ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಗಳಿವು...

ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಎಸ್‍ಯುವಿ ಮಾದರಿಗಳ ಬೇಡಿಕೆಯು ಹೆಚ್ಚಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ವಾಹನ ಉತ್ಪಾದನಾ ಕಂಪನಿಗಳು ಎಸ್‍ಯುವಿಯನ್ನು ಬಿಡುಗಡೆಗೊಳಿಸುತ್ತಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಗಳಿವು...

ಭಾರತೀಯ ಮಾರುಕಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ 300, ಹ್ಯುಂಡೈ ವೆನ್ಯೂ, ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೋಸ್ ನಂತಹ ಜನಪ್ರಿಯ ಎಸ್‍ಯುವಿಗಳು ಲಭ್ಯವಿದೆ. ಈ ಜನಪ್ರಿಯ ಕಾಂಪ್ಯಾಕ್ಟ್ ಎಸ್‍ಯುವಿಗಳ ನಡುವೆ ಪೂರ್ಣ ಪ್ರಮಾಣದ ಎಸ್‍ಯುವಿಗಳನ್ನು ಹಲವು ವಾಹನ ಉತ್ಪಾದಕರು ಬಿಡುಗಡೆಗೊಳಿಸುತ್ತಿವೆ, ಇದರ ನಡುವೆ ಭಾರತೀಯ ಮಾರುಕಟ್ಟೆಯಲ್ಲಿ ಆಫ್ ರೋಡ್ ಎಸ್‍ಯುವಿಗಳಿಗೆ ಬೇಡಿಕೆ ಹೊಂದಿದೆ. ಒರಟು ಭೂಪ್ರದೇಶಗಳ ಮೂಲಕ ಪ್ರಯಾಣಿಸಲು ಆಫ್-ರೋಡ್ ವಾಹನಗಳ ಅಗತ್ಯವಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಗಳಿವು...

ಸರಿಯಾದ ಆಫ್-ರೋಡಿಂಗ್ ಎಸ್‌ಯುವಿಗಳು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, 4X4 ಡ್ರೈವ್‌ಟ್ರೇನ್ ಸಿಸ್ಟಮ್, ಆಫ್-ರೋಡಿಂಗ್ ಟೈರ್‌ಗಳು, ಆಪ್ಟಿಮೈಸ್ಡ್ ಅಪ್ರೋಚ್ ಮತ್ತು ಡಿಪಾರ್ಚರ್ ಕೋನಗಳು, ಟ್ರಾನ್ಸ್‌ಫರ್ ಕೇಸ್‌ಗಳು ಮತ್ತು ಆಫ್-ರೋಡ್ ಸಾಮರ್ಥ್ಯದ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿವೆ. ಭಾರತದಲಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಆಫ್ ರೋಡ್ ಎಸ್‍ಯುವಿಗಳ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಗಳಿವು...

ಮಾರುತಿ ಸುಜುಕಿ ಜಿಮ್ನಿ

ಮಾರುತಿ ಸುಜುಕಿ ಜಿಮ್ನಿ ಖಂಡಿತವಾಗಿಯೂ ಮುಂದಿನ ವರ್ಷಕ್ಕೆ ಯೋಜಿಸಲಾದ ಬಹುನಿರೀಕ್ಷಿತ ಹೊಸ ಕಾರುಗಳಲ್ಲಿ ಒಂದಾಗಿದೆ. ಕಂಪನಿಯು ಆಫ್-ರೋಡ್ ಎಸ್‌ಯುವಿಯ 5-ಡೋರಿನ ಆವೃತ್ತಿಯನ್ನು ತರಲಿದೆ, ಅದು ಮುಂಬರುವ 5-ಡೋರ್ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಹೊಸ ವರದಿಯ ಪ್ರಕಾರ, 5-ಡೋರಿನ ಮಾರುತಿ ಜಿಮ್ನಿ ಎರಡು ಸಾಲಿನ ಸೀಟುಗಳ ಸಂರಚನೆಗಳೊಂದಿಗೆ ನೀಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಗಳಿವು...

