ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಫುಲ್ ಸೈಜ್ ಎಸ್‍ಯುವಿಗಳು!

ಭಾರತೀಯ ಮಾರುಕಟ್ಟೆಯಲ್ಲಿ ಎಸ್‍ಯುವಿಯು ವಿಭಾಗವು ಸ್ಥಿರವಾಗಿ ಬೆಳೆಯುತ್ತಿದೆ. ವಿವಿಧ ಕಾರು ತಯಾರಕರು ವಿವಿಧ ವಿಭಾಗಗಳಲ್ಲಿ ಹೊಸ ಎಸ್‍ಯುವಿಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಹಲವು ಎಸ್‍ಯುವಿಗಳು ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಫುಲ್ ಸೈಜ್ ಎಸ್‍ಯುವಿಗಳು!

ಫುಲ್ ಸೈಜ್ ಎಸ್‍ಯುವಿ ವಿಭಾಗದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರಾಬಲ್ಯ ಸಾಧಿಸುತ್ತಿದೆ. ಕಾಂಪ್ಯಾಕ್ಟ್ ಮತ್ತು ಮಿಡ್ ಸೈಜ್ ಎಸ್‍ಯುವಿ ವಿಭಾಗಗಳು ಇದೀಗ ಅತ್ಯಂತ ಹೆಚ್ಚು-ಸ್ಪರ್ಧಿಸಲ್ಪಟ್ಟ ವಿಭಾಗಗಳಾಗಿದ್ದರೂ, ಫುಲ್ ಸೈಜ್ ಎಸ್‍ಯುವಿ ವಿಭಾಗವು ಮುಂದಿನ ಕೆಲವು ವರ್ಷಗಳಲ್ಲಿ ಕೆಲವು ಹೊಸ ಮಾದರಿಗಳ ಆಗಮನಗಳನ್ನು ನೋಡುವ ನಿರೀಕ್ಷೆಯಿದೆ. ಇಲ್ಲಿ, ನಾವು ಐದು ಫುಲ್ ಸೈಜ್ ಎಸ್‍ಯುವಿಗಳನ್ನು ಪಟ್ಟಿ ಮಾಡಿದ್ದೇವೆ ಅದು ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಫುಲ್ ಸೈಜ್ ಎಸ್‍ಯುವಿಗಳು!

ನ್ಯೂ ಜನರೇಷನ್ ಟೊಯೊಟಾ ಫಾರ್ಚುನರ್

ಟೊಯೊಟಾ ಪ್ರಸ್ತುತ ಫಾರ್ಚುನರ್ ಎಸ್‍ಯುವಿಯ ಮುಂದಿನ ಜನರೇಷನ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಈ ವರ್ಷದ ನಂತರ ಜಾಗತಿಕವಾಗಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ, ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಫುಲ್ ಸೈಜ್ ಎಸ್‍ಯುವಿಗಳು!

ಈ ನ್ಯೂ ಜನರೇಷನ್ ಟೊಯೊಟಾ ಫಾರ್ಚುನರ್ ಮಾದರಿಯಂತೆ ಬಾಡಿ-ಆನ್-ಫ್ರೇಮ್ ಆರ್ಕಿಟೆಕ್ಚರ್‌ಗೆ ಅಂಟಿಕೊಳ್ಳುವ ನಿರೀಕ್ಷೆಯಿದೆ ಮತ್ತು ಇದು ಹೊಸ ಹೈಬ್ರಿಡ್ ಪೆಟ್ರೋಲ್ ಪವರ್‌ಟ್ರೇನ್‌ನಿಂದ ಚಾಲಿತವಾಗಲಿದೆ. ಅಸ್ತಿತ್ವದಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಮುಂದಕ್ಕೆ ಸಾಗಿಸಲಾಗುತ್ತದೆಯೇ ಎಂದು ನಮಗೆ ಖಚಿತವಿಲ್ಲ.

ಭಾರತದಲ್ಲಿ ಬಿಡುಗಡೆಯಾಗಲಿರುವ ಫುಲ್ ಸೈಜ್ ಎಸ್‍ಯುವಿಗಳು!

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟೊಯೊಟಾ ಫಾರ್ಚೂನರ್ ಮಾದರಿಯಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.7-ಲೀಟರ್ ಪೆಟ್ರೋಲ್ ಎಂಜಿನ್ 166 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು ಐದು-ಸ್ಪೀಡ್ ಮ್ಯಾನುವಲ್ ಅಥವಾ ಆರು-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾದಾಗ ಡೀಸೆಲ್ ಎಂಜಿನ್ 177 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಫುಲ್ ಸೈಜ್ ಎಸ್‍ಯುವಿಗಳು!

