ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರು

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಇತ್ತೀಚೆಗೆ ನವೀಕರಿಸಿದ ಗ್ಲಾಂಝಾ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಟೊಯೊಟಾ ಗ್ಲಾಂಝಾ ಕಾರಿನ ಆರಂಭಿಕ ಬೆಲೆಯು ರೂ.6.39 ಲಕ್ಷವಾಗಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರು

ಟೊಯೊಟಾ ಕಂಪನಿಯು ಗ್ಲಾಂಝಾ ಕಾರು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ಶೀಘ್ರದಲ್ಲೇ ಪರಿಚಯಿಸಲು ನಿರ್ಧರಿಸಲಾಗಿದೆ. 2022ರ ಟೊಯೋಟಾ ಗ್ಲಾಂಝಾ ಮುಂಬರುವ ಸಿಎನ್‌ಜಿ ಆವೃತ್ತಿಯ ಬಗ್ಗೆ ಮಾಹಿತಿಯನ್ನು ಬ್ರ್ಯಾಂಡ್‌ನ ಅಧಿಕೃತ ಭಾರತೀಯ ವೆಬ್‌ಸೈಟ್ ಬಹಿರಂಗಪಡಿಸಿದೆ. ಟೊಯೊಟಾ ಹ್ಯಾಚ್‌ಬ್ಯಾಕ್ ಮಾದರಿಯು ಮಾರುತಿ ಸೆಲೆರಿಯೊ ಸಿಎನ್‌ಜಿ ಬಿಡುಗಡೆಯ ನಂತರ ಸಿಎನ್‌ಜಿ ಪಡೆಯುವ ಸಾಧ್ಯತೆಯಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರು

ಟೊಯೊಟಾ ಗ್ಲಾಂಝಾದ ಮುಂಬರುವ ಸಿಎನ್‌ಜಿ ಪವರ್‌ಟ್ರೇನ್ ಸ್ಟ್ಯಾಂಡರ್ಡ್ ಕಾರಿನಂತೆ ಅದೇ 1.2 ಲೀಟರ್ ಎಂಜಿನ್ ಅನ್ನು ಒಳಗೊಂಡಿರುತ್ತದೆ, ಜೊತೆಗೆ ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್ ಅನ್ನು ಸೇರಿಸಲಾಗಿದೆ. ವಿಶೇಷಣಗಳನ್ನು ಬಹಿರಂಗಪಡಿಸಲಾಗಿಲ್ಲ, ಆದರೆ ನೈಸರ್ಗಿಕ ಅನಿಲದಲ್ಲಿ ಚಾಲನೆಯಲ್ಲಿರುವಾಗ ಪವರ್ ಮತ್ತು ಟಾರ್ಕ್ ಉತ್ಪಾದನೆಯು ಸ್ವಲ್ಪಮಟ್ಟಿಗೆ ಇಳಿಯುತ್ತದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರು

ಸಿಎನ್‌ಜಿ ಆವೃತ್ತಿಯಲ್ಲಿ ಕೇವಲ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಲಭ್ಯವಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಪೆಟ್ರೋಲ್ ಆವೃತ್ತಿಯು ಹೆಚ್ಚುವರಿಯಾಗಿ 5-ಸ್ಪೀಡ್ ಎಎಂಟಿ ಆಯ್ಕೆಯನ್ನು ಪಡೆಯುತ್ತದೆ. ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಟೊಯೊಟಾ ಗ್ಲಾಂಝಾ ಇ-ಸಿಎನ್‌ಜಿ, 25 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಅಂಕಿ ಅಂಶವು ಪೆಟ್ರೋಲ್‌ಗೆ ಹೋಲಿಸಿದರೆ ಸಮಾನ ದಕ್ಷತೆಯಾಗಿದೆ,

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರು

ಆದರೆ ನಿಜವಾದ ಸಿಎನ್‌ಜಿ ಮೈಲೇಜ್ ಅಂಕಿಅಂಶವಲ್ಲ, ಇದನ್ನು ಕಿ.ಮೀಕೆಜಿ ಸ್ವರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಈ ಹೊಸ ಪವರ್‌ಟ್ರೇನ್ ಬಗ್ಗೆ ಶೀಘ್ರದಲ್ಲೇ ಮಾಹಿತಿಗಳು ಬಹಿರಂಗವಾಗಬಹುದು. ಮುಂಬರುವ ಗ್ಲಾಂಝಾ ಇ-ಸಿಎನ್‌ಜಿ ಬೆಲೆಯು ತುಸು ದುಬಾರಿಯಾಗಿರುತ್ತದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರು

