ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಜಾಗತಿಕವಾಗಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಈ ತಿಂಗಳ ಆರಂಭದಲ್ಲಿ ಎಂಜಿ ಮೋಟಾರ್ ಕಂಪನಿಯು ಅವರು ಏರ್ ಎಲೆಕ್ಟ್ರಿಕ್ ಕಾರ್ ಅನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಎಂಜಿ ಏರ್ 2-ಡೋರ್ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರು 2023ರ ಆರಂಭದಲ್ಲಿ ಭಾರತದಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ. ಈ ಎಂಜಿ ಏರ್ SAIC-GM-Wuling ಜಂಟಿ ಉದ್ಯಮದ ಮಿನಿ ಇವಿ ಅನ್ನು ಆಧರಿಸಿದೆ. ಇದು ವುಲಿಂಗ್ ಇವಿ ಎಂಬ ಸಣ್ಣ ಎಲೆಕ್ಟ್ರಿಕ್ ರನ್‌ಬೌಟ್ ವಾಹನವಾಗಿದೆ. ವುಲಿಂಗ್ ಅನ್ನು ಈ ವರ್ಷದ ಆರಂಭದಲ್ಲಿ ಇಂಡೋನೇಷ್ಯಾದಲ್ಲಿ ಪರಿಚಯಿಸಲಾಯಿತು ಮತ್ತು ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ G20 ಶೃಂಗಸಭೆಯ ಭಾಗವಾಗಿ, ವುಲಿಂಗ್ 300 ಯೂನಿಟ್ ಏರ್ ಇವಿ ಅನ್ನು ರವಾನಿಸಿತು.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಇದು ಇಂಡೋನೇಷ್ಯಾದಲ್ಲಿ ಪರಿಚಯಿಸಲಾದ ವುಲಿಂಗ್‌ನ ಮೊದಲ ಇವಿ ಆಗಿದೆ. ಕೆಲವು ದಿನಗಳ ಹಿಂದೆ ತಯಾರಕರು ಘೋಷಿಸಿದ್ದರು ಮತ್ತು ಇದೀಗ ಅದರ ಅಧಿಕೃತ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ವುಲಿಂಗ್ 300 ಯೂನಿಟ್ ಏರ್ ಇವಿಯನ್ನು ಬಾಲಿಗೆ ಹೇಗೆ ಸಾಗಿಸಿದರು ಎಂಬುದನ್ನು ವೀಡಿಯೊ ತೋರಿಸಿದೆ. ಸ್ಟಾಕ್‌ಯಾರ್ಡ್‌ನಲ್ಲಿ ನಿಲುಗಡೆ ಮಾಡಿರುವ ಹಲವಾರು ವುಲಿಂಗ್ ಏರ್ ಇವಿಗಳನ್ನು ತೋರಿಸುವ ಮೂಲಕ ವೀಡಿಯೊ ಪ್ರಾರಂಭವಾಗುತ್ತದೆ.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಮೇಲೆ ಜಿ20 ಶೃಂಗಸಭೆಯ ಸ್ಟೀಕರ್ ಅನ್ನು ಹೊಂದಿದೆ. ಈ ಜಿ20 ಶೃಂಗಸಭೆಗೆ ಆಗಮಿಸುವ ಸರ್ಕಾರಿ ಪ್ರತಿನಿಧಿಗಳನ್ನು ಸ್ವಾಗತಿಸಲು ಈ ಇವಿಗಳನ್ನು ಬಳಸಲಾಗುತ್ತದೆ. ಅಂತಿಮ ಹಂತದ ತಪಾಸಣೆಯ ನಂತರ, ಏರ್ ಎಲೆಕ್ಟ್ರಿಕ್ ವಾಹನಗಳನ್ನು ಟ್ರೇಲರ್‌ಗಳಿಗೆ ತುಂಬಿಸಲಾಗಿತ್ತು.