ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ

ಟೊಯೊಟಾ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಿಸಿದ್ದು, ಜನಪ್ರಿಯ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ, ಫಾರ್ಚೂನರ್, ಕ್ಯಾಮ್ರಿ ಮತ್ತು ವೆಲ್‌ಫೈರ್ ಮಾದರಿಗಳ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ.

ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ

ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ ಕಂಪನಿಯು ತನ್ನ ಪ್ರಮುಖ ಕಾರುಗಳ ಬೆಲೆಯನ್ನು ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಶೇ.1ರಿಂದ ಶೇ.3 ರಷ್ಟು ಬೆಲೆ ಹೆಚ್ಚಿಸಿದ್ದು, ಹೊಸ ದರಪಟ್ಟಿಯಲ್ಲಿ ಪ್ರಮುಖ ಮಾದರಿಗಳ ಬೆಲೆಯಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ.27 ಸಾವಿರದಿಂದ ರೂ. 1.80 ಲಕ್ಷದಷ್ಟು ದುಬಾರಿಯಾಗಿವೆ.

ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ

ಹೊಸ ವರ್ಷದ ಆರಂಭದಲ್ಲಿ ಮತ್ತು ಮಾರ್ಚ್ ಮಧ್ಯಂತರದಲ್ಲಿ ಪ್ರಮುಖ ಕಾರುಗಳ ಬೆಲೆ ಹೆಚ್ಚಳ ಮಾಡಿದ್ದ ಟೊಯೊಟಾ ಕಂಪನಿಯು ಇದೀಗ ವರ್ಷದಲ್ಲಿ ಮೂರನೇ ಬಾರಿಗೆ ಬೆಲೆ ಏರಿಕೆ ಘೋಷಣೆ ಮಾಡಿದ್ದು, ಹೊಸ ಕಾರುಗಳ ಕೆಲವು ಕಾರಣಾಂತರಗಳಲ್ಲಿ ನಿರಂತರವಾಗಿ ಬೆಲೆ ಹೆಚ್ಚಳ ಪಡೆದುಕೊಳ್ಳುತ್ತಿವೆ.

ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ

ಪ್ರೀಮಿಯಂ ಕಾರು ಮಾದರಿಗಳಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ ಕಂಪನಿಯು ಕ್ಯಾಮ್ರಿ ಹೈಬ್ರಿಡ್ ಮಾದರಿಯ ಬೆಲೆಯಲ್ಲಿ ಸುಮಾರು ರೂ. 90 ಸಾವಿರ ಹೆಚ್ಚಳ ಮಾಡಿದ್ದು, ಒಂದೇ ವೆರಿಯೆಂಟ್ ಹೊಂದಿರುವ ಈ ಹೈಬ್ರಿಡ್ ಕಾರು ಮಾದರಿಯು ಮಧ್ಯಮ ಕ್ರಮಾಂಕದ ಐಷಾರಾಮಿ ಸೆಡಾನ್ ಮಾದರಿಯಾಗಿದೆ.

ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ

ಹಾಗೆಯೇ ಹೊಸ ದರಪಟ್ಟಿಯಲ್ಲಿ ಟೊಯೊಟಾ ಕಂಪನಿಯು ಫಾರ್ಚೂನರ್ ಎಸ್‌ಯುವಿ ಬೆಲೆಯಲ್ಲೂ ಹೆಚ್ಚಳ ಮಾಡಿದ್ದು, ಫಾರ್ಚೂನರ್ ಕಾರು ಮಾದರಿಯ ಬೆಲೆಯಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ.61 ಸಾವಿರದಿಂದ ರೂ. 1.14 ಲಕ್ಷ ಬೆಲೆ ಹೆಚ್ಚಿಸಲಾಗಿದೆ.

ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ

ಬೆಲೆ ಹೆಚ್ಚಳ ನಂತರ ಫಾರ್ಚೂನರ್ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 32.40 ಲಕ್ಷದಿಂದ ಪ್ರಾರಂಭವಾಗಿ ಟಾಪ್ ಎಂಡ್ ಮಾದರಿಯು ರೂ. 49.57 ಲಕ್ಷ ಬೆಲೆ ಹೊಂದಿದ್ದು, ಸ್ಟ್ಯಾಂಡರ್ಡ್, ಲೆಜೆಂಡರ್ ಮತ್ತು ಜಿಆರ್ ಸ್ಪೋರ್ಟ್ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ.

ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ

ಟೊಯೊಟಾ ಹೈ ಎಂಡ್ ಕಾರು ಮಾದರಿಯಾಗಿರುವ ವೆಲ್‌ಫೈರ್ ಎಂಪಿವಿ ಮಾದರಿಯು ಸಹ ಹೊಸ ದರಪಟ್ಟಿಯಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.80 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ಹೈಬ್ರಿಡ್ ಎಂಪಿವಿ ಮಾದರಿಯು ಬೆಲೆ ಹೆಚ್ಚಳ ನಂತರ ಎಕ್ಸ್‌ಶೋರೂಂ ಪ್ರಕಾರ ರೂ. 92.52 ಲಕ್ಷ ಬೆಲೆ ಹೊಂದಿದೆ.

ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ

ಇನ್ನು ಹೊಸ ದರಪಟ್ಟಿಯಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಮಾದರಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಶೇ.1.50 ರಿಂದ ಶೇ.3 ರಷ್ಟು ಬೆಲೆ ಹೆಚ್ಚಿಸಲಾಗಿದ್ದು, ದರ ಏರಿಕೆ ನಂತರ ಹೊಸ ಕಾರಿನ ಬೆಲೆಯಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 27 ಸಾವಿರದಿಂದ ರೂ. 86 ಸಾವಿರದಷ್ಟು ದುಬಾರಿಯಾಗಿದೆ.

ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ

ದರ ಹೆಚ್ಚಳ ನಂತರ ಇನ್ನೋವಾ ಕ್ರಿಸ್ಟಾದ ಮ್ಯಾನುವಲ್ ಬೆಲೆಯನ್ನು ಆರಂಭಿಕ ಬೆಲೆಯು 18.90 ಲಕ್ಷ ರೂಪಾಯಿ ಮತ್ತು ಸ್ವಯಂಚಾಲಿತ ರೂಪಾಂತರವು ಆರಂಭಿಕವಾಗಿ 21.64 ಲಕ್ಷ ಬೆಲೆ ಪಡೆದುಕೊಂಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಜಿ, ಜಿ ಪ್ಲಸ್, ಜಿಎಕ್ಸ್, ವಿಎಕ್ಸ್ ಮತ್ತು ಜೆಡ್ಎಕ್ಸ್ ಎಂಬ ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ

ಬೆಲೆ ಏರಿಕೆಗೆ ಅನುಗುಣವಾಗಿ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಸೇಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದ್ದು, ಕಡ್ಡಾಯ ಸೇಫ್ಟಿ ಫೀಚರ್ಸ್‌ಗಳಿಗೆ ಅನುಗುಣವಾಗಿ ಹೊಸ ಕಾರಿನ ದರ ಹೆಚ್ಚಿಸಲಾಗಿದೆ.

ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ

ಹೊಸ ಎಮಿಷನ್ ನಂತರ 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸಿರುವ ಟೊಯೊಟಾ ಕಂಪನಿಯು 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಮಾತ್ರ ಮಾರಾಟ ಮಾಡುತ್ತಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಲಭ್ಯವಿದೆ.

ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ

2005ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಇನೋವಾ ಕಾರು ಮಾದರಿಯು ಈ ತನಕವು ಎಂಪಿವಿ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಹೊಸ ಕಾರಿನಲ್ಲಿ ಟೊಯೊಟಾ ಕಂಪನಿಯು ಕಾಲ ಕಾಲಕ್ಕೆ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಾ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ

ಸದ್ಯ ಹೊಸ ತಲೆಮಾರಿನೊಂದಿಗೆ ಮಾರಾಟವಾಗುತ್ತಿರುವ ಇನೋವಾ ಕ್ರಿಸ್ಟಾ ಕಾರು 2016ರಲ್ಲಿ ನ್ಯೂ ಜನರೇಷನ್ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡಿತ್ತು. ಇದೀಗ 2021ರ ಮಾದರಿಯಾಗಿ ಫೇಸ್‌ಲಿಫ್ಟ್ ಮಾದರಿಯನ್ನು ಬಿಡಗಡೆ ಮಾಡಲಾಗಿದ್ದು, ಹಳೆಯ ಆವೃತ್ತಿಗಿಂತಲೂ ಫೇಸ್‌ಲಿಫ್ಟ್ ಮಾದರಿಯು ಸಾಕಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ

ಫೇಸ್‌ಲಿಫ್ಟ್ ಕಾರಿನ ಮುಂಭಾಗದ ವಿನ್ಯಾಸ ಮತ್ತು ಒಳಭಾಗದಲ್ಲಿ ಕೆಲವು ಪ್ರೀಮಿಯಂ ಫೀಚರ್ಸ್ ಹೊರತುಪಡಿಸಿ ಕಾರಿನ ಹಿಂಭಾಗದ ವಿನ್ಯಾಸವನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಎಂಜಿನ್ ಆಯ್ಕೆಯು ಕೂಡಾ ಯಾವುದೇ ಬದಲಾವಣೆ ಪಡೆದುಕೊಂಡಿಲ್ಲ.

ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ

ಟೊಯೊಟಾ ಕಂಪನಿಯು ಮುಂಬರುವ ದಿನಗಳಲ್ಲಿ ಇನೋವಾ ಕ್ರಿಸ್ಟಾ ಮಾದರಿಯನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡುವ ಯೋಜನೆ ರೂಪಿಸುತ್ತಿದ್ದು, ಹೊಸ ಇನೋವಾ ಕ್ರಿಸ್ಟಾ ಮಾದರಿಯು ಮಹತ್ವದ ಬದಲಾವಣೆಯೊಂದಿಗೆ ಹೈಬ್ರಿಡ್ ಮಾದರಿಯನ್ನು ಸಹ ಪಡೆದುಕೊಳ್ಳುವ ಸಿದ್ದತೆಯಲ್ಲಿದೆ.

Most Read Articles

Kannada
Read more on ಟೊಯೊಟಾ toyota
English summary
Toyota car price hike up to 1 80 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X