ಹ್ಯುಂಡೈ ಪಾಲಿಸೇಡ್

ಹ್ಯುಂಡೈ ತನ್ನ ಎಸ್‍ಯುವಿ ಪೋರ್ಟ್‌ಫೋಲಿಯೊವನ್ನು ಭಾರತೀಯ ಮಾರುಕಟ್ಟೆಯಲ್ಲಿ ವಿಸ್ತರಿಸಲು ಯೋಜಿಸುತ್ತಿದೆ ಮತ್ತು ಭಾರತದಲ್ಲಿ ಪಾಲಿಸೇಡ್ ಅನ್ನು ಪ್ರಾರಂಭಿಸುವ ಕುರಿತು ವದಂತಿಗಳಿವೆ. ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಹ್ಯುಂಡೈ ಪಾಲಿಸೇಡ್ ಬಹು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಫುಲ್ ಸೈಜ್ ಎಸ್‍ಯುವಿಗಳು!

ಇದರಲ್ಲಿ 3.5-ಲೀಟರ್ NA ಪೆಟ್ರೋಲ್ ವಿ6 ಎಂಜಿನ್ 277 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ. 3.8 ಲೀಟರ್ ವಿ6 ಅಟ್ಕಿನ್ಸನ್ ಸೈಕಲ್ ಡಿಐ, ಡ್ಯುಯಲ್ ಸಿಸಿಟಿವಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 291 ಬಿಹೆಚ್‍ಪಿ ಪವರ್ ಮತ್ತು 355 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮಲ್ಟಿ-ಡಿಸ್ಕ್ ಟಾರ್ಕ್ ಪರಿವರ್ತಕವನ್ನು ಒಳಗೊಂಡಿರುವ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಫುಲ್ ಸೈಜ್ ಎಸ್‍ಯುವಿಗಳು!

ಇದರೊಂದಿಗೆ 2.2-ಲೀಟರ್ ಟರ್ಬೊ-ಡೀಸೆಲ್ ಇನ್‌ಲೈನ್-4 ಮಿಲ್ ಎಂಜಿನ್ ಅನ್ನು ಹೊಂದಿದೆ. ಹ್ಯುಂಡೈ ಪಾಲಿಸೇಡ್ 12-ಇಂಚಿನ ನ್ಯಾವಿಗೇಷನ್ ಡಿಸ್ ಪ್ಲೇ, ಬ್ಲೂಲಿಂಕ್ ಸಂಪರ್ಕಿತ ಸರ್ವಿಸ್ ತ್ತೀಚಿನ ಆವೃತ್ತಿ, ವೈಫೈ ಹಾಟ್‌ಸ್ಪಾಟ್ ಮತ್ತು ನವೀಕರಿಸಿದ USB-C ಪೋರ್ಟ್‌ಗಳೊಂದಿಗೆ ಬರುತ್ತದೆ. ಐಫೋನ್ ಮತ್ತು ಆಂಡ್ರಾಯ್ಡ್ ವೈರ್‌ಲೆಸ್ ಸಾಧನಗಳನ್ನು ಬೆಂಬಲಿಸುವ ಡಿಜಿಟಲ್ ಕೀ 2 ಟಚ್ ಸಿಸ್ಟಂ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಫುಲ್ ಸೈಜ್ ಎಸ್‍ಯುವಿಗಳು!

ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್

ಫೇಸ್‌ಲಿಫ್ಟೆಡ್ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಅನ್ನು ಕಳೆದ ವರ್ಷ ಜಾಗತಿಕವಾಗಿ ಅಧಿಕೃತವಾಗಿ ಅನಾವರಣಗೊಳಿಸಲಾಯಿತು ಮತ್ತು ಎಸ್‌ಯುವಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹಿಂದಿನ ಮಾದರಿಗಿಂತ ಭಿನ್ನವಾಗಿ, ಇದು ಸಿಬಿಯು ಆಮದು ಆಗಿತ್ತು, ಹೊಸ ಮಾದರಿಯು ಸ್ಥಳೀಯವಾಗಿ ಜೋಡಣೆಗೊಳ್ಳುವ ನಿರೀಕ್ಷೆಯಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಫುಲ್ ಸೈಜ್ ಎಸ್‍ಯುವಿಗಳು!

