ಭಾರತದಲ್ಲಿ SUV ಮಾದರಿಗಳಿಗೆ ಬೇಡಿಕೆ ಹೆಚ್ಚಾಗಲು ಟಾಪ್‌ 5 ಕಾರಣಗಳಿವು!

ಪ್ರಯಾಣಿಕ ವಾಹನ ವಿಭಾಗದಲ್ಲಿ SUV ಕಾರುಗಳು ಭಾರತೀಯ ಆಟೋ ಉದ್ಯಮದಲ್ಲಿ ಹೃದಯವಿದ್ದಂತೆ. ಈ ಕಾಂಪ್ಯಾಕ್ಟ್ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳು ಇಂದು ಸಣ್ಣ ಹ್ಯಾಚ್‌ಬ್ಯಾಕ್‌ಗಳಿಗಿಂತ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇಲ್ಲಿಯವರೆಗೆ ಹೆಚ್ಚು ಮಾರಾಟವಾದ ವಾಹನ ವಿಭಾಗವಾಗಿ ಹೊರಹೊಮ್ಮಿದೆ.

ಭಾರತದಲ್ಲಿ SUV ಮಾದರಿಗಳಿಗೆ ಬೇಡಿಕೆ ಹೆಚ್ಚಾಗಲು ಟಾಪ್‌ 5 ಕಾರಣಗಳಿವು!

2022ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಬ್ರೆಝಾ ಮತ್ತು ವೆನ್ಯೂ 6 ಮಿಲಿಯನ್ ಪ್ರವೇಶ ಮಟ್ಟದ SUV ಯುನಿಟ್‌ಗಳನ್ನು ಮಾರಾಟ ಮಾಡಿರುವುದಾಗಿ ವರದಿಯಾಗಿದೆ. ಭಾರತೀಯರು SUVಗಳಿಗಾಗಿ ಸಣ್ಣ ಕಾರುಗಳನ್ನು ಏಕೆ ತ್ಯಜಿಸುತ್ತಿದ್ದಾರೆಂದು ನಿಮಗೆ ಗೊತ್ತಾ? ಈ ಕೆಳಗಿನ ಪ್ರಮುಖ ಅಂಶಗಳನ್ನು ನೋಡಿದರೆ ನಿಮಗೇ ಅರ್ಥವಾಗಲಿದೆ.

ಭಾರತದಲ್ಲಿ SUV ಮಾದರಿಗಳಿಗೆ ಬೇಡಿಕೆ ಹೆಚ್ಚಾಗಲು ಟಾಪ್‌ 5 ಕಾರಣಗಳಿವು!

ಕಡಿಮೆ ಬೆಲೆಗೆ ಹೆಚ್ಚು ಸೌಕರ್ಯ

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳು ಮತ್ತು ಎಂಟ್ರಿ ಲೆವೆಲ್ ಕಾಂಪ್ಯಾಕ್ಟ್ ಎಸ್‌ಯುವಿಗಳ ಬೆಲೆ ಬಹುತೇಕ ಒಂದೇ ಆಗಿರುತ್ತದೆ. ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳ ಮೇಲೆ ಹೆಚ್ಚಿನ ಜನರು ಹೂಡಿಕೆ ಮಾಡಲು ಬಯಸುತ್ತಾರೆ. ಏಕೆಂದರೆ ಅವುಗಳು ದೊಡ್ಡ ಬೂಟ್‌ನೊಂದಿಗೆ ಅದೇ ಬೆಲೆಯಲ್ಲಿ ಅತ್ಯುತ್ತಮ ಪ್ಯಾಕೇಜ್ ಅನ್ನು ನೀಡುತ್ತವೆ.

ಭಾರತದಲ್ಲಿ SUV ಮಾದರಿಗಳಿಗೆ ಬೇಡಿಕೆ ಹೆಚ್ಚಾಗಲು ಟಾಪ್‌ 5 ಕಾರಣಗಳಿವು!