ಈ ಹೊಸ ಪವರ್‌ಟ್ರೇನ್ ಆಯ್ಕೆಯನ್ನು ಮಧ್ಯಮ ಟ್ರಿಮ್ ಮಟ್ಟಗಳು ಮಾತ್ರ ಪಡೆಯುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ ಮಾರುತಿ ಬಲೆನೊ ಎಸ್-ಸಿಎನ್‌ಜಿಗೆ ಅದೇ ರೀತಿ ಇರುತ್ತದೆ. ವಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನಲ್ಲಿ ಉಳಿದಂತೆ ಯಾವುದೇ ಪ್ರಮುಖ ವ್ಯತ್ಯಾಸಗಳನ್ನು ಹೊಂದಿರುವುದಿಲ್ಲ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರು

ಈ ಟೊಯೊಟಾ ಗ್ಲಾಂಝಾ ಕಾರು ಹೊಸ ಸ್ಪೋರ್ಟಿಯರ್ ವಿನ್ಯಾಸದ ಶೈಲಿಯನ್ನು ಹೊಂದಿದೆ. ಈ ಹೊಸ ಮಾದರಿಯಲ್ಲಿ ಹೊಸ ವೈಶಿಷ್ಟ್ಯಗಳು, ಸುಧಾರಿತ ಸ್ಟೈಲಿಂಗ್ ಮತ್ತು ಸಮರ್ಥ ಎಂಜಿನ್ ಅನ್ನು ಒಳಗೊಂಡಿದೆ. ಹಿಂದಿನ ಗ್ಲಾಂಝಾ ಬಲೆನೊಗೆ ಹೋಲುವಂತಿದ್ದರೆ, ಹೊಸ ಮಾದರಿಯು ವಿಭಿನ್ನ ವಿನ್ಯಾಸವನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರು

ಈ ಟೊಯೊಟಾ ಗ್ಲಾಂಝಾ ಹೊಸ ಮುಂಭಾಗದ ವಿನ್ಯಾಸದೊಂದಿಗೆ ಬಂದಿದೆ. ಇದು ಟೊಯೊಟಾದ ಜಾಗತಿಕ ಕಾರುಗಳಿಗೆ ಅನುಗುಣವಾಗಿರುತ್ತದೆ. ಇದು ಕ್ಯಾಮ್ರಿ ತರಹದ ಮುಂಭಾಗದ ಗ್ರಿಲ್ ಮತ್ತು ಬಂಪರ್, ಹೊಸ ಕ್ರೋಮ್ ಮತ್ತು ಎಲ್-ಆಕಾರದ ಎಲ್ಇಡಿ ಡಿಆರ್ಎಲ್ (ಡೇಟೈಮ್ ರನ್ನಿಂಗ್ ಲ್ಯಾಂಪ್) ಗಳನ್ನು ಹೊಂದಿವೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರು

ಈ ಹೊಸ ಕಾರಿನ ಹಿಂಭಾಗವು ಸ್ವಲ್ಪ ಪರಿಷ್ಕೃತ ಬಂಪರ್ ಮತ್ತು ಟೈಲ್-ಲೈಟ್‌ಗಾಗಿ ಹೊಸ ಇನ್‌ಸರ್ಟ್‌ಗಳೊಂದಿಗೆ ಬರುತ್ತದೆ. ಇದು ಹೊಸದಾಗಿ ವಿನ್ಯಾಸಗೊಳಿಸಲಾದ 16-ಇಂಚಿನ ವ್ಹೀಲ್ ಗಳನ್ನು ಹೊಂದಿದೆ.ಈ ಹೊಸ ಗ್ಲಾಂಝಾ ಕಾರು ರೆಡ್, ಬ್ಲೂ, ಗ್ರೇ, ವೈಟ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರು

ಹೊಸ ಗ್ಲಾಂಝಾ ಹ್ಯಾಚ್‌ಬ್ಯಾಕ್ ಕ್ಯಾಬಿನ್ ಹೊಸ ಬಲೆನೊ ಮಾದರಿಗೆ ಹೋಲುತ್ತದೆ. ಇದು ಬಲೆನೊದಲ್ಲಿ ನೀಡಲಾಗುವ ಬ್ಲ್ಯಾಕ್ ಮತ್ತು ಬ್ಲೂ ಬಣ್ಣಗಳ ಬದಲಿಗೆ ಬ್ಲ್ಯಾಕ್ ಮತ್ತು ಬೀಜ್ ಬಣ್ಣಗಳ ಯೋಜನೆಯೊಂದಿಗೆ ಬರುತ್ತದೆ. ವೈಶಿಷ್ಟ್ಯಗಳ ವಿಷಯದಲ್ಲಿ, ಹೊಸ ಗ್ಲಾಂಝಾ ಮಲ್ಟಿ-ಫಂಕ್ಷನಲ್ ಲೆದರ್ ಸುತ್ತಿದ ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್, ನವೀಕರಿಸಿದ ಇನ್ಸ್ಟ್ರುಮೆಂಟ್ ಕನ್ಸೋಲ್, ಸೆಂಟರ್ ಕನ್ಸೋಲ್‌ನಲ್ಲಿ ಹೊಸ ಏರ್-ಕಾನ್ ವೆಂಟ್‌ಗಳು ಮತ್ತು ಹಿಂಭಾಗ ಆಟೋಮ್ಯಾಟಿಕ್ ಎಸಿ ಹೊಂದಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರು

ಈ ಕಾರಿನಲ್ಲಿ Apple CarPlay ಮತ್ತು Android Auto, ನ್ಯಾವಿಗೇಶನ್ ಮತ್ತು ವಾಯ್ಸ್ ಕಾಮೆಂಡ್ ಗಳೊಂದಿಗೆ ದೊಡ್ಡ 9-ಇಂಚಿನ SmartPlay Pro+ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಬರುತ್ತದೆ. ಹೊಸದು 360-ಡಿಗ್ರಿ ಕ್ಯಾಮೆರಾ, ಹೆಡ್ಸ್-ಅಪ್ ಡಿಸ್ಪ್ಲೇ (HUD), ವಾಯ್ಸ್ ಅಸಿಸ್ಟ್ ಫೈಂಡ್ ಮೈ ಕಾರ್ ವೈಶಿಷ್ಟ್ಯ ಮತ್ತು ರಿಮೋಟ್ ಲಾಕ್ ಮತ್ತು ಅನ್‌ಲಾಕ್ ಕಾರ್ಯಗಳಂತಹ ವೈಶಿಷ್ಟ್ಯಗಳೊಂದಿಗೆ ಕನೆಕ್ಟಿವಿಟಿ ಕಾರ್ ತಂತ್ರಜ್ಞಾನದೊಂದಿಗೆ ಬಂದಿದೆ,

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರು

ಹೊಸ ಗ್ಲಾಂಝಾ ಹ್ಯಾಚ್‌ಬ್ಯಾಕ್ ನಲ್ಲಿ ಸುರಕ್ಷೆತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಈ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು, ಕ್ರೂಸ್ ಕಂಟ್ರೋಲ್, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಎತ್ತರ ಹೊಂದಾಣಿಕೆಯ ಡ್ರೈವರ್ ಸೀಟ್, ಇಬಿಡಿಯೊಂದಿಗೆ ಎಬಿಎಸ್ ಇತ್ಯಾದಿಗಳಂತಹ ಉನ್ನತ-ಮಟ್ಟದ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಇನ್ನು ಹೊಸ ಟೊಯೊಟಾ ಗ್ಲಾಂಝಾ ಕಾರಿನಲ್ಲಿ 1.2-ಲೀಟರ್ ಡ್ಯುಯಲ್-ಜೆಟ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರು

ಟೊಯೊಟಾ ಹೊಸ ಗ್ಲಾಂಝಾಗೆ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಇದು 2022ರ ಮಾರುತಿ ಸುಜುಕಿ ಬಲೆನೊದಿಂದ ದೃಶ್ಯಾತ್ಮಕವಾಗಿ ಪ್ರತ್ಯೇಕಿಸುತ್ತದೆ. ಟೊಯೊಟಾ ಗ್ಲಾಂಝಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಐ20, ಟಾಟಾ ಆಲ್ಟ್ರೋಜ್, ಹೋಂಡಾ ಜಾಝ್ ಮತ್ತು ಮಾರುತಿ ಸುಜುಕಿ ಬಲೆನೊ ಕಾರುಗಳುಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಟೊಯೊಟಾ toyota
English summary
Toyota glanza cng to launch soon in india mileage details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X