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಪ್ರತಿ ಟ್ರೈಲರ್‌ನಲ್ಲಿ 6 ವುಲಿಂಗ್ ಏರ್ ಇವಿಗಳಿವೆ. ಟ್ರೇಲರ್ ಶಿಪ್ಪಿಂಗ್‌ಗಾಗಿ ಬಂದರನ್ನು ತಲುಪುತ್ತದೆ. ಈ ಎಲ್ಲಾ ಎಲೆಕ್ಟ್ರಿಕ್ ವಾಹನಗಳನ್ನು ಟ್ರೈಲರ್‌ನಿಂದ ಹಡಗಿಗೆ ಲೋಡ್ ಮಾಡಲಾಗುತ್ತದೆ. ಹಡಗು ಅಂತಿಮವಾಗಿ ಬಾಲಿ ಬಂದರನ್ನು ತಲುಪುತ್ತದೆ ಮತ್ತು ಎಲ್ಲಾ ಕಾರುಗಳನ್ನು ಇಳಿಸಲಾಗುತ್ತದೆ.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಹಡಗು ಅಂತಿಮವಾಗಿ ಬಾಲಿ ಬಂದರನ್ನು ತಲುಪುತ್ತದೆ ಮತ್ತು ಎಲ್ಲಾ ಕಾರುಗಳನ್ನು ಇಳಿಸಿದರು, ಈ ಹಂತದಿಂದ, ಎಲ್ಲಾ ಇವಿಗಳನ್ನು ಸ್ಥಳಕ್ಕೆ ಓಡಿಸಲಾಗಿತ್ತು.. ಭದ್ರತಾ ವಾಹನಗಳು ಟ್ರಾಫಿಕ್ ಕ್ಲಿಯರ್ ಮಾಡುವಾಗ ಎಲ್ಲಾ ವಾಹನಗಳು ಬೆಂಗಾವಲು ಪಡೆಯಂತೆ ಚಲಿಸುತ್ತವೆ. ವುಲಿಂಗ್ ಏರ್ ಇವಿ ಎಂಜಿ ಏರ್ ಇವಿ ಎಂದು ಕರೆಯಲ್ಪಡುತ್ತದೆ.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಇದು ತುಂಬಾ ಚಿಕ್ಕದಾಗಿದೆ ಮತ್ತು ಭವಿಷ್ಯದ ಎಲೆಕ್ಟ್ರಿಕ್ ಕಾರ್ ಆಗಿದೆ. ಕಾರು ಅತ್ಯಂತ ವಿಶಿಷ್ಟವಾದ ಮುಂಭಾಗದ ತುದಿಯೊಂದಿಗೆ ಬರುತ್ತದೆ. ಕಾರಿನ ಅಗಲಕ್ಕೆ ಅಡ್ಡಲಾಗಿ ಚಲಿಸುವ ಎಲ್ಇಡಿ ಬಾರ್ ಇದೆ. ORVM ಗಳನ್ನು ಪೂರೈಸಲು ಎಲ್ಇಡಿ ಬಾರ್ ಸುತ್ತಲೂ ಒಂದೆರಡು ಕ್ರೋಮ್ ಸ್ಟ್ರೀಪ್ ಗಳಿವೆ.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲಾರಂಭಿಸಿದೆ. ಇದರಿಂದ ಜನರು ಈಗ ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡಲು ಪ್ರಾರಂಭಿಸಲಾಗಿದೆ.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಈ ವೇಳೆ ಟಾಟಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿದೆ. ಇತ್ತೀಚೆಗೆ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರನ್ನು ಕೂಡ ಬಿಡುಗಡೆಗೊಳಿಸಿತು. ಇದು ಕೈಗೆಟುಕುವ ಮತ್ತು ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ ಆಗಿದೆ.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಎಂಜಿ ಮೊಟಾರ್ ಇಂಡಿಯಾವು 2023ರ ಆರಂಭದಲ್ಲಿ 2-ಡೋರುಗಳ ಏರ್ ಎಲೆಕ್ಟ್ರಿಕ್ ಕಾರು ಪರಿಚಯಿಸುವುದಾಗಿ ದೃಢಪಡಿಸಿದೆ. ಅದರ ಮಾರುಕಟ್ಟೆಯ ಬಿಡುಗಡೆಗೆ ಮುಂಚಿತವಾಗಿ, ಸಣ್ಣ ಎಲೆಕ್ಟ್ರಿಕ್ ಕಾರು ಜನವರಿಯಲ್ಲಿ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಸಾರ್ವಜನಿಕವಾಗಿ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಇದು ಹೊಸದಾಗಿ ಬಿಡುಗಡೆಯಾದ ಟಾಟಾ ಟಿಯಾಗೋ ಇವಿಗಿಂತ ಪ್ರೀಮಿಯಂ ಎಂದು ಹೇಳಲಾಗುವ ಬ್ರ್ಯಾಂಡ್‌ನ ಪ್ರೀಮಿಯಂ ಎಂದು ಹೇಳಲಾಗುವ ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕೊಡುಗೆಯಾಗಿದೆ. ಎಂಜಿ ಏರ್ ಇವಿ ಇಂಡೋನೇಷ್ಯಾದಲ್ಲಿ ಈಗಾಗಲೇ ಮಾರಾಟದಲ್ಲಿರುವ ವುಲಿಂಗ್ ಏರ್ ಇವಿ ಆಧಾರಿತವಾಗಿದೆ.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಈ ಹೊಸ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 2023ರಲ್ಲಿ ನಡೆಯಲ್ಲಿರುವ ಆಟೋ ಎಕ್ಸ್‌ಪೋದಲ್ಲಿ ಚೊಚ್ಚಲ ಪ್ರವೇಶವನ್ನು ಮಾಡಬಹುದು. ಈ ಏರ್ ಕಾರಿನ ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಏರ್ ಇವಿ ಸುಮಾರು 20kWh-25kWh ಬ್ಯಾಟರಿ ಪ್ಯಾಕ್ ಸಾಮರ್ಥ್ಯ ಮತ್ತು 40 ಬಿಹೆಚ್‍ಪಿ ಪವರ್ ಮಾಡುವ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಬರಲಿದೆ. ಈ ಮಾದರಿಯು ಎಲ್‌ಎಫ್‌ಪಿ (ಲಿಥಿಯಂ ಐರನ್ ಫಾಸ್ಫೇಟ್) ಸೆಲ್‌ಗಳನ್ನು ಹೊಂದಿರುತ್ತದೆ,

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಇದು ದೀರ್ಘಾವಧಿಯ ಜೀವಿತಾವಧಿ, ಹಗುರವಾದ, ಯಾವುದೇ ನಿರ್ವಹಣೆ ಮತ್ತು ಉತ್ತಮ ಡಿಸ್ಚಾರ್ಜ್ ಮತ್ತು ಚಾರ್ಜ್ ದಕ್ಷತೆಗೆ ಹೆಸರುವಾಸಿಯಾಗಿದೆ. ಇದೇ ರೀತಿಯ ಸೆಲ್‌ಗಳನ್ನು ಟಾಟಾ ನೆಕ್ಸಾನ್ ಇವಿಯಲ್ಲಿಯೂ ಬಳಸಲಾಗಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 150 ಕಿಮೀ ರೇಂಜ್ ಅನ್ನು ನೀಡುತ್ತದೆ.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಈ ಹೊಸ ಸಣ್ಣ ಎಲೆಕ್ಟ್ರಿಕ್ ಕಾರ್ FWD (ಫ್ರಂಟ್-ವೀಲ್ ಡ್ರೈವ್) ಸಿಸ್ಟಂ ಅನ್ನು ಹೊಂದಿರುತ್ತದೆ. ಬ್ರಿಟಿಷ್ ವಾಹನ ತಯಾರಕರು ಸ್ಥಳೀಯವಾಗಿ ಟಾಟಾ ಆಟೋಕಾಂಪ್‌ನಿಂದ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತಾರೆ. ಈ ಇನ್ನು ಟಾಟಾ ಆಟೋಕಾಂಪ್ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿ Li-ion ಬ್ಯಾಟರಿ ಪ್ಯಾಕ್‌ಗಳನ್ನು ವಿನ್ಯಾಸಗೊಳಿಸಲು, ತಯಾರಿಸಲು, ಸರಬರಾಜು ಮಾಡಲು ಮತ್ತು ಸೇವೆ ಮಾಡಲು ಚೀನಾ ಮೂಲದ ಗೋಷನ್‌ನೊಂದಿಗೆ ಜಂಟಿ ಉದ್ಯಮವನ್ನು ಹೊಂದಿದೆ.