ಕಾಂಪ್ಯಾಕ್ಟ್ SUV ಗಳು ಹ್ಯಾಚ್‌ಬ್ಯಾಕ್‌ಗಳಿಗಿಂತ ಹೆಚ್ಚು ಆರಾಮದಾಯಕ ಮತ್ತು ವಿಶಾಲವಾಗಿವೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಇದಲ್ಲದೆ SUV ಗಳು ಲಾಂಗ್ ಡ್ರೈವ್‌ಗಳಿಗೆ ಹೆಚ್ಚು ಆರಾಮದಾಯಕವಾಗಿದೆ. ಹೆಚ್ಚುವರಿ ಸ್ಥಳಾವಕಾಶ ಮತ್ತು ಸೌಕರ್ಯದೊಂದಿಗೆ ಒಟ್ಟಾರೆ ಚಾಲನಾ ಅನುಭವವನ್ನು ಸುಧಾರಿಸುತ್ತದೆ. ಪ್ರವಾಸಗಳಲ್ಲಿ ಇದು ಯಾವಾಗಲೂ ಪ್ರಯೋಜನಕಾರಿಯಾಗಿದೆ.

ಭಾರತದಲ್ಲಿ SUV ಮಾದರಿಗಳಿಗೆ ಬೇಡಿಕೆ ಹೆಚ್ಚಾಗಲು ಟಾಪ್‌ 5 ಕಾರಣಗಳಿವು!

ಉಪಯುಕ್ತತೆ

SUV ಅಕ್ಷರಶಃ ಸ್ಪೋರ್ಟಿ ಬಳಕೆಯ ವಾಹನ. ಹೆಸರಲ್ಲೇ ಸೂಚಿಸುವಂತೆ ಅಡ್ವೆಂಚರ್‌ಗಳನ್ನು ಮಾಡಲು ಸಹ ಈ ವಾಹನಗಳು ರೆಡಿಯಿರುತ್ತವೆ. ಹೆಚ್ಚುವರಿ ಸ್ಥಳಾವಕಾಶವಾಗಲಿ ಅಥವಾ ಕೆಟ್ಟ ರಸ್ತೆಗಳನ್ನು ನಿಭಾಯಿಸುವ ಸಾಮರ್ಥ್ಯವಾಗಲಿ, SUV ಗಳು ಹ್ಯಾಚ್‌ಬ್ಯಾಕ್‌ಗಳಿಗಿಂತ ಉತ್ತಮವಾಗಿವೆ.

ಭಾರತದಲ್ಲಿ SUV ಮಾದರಿಗಳಿಗೆ ಬೇಡಿಕೆ ಹೆಚ್ಚಾಗಲು ಟಾಪ್‌ 5 ಕಾರಣಗಳಿವು!

ಕಾಂಪ್ಯಾಕ್ಟ್ SUV ಗಳಿಗೆ ಅಪ್‌ಗ್ರೇಡ್ ಮಾಡಿದ ಅನೇಕ ಹ್ಯಾಚ್‌ಬ್ಯಾಕ್ ಮಾಲೀಕರು ಅದೇ ಅಭಿಪ್ರಾಯವನ್ನು ಹೊಂದಿದ್ದಾರೆ. ಕಾರಣ ಇವು ಹೆಚ್ಚು ಪ್ರಾಯೋಗಿಕವಾಗಿವೆ. ಇದರ ಜೊತೆಗೆ ಹೆಚ್ಚುತ್ತಿರುವ ಸ್ಪರ್ಧೆಯಲ್ಲಿ ಮ್ಯಾಗ್ನೈಟ್, ಪಂಚ್, ಬ್ರೆಝಾ ಮತ್ತು ನೆಕ್ಸಾನ್‌ನಿಂದ ಹಿಡಿದು ತುಲನಾತ್ಮಕವಾಗಿ ಕಡಿಮೆ ಬೆಲೆಯಲ್ಲಿ ಸ್ವಾಧೀನಪಡಿಸಿಕೊಳ್ಳಲು ಇಂದು ಮಾರುಕಟ್ಟೆಯಲ್ಲಿ ಅನೇಕ SUV ಮಾದರಿಗಳಿವೆ.

