ಟೊಯೋಟಾ-BMW ಪಾಲುದಾರಿಕೆಯಲ್ಲಿ ತಯಾರಾಗಲಿದೆ 500 ಕಿ.ಮೀ ಮೈಲೇಜಿನ ಹೈಡ್ರೋಜನ್ ಕಾರು

ಇಂಗಾಲದ ಹೊರಸೂಸುವಿಕೆ-ಮುಕ್ತ ಸಾರಿಗೆಗಾಗಿ ಹೈಡ್ರೋಜನ್ ಇಂಧನ ಕೋಶ-ಚಾಲಿತ ಎಲೆಕ್ಟ್ರಿಕ್ ಕಾರುಗಳು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಫ್ಯುಯೆಲ್ ಸೆಲ್ ಕಾರುಗಳು ಸ್ವಚ್ಛವಾಗಿರುವುದು ಮಾತ್ರವಲ್ಲದೆ ಅವುಗಳ ಓಡಾಟಕ್ಕೆ ಕಡಿಮೆ ವೆಚ್ಚವೂ ಇರುತ್ತದೆ.

ಟೊಯೋಟಾ-BMW ಪಾಲುದಾರಿಕೆಯಲ್ಲಿ ತಯಾರಾಗಲಿದೆ 500 ಕಿ.ಮೀ ಮೈಲೇಜಿನ ಹೈಡ್ರೋಜನ್ ಕಾರು

ಈ ಕಾರುಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವಷ್ಟು ಇಂಧನ ಕೋಶ ತಂತ್ರಜ್ಞಾನವನ್ನು ಇನ್ನೂ ಅಭಿವೃದ್ಧಿಪಡಿಸಲಾಗಿಲ್ಲ. ಆದರೆ ಅನೇಕ ಕಾರು ಕಂಪನಿಗಳು ಈ ತಂತ್ರಜ್ಞಾನವನ್ನು ಕೈಗೆಟುಕುವಂತೆ ಮಾಡುವಲ್ಲಿ ಕೆಲಸ ಮಾಡುತ್ತಿವೆ. ಇತ್ತೀಚೆಗೆ, ಜರ್ಮನ್ ಕಾರು ತಯಾರಕ BMW ಇಂಧನ ಸೆಲ್ ಕಾರುಗಳನ್ನು ಅಭಿವೃದ್ಧಿಪಡಿಸಲು ಟೊಯೋಟಾ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ.

ಟೊಯೋಟಾ-BMW ಪಾಲುದಾರಿಕೆಯಲ್ಲಿ ತಯಾರಾಗಲಿದೆ 500 ಕಿ.ಮೀ ಮೈಲೇಜಿನ ಹೈಡ್ರೋಜನ್ ಕಾರು

ಎರಡೂ ಕಂಪನಿಗಳು ಹೊಸ ಹೈಡ್ರೋಜನ್ ಇಂಧನ ಸೆಲ್ ಕಾರುಗಳಲ್ಲಿ ಕೆಲಸ ಮಾಡುತ್ತಿವೆ. ಈ ಪಾಲುದಾರಿಕೆಯ ಅಡಿಯಲ್ಲಿ, 2025 ರಲ್ಲಿ ಮೊದಲ ಇಂಧನ ಸೆಲ್ ಕಾರನ್ನು ಬಿಡುಗಡೆ ಮಾಡಲಿವೆ ಎಂದು ವರದಿಗಳಾಗಿವೆ. ಈ ಕುರಿತು BMW ಅಧಿಕಾರಿಯೊಬ್ಬರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ BMW ಮತ್ತು ಟೊಯೋಟಾ ಹೈಡ್ರೋಜನ್ ಇಂಧನ ಸೆಲ್ ವಾಹನ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಟೊಯೋಟಾ-BMW ಪಾಲುದಾರಿಕೆಯಲ್ಲಿ ತಯಾರಾಗಲಿದೆ 500 ಕಿ.ಮೀ ಮೈಲೇಜಿನ ಹೈಡ್ರೋಜನ್ ಕಾರು

ಕಂಪನಿಯು 1990 ರಿಂದ ಈ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿದೆ. ಇಲ್ಲಿಯವರೆಗೆ ಇಂಧನ ಸೆಲ್ ಕಾರನ್ನು ಸಹ ಬಿಡುಗಡೆ ಮಾಡಿರುವುದರಿಂದ BMW ತನ್ನ ಪಾಲುದಾರನಾಗಿ ಟೊಯೋಟಾವನ್ನು ಆಯ್ಕೆ ಮಾಡಿದೆ ಎಂದು ಅವರು ಹೇಳಿದರು.

