ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಟೊಯೊಟಾ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಮಧ್ಯಮ ಕ್ರಮಾಂಕದ ಕಾರುಗಳಲ್ಲಿ ಬಲವಾದ ಹೈಬ್ರಿಡ್ ತಂತ್ರಜ್ಞಾನ ಸೌಲಭ್ಯವನ್ನು ಹೊಂದಿರುವ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.11 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.99 ಲಕ್ಷ ಬೆಲೆ ಹೊಂದಿದೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಹೊಸ ಅರ್ಬನ್ ಕ್ರೂಸರ್ ಹೈರೈಡರ್ ಕಾರು ಮಾದರಿಯು ವಿವಿಧ ಎಂಜಿನ್ ಮಾದರಿಗಳಿಗೆ ಅನುಗುಣವಾಗಿ ಇ, ಎಸ್, ಜಿ, ವಿ ವೆರಿಯೆಂಟ್‌ಗಳನ್ನು ಹೊಂದಿದ್ದು, ಮೈಲ್ಡ್ ಹೈಬ್ರಿಡ್ ವೆರಿಯೆಂಟ್‌ಗಳನ್ನು ಟು ವ್ಹೀಲ್ ಡ್ರೈವ್ ನಿಯೋ ಡ್ರೈವ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ವೆರಿಯೆಂಟ್‌ಗಳನ್ನು ಇಡ್ರೈವ್ ಟು ವ್ಹೀಲ್ ಡ್ರೈವ್ ಹೈಬ್ರಿಡ್ ಎಂದು ಕರೆಯಲಾಗುತ್ತದೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಅರ್ಬನ್ ಕ್ರೂಸರ್ ಹೈರೈಡರ್‌ನಲ್ಲಿ ಟೊಯೊಟಾ ಕಂಪನಿಯು 1.5 ಲೀಟರ್ ಅಟ್ಕಿನ್ಸನ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಇದು ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಹೊಸ ಕಾರಿನ ಸ್ಟ್ರಾಂಗ್ ಹೈಬ್ರಿಡ್ ಮಾದರಿಯಲ್ಲಿರುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಮತ್ತು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೈಬ್ರಿಡ್ ತಂತ್ರಜ್ಞಾನದ ಪ್ರಮುಖ ತಾಂತ್ರಿಕ ಅಂಶವಾಗಿದ್ದು, ಇದರಲ್ಲಿ ಪೆಟ್ರೋಲ್ ಎಂಜಿನ್ ಮಾದರಿಯು 87 ಬಿಎಚ್‌ಪಿ ಮತ್ತು 122 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದಲ್ಲಿ 177.6 ವೊಲ್ಟ್ ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯದೊಂದಿಗೆ 79 ಬಿಎಚ್‌ಪಿ ಮತ್ತು 141 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಹೈಬ್ರಿಡ್ ಮಾದರಿಯಾಗಿರುವುದರಿಂದ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಒಟ್ಟಾಗಿ ಕಾರ್ಯನಿರ್ವಹಣೆ ಮಾಡುವ ಪೆಟ್ರೋಲ್ ದಹಿಸುವಿಕೆಯ ಪ್ರಮಾಣವನ್ನು ತಗ್ಗಿಸಲಿದ್ದು, ಈ ಮೂಲಕ ಎರಡು ತಂತ್ರಜ್ಞಾನಗಳು ಒಟ್ಟಾಗಿ 114 ಬಿಎಚ್‌ಪಿ ಉತ್ಪಾದನೆಯೊಂದಿಗೆ ಇಂಧನ ಕಾರ್ಯಕ್ಷಮತೆ ಕಾಯ್ದುಕೊಳ್ಳುತ್ತದೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಹೈರೈಡರ್ ವೆರಿಯೆಂಟ್‌ಗಳಲ್ಲಿ ಟೊಯೊಟಾ ಕಂಪನಿಯು