ಭಾರತದಲ್ಲಿ SUV ಮಾದರಿಗಳಿಗೆ ಬೇಡಿಕೆ ಹೆಚ್ಚಾಗಲು ಟಾಪ್‌ 5 ಕಾರಣಗಳಿವು!

ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌

ಭಾರತೀಯ ರಸ್ತೆಗಳ ವಿಷಯದಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಒಂದು ಪ್ರಮುಖ ಅಂಶವಾಗಿದೆ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿ ಉತ್ತಮ ರಸ್ತೆಗಳಿಲ್ಲದಿರುವುದು. ದೇಶದಾದ್ಯಂತ ಸುರಂಗಮಾರ್ಗಗಳು, ರೈಲ್ವೇ ಹಳಿಗಳು ಮತ್ತು ಮೇಲ್ಸೇತುವೆಗಳ ನಿರ್ಮಾಣ ಮತ್ತು ಸಂಬಂಧಿತ ಯೋಜನೆಗಳ ಕಾರಣದಿಂದಾಗಿ ರಸ್ತೆಗಳು ಆಗಾಗ್ಗೆ ಗುಂಡಿಗಳಿಂದ ಕೂಡಿರುತ್ತವೆ. ಹಾಗಾಗಿ ಇದನ್ನು ಹೋಗಲಾಡಿಸಲು ವಾಹನವು ಸಾಕಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೊಂದಿರಬೇಕು.

ಭಾರತದಲ್ಲಿ SUV ಮಾದರಿಗಳಿಗೆ ಬೇಡಿಕೆ ಹೆಚ್ಚಾಗಲು ಟಾಪ್‌ 5 ಕಾರಣಗಳಿವು!

SUV ಗಳು ಈ ವಿಷಯದಲ್ಲಿ ಯಾವುದೇ ರಿಯಾಯಿತಿಗಳನ್ನು ನೀಡಿಲ್ಲ. ಹ್ಯಾಚ್‌ಬ್ಯಾಕ್‌ಗಳಿಗಿಂತ ಭಿನ್ನವಾಗಿ ಇದು ಕ್ಯಾಬಿನ್‌ಗೆ ಹೆಚ್ಚು ಪರಿಣಾಮ ಬೀರದಂತೆ ಕೆಟ್ಟ ರಸ್ತೆಗಳು ಮತ್ತು ನೇರ ವೇಗದ ಉಬ್ಬುಗಳನ್ನು ಸರಾಗವಾಗಿ ಎದುರಿಸಲು ಅಗತ್ಯವಾದ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಸಣ್ಣ ಹ್ಯಾಚ್‌ಬ್ಯಾಕ್‌ಗಳಿಗಿಂತ ಹೆಚ್ಚಿನ ಸವಾಲುಗಳನ್ನು SUV ಗಳು ತಡೆದುಕೊಳ್ಳಬಲ್ಲವು.

ಭಾರತದಲ್ಲಿ SUV ಮಾದರಿಗಳಿಗೆ ಬೇಡಿಕೆ ಹೆಚ್ಚಾಗಲು ಟಾಪ್‌ 5 ಕಾರಣಗಳಿವು!

ರಸ್ತೆ ಉಪಸ್ಥಿತಿ

ಭಾರತದಲ್ಲಿನ ಕಾರುಗಳು ಕೇವಲ ಸಾರಿಗೆ ಸಾಧನವಲ್ಲ, ಅವು ನಾವು ಬಳಸುವ ಪ್ರತಿಯೊಂದು ಕಾರಿನ ಸ್ಥಿತಿಯ ಭಾಗವಾಗಿದೆ. SUV ಗಳು ಅತ್ಯುತ್ತಮ ರಸ್ತೆ ಉಪಸ್ಥಿತಿಯೊಂದಿಗೆ ಈ ಗುಣಲಕ್ಷಣವನ್ನು ಪೂರೈಸುತ್ತವೆ. ಥಾರ್, ಸ್ಕಾರ್ಪಿಯೊ ಅಥವಾ ಹ್ಯಾರಿಯರ್‌ನಂತಹ ಕಾರುಗಳು ಬೀದಿಗಳಲ್ಲಿ ಓಡಾಡುವುದನ್ನು ನೋಡಲು ಎರಡು ಕಣ್ಣು ಸಾಲುವುದಿಲ್ಲ.