ಟೊಯೋಟಾ-BMW ಪಾಲುದಾರಿಕೆಯಲ್ಲಿ ತಯಾರಾಗಲಿದೆ 500 ಕಿ.ಮೀ ಮೈಲೇಜಿನ ಹೈಡ್ರೋಜನ್ ಕಾರು

ದೊಡ್ಡ ಎಸ್‌ಯುವಿ ಗಾತ್ರದ ಕಾರುಗಳಿಗೆ ಫ್ಯೂಯಲ್ ಸೆಲ್ ತಂತ್ರಜ್ಞಾನ ವಿಶೇಷವಾಗಿ ಸೂಕ್ತವಾಗಿದೆ ಎಂದು ಬಿಎಂಡಬ್ಲ್ಯು ಅಧಿಕಾರಿ ತಿಳಿಸಿದ್ದಾರೆ. ಸಣ್ಣ ಕಾರುಗಳಿಗೆ ಇಂಧನ ಕೋಶ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಹೆಚ್ಚು ಜಟಿಲವಾಗಿದೆ. ಯಶಸ್ಸಿನ ಸಾಧ್ಯತೆ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಟೊಯೋಟಾ-BMW ಪಾಲುದಾರಿಕೆಯಲ್ಲಿ ತಯಾರಾಗಲಿದೆ 500 ಕಿ.ಮೀ ಮೈಲೇಜಿನ ಹೈಡ್ರೋಜನ್ ಕಾರು

BMW ಇತ್ತೀಚೆಗೆ 2021ರ ಮ್ಯೂನಿಚ್ ಮೋಟಾರ್ ಶೋನಲ್ಲಿ ತನ್ನ ಮೊದಲ ಹೈಡ್ರೋಜನ್-ಚಾಲಿತ ಇಂಧನ ಸೆಲ್ ಕಾರ್ iX5 ಅನ್ನು ಪ್ರದರ್ಶಿಸಿತು. ಕಂಪನಿಯು ಈ ಕಾರಿನ ಕೆಲವು ಘಟಕಗಳನ್ನು ಉತ್ಪಾದಿಸಲು ತಯಾರಿ ನಡೆಸುತ್ತಿದೆ. ಇಂಧನ ಕೋಶದ ವಾಹನಗಳು ವಿದ್ಯುತ್ ವಾಹನಗಳಿಗಿಂತ ಉತ್ತಮವೆಂದು ಸಾಬೀತುಪಡಿಸಬಹುದು.

ಟೊಯೋಟಾ-BMW ಪಾಲುದಾರಿಕೆಯಲ್ಲಿ ತಯಾರಾಗಲಿದೆ 500 ಕಿ.ಮೀ ಮೈಲೇಜಿನ ಹೈಡ್ರೋಜನ್ ಕಾರು

ಇಂಧನ ಕೋಶ ವಾಹನಗಳು ಯಾವುದೇ ರೀತಿಯ ಹೊರಸೂಸುವಿಕೆಯನ್ನು ಉಂಟುಮಾಡುವುದಿಲ್ಲ ಮತ್ತು ಅವುಗಳ ಇಂಧನ ತುಂಬುವಿಕೆಯು ತುಂಬಾ ಸುಲಭವಾಗಿದೆ. ಎಲೆಕ್ಟ್ರಿಕ್ ಕಾರುಗಳು ಚಾರ್ಜ್ ಮಾಡಲು ಗಂಟೆಗಳನ್ನು ತೆಗೆದುಕೊಳ್ಳುತ್ತವೆ, ಆದರೆ ಹೈಡ್ರೋಜನ್ ಇಂಧನ ಸೆಲ್ ವಾಹನಗಳು ನಿಮಿಷಗಳಲ್ಲಿ ಇಂಧನ ತುಂಬಿಸಬಹುದು.