ಈ ಮಾದರಿಯು ಫೆಬ್ರವರಿ 2023 ರಲ್ಲಿ ಉತ್ಪಾದನೆಗೆ ಪ್ರವೇಶಿಸಲು ನಿರ್ಧರಿಸಲಾಗಿತ್ತು. ಆದರೆ ಸೆಮಿ-ಕಂಡಕ್ಟರ್ ಕೊರತೆಯಿಂದಾಗಿ ಇದು ವಿಳಂಬವಾಗಿಬಹುದು, ಕಂಪನಿಯು ಜೂನ್ 2022 ರ ಅಂತ್ಯದ ವೇಳೆಗೆ ಜಿಮ್ನಿಯ ಪ್ರೀ-ಪ್ರೊಡಕ್ಷನ್ ಟ್ರೇಲ್ಸ್ ಅನ್ನು ಪ್ರಾರಂಭಿಸುತ್ತದೆ ಎಂದು ವರದಿಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಗಳಿವು...

ಮೊದಲ ಹಂತದಲ್ಲಿ, ಮಾದರಿಯನ್ನು ಸುಮಾರು 70 ಪ್ರತಿಶತದಷ್ಟು ಸ್ಥಳೀಯವಾಗಿ ಮೂಲದ ಯುನಿಟ್ ಗಳೊಂದಿಗೆ ತಯಾರಿಸಲಾಗುವುದು. ಮಾರುತಿ ಸುಜುಕಿ ಕ್ರಮೇಣ ತನ್ನ ಸ್ಥಳೀಕರಣ ಮಟ್ಟವನ್ನು ಹೆಚ್ಚಿಸಲಿದೆ ಮತ್ತು ತನ್ನ ಆರಂಭಿಕ ವರ್ಷಗಳಲ್ಲಿ ಸುಮಾರು 75,000 ಯುನಿಟ್ ಗಳೊಂದಿಗೆ ಉತ್ಪಾದಿಸುವ ಗುರಿಯನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಗಳಿವು...

ಈ ಹೊಸ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ. ಇದು 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ 6,000 ಆರ್‌ಪಿಎಂನಲ್ಲಿ 101 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 130 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಅಥವಾ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಗಳಿವು...

ಫೋರ್ಸ್ ಗೂರ್ಖಾ

ಫೋರ್ಸ್ ಮೋಟಾರ್ಸ್ ಕಂಪನಿಯ 5-ಡೊರಿನ ಗೂರ್ಖಾ ಆಫ್ ರೋಡ್ ಪ್ರಸ್ತುತ ಅದರ ಪರೀಕ್ಷಾ ಹಂತದಲ್ಲಿದೆ, ಮುಂದಿನ ವರ್ಷದಲ್ಲಿ ಅದರ ಅಂತಿಮ ಉತ್ಪಾದನಾ ಅವತಾರದಲ್ಲಿ ರಸ್ತೆಗಿಳಿಯಲಿದೆ ಎಂದು ವರದಿಯಾಗಿದೆ. ಮಾದರಿಯು 3-ಬಾಗಿಲಿನ ಗೂರ್ಖಾದ ಪ್ಲಾಟ್‌ಫಾರ್ಮ್‌ನ ವಿಸ್ತೃತ ಆವೃತ್ತಿಗೆ ಆಧಾರವಾಗಿದೆ ಮತ್ತು ಅದರ ಹೆಚ್ಚಿನ ವಿನ್ಯಾಸದ ಅಂಶಗಳು ಮತ್ತು ವೈಶಿಷ್ಟ್ಯಗಳನ್ನು ಅದರೊಂದಿಗೆ ಹಂಚಿಕೊಳ್ಳುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಗಳಿವು...

ಈ ಎಸ್‍ಯುವಿಯಲ್ಲಿ 2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಬಳಸುವ ಸಾಧ್ಯತೆಯಿದೆ. ಈ ಎಂಜಿನ್ 91 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಡೋರ್ ಗೂರ್ಖಾ ವಿಭಿನ್ನವಾಗಿ ಟ್ಯೂನ್ ಮಾಡಲಾದ ಸಸ್ಪೆಂಕ್ಷನ್ ಸೆಟಪ್ ಮತ್ತು ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿರಬಹುದು.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಗಳಿವು...