ಇ-ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಇದು ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 27.97 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಟೊಯೊಟಾ ಕಂಪನಿಯು ನಿಯೋ ಡ್ರೈವ್ ಎಂಜಿನ್ ಮಾದರಿಗಳಲ್ಲಿ ಮಾರುತಿ ಸುಜುಕಿಯ 1.5-ಲೀಟರ್ K15C ಮೈಲ್ಡ್-ಹೈಬ್ರಿಡ್ ಜೊತೆಗೆ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG) ಒದಗಿಸಲಿದ್ದು, ಇದು ಹೊಸ ಬ್ರೆಝಾ, ಎಕ್ಸ್‌ಎಲ್6 ಮತ್ತು ಹೊಸ ಎರ್ಟಿಗಾ ಮಾದರಿಗಳಲ್ಲಿ ಕಂಡುಬರುತ್ತದೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಮೈಲ್ಡ್ ಹೈಬ್ರಿಡ್ ಹೊಂದಿರುವ ಪೆಟ್ರೋಲ್ ಎಂಜಿನ್ ಮಾದರಿಯು 103 ಬಿಎಚ್‌ಪಿ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಈ ಎಂಜಿನ್ ಅನ್ನು ಕಂಪನಿಯು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ ಮಾರಾಟ ಮಾಡಲಿದೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಸದ್ಯಕ್ಕೆ ಹೊಸ ಹೈರೈಡರ್ ಕಾರಿನ ಸ್ಟ್ರಾಂಗ್ ಹೈಬ್ರಿಡ್ ವೆರಿಯೆಂಟ್ ಬೆಲೆ ಮಾತ್ರ ಘೋಷಣೆ ಮಾಡಿರುವ ಟೊಯೊಟಾ ಕಂಪನಿಯು ಮುಂದಿನ ವಾರ ಮೈಲ್ಜ್ ಹೈಬ್ರಿಡ್ ಪೆಟ್ರೋಲ್ ವೆರಿಯೆಂಟ್‌ಗಳ ಬೆಲೆ ಬಹಿರಂಗಪಡಿಸಲಿದ್ದು, ಹೊಸ ಕಾರು ಎರಡು ಮಾದರಿಗಳಲ್ಲೂ ಆಲ್ ವ್ಹೀಲ್ ಡ್ರೈವ್ ಮಾದರಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಆಲ್ ವ್ಹೀಲ್ ಡ್ರೈವ್ ಮಾದರಿಯು ಸದ್ಯ ಘೋಷಣೆ ಮಾಡಲಾಗಿರುವ ಬೆಲೆಗಳಿಂತಲೂ ತುಸು ದುಬಾರಿ ಹೊಂದಿರಲಿದ್ದು, ಹೊಸ ಮಾದರಿಗಳಲ್ಲಿ ಕಂಪನಿಯು ಹಲಾವರು ಹೊಸ ವೈಶಿಷ್ಟ್ಯತೆಗಳೊಂದಿಗೆ ಐಷಾರಾಮಿ ಕಾರು ಚಾಲನಾ ಅನುಭವ ನೀಡಲಿದೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಇನ್ನು ಹೊಸ ಕಾರಿನ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳ ಬಗೆಗೆ ಹೇಳುವುದಾರೆ ಟು ಲೆಯರ್ ಹೊಂದಿರುವ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳನ್ನು ಹೊಂದಿದ್ದು, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಎರಡು ಲೇಯರ್‌ಗಳಾಗಿ ವಿಭಜಿಸಿ ಗ್ರಿಲ್‌ನ ಒಂದು ಮೂಲೆಯಿಂದ ಇನ್ನೊಂದಕ್ಕೆ ವಿಸ್ತರಿಸಿರುವ ಕ್ರೋಮ್ ಸ್ಟ್ರಿಪ್ ಅನ್ನು ಬಳಸಲಾಗಿದೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ದೊಡ್ಡ ಗಾತ್ರದ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿಂದ ಸುತ್ತುವರೆದಿರುವ ಎತ್ತರದ ಏರ್‌ಡ್ಯಾಮ್‌ನೊಂದಿಗೆ ಸ್ಪೋರ್ಟಿ ಮುಂಭಾಗದ ಬಂಪರ್‌ಗಳನ್ನು ಸಹ ಒಳಗೊಂಡಿದ್ದು, ಎರಡು ಬದಿಯಲ್ಲಿ ಹೈರೈಡರ್‌ನ ಪ್ರಬಲ ಹೈಬ್ರಿಡ್ ಬ್ಯಾಡ್ಜಿಂಗ್ ಅನ್ನು ಪಡೆದುಕೊಂಡಿವೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಹಿಂಭಾಗದಲ್ಲಿ ಟೊಯೊಟಾ ಹೈರೈಡರ್ ಎಸ್‌ಯುವಿ ಸ್ಲಿಮ್ ಸಿ-ಆಕಾರದ ಟೈಲ್-ಲೈಟ್‌ಗಳನ್ನು ಹೊಂದಿದ್ದು, ಡ್ಯುಯಲ್ ಸಿ-ಆಕಾರದ ಪಾರ್ಕಿಂಗ್ ಲ್ಯಾಂಪ್‌ಗಳೊಂದಿಗೆ ಟೈಲ್‌ಗೇಟ್‌ಗೆ ವಿಸ್ತರಿಸುತ್ತದೆ. ಹಾಗೆಯ ಒಂದು ಪ್ರಮುಖ ಕ್ರೋಮ್ ಸ್ಟ್ರಿಪ್ ಮಧ್ಯದಿಂದ ಆರಂಭಗೊಂಡು ಟೈಲ್ ಲ್ಯಾಂಪ್‌ಗಳಲ್ಲಿ ವಿಲೀನಗೊಳ್ಳಲಿದ್ದು, ಇದರಲ್ಲಿ ಟೊಯೊಟಾ ಲೋಗೋವನ್ನು ಜೋಡಿಸಲಾಗಿದೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಅರ್ಬನ್ ಕ್ರೂಸರ್ ಹೈರೈಡರ್‌ನ ಉನ್ನತ ರೂಪಾಂತರಗಳಲ್ಲಿ ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜರ್, ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಡ್ಸ್-ಅಪ್ ಡಿಸ್ಪ್ಲೇ, ಕನೆಕ್ಟ್ ಮಾಡಿದ ಕಾರ್ ಟೆಕ್ ಮತ್ತು ಗೂಗಲ್ ಮತ್ತು ಸಿರಿ ಹೊಂದಾಣಿಕೆಯೊಂದಿಗೆ ಧ್ವನಿ ಸಹಾಯದಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಸುರಕ್ಷತಾ ವೈಶಿಷ್ಟ್ಯಗಳ ವಿಷಯದಲ್ಲೂ ಗಮನಸೆಳೆಯಲಿರುವ ಅರ್ಬನ್ ಕ್ರೂಸರ್ ಹೈರೈಡರ್ ಕಾರು 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಇಎಸ್‌ಪಿ, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಅನ್ನು ಪಡೆಯುತ್ತದೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಹಾಗೆಯೇ ಹೊಸ ಕಾರು ಖರೀದಿ ಮೇಲೆ ಟೊಯೊಟಾ 3 ವರ್ಷ ಅಥವಾ1,00,000 ಕಿ.ಮೀ ವಾರಂಟಿಯನ್ನು ನೀಡಲಿದ್ದು, ಇದನ್ನು 5 ವರ್ಷ ಅಥವಾ 2,20,000 ಕಿ.ಮೀವರೆಗೆ ವಿಸ್ತರಿಸಬಹುದಾಗಿದೆ.

ಅತ್ಯಧಿಕ ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ

ಜೊತೆಗೆ ಹೊಸ ಕಾರಿನ ಹೈಬ್ರಿಡ್ ಬ್ಯಾಟರಿಗಳ ಮೇಲೆ 8 ವರ್ಷ ಅಥವಾ 1,60,000 ಕಿ.ಮೀ ವಾರಂಟಿಯನ್ನು ಸಹ ನೀಡುತ್ತಿದ್ದು, ಪ್ರಮುಖ ಪ್ರತಿಸ್ಪರ್ಧಿಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಫೋಕ್ಸ್‌ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

Article Published On: Friday, September 9, 2022, 15:35 [IST]
English summary
Toyota hyryder hybrid suv launched in india at rs 15 11 lakh details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+