ಈ ಟಿಗ್ವಾನ್ ಆಲ್‌ಸ್ಪೇಸ್ ಫೇಸ್‌ಲಿಫ್ಟ್ ಅನ್ನು ಕಳೆದ ವರ್ಷ ಜಾಗತಿಕವಾಗಿ ಅಧಿಕೃತವಾಗಿ ಅನಾವರಣಗೊಳಿಸಲಾಯಿತು ಮತ್ತು ಎಸ್‌ಯುವಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಎಸ್‍ಯುವಿಯಲ್ಲಿ , 7-ಸ್ಪೀಡ್ ಡಿಎಸ್ಜಿ ಯೊಂದಿಗೆ ಆಲ್ ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ ಸಂಯೋಜಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಫುಲ್ ಸೈಜ್ ಎಸ್‍ಯುವಿಗಳು!

ಮಹೀಂದ್ರಾ ಎಕ್ಸ್‌ಯುವಿ900

ಹೀಂದ್ರಾ & ಮಹೀಂದ್ರಾ ಈ ವರ್ಷದ ಆಗಸ್ಟ್‌ನಲ್ಲಿ ಮೂರು "ಬಾರ್ನ್ ಎಲೆಕ್ಟ್ರಿಕ್" ಎಸ್‍ಯುವಿಗಳನ್ನು ಅನಾವರಣಗೊಳಿಸಲಿದೆ. , ಅವುಗಳಲ್ಲಿ ಒಂದು ಪೂರ್ಣ-ಗಾತ್ರದ ಕೂಪ್-ಶೈಲಿಯ ಎಸ್‍ಯುವಿ ಆಗಿರುತ್ತದೆ. ಈ ಎಸ್‍ಯುವಿಗೆ ಎಕ್ಸ್‌ಯುವಿ900 ಎಂದು ಹೆಸರಿಡಲಾಗಿದೆ ಎಂದು ವದಂತಿಗಳಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಫುಲ್ ಸೈಜ್ ಎಸ್‍ಯುವಿಗಳು!

ಈ ಹೊಸ ಮಾದರಿಯು ಎಕ್ಸ್‌ಯುವಿ700 ಗಿಂತ ಆಯಾಮಗಳಲ್ಲಿ ದೊಡ್ಡದಾಗಿರುತ್ತದೆ ಮತ್ತು ಅತ್ಯಂತ ತೀಕ್ಷ್ಣವಾದ ಮತ್ತು ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಹೊಂದಿರುತ್ತದೆ. ಬ್ಯಾಟರಿ ಮತ್ತು ಮೋಟಾರ್ ಸ್ಪೆಕ್ಸ್ ಇದೀಗ ಸಂಪೂರ್ಣ ನಿಗೂಢವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಫುಲ್ ಸೈಜ್ ಎಸ್‍ಯುವಿಗಳು!

ಟೊಯೊಟಾ RAV4

ಈ ಟೊಯೊಟಾ RAV4 ಎಸ್‍ಯುವಿಯನ್ನು ಭಾರತೀಯ ರಸ್ತೆಗಳಲ್ಲಿ ಹಲವಾರು ಬಾರಿ ಸ್ಫಾಟ್ ಟೆಸ್ಟ್ ಮಾಡಲಾಗಿದೆ. ಇದು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಭಾರತದಲ್ಲಿ ಇದರ ಹೈಬ್ರಿಡ್ ಮಾದರಿಯನ್ನು ಮಾತ್ರ ಮಾರಾಟ ಮಾಡಬಹುದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಫುಲ್ ಸೈಜ್ ಎಸ್‍ಯುವಿಗಳು!

ಇದು ಪ್ರಬಲವಾದ ಹೈಬ್ರಿಡ್ ಸಿಸ್ಟಮ್‌ನೊಂದಿಗೆ 2.5-ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿರಲಿದೆ. ಈ ಎಂಜಿನ್ 218 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ ಫ್ಹೋರ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಹೊಂದಿರಲಿದೆ. ಸಿಬಿಯು ಆಮದು ಮಾರ್ಗದ ಮೂಲಕ ಎಸ್‍ಯುವಿಯನ್ನು ಭಾರತಕ್ಕೆ ತರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಫುಲ್ ಸೈಜ್ ಎಸ್‍ಯುವಿಗಳು!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತೀಯ ಮಾರುಕಟ್ಟೆಯ ಫುಲ್ ಸೈಜ್ ಎಸ್‍ಯುವಿ ಭಾಗದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರಾಬಲ್ಯ ಸಾಧಿಸಿದೆ. ಫುಲ್ ಸೈಜ್ ಎಸ್‍ಯುವಿ ವಿಭಾಗವು ಮುಂದಿನ ಕೆಲವು ವರ್ಷಗಳಲ್ಲಿ ಕೆಲವು ಹೊಸ ಮಾದರಿಗಳು ಬಿಡುಗಡೆಯಾಗಲಿದೆ.

Most Read Articles

Kannada
English summary
Upcoming full size suv models in india find here all details
Story first published: Monday, June 20, 2022, 15:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X