ಮಹೀಂದ್ರಾ ಥಾರ್

5-ಡೋರ್ ಮಹೀಂದ್ರಾ ಥಾರ್ ಮುಂದಿನ ವರ್ಷದಲ್ಲಿ ಶೋ ರೂಂಗಳನ್ನು ತಲುಪಲಿದೆ. ಎಸ್‌ಯುವಿಯು ಅದರ 3-ಡೋರಿನ ಬೀಫಿಯರ್ ಫ್ರಂಟ್ ಬಂಪರ್, ದೊಡ್ಡ ಗಾತ್ರದ ಉಕ್ಕಿನ ಚಕ್ರಗಳು ಮತ್ತು ಉದ್ದವಾದ ಹಿಂಭಾಗವನ್ನು ಹೊಂದಿರುತ್ತದೆ ಎಂಬ ಮಾಹಿತಿಗಳು ಸ್ಪೈ ಚಿತ್ರಗಳಿಂದ ಬಹಿರಂಗವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಗಳಿವು...

5-ಡೋರ್ ಮಹೀಂದ್ರಾ ಥಾರ್ ಎಸ್‍ಯುವಿಯು ಹೆಚ್ಚಿನ ಕ್ಯಾಬಿನ್ ಜಾಗವನ್ನು ಹೊಂದಿರುತ್ತದೆ. ಉತ್ತಮ ಚಾಲನಾ ಅನುಭವವನ್ನು ನೀಡಲು ಕಾರು ತಯಾರಕರು ಅದರ ಸಸ್ಪೆಂಕ್ಷನ್ ಮತ್ತು ಸ್ಟೀರಿಂಗ್ ಅನ್ನು ವಿಭಿನ್ನವಾಗಿ ಟ್ಯೂನ್ ಮಾಡಬಹುದು

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಗಳಿವು...

ಇನ್ನು ಮಹೀಂದ್ರಾ ಥಾರ್ ಎಸ್‍ಯುವಿಯು ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಆಫ್-ರೋಡ್ ಎಸ್‍ಯುವಿಯಾಗಿದೆ. ಅದಕ್ಕಾಗಿಯೇ ವಾಹನ ಉತ್ಸಾಹಿಗಳು ಒಂದನ್ನು ಖರೀದಿಸಲು ನಿರಂತರವಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಈ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಹುದೀರ್ಘ ಕಾಲದಿಂದ ಮಾರಾಟವಾಗುತ್ತಿರುವ ಜನಪ್ರಿಯ ಆಫ್-ರೋಡ್ ಎಸ್‍ಯುವಿ ಮಾದರಿಯಾಗಿದೆ. ಆಫ್-ರೋಡ್ ವಾಹನ ಎಂದಾಗ ಭಾರತೀಯರಿಗೆ ಮೊದಲಿಗೆ ಥಾರ್ ಎಸ್‍ಯುವಿಯು ಮನಸ್ಸಿಗೆ ಬರುತ್ತದೆ. ಅಷ್ಟು ಜನಪ್ರಿಯತೆಯನ್ನು ಹೊಂದಿರುವ ಆಫ್-ರೋಡರ್ ಆಗಿದೆ,

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಗಳಿವು...

ಮಹೀಂದ್ರಾ ಸ್ಕಾರ್ಪಿಯೊ

ಮೂರನೇ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಭಾರತದಲ್ಲಿ 27 ಜೂನ್ 2022 ರಂದು ಮಾರಾಟವಾಗಲಿದೆ. ಈ ಎಸ್‍ಯುವಿ 2.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಸೇರಿದಂತೆ ಹೊಸ ಎಂಜಿನ್‌ಗಳೊಂದಿಗೆ ಬರುತ್ತದೆ. ಎರಡೂ ಮೋಟಾರ್‌ಗಳು ಕಡಿಮೆ ಶ್ರೇಣಿಯ ಗೇರ್‌ಬಾಕ್ಸ್‌ನೊಂದಿಗೆ ಐಚ್ಛಿಕ 4X4 ಡ್ರೈವ್‌ಟ್ರೇನ್ ಸಿಸ್ಟಮ್‌ನೊಂದಿಗೆ ನೀಡಲಾಗುವುದು ಎಂದು ವರದಿಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಗಳಿವು...

2022ರ ಮಹೀಂದ್ರಾ ಸ್ಕಾರ್ಪಿಯೊ-ಎನ್ ಸಂಪರ್ಕಿತ ಕಾರ್ ಟೆಕ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ADAS ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಸಾಕಷ್ಟು ಸುಧಾರಿತ ಬಟನ್ ಗಳೊಂದಿಗೆ ಪ್ಯಾಕ್ ಮಾಡಲಾಗುವುದು.

Most Read Articles

Kannada
English summary
Top upcoming off road suvs in india find here all details
Story first published: Monday, May 30, 2022, 19:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X