ್ ಎಸ್‌ಯುವಿ ವಿಭಾಗಕ್ಕೆ ಪ್ರವೇಶಿಸಿದೆ, ಈ ಎಸ್‍ಯುವಿಯ ಆರಂಬಿಕ ಬೆಲೆಯು ರೂ.6.79 ಲಕ್ಷವಾಗಿದೆ. ಕಿಯಾ ಸೊನೆಟ್ ಮಾದರಿಯು ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತಿದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ಈ ಕಿಯಾ ಸೊನೆಟ್ ಎಸ್‍ಯುವಿಯು 1.0 ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್, 1.5-ಲೀಟರ್ ಟರ್ಬೊ-ಡೀಸೆಲ್ ಮತ್ತು 1.2-ಲೀಟರ್ NA ಪೆಟ್ರೋಲ್. 1.0 ಲೀಟರ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. ARAI ಪ್ರಕಾರ, ಡೀಸೆಲ್ ಎಂಟಿ ಮಾದರಿಯು 24.1 ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ 1.2 ಪೆಟ್ರೋಲ್ ಎಂಜಿನ್ 18.4 ಕಿ.ಮೀ ಮೈಲೇಜ್ ನೀಡಿದರೆ, ಎಂಟಿ ಮತ್ತು ಡಿಸಿಟಿ ಯೊಂದಿಗಿನ ಟರ್ಬೊ ಪೆಟ್ರೋಲ್ ಕ್ರಮವಾಗಿ 18.2 ಕಿಮೀ ಮತ್ತು 18.3 ಕಿ.ಮೀ ಮೈಲೇ ನೀಡುತ್ತದೆ. ಇನ್ನು ಐಎಂಟಿ ಆವೃತ್ತಿಯು 18.2 ಕಿ.ಮೀ ಮೈಲೇಜ್ ನೀಡುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ಹೋಂಡಾ ಡಬ್ಲ್ಯುಆರ್-ವಿ

ಹೋಂಡಾ ಕಾರ್ಸ್ ಇಂಡಿಯಾ 2017 ರ ಆರಂಭದಲ್ಲಿ ಜಾಝ್ ಹ್ಯಾಚ್‌ಬ್ಯಾಕ್-ಆಧಾರಿತ ಎಸ್‍ಯುವಿಯನ್ನು ಬಿಡುಗಡೆ ಮಾಡಿತ್ತು. ಈ ಕಾಂಪ್ಯಾಕ್ಟ್ ಎಸ್‍ಯುವಿ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಸಮಂಜಸವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ವಿಭಾಗದಲ್ಲಿ ಸನ್‌ರೂಫ್ ನೀಡುವ ಏಕೈಕ ಕಾರು ಇದಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ಈ ಹೋಂಡಾ ಡಬ್ಲ್ಯುಆರ್-ವಿ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ 1.2-ಲೀಟರ್ i-VTEC ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಗಳನ್ನು ಹೊಂದಿವೆ. ಇದರಲ್ಲಿ ಪೆಟ್ರೋಲೆ ಎಂಜಿನ್ 16.5 ಕಿ.ಮೀ ಮೈಲೇಜ್ ನೀಡಿದರೆ, ಡೀಸೆಲ್ ಎಂಜಿನ್ 23.7 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ಹ್ಯುಂಡೈ ವೆನ್ಯೂ

ಕೊರಿಯನ್ ವಾಹನ ತಯಾರಕ, ಹ್ಯುಂಡೈ 2019ರ ಆರಂಭದಲ್ಲಿ ಭಾರತದಲ್ಲಿ ವೆನ್ಯೂ ಸಬ್ -4 ಮೀಟರ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆ ಮಾಡಿತ್ತು. ಇದು ಪ್ರಸ್ತುತ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ, ಸಬ್-4 ಮೀಟರ್ ಎಸ್‌ಯುವಿ ಎಲ್ಲಾ-ಹೊಸ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ಈ ಹ್ಯುಂಡೈ ವೆನ್ಯೂ ಎಸ್‍ಯುವಿಯು 1.2-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿವೆ. ನ್ಯಾಚುರಲ್-ಆಕಾಂಕ್ಷೆಯ ಪೆಟ್ರೋಲ್ ಮಾದರಿಯು 17.52 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಟರ್ಬೋಚಾರ್ಜ್ಡ್ ಪೆಟ್ರೋಲ್ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳು ಕ್ರಮವಾಗಿ 18.2 ಕಿ.ಮೀ ಮತ್ತು 18.15 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ, ಇನ್ನು ಡೀಸೆಲ್ ಮಾದರಿಯು 23.4 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ,