ಭಾರತದಲ್ಲಿ SUV ಮಾದರಿಗಳಿಗೆ ಬೇಡಿಕೆ ಹೆಚ್ಚಾಗಲು ಟಾಪ್‌ 5 ಕಾರಣಗಳಿವು!

ಇವುಗಳು ರಸ್ತೆಯಲ್ಲಿ ಆಗಮಿಸುತ್ತಿದ್ದರೆ ಎಂಥವರೂ ಸಹ ಒಮ್ಮೆಯಾದರೂ ತಿರುಗಿ ನೋಡುತ್ತಾರೆ. ರಸ್ತೆಯಲ್ಲಿನ ಈ ಉತ್ತಮ ಉಪಸ್ಥಿತಿ ಮತ್ತು ಸಂಪೂರ್ಣವಾಗಿ ಸ್ಪಷ್ಟವಾದ ವೀಕ್ಷಣೆಯೊಂದಿಗೆ ಹೆಚ್ಚಿನ ಚಾಲನಾ ಸ್ಥಾನವು ಉತ್ತಮ ಚಾಲನಾ ಅನುಭವವನ್ನು ನೀಡುತ್ತದೆ.

ಭಾರತದಲ್ಲಿ SUV ಮಾದರಿಗಳಿಗೆ ಬೇಡಿಕೆ ಹೆಚ್ಚಾಗಲು ಟಾಪ್‌ 5 ಕಾರಣಗಳಿವು!

ಸ್ಪೋರ್ಟಿನೆಸ್

SUV ಗಳು ಹೆಚ್ಚು ಶಕ್ತಿಯುತವಾಗಿದ್ದು, ಅವುಗಳ ಸ್ಪೋರ್ಟಿ ಶೈಲಿಯಿಂದಲೇ ಹೆಸರುವಾಸಿಯಾಗಿವೆ. ಈ ಮಾದರಿಗಳು ಸಣ್ಣ ಹ್ಯಾಚ್ಬ್ಯಾಕ್ಗಳಿಗಿಂತ ಹೆಚ್ಚು ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿವೆ ಎಂದು ಗಮನಿಸಬೇಕಾದ ಅಂಶವಾಗಿದೆ. ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಹೆಚ್ಚಿನ ಸ್ಪೋರ್ಟಿ ವಾಹನಗಳು 100 bhp ಗಿಂತಲೂ ಹೆಚ್ಚಿನ ಶಕ್ತಿಯನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿವೆ.

ಭಾರತದಲ್ಲಿ SUV ಮಾದರಿಗಳಿಗೆ ಬೇಡಿಕೆ ಹೆಚ್ಚಾಗಲು ಟಾಪ್‌ 5 ಕಾರಣಗಳಿವು!

ಜೊತೆಗೆ, ಟರ್ಬೊ ರೂಪಾಂತರಗಳ ಉಪಸ್ಥಿತಿಯು SUV ಗಳನ್ನು ನೆಚ್ಚಿನವನ್ನಾಗಿ ಮಾಡುತ್ತದೆ. ಅದೇ ಸಮಯದಲ್ಲಿ ನೀವು ಡೀಸೆಲ್ ಆವೃತ್ತಿಯಲ್ಲಿ ಹೆಚ್ಚಿನ ಟಾರ್ಕ್ ಅನ್ನು ಪಡೆಯಬಹುದು. ಮೇಲಿನ ಎಲ್ಲಾ ಅಂಶಗಳು ಈ ಕಾಂಪ್ಯಾಕ್ಟ್ SUV ಗಳನ್ನು ಹ್ಯಾಚ್‌ಬ್ಯಾಕ್‌ಗಳಿಗಿಂತ ಉತ್ತಮವಾಗಿಸುತ್ತವೆ.

Most Read Articles

Kannada
English summary
Why compact suvs are more preferable over hatchbacks in india
Story first published: Saturday, May 14, 2022, 16:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X