ಟೊಯೋಟಾ-BMW ಪಾಲುದಾರಿಕೆಯಲ್ಲಿ ತಯಾರಾಗಲಿದೆ 500 ಕಿ.ಮೀ ಮೈಲೇಜಿನ ಹೈಡ್ರೋಜನ್ ಕಾರು

ಟೊಯೋಟಾ ತನ್ನದೇ ಆದ ಇಂಧನ ಸೆಲ್ ಕಾರನ್ನು ಸಹ ಅಭಿವೃದ್ಧಿಪಡಿಸಿದೆ. ಟೊಯೋಟಾ ಮಿರಾಯ್ ಬ್ರ್ಯಾಂಡ್‌ನ ಮೊದಲ ಇಂಧನ ಸೆಲ್ ಕಾರಾಗಿದೆ. ಈ ಕಾರನ್ನು ಭಾರತದಲ್ಲಿಯೂ ಬಿಡುಗಡೆ ಮಾಡಲಾಗಿದೆ ಆದರೆ ಕಂಪನಿಯು ಅದರ ವಾಣಿಜ್ಯ ಉತ್ಪಾದನೆಯನ್ನು ಮಾಡುತ್ತಿಲ್ಲ. BMW iX5 ಹೈಡ್ರೋಜನ್ ಬಗ್ಗೆ ಮಾತನಾಡುವುದಾದರೆ, ಈ ಕಾರು ಪೂರ್ಣ ಟ್ಯಾಂಕ್ ಹೈಡ್ರೋಜನ್‌ನಲ್ಲಿ 500 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. ಈ ಕಾರಿನಲ್ಲಿ 6 ಕೆ.ಜಿ ಹೈಡ್ರೋಜನ್ ಟ್ಯಾಂಕ್ ಅಳವಡಿಸಲಾಗಿದೆ.

ಟೊಯೋಟಾ-BMW ಪಾಲುದಾರಿಕೆಯಲ್ಲಿ ತಯಾರಾಗಲಿದೆ 500 ಕಿ.ಮೀ ಮೈಲೇಜಿನ ಹೈಡ್ರೋಜನ್ ಕಾರು

ಇನ್ನು BMW ನ ಹೈಡ್ರೋಜನ್ SUV ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿಗೊಂಡಿಲ್ಲ. ಸಂಪೂರ್ಣ ಅಭಿವೃದ್ಧಿಗೊಂಡ ಬಳಿಕ ಈ ಕಾರು 500 ಕಿ.ಮೀ.ಗಿಂತ ಹೆಚ್ಚಿನ ವ್ಯಾಪ್ತಿಯನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಕಾರಿನಲ್ಲಿರುವ ಹೈಡ್ರೋಜನ್ ಟ್ಯಾಂಕ್ ಅನ್ನು ಸಂಪೂರ್ಣವಾಗಿ ತುಂಬಲು 4-5 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಟೊಯೋಟಾ-BMW ಪಾಲುದಾರಿಕೆಯಲ್ಲಿ ತಯಾರಾಗಲಿದೆ 500 ಕಿ.ಮೀ ಮೈಲೇಜಿನ ಹೈಡ್ರೋಜನ್ ಕಾರು

ಹೈಡ್ರೋಜನ್ ಚಾಲಿತ ಎಲೆಕ್ಟ್ರಿಕ್ ಸ್ಕೂಟರ್

ಅಮೆರಿಕಾ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಟ್ರೈಟಾನ್ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಕಂಪನಿಯು ಭಾರತದಲ್ಲಿ ಹೈಡ್ರೋಜನ್ ಇಂಧನ ಕೋಶ ಚಾಲಿತ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಟೊಯೋಟಾ-BMW ಪಾಲುದಾರಿಕೆಯಲ್ಲಿ ತಯಾರಾಗಲಿದೆ 500 ಕಿ.ಮೀ ಮೈಲೇಜಿನ ಹೈಡ್ರೋಜನ್ ಕಾರು