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ಟಾಟಾ ನೆಕ್ಸಾನ್

ಭಾರತದಲ್ಲಿನ ನಮ್ಮ ಅತ್ಯುತ್ತಮ ಮೈಲೇಜ್ ಎಸ್‍ಯುವಿಗಳ ಪಟ್ಟಿಯಲ್ಲಿ ಟಾಟಾ ನೆಕ್ಸಾನ್ ಕ್ಡೂಅ ಸ್ಥಾನವನ್ನು ಪಡೆದುಕೊಂಡಿದೆ, ಸಬ್-4 ಮೀಟರ್ ಎಸ್‌ಯುವಿ ತನ್ನ ಲೀಗ್‌ನಲ್ಲಿನ ಅತ್ಯಂತ ಶಕ್ತಿಶಾಲಿ ಎಸ್‌ಯುವಿಗಳಲ್ಲಿ ಒಂದಾಗಿದೆ. ಇದು ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ಟಾಟಾ ನೆಕ್ಸಾನ್ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯು ಮಲ್ಟಿ ಡ್ರೈವ್ ಮೋಡ್‌ಗಳು, ಫ್ಲೋಟಿಂಗ್ ಡ್ಯಾಶ್‌ಟಾಪ್ ಸ್ಕ್ರೀನ್ ಮತ್ತು 'ಗ್ರ್ಯಾಂಡ್ ಸೆಂಟ್ರಲ್ ಕನ್ಸೋಲ್' ಸೇರಿದಂತೆ ಹಲವಾರು ಮೊದಲ-ಇನ್-ಸೆಗ್ಮೆಂಟ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಎಸ್‍ಯುವಿಯ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಕ್ರಮವಾಗಿ 17 ಕಿ.ಮೀ ಮತ್ತು 21.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ,

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ನಿಸ್ಸಾನ್ ಮ್ಯಾಗ್ನೈಟ್

ನಿಸ್ಸಾನ್ 2020ರ ಕೊನೆಯಲ್ಲಿ ಮ್ಯಾಗ್ನೈಟ್ ಸಬ್-4 ಮೀಟರ್ ಎಸ್‍ಯುವಿಯನ್ನು ಬಿಡುಗಡೆ ಮಾಡಿತು. ಇದು CMF-A ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಅದು ರೆನಾಲ್ಟ್ ಕಿಗರ್‌ಗೆ ಆಧಾರವಾಗಿದೆ. ಈ ಸಣ್ಣ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ಈ ಎಸ್‍ಯುವಿಯಲ್ಲಿ 1.0L NA ಪೆಟ್ರೋಲ್ ಮತ್ತು 1.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಗಳನ್ನು ಹೊಂದಿವೆ. ಇದರ NA ಪೆಟ್ರೋಲ್ ಎಂಜಿನ್ 18.7 ಕಿ.ಮೀ ಮೈಲೇಜ್ ನೀಡಿದರೆ, ಟರ್ಬೊ ಪೆಟ್ರೋಲ್ ಎಂಜಿನ್ 20 ಕಿ.ಮೀ ಮತ್ತು ಟರ್ಬೊ ಸಿವಿಟಿಯು 17.7 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ,

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ರೆನಾಲ್ಟ್ ಕಿಗರ್

ಈ ರೆನಾಲ್ಟ್ ಕಿಗರ್ ಮ್ಯಾಗ್ನೈಟ್‌ನೊಂದಿಗೆ ಪ್ಲಾಟ್‌ಫಾರ್ಮ್ ಮತ್ತು ಎಂಜಿನ್ ಆಯ್ಕೆಗಳನ್ನು ಸಹ ಹಂಚಿಕೊಳ್ಳುತ್ತದೆ.ಇದು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇದು 1.0 ಲೀಟರ್ NA ಪೆಟ್ರೋಲ್ ಮತ್ತು 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಗಿದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ಇದರಲ್ಲಿ 1.0 ಲೀಟರ್ NA ಪೆಟ್ರೋಲ್ ಎಂಜಿನ್ ಮಾದರಿಯ ಮ್ಯಾನ್ಯುವಲ್ ಆವೃತ್ತಿಯು 19.17 ಕಿ.ಮೀ ಮತ್ತು AMT ಆವೃತ್ತಿಯು 19.17 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಟರ್ಬೊ ಮಾದರಿಯು 20.53 ಕಿ.ಮೀ ಮೈಲೇಜ್ ಅನ್ನು ಒದಗಿಸುತ್ತದೆ,

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ಮಹೀಂದ್ರಾ ಎಕ್ಸ್‌ಯುವಿ300

ಸ್ವದೇಶಿ ಎಸ್‌ಯುವಿ ತಯಾರಕರರಾದ ಮಹೀಂದ್ರಾ 2019ರ ಆರಂಭದಲ್ಲಿ ಎಕ್ಸ್‌ಯುವಿ300 ಸಬ್ -4 ಮೀಟರ್ ಎಸ್‍ಯುವಿಯನ್ನು ಬಿಡುಗಡೆ ಮಾಡಿದರು.ಹೊಸ ಮಾದರಿಯು SsangYong ನ X100 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಜಾಗತಿಕ Tivoli SUV ಗೆ ಆಧಾರವಾಗಿದೆ. ಹೊಸ ಮಾದರಿಯು ಪ್ರಸ್ತುತ ಪ್ರೀಮಿಯಂ ಮಾದರಿಯಾಗಿ ಲಭ್ಯವಿದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಎಸ್‍ಯುವಿಗಳಿವು..

ಈ ಮಹೀಂದ್ರಾ ಎಕ್ಸ್‌ಯುವಿ300 ಎಸ್‍ಯುವಿಯಲ್ಲಿ ಲೀಟರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿವೆ. ಇದರಲ್ಲಿ ಪೆಟ್ರೋಲ್ ಮಾದರಿಯು 17 ಕಿ.ಮೀ ಮೈಲೇ ನೀಡಿದರೆ, ಡೀಸೆಲ್ ಮಾದರಿಯು 20 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ,

Most Read Articles

Kannada
English summary
Top most fuel efficient suv models in india details
Story first published: Friday, January 7, 2022, 20:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X