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಗೋಷನ್ ಚೀನಾವು ಬಹು ಸೌಲಭ್ಯಗಳನ್ನು ಹೊಂದಿರುವ ಚೀನಾದ ಮಾರುಕಟ್ಟೆಯಲ್ಲಿ ಪ್ರಮುಖ ಬ್ಯಾಟರಿ ಸೆಲ್ ಮತ್ತು ಪ್ಯಾಕ್ ತಯಾರಕರಲ್ಲಿ ಒಂದಾಗಿದ್ದು, ಈ ಹೊಸ ಎಂಜಿ ಸಣ್ಣ ಕಾರುಸುಮಾರು 2.9 ಮೀಟರ್ ಉದ್ದ ಹೊಂದಿರುವ ಎಂಜಿ ಏರ್ ಇವಿ ಕಾಂಪ್ಯಾಕ್ಟ್, ಬಾಕ್ಸಿ ನಿಲುವು ಹೊಂದಿದೆ.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಇದು 2010 ಎಂಎಂ ವ್ಹೀಲ್‌ಬೇಸ್‌ ಅನ್ನು ಹೊಂದಿದೆ. ಇದರ ಕೆಲವು ಪ್ರಮುಖ ವಿನ್ಯಾಸದ ಮುಖ್ಯಾಂಶಗಳಲ್ಲಿ ಸ್ಕ್ವಾರಿಶ್ ಹೆಡ್‌ಲ್ಯಾಂಪ್‌ಗಳು ಪ್ರಮುಖ ಆಕರ್ಷಣೆಯಾಗಿದೆ. ಈ ಕಾರು ಕೋನೀಯ ಮುಂಭಾಗದ ಬಂಪರ್, ಪೂರ್ಣ ಅಗಲದ ಲೈಟ್ ಬಾರ್‌ನೊಂದಿಗೆ ಮೂಗು, ಸ್ಲಿಮ್ ಫಾಗ್ ಲ್ಯಾಂಪ್‌ಗಳು, ಚಾರ್ಜಿಂಗ್ ಪೋರ್ಟ್ ಡೋರ್, 12-ಇಂಚಿನ ಸ್ಟೀಲ್ ರಿಮ್‌ಗಳು ಪ್ಲಾಸ್ಟಿಕ್ ಹಬ್ ಕ್ಯಾಪ್‌ಗಳು ಮತ್ತು ಸಣ್ಣ ಟೈಲ್‌ಲ್ಯಾಂಪ್‌ಗಳು ಸೇರಿವೆ.

ಜಿ20 ಶೃಂಗಸಭೆಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಬರಲಿರುವ 2.9 ಮೀಟರ್ ಉದ್ದದ ಎಲೆಕ್ಟ್ರಿಕ್ ಕಾರು

ಫೀಚರ್ಸ್ ಗಳ ವಿಷಯದಲ್ಲಿ, ಸಣ್ಣ ಎಲೆಕ್ಟ್ರಿಕ್ ಕಾರ್ ಡ್ಯುಯಲ್ 10.25-ಇಂಚಿನ ಡಿಸ್ ಪ್ಲೇಗಳನ್ನು ನೀಡುವ ಸಾಧ್ಯತೆಯಿದೆ. ಇದರಲ್ಲಿ ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಇನ್‌ಸ್ಟ್ರುಮೆಂಟೇಶನ್ ಆಗಿರುತ್ತದೆ. ಈ ಎಲೆಕ್ಟ್ರಿಕ್ ಕಾರು ಈಗಾಗಲೇ ಭಾರತೀಯ ರಸ್ತೆಗಳಲ್ಲಿ ರೋಡ್ ಟೆಸ್ಟ್ ನಡೆಸಿದೆ.

Most Read Articles

Kannada
English summary
Upcoming mg ev spotted at g20 summit details
Story first published: Friday, November 18, 2022, 11:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X