ಕಂಪನಿಯು ತನ್ನ ವಾಹನಗಳನ್ನು ಭಾರತದಲ್ಲಿ ಮಾತ್ರ ತಯಾರಿಸುವುದಾಗಿ ಹೇಳಿದೆ. ಪ್ರಸ್ತುತ, ಕಂಪನಿಯು ಭಾರತದಲ್ಲಿ ತನ್ನ ವಾಹನಗಳನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಟ್ರೈಟಾನ್ ಈ ವರ್ಷದ ಮಾರ್ಚ್‌ನಲ್ಲಿ ಗುಜರಾತ್‌ನ ಭುಜ್‌ನಲ್ಲಿ ತನ್ನ ಮೊದಲ ಘಟಕದ ನಿರ್ಮಾಣವನ್ನು ಪ್ರಾರಂಭಿಸಿದೆ.

ಟೊಯೋಟಾ-BMW ಪಾಲುದಾರಿಕೆಯಲ್ಲಿ ತಯಾರಾಗಲಿದೆ 500 ಕಿ.ಮೀ ಮೈಲೇಜಿನ ಹೈಡ್ರೋಜನ್ ಕಾರು

ಟ್ರೈಟಾನ್ ಎಲೆಕ್ಟ್ರಿಕ್ ವೆಹಿಕಲ್ಸ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಹಿಮಾಂಶು ಪಟೇಲ್ ಅವರು ಶೀಘ್ರದಲ್ಲೇ ಟ್ರೈಟಾನ್‌ನ ಎಲೆಕ್ಟ್ರಿಕ್ ವಾಹನಗಳನ್ನು ಭಾರತದ ರಸ್ತೆಗಳಲ್ಲಿ ಇಳಿಸುವುದಾಗಿ ಶುಕ್ರವಾರ ಹೇಳಿದ್ದಾರೆ. ಕಂಪನಿಯು ಪ್ರಸ್ತುತ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ಉತ್ಪಾದನಾ ಮಾದರಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಬಹಿರಂಗಪಡಿಸಿದರು.

ಟೊಯೋಟಾ-BMW ಪಾಲುದಾರಿಕೆಯಲ್ಲಿ ತಯಾರಾಗಲಿದೆ 500 ಕಿ.ಮೀ ಮೈಲೇಜಿನ ಹೈಡ್ರೋಜನ್ ಕಾರು

ಕಂಪನಿಯು ಗುಜರಾತ್‌ನ ಭುಜ್‌ನಲ್ಲಿ 600 ಎಕರೆ ಭೂಮಿಯಲ್ಲಿ ಸ್ಥಾವರವನ್ನು ಸ್ಥಾಪಿಸುತ್ತಿದೆ. ಟ್ರೈಟಾನ್‌ನ ಈ ಸ್ಥಾವರವು ಭಾರತದಲ್ಲಿನ ಕಂಪನಿಯ ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ಸ್ಥಾವರದಲ್ಲಿ, ಕಂಪನಿಯು ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ಇಂಧನ ಸೆಲ್ ವಾಹನಗಳನ್ನು ಉತ್ಪಾದಿಸುತ್ತದೆ.

ಟೊಯೋಟಾ-BMW ಪಾಲುದಾರಿಕೆಯಲ್ಲಿ ತಯಾರಾಗಲಿದೆ 500 ಕಿ.ಮೀ ಮೈಲೇಜಿನ ಹೈಡ್ರೋಜನ್ ಕಾರು

ಕಂಪನಿಯು ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಸಹ ಸ್ಥಾಪಿಸಿದೆ. ಟ್ರೈಟಾನ್ ವಾಹನಗಳಿಗೆ ಭಾರತವನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡಲು ಕಂಪನಿಯು ಯೋಜಿಸಿದೆ. ಕಂಪನಿಯು ಭಾರತದಲ್ಲಿ ತಯಾರಿಸಿದ ವಾಹನಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರ ಜೊತೆಗೆ ಯುಎಸ್, ಯುರೋಪ್ ಮತ್ತು ಆಗ್ನೇಯ ಏಷ್ಯಾ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತದೆ.

Most Read Articles

Kannada
English summary
Toyota BMW partnership to produce 500 km mileage hydrogen car
Story first published: Saturday, August 13, 2022, 17:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X